Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮೇಷದಲ್ಲಿ ರಾಹು-ಗುರು-ಬುಧ ಸಂಯೋಗ: ತ್ರಿಗಹ ಯೋಗ ದ್ವಾದಶ ರಾಶಿಗಳ ಮೇಲೆ ಬೀರುವ ಪ್ರಭಾವ ಹೇಗಿದೆ?
ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು, ಬುಧ, ಗುರು ಮೂರು ಶಕ್ತಿಶಾಲಿ ಗ್ರಹಗಳು ಮೇಷ ರಾಶಿಯಲ್ಲಿ ಸಂಯೋಗವಾಗಿರುವುದರಿಂದ ತುಂಬಾನೇ ಮಹತ್ವ ಪಡೆದಿದೆ. ಈ ಮೂರು ಗ್ರಹಗಳ ಸಂಯೋಗ ನಮ್ಮ ಮೇಲೆ ತುಂಬಾನೇ ಪ್ರಭಾವಬೀರಲಿದೆ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ಈ ಪ್ರಮುಖ ತ್ರಿಗ್ರಹಗಳ ಸಂಯೋಗ ನಿಮ್ಮ ರಾಶಿಯ ಮೇಲೆ ಹೇಗೆ ಪ್ರಭಾವ ಬೀರಿದೆ ಎಂದು ನೋಡುವುದಾದರೆ:
ಮೇಷ ರಾಶಿ
ಮೇಷ ರಾಶಿಯವರ ಮೊದಲ ಮನೆಯಲ್ಲಿ ಈ ಸಂಯೋಗ ಏರ್ಪಟ್ಟಿದೆ. ಈ ಅವಧಿಯಲ್ಲಿ ತುಂಬಾ ಆಶಾದಾಯಕವಾಗಿರುತ್ತೀರಿ, ಕೆಲವೊಮ್ಮೆ ಎಲ್ಲಾ ಕೈ ಬಿಟ್ಟು ಹೋದಂತೆ ಅನಿಸಿದರೂ ನಂತರ ಎಲ್ಲವೂ ನೀವು ಬಯಸಿದಂತೆ ನೆರವೇರಲಿದೆ.
ವೃಷಭ ರಾಶಿ
ವೃಷಭ ರಾಶಿಯವರಲ್ಲಿ ರಾಹು-ಗುರು-ಬುಧ ಸಂಯೋಗ 12ನೇ ಮನೆಯಲ್ಲಿ ಏರ್ಪಟ್ಟಿದೆ. ಈ ಅವಧಿಯಲ್ಲಿ ಆತ್ಮಅವಲೋಕನ ಮಾಡಿಕೊಳ್ಳುತ್ತೀರಿ, ಅಲ್ಲದೆ ಈ ಸಮಯದಲ್ಲಿ ಆಧ್ಯಾತ್ಮದ ಕಡೆಯೂ ಒಲವು ಹೆಚ್ಚಾಗಲಿದೆ.
ಮಿಥುನ ರಾಶಿ
ರಾಹು-ಗುರು-ಬುಧ ಸಂಯೋಗ ನಿಮ್ಮ 11ನೇ ಮನೆಯಲ್ಲಿ ಉಂಟಾಗಿದೆ. ಇದರಿಂದ ಸಾಮಾಜಿಕವಾಗಿ ಖ್ಯಾತಿ ಹೆಚ್ಚಾಗಲಿದೆ, ಹೊಸ ಸ್ನೇಹಿತರ ಪರಿಚಯವಾಗಲಿದೆ. ಆದರೆ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರವಹಿಸಿ.

ಕರ್ಕ ರಾಶಿ
ರಾಹು-ಗುರು-ಬುಧ ಸಂಯೋಗ ನಿಮ್ಮ 10ನೇ ಮನೆಯಲ್ಲಿ ಉಂಟಾಗಿದೆ. ಈ ಅವಧಿ ವೃತ್ತಿ ಜೀವನಕ್ಕೆ ತುಂಬಾ ಒಳ್ಳೆಯದಿದೆ, ನೀವು ಗುರುತಿಸಿಕೊಳ್ಳುವಿರಿ. ನೀವು ಈ ಅವಧಿಯಲ್ಲಿ ಬಡ್ತಿಯನ್ನು ಪಡೆಯಬಹುದು, ಆದರೆ ಕೆಲಸದ ಜೊತೆಗೆ ವೈಯಕ್ತಿಕ ಬದುಕಿನ ಕಡೆಗೂ ಗಮನಹರಿಸಿದರೆ ಒಳ್ಳೆಯದು.
ಸಿಂಹ ರಾಶಿ
ರಾಹು-ಗುರು-ಬುಧ ಸಂಯೋಗ ನಿಮ್ಮ ರಾಶಿಯಲ್ಲಿ 9ನೇ ಮನೆಯಲ್ಲಿ ಏರ್ಪಟ್ಟಿದೆ. ಈ ಅವಧಿಯಲ್ಲಿ ಆಧ್ಯಾತ್ಮಿಕದ ಕಡೆಗೆ ಆಸಕ್ತಿ ಹೆಚ್ಚಾಗುವುದು, ಉನ್ನತ ಶಿಕ್ಷಣ ಬಯಸುವ ವಿದ್ಯಾರ್ಥಿಗಳಿಗೆ ಈ ಅವಧಿ ತುಂಬಾನೇ ಅನುಕೂಲಕರವಾಗಿದೆ. ಆದರೆ ಹಣವನ್ನು ಖರ್ಚು ಮಾಡುವಾಗ ಮಿತಿಯಲ್ಲಿ ಮಾಡಿದರೆ ಒಳ್ಳೆಯದು.
ಕನ್ಯಾ ರಾಶಿ
ರಾಹು-ಗುರು-ಬುಧ ಸಂಯೋಗ ಕನ್ಯಾ ರಾಶಿಯವರಲ್ಲಿ 8ನೇ ಮನೆಯಲ್ಲಿ ಆಗಿದೆ. ಈ ಅವಧಿಯಲ್ಲಿ ಹಲವಾರು ಬದಲಾವಣೆ ಕಾಣಬಹುದು, ಅದು ವೃತ್ತಿ ಬದುಕಿನಲ್ಲಿ ಇರಬಹುದು, ವೈಯಕ್ತಿಕ ಬದುಕಿನಲ್ಲಿ ಇರಬಹುದು. ಆದರೆ ಯಾವುದೇ ಸಮಸ್ಯೆಗೆ ಸಿಲುಕದಂತೆ ಎಚ್ಚರವಹಿಸಿ.
ತುಲಾ ರಾಶಿ
ರಾಹು-ಗುರು-ಬುಧ ಸಂಯೋಗ ತುಲಾ ರಾಶಿಯಲ್ಲಿ 7ನೇ ಮನೆಯಲ್ಲಿ ಸಂಭವಿಸಿದೆ. ಈ ಸಮಯದಲ್ಲಿ ಕುಟುಂಬ ಜೀವನಕ್ಕೆ ತುಂಬಾ ಅನುಕೂಲಕರವಾಗಿದೆ. ವೈವಾಹಿಕ ಜೀವನದಲ್ಲಿ ಸಾಮರಸ್ಯ ಹೆಚ್ಚಾಗಲಿದೆ. ಅವಾಹಿತರಿಗೆ ಸೂಕ್ತ ಸಂಗಾತಿ ಸಿಗಲಿದ್ದಾರೆ. ಕೆಲಸದ ವಿಷಯದಲ್ಲಿ ನೋಡುವುದಾದರೆ ಸರಾಸರಿಯಾಗಿರಲಿದೆ.
ವೃಶ್ಚಿಕ ರಾಶಿ
ರಾಹು-ಗುರು-ಬುಧ ಸಂಯೋಗ ವೃಶ್ಚಿಕ ರಾಶಿಯಲ್ಲಿ 6ನೇ ಮನೆಯಲ್ಲಿ ಸಂಭವಿಸಿದೆ. ಈ ಅವಧಿಯಲ್ಲಿ ಆರ್ಥಿಕವಾಗಿ ತುಂಬಾ ಒಳ್ಳೆಯದಿದೆ, ಆರ್ಥಿಕವಾಗಿ ಉತ್ತಮ ಪ್ರಯೋಜನ ಪಡೆಯುತ್ತೀರಿ. ಮಾನಸಿಕ ಆರೋಗ್ಯ ಕೂಡ ಚೆನ್ನಾಗಿರಲಿದೆ.
ಧನು ರಾಶಿ
ರಾಹು-ಗುರು-ಬುಧ ಸಂಯೋಗ ಧನು ರಾಶಿಯವರಲ್ಲಿ 5ನೇ ಮನೆಯಲ್ಲಿ ಉಂಟಾಗಿದೆ. ಈ ಸಮಯದಲ್ಲಿ ನಿಮ್ಮ ಕ್ರಿಯಾಶೀಲತೆ ಹೆಚ್ಚಾಗಲಿದೆ, ನಿಮ್ಮ ಹವ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸುತ್ತೀರಿ, ಆದರೆ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ ಎಂಬ ಸಲಹೆ ನೀಡಲಾಗಿದೆ.
ಮಕರ ರಾಶಿ
ರಾಹು-ಗುರು-ಬುಧ ಸಂಯೋಗ ಮಕರ ರಾಶಿಯವರಲ್ಲಿ 4ನೇ ಮನೆಯಲ್ಲಿ ಸಂಭವಿಸಲಿದೆ. ಈ ಅವಧಿಯಲ್ಲಿ ಕುಟುಂಬ ಜೀವನದಲ್ಲಿ ಖುಷಿ ಇರಲಿದೆ. ನೀವು ಕುಟುಂಬ ಜೀವನ ತುಂಬಾ ಚೆನ್ನಾಗಿರಲಿದೆ.
ಕುಂಭ ರಾಶಿ
ರಾಹು-ಗುರು-ಬುಧ ಸಂಯೋಗ ಕುಂಭ ರಾಶಿಯಲ್ಲಿ 2ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಹೊಸ ವಿಷಯ ಕಲಿಯುವುದರ ಬಗ್ಗೆ ಆಸಕ್ತಿ ತೋರಿಸುವುದು ಒಳ್ಳೆಯದು.
ಮೀನ ರಾಶಿ
ರಾಹು-ಗುರು-ಬುಧ ಸಂಯೋಗ ಮೀನ ರಾಶಿಯಲ್ಲಿ 2ನೇ ಮನೆಯಲ್ಲಿ ಸಂಭವಿಸಲಿದೆ. ಈ ಅವಧಿ ಆರ್ಥಿಕವಾಗಿ ತುಂಬಾ ಒಳ್ಳೆಯದಿದೆ. ಈ ಅವಧಿಯಲ್ಲಿ ಆರ್ಥಿಕವಾಗಿ ತುಂಬಾ ಉಳಿಸಲು ಸಾಧ್ಯವಾಗುವುದು, ಆದರೆ ಅತಿಯಾಗಿ ಖರ್ಚು ಮಾಡುವುದು ನಿಯಂತ್ರಿಸುವುದು ಒಳ್ಳೆಯದು.



Click it and Unblock the Notifications
