Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ನಾಯಿಗಳಿಗೆ ಬಂದಿದೆ QR- ಕೋಡ್ ಅಧಾರ್ ಕಾರ್ಡ್: ಇದರಿಂದ ಪ್ರಯೋಜವೇನು?
ನಾಯಿಗಳಿಗೂ ಆಧಾರ್ ಕಾರ್ಡ್ ಬಂದಿದೆ ಇದರ ಬಗ್ಗೆ ನಿಮಗೆ ಗೊತ್ತೇ? ಹೌದು ಈ ಏಪ್ರಿಲ್ 27ಕ್ಕೆ ನೂರು ನಾಯಿಗಳಿಗೆ QR- ಕೋಡ್ ಇರುವ ಆಧಾರ್ ಕಾರ್ಡ್ ನೀಡಲಾಗಿದೆ. ದೆಹಲಿಯ ನಾಯಿಗಳಿಗೆ QR- ಕೋಡ್ ನೀಡಲಾಗುತ್ತಿದೆ. ನಾಯಿಗಳಿಗೆ ಸುರಕ್ಷತೆ ನೀಡುವ ಉದ್ದೇಶದಿಂದ ಈ ರೀತಿ ನಾಯಿಗಳಿಗೆ ಆಧಾರ್ ಕಾರ್ಡ್ ನೀಡಲಾಗುತ್ತಿದೆ.

ನಾಯಿಗಳಿಗೆ ಈ ಆಧಾರ್ ಕಾರ್ಡ್ ಹೇಗೆ ಪ್ರಯೋಜನಕಾರಿ?
ನಾಯಿಗಳಿಗೆ ಏನಾದರೂ ತೊಂದರೆಯಾದರೆ ಅವುಗಳನ್ನು ರಕ್ಷಣೆ ಮಾಡಲು ಈ ಆಧಾರ್ ಕಾರ್ಡ್ ಸಹಾಯ ಮಾಡುತ್ತದೆ. ಅದರಲ್ಲೂ ಬೀದಿ ನಾಯಿಗಳ ರಕ್ಷಣೆಗೆ ಈ QR-ಕೋಡ್ ಇರುವ ಆಧಾರ್ ಕಾರ್ಡ್ ತುಂಬಾನೇ ಪ್ರಯೋಜನಕಾರಿಯಾಗಿದೆ. ಇನ್ನು ಮನೆಯ ನಾಯಿಗಳು ಕಳೆದು ಹೋದರೆ ಅವುಗಳನ್ನು ಹುಡುಕುವುದು ಕೂಡ ಸುಲಭವಾಗುತ್ತದೆ. ಅವುಗಳಿಗೆ ಹಾಕಿರುವ
QR-ಕೋಡ್‌ನಿಂದಾಗಿ ಅವುಗಳು ಎಲ್ಲಿದೆ ಎಂದು ಸುಲಭವಾಗಿ ಕಂಡು ಹಿಡಿಯಬಹುದು.
Pawfriend.in ಎಂಬ NGO ನಾಯಿಗಳ ರಕ್ಷಣೆಗೆ ಆಧಾರ್ ಕಾರ್ಡ್ ಅಳವಡಿಸುತ್ತಿದೆ
Pawfriend.in ದೇಶದಲ್ಲಿರುವ ನಾಯಿಗಳ ರಕ್ಷಣೆಗೆ ಈ ಆಧಾರ್ ಕಾರ್ಡ್ ನಾಯಿಗಳ ಕುತ್ತಿಗೆಗೆ ಹಾಕಲು ಮುಂದಾಗಿದೆ. ಈ ಎನ್‌ಜಿಓನ ಕಾರ್ಯಕರ್ತರು ಏಪ್ರಿಲ್‌ನಿಂದ ನಾಯಿಗಳಿಗೆ ಆಧಾರ್ ಕಾರ್ಡ್ ಅಳವಡಿಸುವ ಕಾರ್ಯ ಪ್ರಾರಂಭಿಸಿದ್ದಾರೆ. ಈ ಆಧಾರ್ ಕಾರ್ಡ್‌ನಲ್ಲಿ ಮೈಕ್ರೋಚಿಪ್ ಇದ್ದು ಆ ನಾಯಿಯಲ್ಲಿರುವ QR-ಕೋಡ್ ಸ್ಕ್ಯಾನ್ ಮಾಡಿದರೆ ಸಾಕು ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯುತ್ತದೆ.
ಬೀದಿ ನಾಯಿಗಳಿಗೆ ಬೇಕಿದೆ ಉತ್ತಮ ಆರೈಕೆ
ಬೀದಿ ಬೀದಿಯಲ್ಲಿ ಬೀದಿ ನಾಯಿಗಳು ಕಣ್ಣಿಗೆ ಬೀಳುತ್ತದೆ. ಬೀದಿಯಲ್ಲಿಯೇ ಹುಟ್ಟಿ ಬೆಳೆಯುವ ನಾಯಿಗಳಿಗಿಂತ, ಯಾರಾದರೂ ತಂದು ಬಿಟ್ಟ ನಾಯಿಗಳ ಸಂಖ್ಯೆ ಹೆಚ್ಚಿವೆ. ಅವುಗಳು ಚೆನ್ನಾಗಿ ಇದ್ದಾಗ ನಾಯಿಗಳನ್ನು ಸಾಕುತ್ತಿದ್ದೇವೆ ಎಂದು ತೋರಿಸಿಕೊಳ್ಳುತ್ತರೆ, ಆದರೆ ಅದೇ ನಾಯಿಗೆ ಕಜ್ಜಿಯಾದರೆ, ರೋಮ ಉದುರುತ್ತಿದ್ದರೆ, ವಯಸ್ಸಾದರೆ ರೋಡ್‌ನಲ್ಲಿ ತಂದು ಬಿಟ್ಟು ಹೋಗುತ್ತಾರೆ, ಇಂಥ ಎಷ್ಟೋ ನಾಯಿಗಳು ಬೀದಿಯಲ್ಲಿ ಇರುತ್ತವೆ. ಕಜ್ಜಿಯಾಗಿ, ಮೈ ರೋಮ ಹೋಗಿ ತುಮಬಾನೇ ಕಷ್ಟ ಪಡುತ್ತಿರುವ ನಾಯಿಗಳನ್ನು ರಕ್ಷಣೆ ಮಾಡಲು ಈ ರೀತಿಯ ಆಧಾರ್ ಕಾರ್ಡ್ ಸಹಾಯ ಮಾಡುತ್ತದೆ.
ನಾಯಿ ಕಾಣೆಯಾದರೆ ಹುಡುಕಲು ಸಹಕಾರಿ
ಸಾಮಾನ್ಯವಾಗಿ ನಾಯಿಗಳು ಕಾಣೆಯಾಗಲ್ಲ, ಅವುಗಳನ್ನು ಯಾರಾದರೂ ಎತ್ತಿಕೊಂಡು ಹೋದರೆ ಮಾತ್ರ ನಾಯಿಗಳು ಕಾಣೆಯಾಗುತ್ತವೆ, ಒಂದು ವೇಳೆ ಅವು ಕಾಣೆಯಾದರೆ ಹುಡುಕಲು ಈ QR-ಕೋಡ್ ಸಹಾಯ ಮಾಡುತ್ತದೆ.
ಈ QR-ಕೋಡ್ ಬೀದಿನಾಯಿಗಳಿಗೆ ವರವಾಗಲಿದೆ
ಯಾರಾದರೂ ಈ QR-ಕೋಡ್ ಸ್ಕ್ಯಾನ್ ಮಾಡಿ ನಾಯಿಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದರೆ ಅವುಗಳ ರಕ್ಷಣೆ ಮಾಡಲು ಸುಲಭವಾಗುವುದು.



Click it and Unblock the Notifications
