Latest Updates
-
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ! -
ಬಿಸಿಲ ಧಗೆಯಿಂದ ಪಾರಾಗಲು ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸಿ
ಭಾರತದಲ್ಲಿ ಗೋಚರವಾಗುತ್ತೆ ರಾಹುಗ್ರಸ್ತ ಚಂದ್ರಗ್ರಹಣ: ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ
ಹಿಂದೂ ಪುರಾಣಗಳಲ್ಲಿ ಶಾಸ್ತ್ರಗಳಲ್ಲಿ ಗ್ರಹಗಣಗಳಿಗೆ ಬಹಳ ಮುಖ್ಯ ಸ್ಥಾನಮಾನ ನೀಡಲಾಗಿದೆ. ಅದ್ರಲ್ಲೂ ಗ್ರಹಗಳು ಎಲ್ಲರ ಮೇಲೂ ಪರಿಣಾಮ ಬೀರುವ ಅಂಶಗಳು ಎಂದು ಪರಿಗಣಿಸಲಾಗಿದೆ. ಹಾಗೆ ಸೂರ್ಯ ಗ್ರಹಣ ಚಂದ್ರ ಗ್ರಹಗಳು ಅಪರೂಪದ ವಿದ್ಯಮಾನಗಳಾಗಿಯೂ ಪರಿಗಣಿಸಲಾಗಿದೆ. ಹಾಗೆ ಈ ವರ್ಷದ ಕೊನೆಯ ಚಂದ್ರಗ್ರಹಣ ಈ ತಿಂಗಳಲ್ಲಿ ಸಂಭವಿಸುತ್ತಿದೆ.
ಹೀಗಾಗಿ ಈ ಚಂದ್ರಗ್ರಹಣವು ಎಲ್ಲರ ಮೇಲೂ ಪರಿಣಾಮ ಬೀರುವುದು ನೋಡಬಹುದು. ಸೆಪ್ಟೆಂಬರ್ 7, 2025 ರಂದು ಸಂಪೂರ್ಣ ಚಂದ್ರಗ್ರಹಣ ಸಂಭವಿಸುತ್ತಿದೆ. ಇದನ್ನು ಅಪರೂಪದ ರಕ್ತ ಚಂದ್ರ ಎಂದು ಕರೆಯಲಾಗಿದೆ. ಈ ಗ್ರಹಣವು ಬ್ಲಡ್ ಮೂನ್ ಆಗಿದ್ದು, ಚಂದ್ರ ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳಲಿದ್ದಾನೆ.

ಈ ಚಂದ್ರಗ್ರಹಣವು ಬಹುತೇಕ ಕಡೆಗಳಲ್ಲಿ ಗೋಚರವಾಗುತ್ತಿದೆ. ಹೀಗಾಗಿ ಇದನ್ನು ವಿಶೇಷ ಚಂದ್ರಗ್ರಹಣ ಎನ್ನಬಹುದು. ಹಾಗಾದ್ರೆ ಚಂದ್ರಗ್ರಹಣದ ಸಮಯ, ದಿನಾಂಕ, ಎಲ್ಲಿ ನೋಡಬಹುದು ಎಂಬ ಕುರಿತಾದ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ.
ಚಂದ್ರಗ್ರಹಣದ ಸಮಯ ಹಾಗೂ ಮುಹೂರ್ತಗಳು
ಈ ವರ್ಷದ ಎರಡನೆ ಹಾಗೂ ಕೊನೆಯ ಚಂದ್ರಗ್ರಹಣವು ಸೆಪ್ಟೆಂಬರ್ 7ರಂದು ಸಂಭವಿಸುತ್ತಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 11.00 ರಿಂದ 12.22ರ ವರೆಗೆ ಚಂದ್ರ ಗ್ರಹಣ ಗೋಚರ ಆಗಲಿದೆ. ಏಷ್ಯಾ, ಆಸ್ಟ್ರೇಲಿಯಾ ಮತ್ತು ಯುರೋಪಿನಲ್ಲಿ ಇದು ಸ್ಪಷ್ಟವಾಗಿ ಗೋಚರರವಾಗಲಿದೆ. ಅದ್ರಲ್ಲೂ ಬಹಳ ಸಮಯದವರೆಗೆ ಚಂದ್ರ ಗ್ರಹಣ ನೋಡಬಹುದು. ಈ ದಿನ ಚಂದ್ರನು ಕೆಂಪು ಬಣ್ಣದಲ್ಲಿ ಗೋಚರವಾಗಲಿದ್ದಾನೆ.
ಭೂಮಿಯ ನೆರಳು ಚಂದ್ರನ ಮೇಲ್ಮೈ ಮೇಲೆ ಸಂಪೂರ್ಣವಾಗಿ ಬಿದ್ದಾಗ ಸಂಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ. ಸೂರ್ಯನ ಬೆಳಕು ಚಂದ್ರನ ಡಿಸ್ಕ್ ಅನ್ನು ಬೆಳಗಿಸುತ್ತದೆ. ಭೂಮಿಯು ಮಧ್ಯದಲ್ಲಿ ಬರುವ ಕಾರಣದಿಂದಾಗಿ ಸೂರ್ಯನ ಬೆಳಕು ಚಂದ್ರನನ್ನು ತಲುಪುವ ಮೊದಲು ಭೂಮಿಯನ್ನು ಹಾದು ಮುಂದೆ ಸಾಗುತ್ತದೆ.
ಜವಾಹರಲಾಲ್ ನೆಹರು ತಾರಾಲಯದ ಪ್ರಕಾರ, ಗ್ರಹಣವನ್ನು ಬರಿಗಣ್ಣಿನಿಂದ ಸುರಕ್ಷಿತವಾಗಿ ವೀಕ್ಷಿಸಬಹುದು. ಆಕಾಶವು ಸ್ಪಷ್ಟವಾಗಿದ್ದರೆ, ಯಾವುದೇ ದೂರದರ್ಶಕಗಳು ಅಥವಾ ಕನ್ನಡಕಗಳ ಅಗತ್ಯವಿಲ್ಲ.
ಭಾರತದಲ್ಲಿ ಗ್ರಹಣ ಸಮಯ
- ಗ್ರಹಣ ಆರಂಭ ಅಥವಾ ಸ್ಪರ್ಶಕಾಲ- ರಾತ್ರಿ 9:56
- ನಿಮೀಲನ ಕಾಲ- ರಾತ್ 11:01 ಗಂಟೆ
- ಮಧ್ಯಕಾಲ- ರಾತ್ರಿ 11:42
- ಉನ್ಮೀಲನ ಕಾಲ- ರಾತ್ರಿ 12:23
- ಗ್ರಹಣ ಮೋಕ್ಷ ಕಾಲ ಅಥವಾ ಮುಗಿಯುವ ಕಾಲ- ರಾತ್ರಿ 1:26
- ಒಟ್ಟು ಗ್ರಹಣ ಕಾಲ: 3 ಗಂಟೆ 31 ನಿಮಿಷ
- ಸೂತಕ ಕಾಲ: 5 ಗಂಟೆ 24 ನಿಮಿಷಗಳು
ಚಂದ್ರ ಗ್ರಹಣದ ಸಮಯದಲ್ಲಿ ಏನು ಮಾಡಬಾರದು?
ಗ್ರಹಣಗಳನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಹಲವು ರಾಶಿಯವರಿಗೆ ಗ್ರಹಣವು ಅನೇಕ ರೀತಿಯ ಬದಲಾವಣೆಗಳಿಗೆ ಕಾರಣವಾಗಲಿದೆ. ಚಂದ್ರಗ್ರಹಣದ ಸಮಯದಲ್ಲಿ ಪೂಜೆ ಮಾಡುವುದು ನಿಷಿದ್ಧ. ಗ್ರಹಣದ ಮೊದಲು ಪೂಜೆ ನೆರವೇರಿಸಬೇಕು. ಹೀಗಾಗಿ ಯಾವುದೇ ಗ್ರಹಣವಿರಲಿ ಆ ಸಮುಯದಲ್ಲಿ ದೇವಾಯಗಳು ಬಾಗಿಲು ಹಾಕುವುದು ನೋಡಬಹುದು.
ಚಂದ್ರಗ್ರಹಣದ ಸಮಯದಲ್ಲಿ ಆಹಾರವನ್ನು ಸೇವಿಸಬೇಡಿ. ಇದಲ್ಲದೆ ಹೊಸ ವಸ್ತು ಖರೀದಿ ಮಾಡುವುದು, ಆಹಾರ ಉತ್ಪನ್ನಗಳ ಮನೆಗೆ ತರುವುದು ಕೆಟ್ಟದು ಎಂದು ಪರಿಗಣಿಸಲಾಗಿದೆ. ಚಂದ್ರಗ್ರಹಣದ ಸಮಯದಲ್ಲಿ ಯಾವುದೇ ನಿರ್ಜನ ಸ್ಥಳ ಅಥವಾ ಸ್ಮಶಾನಕ್ಕೆ ಹೋಗಬಾರದು. ಈ ಸಮಯದಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಿನ ಪ್ರಾಬಲ್ಯ ಸಾಧಿಸುತ್ತವೆ ಎಂದು ಹೇಳಲಾಗಿದೆ.
ಗ್ರಹಣದ ಸಮಯದಲ್ಲಿ ಪತಿ ಪತ್ನಿ ದೈಹಿಕ ಸಂಬಂಧ ಹೊಂದಬಾರದು. ಶುಭ ಕಾರ್ಯಗಳ ಮಾಡುವುದು ನಿಷಿದ್ಧ. ಗ್ರಹಣ ಸಮಯದಲ್ಲಿ ಪ್ರಾಣಿಗಳ ಹಿಂಸೆ ಮಾಡುವುದು ಕೂಡ ಪಾಪದ ಕೆಲಸ. ಸಾಲ ನೀಡುವುದು ಪಡೆಯುವುದು ಮಾಡಬೇಡಿ.



Click it and Unblock the Notifications











