Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಈ ವರ್ಷ 2 ದಿನವಿದೆ ರಕ್ಷಾ ಬಂಧನ: ಭದ್ರಕಾಲದಲ್ಲಿ ಸಹೋದರನಿಗೆ ರಾಖಿ ಕಟ್ಟಲೇಬಾರದು
ಸಹೋದರ-ಸಹೋದರಿ ನಡುವಿನ ಬಾಂಧವ್ಯದ ಮಹತ್ವವನ್ನು ತಿಳಿಸುವ ರಕ್ಷಾ ಬಂಧನ ಅಥವಾ ರಾಖಿ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯಂದು ಆಚರಿಸಲಾಗುತ್ತಿದೆ. ಅದರಲ್ಲೂ ಈ ವರ್ಷದ ವಿಶೇಷತೆಯೆಂದರೆ ಎರಡು ದಿನ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುವುದು. ಈ ವರ್ಷ ಎರಡು ದಿನ ರಕ್ಷಾ ಬಂಧನ ಹಬ್ಬ ಏಕೆ ಆಚರಿಸಲಾಗುತ್ತಿದೆ? ಸಹೋದರನಿಗೆ ರಾಖಿ ಕಟ್ಟಲು ಶುಭ ಮುಹೂರ್ತ ಯಾವಾಗ ಎಂದು ನೋಡೋಣ ಬನ್ನಿ:

ಶ್ರಾವಣ ಶುಕ್ಲ ಪೂರ್ಣಿಮಾ ದಿನಾಂಕ:
ರಕ್ಷಬಂಧನವನ್ನು ಆಗಸ್ಟ್ 30 ಹಾಗೂ 31ರಂದು ಅಚರಿಸಲಾಗುವುದು. ಏಕೆಂದರೆ
ರಕ್ಷಾ ಬಂಧನ ತಿಥಿ ಆಗಸ್ಟ್ 30 ಬೆಳಗ್ಗೆ 10:45ಕ್ಕೆ ಪ್ರಾರಂಭವಾಗುತ್ತದೆ, ಆದರೆ 11 ಗಂಟೆಯಿಂದ ರಾತ್ರಿ 09:03ರವರೆಗೆ ಭದ್ರಕಾಲ. ಈ ಸಮಯದಲ್ಲಿ ಯಾವುದೇ ರಕ್ಷಾಬಂಧನ ಆಚರಣೆ ಮಾಡಬಾರದು. ಈ ಸಮಯದಲ್ಲಿ ನಿಮ್ಮ ಸಹೋದರನ ಕೈಗೆ ರಾಖಿ ಕಟ್ಟಬೇಡಿ.
ರಕ್ಷಾ ಬಂಧನ ತಿಥಿ ಆಗಸ್ಟ್ 31 ಬೆಳಗ್ಗೆ 07:05ಕ್ಕೆ ಮುಕ್ತಾಯವಾಗುವುದು. ಪೂರ್ಣಿಮಾ ತಿಥಿ ಮುಕ್ತಾಯದ ಸಮಯದಲ್ಲಿ ಸೂರ್ಯೋದಯ ಬಂದ ಕಾರಣ ಆಗಸ್ಟ್ 31ಕ್ಕೆ ರಾಖಿಯನ್ನು ಕಟ್ಟಬಹುದು.
ಸಹೋದರನಿಗೆ ಯಾವ ಸಮಯದಲ್ಲಿ ರಾಖಿ ಕಟ್ಟಿದರೆ ಒಳ್ಳೆಯದು?
ಸಹೋದರನಿಗೆ ರಾಖಿ ಕಟ್ಟುವಾಗ ಅವನಿಂದ ಶ್ರೀರಕ್ಷೆ ಹಾಗೂ ಅವನ ಆಯುಸ್ಸು, ಆರೋಗ್ಯ ಚೆನ್ನಾಗಿರಲಿ ಎಂದು ಬಯಸಿ ರಾಖಿ ಕಟ್ಟುತ್ತೇವೆ, ಹೀಗಾಗಿ ನೀವು ರಾಖಿಯನ್ನು ಆಗಸ್ಟ್ 30ರಂದು ಬೆಳಗ್ಗೆ 11 ಗಂಟೆಯ ಒಳಗಡೆ ಅದು ತಪ್ಪಿದರೆ ರಾತ್ರಿ 9.30 ರಿಂದ ಆಗಸ್ಟ್ 31 ಬೆಳಗ್ಗೆ 07:05ರ ಒಳಗೆ ಕಟ್ಟಿ.
ಭದ್ರಕಾಲ: ಆಗಸ್ಟ್ 30 ಬೆಳಗ್ಗೆ 11ರಿಂದ ರಾತ್ರಿ 9:03ರವರೆಗೆ
ರಾಖಿ ಕಟ್ಟಲು ಶುಭ ಮುಹೂರ್ತ: ಆಗಸ್ಟ್ 30ಕ್ಕೆ ಬೆಳಗ್ಗೆ 11ರ ಒಳಗೆ ಇಲ್ಲದಿದ್ದರೆ ರಾತ್ರಿ 09:03ರ ನಂತರ
ಆಗಸ್ಟ್ 31ರಂದು ಬೆಳಗ್ಗೆ 07:05ರ ಒಳಗಡೆ
ರಕ್ಷಾಬಂಧನ ಆಚರಣೆ
ರಕ್ಷಾಬಂಧನ ಹಬ್ಬವೆಂದರೆ ಸಹೋದರ-ಸಹೋದರಿಗೆ ಅದು ಸಡಗರದ ಹಬ್ಬ. ಅದರಲ್ಲೂಸಹೋದರಿಯರಿಗೆ ಈ ದಿನ ತುಂಬಾನೇ ವಿಶೇಷ. ಇವರು ಸಹೋದರನ ಕೈಗೆ ರಾಖಿ ಕಟ್ಟಿದಾಗ ಸಹೋದರ ಉಡುಗೊರೆಗಳನ್ನು ನೀಡುವುದು ವಾಡಿಕೆ. ಪೂಜಾ ವಿಧಿಗಳನ್ನು ಪಾಲಿಸಿ ಅಣ್ಣನಿಗೆ ನಮಸ್ಕರಿಸಿ ತಂಗಿ ರಾಖಿಯನ್ನು ಕಟ್ಟುತ್ತಾಳೆ. ಸಹೋದರನ ಹಣೆಗೆ ಸಹೋದರಿ ತಿಲಕವನ್ನು ಹಚ್ಚಿ ನಂತರ ರಾಖಿ ಕಟ್ಟುತ್ತಾಳೆ.
ಸಹೋದರ-ಸಹೋದರಿ ಬಾಂಧವ್ಯ ಗಟ್ಟಿಯಾಗಿಸುತ್ತದೆ
ರಕ್ಷಾ ಬಂಧನ ಸಹೋದರ-ಸಹೋದರಿ ಬಾಂಧವ್ಯವನ್ನು ಗಟ್ಟಿಯಾಗಿಸುತ್ತದೆ. ಮದುವೆ ಮಾಡಿಕೊಟ್ಟ ಸಹೋದರಿ ಈ ದಿನ ತನ್ನ ಸಹೋದರನಿಗೆ ರಾಖಿ ಕಟ್ಟಲೆಂದೇ ತವರಿಗೆ ಬರುತ್ತಾಳೆ. ದೂರವಿರುವವರನ್ನು ಒಂದುಗೂಡಿಸುತ್ತದೆ.



Click it and Unblock the Notifications











