Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ರಾಹು ಸಂಚಾರ: ಇನ್ನು ಒಂದೂವರೆ ವರ್ಷ ಈ 5 ರಾಶಿಯವರಿಗೆ ರಾಹು ಬಲದಿಂದ ಶುಭ ಸಮಯ
ಜ್ಯೋತಿಷ್ಯದಲ್ಲಿ ರಾಹು ಸಂಚಾರ ತುಂಬಾನೇ ಪ್ರಮುಖವಾದದ್ದು, ಏಕೆಂದರೆ ಇದರ ಪ್ರಭಾವ ಒಂದೂವರೆ ವರ್ಷ ಇರಲಿದೆ. ಈ ಅಕ್ಟೋಬರ್ 30ಕ್ಕೆ ರಾಹು ಮೀನ ರಾಶಿಯನ್ನು ಪ್ರವೇಶಿಸಲಿದೆ. ರಾಹು ಮೀನ ರಾಶಿಗೆ ಪ್ರವೇಶ ಮಾಡಿದಾಗ ಈ 5 ರಾಶಿಯವರಿಗೆ ಒಳಿತಾಗಲಿದೆ.
ಮೇಷ ರಾಶಿ
ರಾಹು ಮೇಷ ರಾಶಿಯನ್ನು ಬಿಟ್ಟು ಮೀನ ರಾಶಿಯನ್ನು ಪ್ರವೇಶಿಸಿದಾಗ ಮೇಷ ರಾಶಿಯ 12ನೇ ಮನೆಯಲ್ಲಿ ಇರಲಿದೆ. ಅಕ್ಟೋಬರ್ 30ರಿಂದ ಒಂದೂವರೆ ವರ್ಷ ರಾಹು ನಿಮ್ಮ ರಾಶಿಯಲ್ಲಿ ಇರಲಿದೆ. ಈ ಅವಧಿ ನಿಮಗೆ ತುಂಬಾನೇ ಅನುಕೂಲಕರವಾಗಿದೆ. ನೀವು ವಿದೇಶಕ್ಕೆ ಹೋಗಲು ಬಯಸುವುದಾದರೆ ಈ ಅವಧಿಯಲ್ಲಿ ಸಾಧ್ಯವಾಗುವುದು. ಈ ಅವಧಿಯಲ್ಲಿ ಮಾಡಿದ ಹೂಡಿಕೆಗೆ ಉತ್ತಮ ಲಾಭ ಗಳಿಸುತ್ತೀರಿ. ರಾಹು ನಿಮ್ಮ 1ನೇ ಮನೆಯಲ್ಲಿದ್ದಾಗ ಅನೇಕ ಸಮಸ್ಯೆಗಳನ್ನು ಎದುರಿಸಿದ್ದೀರಿ, ಅಕ್ಟೋಬರ್ 30ರಿಮದ ಈ ಸಮಸ್ಯೆ ದೂರಾಗಲಿದೆ. ನೀವು ಉತ್ತಮ ಪ್ರಗತಿಯನ್ನು ಪಡೆಯುತ್ತೀರಿ.

ವೃಷಭ ರಾಶಿ
ಅಕ್ಟೋಬರ್ 30ರಿಂದ ರಾಹು ಮೀನ ರಾಶಿಯಲ್ಲಿ ಇರಲಿದೆ, ನಿಮ್ಮ ರಾಶಿಯಲ್ಲಿ 11ನೇ ಮನೆಯಲ್ಲಿ ಇರಲಿದೆ. ಈ ರಾಹು ಸಂಚಾರ ತುಂಬಾನೇ ಮಂಗಳಕರವಾಗಿದೆ. ಈ ಅವಧಿಯಲ್ಲಿ ನಿಮ್ಮ ಯೋಜನೆಗಳು ಯಶಸ್ವಿಯಾಗಲಿದೆ. ನೀವು ನಿಮ್ಮ ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಕಾನುತ್ತಿರಿ. ಇನ್ನು ಆರ್ಥಿಕವಾಗಿಯೂ ಈ ರಾಹು ಸಂಚಾರ ನಿಮಗೆ ಒಳ್ಳೆಯದು ಮಾಡಿದರೆ. ರಾಜಕೀಯ ಕ್ಷೇತ್ರದಲ್ಲಿ ಇರುವವರು ಮತ್ತಷ್ಟು ಹೆಸರು ಗಳಿಸುತ್ತೀರಿ.
ತುಲಾ ರಾಶಿ
ಈ ರಾಹು ಸಂಚಾರ ತುಲಾ ರಾಶಿಯವರಿಗೂ ಅದೃಷ್ಟವನ್ನು ತರಲಿದೆ. ರಾಹು ನಿಮ್ಮ 6ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಸಸ್ಸು ಪಡೆಯುತ್ತೀರಿ. ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣಗಳಿದ್ದರೆ ನೀವು ಯಶಸ್ಸನ್ನು ಪಡೆಯುತ್ತೀರಿ. ವ್ಯಾಪಾರಗಳನ್ನು ನಿಮ್ಮ ಪ್ರತಿಸ್ಪರ್ಧಿಗಳಿಗಿಂತ ಚೆನ್ನಾಗಿ ಬೆಳೆಯಲು ಸಾಧ್ಯವಾಗುವುದು.
ಮಕರ ರಾಶಿ
ಅಕ್ಟೋಬರ್ 30ಕ್ಕೆ ರಾಹು ಮೀನ ರಾಶಿಯನ್ನು ಪ್ರವೇಶಿಸಿದಾಗ ನಿಮ್ಮ 3ನೇ ಮನೆಯಲ್ಲಿ ಇರಲಿದೆ. ವೃತ್ತಿ ಜೀವನದಲ್ಲಿ ಪ್ರಗತಿ ಕಣುತ್ತೀರಿ. ವೃತ್ತಿ ಜೀವನದಲ್ಲಿ ರಿಸ್ಕ್ ತೆಗೆದುಕೊಂಡರೂ ಅದರಿಂದ ಯಶಸ್ಸು ಸಿಗಲಿದೆ. ಹಣಕಾಸಿನ ದೃಷ್ಟಿಯಿಂದಲೂ ಈ ಅವಧಿ ತುಂಬಾನೇ ಚೆನ್ನಾಗಿರಲಿದೆ. ಕೆಲಸದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತೀರಿ, ವ್ಯವಹಾರಸ್ಥರು ಉತ್ತಮ ಲಾಭ ಗಳಿಸುತ್ತೀರಿ.
ಮೀನ ರಾಶಿ
ಅಕ್ಟೋಬರ್ 30 ರಂದು ರಾಹು ನಿಮ್ಮ ಲಗ್ನ ಮನೆಗೆ ಪ್ರವೇಶಿಸಲಿದೆ. ಈ ಅವಧಿ ನಿಮಗೆ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ತುಂಬಾ ಚೆನ್ನಾಗಿರಲಿದೆ, ನೀವು ಈ ಅವಧಿಯಲ್ಲಿ ಹೂಡಿಕೆ ಮಾಡಲು ಸಮಯ ಉತ್ತಮವಾಗಿದೆ. ಈ ರಾಹು ಸಂಚಾರವು ನಿಮ್ಮ ಎಲ್ಲಾ ಆಸೆ ನೆರವೇರಸಲಿದೆ.



Click it and Unblock the Notifications
