Latest Updates
-
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ?
ರಾಹು ಕೇತು ಸಂಚಾರ 2023: ಅವುಗಳ ಸ್ಥಾನದಿಂದಾಗಿ ನಿಮ್ಮ ರಾಶಿಗೆ ಇನ್ನು 18 ತಿಂಗಳು ಹೇಗಿರಲಿದೆ?
ಅಕ್ಟೋಬರ್ 30ಕ್ಕೆ ರಾಹು ಹಾಗೂ ಕೇತು ಒಂದು ವರ್ಷ ಎಂಟು ತಿಂಗಳ ಬಳಿಕ ರಾಶಿ ಬದಲಾವಣೆ ಮಾಡಲಿದೆ. ರಾಹು ಮೀನ ರಾಶಿಗೆ ಪ್ರವೇಶಿಸಿದರೆ ಕೇತು ಕನ್ಯಾ ರಾಶಿಗೆ ಪ್ರವೇಶಿಸಿದೆ. ರಾಹು -ಕೇತು ನಿಮ್ಮ ರಾಶಿಯಲ್ಲಿ ಯಾವ ಸ್ಥಾನದಲ್ಲಿದೆ ಅದರಂತೆ ಪ್ರಬಾವ ಬೀರಲಿದೆ. ಈ ರಾಹು-ಕೇತು ಸಂಚಾರ ದ್ವಾದಶ ರಾಶಿಗಳ ಮೇಲೆ ಬೀರುವ ಪ್ರಭಾವವೇನು ಎಂದು ನೋಡೋಣ ಬನ್ನಿ:

ಮೇಷ ರಾಶಿ: ಮೇಷ ರಾಶಿಯಲ್ಲಿ ರಾಹು 12ನೇ ಮನೆಯಲ್ಲಿದೆ. ಕೇತು 6ನೇ ಮನೆಯಲ್ಲಿ ಇರಲಿದೆ. ರಾಹುವಿನ ಸ್ಥಾನ ಅಧಿಕ ಖರ್ಚು ತರಲಿದೆ, 6ನೇ ಮನೆಯಲ್ಲಿ ಕೇತು ಇರುವುದರಿಂದ ವೃತ್ತಿ ಜೀವನದಲ್ಲಿ ಕಠಿಣ ಸ್ಪರ್ಧೆ ಎದುರಾಗುವುದು.
ವೃಷಭ ರಾಶಿ:
ವೃಷಭ ರಾಶಿಯಲ್ಲಿ ರಾಹು 11ನೇ ಮನೆಯಲ್ಲಿ ಇರಲಿದೆ, ಕೇತು 5ನೇ ಮನೆಯಲ್ಲಿ ಇರಲಿದೆ. ರಾಹುವಿನ ಸ್ಥಾನ ಹಣಕಾಸಿನ ಸಮಸ್ಯೆ ಉಂಟು ಮಾಡಲಿದೆ. ಕೇನ ಮಕ್ಕಳಿಗೆ ಸಮಸ್ಯೆ ತರಲಿದೆ. ಧಾರ್ಮಿಕ ವಿಚಾರಗಳ ಕಡೆ ಆಸಕ್ತಿ ಹೆಚ್ಚಾಗುವುದು.
ಮಿಥುನ ರಾಶಿ:
ರಾಹು ಮಿಥುನ ರಾಶಿಯಲ್ಲಿ 10ನೇ ಸ್ಥಾನದಲ್ಲಿ ಇರುವುದರಿಂದ ವೃತ್ತಿ ಜೀವನದಲ್ಲಿ ಅನೇಕ ಸಮಸ್ಯೆಗಳು ಉಂಟಾಗುವುದು. ಕೇತು 4ನೇ ಮನೆಯಲ್ಲಿದೆ, ಇದರಿಂದ ಬದುಕಿನಲ್ಲಿ ತುಂಬಾ ಬದಲಾವಣೆಯಾಗಲಿದೆ, ಹೊಸ ಬ್ಯುಸ್‌ನೆಸ್ ಐಡಿಯಾ ನಿಮ್ಮ ತಲೆಗೆ ಬರಬಹುದು.
ಕರ್ಕ ರಾಶಿ
ಕರ್ಕ ರಾಶಿಯಲ್ಲಿ ರಾಹು 9ನೇ ಮನೆಯಲ್ಲಿ ಇರಲಿದೆ, ಇದರಿಂದ ಕುಟುಂದಲ್ಲಿ ಹಿರಿಯರಿಗೆ ಸಮಸ್ಯೆ ಉಂಟಾಗಲಿದೆ. ಕೇತು 3ನೇ ಮನೆಯಲ್ಲಿ ಇರುವುದರಿಂದ ಇದ್ದಕ್ಕಿದ್ದಂತೆ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ಒಡಹುಟ್ಟಿದವರೊಂದಿಗೆ ಸಂಬಂಧ ಚೆನ್ನಾಗಿರಲಿದೆ.
ಸಿಂಹ ರಾಶಿ
ರಾಹು 8ನೇ ಮನೆಯಲ್ಲಿ ಇರಲಿದೆ. ಈ ಅವಧಿಯ ಸಾಲ ಅಧಿಕವಾಗುವುದು. ಕೇತು 2ನೇ ಮನೆಯಲ್ಲಿ ಇರುವುದರಿಂದ ತಿನ್ನುವ ಅಭ್ಯಾಸದಲ್ಲಿ ಬದಲಾವಣೆಯಾಗಬಹುದು, ಆಹಾರಕ್ರಮದ ಕಡೆಗೆ ಗಮನಹರಿಸಿ.
ಕನ್ಯಾ ರಾಶಿ
ರಾಹು 7ನೇ ಮನೆಯಲ್ಲಿ ಇರುವುದರಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಇರಲಿದೆ. ಕೇತು ನಿಮ್ಮ ಮೊದಲ ಮನೆಯಲ್ಲಿ ಇರುವುದರಿಂದ ನೀವು ಬೇರೆಯರ ಜೊತೆಗೆ ಮರೆಯಾಗುವುದು ಕಡಿಮೆಯಾಗುವುದು, ಈ ಸಂಚಾರ ನಿಮ್ಮ ಅಹಂಗೆ ದೊಡ್ಡ ಹೊಡೆತ ಬೀಳಲಿದೆ.
ತುಲಾ ರಾಶಿ
ರಾಹು ತುಲಾ ರಾಶಿಯಲ್ಲಿ 6ನೇ ಮನೆಯಲ್ಲಿ ಇರುವುದರಿಂದ ಆರೋಗ್ಯ ಸಮಸ್ಯೆ ಹೆಚ್ಚಾಗಿರುತ್ತದೆ ಅಲ್ಲದೆ ಶತ್ರು ಕಾಟವೂ ಇರಲಿದೆ. ಕೇತು 12ನೇ ಮನೆಯಲ್ಲಿ ಇರುವುದರಿಮದ ದುಃಸ್ವಪ್ನ ಬರುವುದು, ನಿದ್ರಾಹೀನತೆ ಈಬಗೆಯ ಸಮಸ್ಯೆ ಕಂಡು ಬರುವುದು.
ವೃಶ್ಚಿಕ ರಾಶಿ
ರಾಹು 5ನೇ ಮನೆಯಲ್ಲಿ ಇರುವುದರಿಂದ ವಿದ್ಯಾರ್ಥಿಗಳಿಗೆ ಓದಿನಲ್ಲಿ ಅಡಚಣೆ ಉಂಟಾಗುವುದು, ಆರೋಗ್ಯ ಸಮಸ್ಯೆಗಳಿರುತ್ತದೆ, ಕೇತು 11ನೇ ಮನೆಯಲ್ಲಿ ಇರುವುದರಿಂದ ಋಣಾತ್ಮಕ ಪರಿಣಾಮಗಳಿವೆ ಜಾಗ್ರತೆವಹಿಸಿ.
ಧನು ರಾಶಿ
ರಾಹು 4ನೇ ಮನೆಯಲ್ಲಿ ಇರಲಿದೆ, ಇದರಿಂದ ನಿಮ್ಮ ತಾಯಿಗೆ ಕೆಲವು ಸಮಸ್ಯೆ ಉಂಟಾಗುವುದು. 10ನೇ ಮನೆಯಲ್ಲಿ ಕೇತು ಇರುವುದರಿಂದ ವೃತ್ತಿ ಜೀವನದಲ್ಲಿ ಕೆಲ ಬದಲಾವಣೆಗಳಾಗಬಹುದು. ಅವಾಹಿತರು ಈ ಅವಧಿಯಲ್ಲಿ ಬಾಳ ಸಂಗಾತಿಯನ್ನು ಭೇಟಿಯಾಗಬಹುದು.
ಮಕರ ರಾಶಿ
ರಾಹು 3ನೇ ಮನೆಯಲ್ಲಿ ಇರುವಾಗ ದೂರ ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು. ಕೇತು 9ನೇ ಮನೆಯಲ್ಲಿ ಇರುವುದರಿಂದ ಧಾರ್ಮಿಕ ಒಲವು ಹೆಚ್ಚಾಗುವುದು. ಕುಟುಂಬದವರ ಜೊತೆಗೆ ಸಂಬಂಧ ತುಂಬಾ ಚೆನ್ನಾಗಿರಲಿದೆ, ಮನೆಯಲ್ಲಿರುವ ಸಮಸ್ಯೆ ಬಗೆಹರಿಯಲಿದೆ.
ಕುಂಭ ರಾಶಿ
ರಾಹು 2ನೇ ಮನೆಯಲ್ಲಿ ಇರುವಾಗ ಕುಟುಂಬದ ನೆಮ್ಮದಿಗೆ ತೊಂದರೆಯಾಗುವುದು. ಕೇತು 8ನೇ ಮನೆಯಲ್ಲಿ ಇರುವಾಗ ಮೈಕೈ ನೋವಿನ ಸಮಸ್ಯೆ ಇರಲಿದೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಿ.
ಮೀನ ರಾಶಿ
ರಾಹು ಮೀನ ರಾಶಿಗೆ ಸಂಚರಿಸಿದಾಗ ನಿಮ್ಮ ನಡವಳಿಕೆ ಹಾಗೂ ವ್ಯಕ್ತಿತ್ವದಲ್ಲಿ ಬದಲಾವಣೆಯಾಗಲಿದೆ. ಕೇತು 7ನೇ ಮನೆಯಲ್ಲಿ ಇರುವುದರಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಬರಬಹುದು.



Click it and Unblock the Notifications