Latest Updates
-
ಮಳೆಗಾಲದ ಮದುವೆ: ನಿಮ್ಮ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್ -
ಮಳೆಗಾಲ ಶುರು: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 5 ಸಿಂಪಲ್ ಟಿಪ್ಸ್ -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಹೀಟ್ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರಗಳೇ ಮದ್ದು! -
ಮುಂಗಾರು ಆಗಮನ: ಮಳೆಯಲ್ಲಿ ಸ್ಟೈಲಿಶ್ ಆಗಿರಲು ಮತ್ತು ಸುರಕ್ಷಿತವಾಗಿರಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? ನಿಮ್ಮ ವರ್ಕೌಟ್ ರೂಟೀನ್ನಲ್ಲಿ ಈ ಬದಲಾವಣೆಗಳನ್ನು ತಕ್ಷಣ ಮಾಡಿಕೊಳ್ಳಿ! -
ಆರೆಂಜ್ ಅಲರ್ಟ್ ಎಚ್ಚರಿಕೆ: ಮಳೆಗಾಲದ ಮದುವೆ ಮತ್ತು ಪ್ರವಾಸದ ಪ್ಲಾನ್ ಬದಲಾಯಿಸುವುದು ಹೇಗೆ? -
ಮಳೆಗಾಲದಲ್ಲಿ ನಿಮ್ಮ ಮನೆ ಸುರಕ್ಷಿತವಾಗಿರಬೇಕೇ? ಈ ಸರಳ ಟಿಪ್ಸ್ ಅನುಸರಿಸಿ ದೊಡ್ಡ ರಿಪೇರಿ ಖರ್ಚಿನಿಂದ ಪಾರಾಗಿ! -
ಮಳೆಗಾಲದಲ್ಲಿ ಆರೋಗ್ಯವಾಗಿರಬೇಕೆ? ನಿಮ್ಮ ಅಡುಗೆಮನೆಯಲ್ಲಿ ಇಂದೇ ಈ ಬದಲಾವಣೆಗಳನ್ನು ಮಾಡಿಕೊಳ್ಳಿ, ಇಲ್ಲದಿದ್ದರೆ ಕಷ್ಟ! -
ಮಳೆಗಾಲದ ಫ್ಯಾಷನ್ ಟ್ರೆಂಡ್ಸ್: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ಈ ಸಿಂಪಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಮತ್ತು ಟ್ರಾಫಿಕ್ ಸಮಸ್ಯೆಗೆ ಸೈಕ್ಲಿಂಗ್ಗಿಂತ ಉತ್ತಮ ಪರಿಹಾರವಿದೆಯೇ?
ಕಂಠಪೂರ್ತಿ ಕುಡಿದವನ ಕುತ್ತಿಗೆಗೆ ಸುತ್ತಿದ ಹೆಬ್ಬಾವು..! ವಿಡಿಯೋ ವೈರಲ್
ಮದ್ಯಪಾನ ಮಾಡಿದವರು ತಮಗೆ ಜ್ಞಾನವೇ ಇಲ್ಲದಂತೆ ಎಲ್ಲೆಂದರಲ್ಲಿ ಬಿದ್ದಿರುವುದನ್ನು ನಾವು ನೋಡಿದ್ದೇವೆ. ಅವರಿಗೆ ಅಕ್ಕ ಪಕ್ಕ ಏನೇ ನಡೆದರು ಗೊತ್ತಾಗುವುದಿಲ್ಲ. ಅಷ್ಟೇ ಏಕೆ ಎಲ್ಲಿದ್ದೇವೆ ಎಂಬ ಒಂದಿಷ್ಟು ಅರಿವು ಕೂಡ ಅವರಿಗಿರುವುದಿಲ್ಲ. ಹೀಗಿರುವಾಗ ಮೈ ಮೇಲೆ ಏನಾಗುತ್ತಿದೆ ಎಂಬುದಂತು ಅವರಿಗೆ ತಿಳಿದಯುವುದೇ ಇಲ್ಲ.
ಇತ್ತ ಮದ್ಯಪಾನ ಮಾಡಿದವರು ಹೆಚ್ಚಾಗಿ ಹಾವಿನೊಂದಿಗೆ ಆಟವಾಡುವ ವಿಡಿಯೋಗಳನ್ನು ನಾವು ನೋಡಿದ್ದೇವೆ. ಮದ್ಯಪಾನ ಮಾಡಿ ವಿಷಕಾರಿ ಹಾಹು ಹಿಡಿಯಲು ಹೋಗಿ ಅದರಿಂದ ಕಚ್ಚಿಸಿಕೊಂಡು ಆಸ್ಪತ್ರೆ ಸೇರುವುದನ್ನು ನಾವು ನೋಡಿದ್ದೇವೆ. ಇಂತಹ ಹತ್ತು ಹಲವು ಪ್ರಕರಣಗಳು ವರದಿಯಾಗುತ್ತದೆ. ಅಲ್ಲವೆ ಸಾಮಾಜಿಕ ಜಾಲತಾಣದಲ್ಲಿ ಹತ್ತಾರು ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ.

ಈಗ ಇಂತಹದ್ದೆ ಮತ್ತೊಂದು ವಿಡಿಯೋ ಕೂಡ ವೈರಲ್ ಆಗುತ್ತಿದೆ. ಇಲ್ಲೊಬ್ಬ ಕಂಠಪೂರ್ತಿ ಕುಡಿದು ಕುಳಿತಾಗ ಆತನ ಕುತ್ತಿಗೆಗೆ ಹೆಬ್ಬಾವು ಸುತ್ತಿಕೊಂಡಿರುವ ವಿಚಿತ್ರ ಘಟನೆ ನಡೆದಿದೆ. ಆಂಧ್ರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಕುಡಿದ ಅಮಲಿನಲ್ಲಿದ್ದ ಆತನಿಗೆ ಮೈ ಮೇಲೆ ಏನಾಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ.
ಆದರೆ ಆತ ಕುಳಿತಿದ್ದಾಗ ನಿಧಾನವಾಗಿ ಹೆಬ್ಬಾವು ಕುತ್ತಿಗೆಗೆ ಸುತ್ತಿಕೊಂಡಿದೆ. ಆದರೆ ಆತನಿಗೆ ಇದು ಗೊತ್ತಾಗಿಯೇ ಇರಲಿಲ್ಲ. ಹೆಬ್ಬಾವುಗಳು ಕಚ್ಚುವುದಿಲ್ಲ ಬದಲಿಗೆ ಈ ರೀತಿ ಮೈಗೆ ಸುತ್ತಿಕೊಂಡು ಉಸಿರುಗಟ್ಟಿಸಿಯೇ ಕೊಲ್ಲುತ್ತವೆ. ಬಳಿಕ ಇಡಿಯಾಗಿ ನುಂಗಲು ಆರಂಭಿಸುತ್ತವೆ. ಇಲ್ಲಿಯೂ ಕೂಡ ಅದೇ ರೀತಿ ನಡೆಯುತ್ತಿತ್ತು.
ಆದ್ರೆ ಅಷ್ಟರಲ್ಲಿ ದೇವರಂತೆ ಊರಿನವರೆಲ್ಲಾ ಓಡೋಡಿ ಬಂದಿದ್ದಾರೆ, ಆತನನ್ನು ಎಚ್ಚರಿಸಲು ಪ್ರಯತ್ನಪಟ್ಟರೂ ಕೂಡ ಮೈಮೇಲೆ ಪ್ರಜ್ಞೆ ಇಲ್ಲದ ಆತ ಏನೇನು ಆಗುತ್ತಿಲ್ಲ ಎನ್ನುವಂತೆ ನೋಡುತ್ತಿದ್ದಾನೆ. ಆದರೆ ಹೆಬ್ಬಾವು ಒಮ್ಮೆ ಆತನ ಕುತ್ತಿಗೆಗೆ ಬಿಗಿಯಾಗಿ ಹಿಡಿದು ಬಿಟ್ಟರೆ ತಪ್ಪಿಸುವುದು ಬಹಳ ಕಷ್ಟವಾಗುತ್ತದೆ. ಇಲ್ಲಿ ಹೆಬ್ಬಾಗು ಆಗತಾನ ಆನತ ಮೈಮೇಲೆ ಹತ್ತಿರುವಂತೆ ಕಾಣುತ್ತಿದೆ, ಅಷ್ಟರಾಗಲೇ ಅಲ್ಲಿದ್ದವರು ಒಟ್ಟುಗೂಡಿ ಅದನ್ನು ಓಡಿಸಲು ಪ್ರಯತ್ನಿಸುತ್ತಿದ್ದಾರೆ.
ಕರ್ನೂಲ್ ಜಿಲ್ಲೆಯ ಸಿಂಗನಪಲ್ಲಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಮದ್ಯದ ಅಮಲಿನಲ್ಲಿದ್ದಾತ ಲಾರಿ ಡ್ರೈವರ್ ಎಂದು ತಿಳಿದುಬಂದಿದೆ. ಪಕ್ಕದಲ್ಲಿ ಅರಣ್ಯವಿದ್ದು ಅಲ್ಲಿಂದ ಬಂದಿದ್ದ ಹಾವು ಆತನ ಮೈ ಮೇಲೆ ಸುತ್ತಿಕೊಂಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಲ್ಲದೆ 3 ಮಿಲಿಯನ್ ವೀಕ್ಷಣೆ ಕಂಡಿದೆ.
ಹಾಗೆ ಈ ವಿಡಿಯೋ ನೋಡಿದ ಮಂದಿ ಶಾಕ್‌ಗೆ ಒಳಗಾಗಿ ಹಲವು ರೀತಿಯ ಕಮೆಂಟ್‌ಗಳ ಮಾಡಿದ್ದಾರೆ. ಮದ್ಯ ಸೇವನೆ ಎಷ್ಟು ಒಳ್ಳೆಯದು ಅಂದ್ರೆ ಆತನ ಜೀವ ಹೋಗುವಂತಹ ನೋವು ಇದ್ದರೂ ಗೊತ್ತಾಗುವುದೇ ಇಲ್ಲ ನೋಡಿ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. "ಅದರಲ್ಲಿ ವಿಷವಿಲ್ಲ ... ಅದು ಅವನನ್ನು ನುಂಗಲಿಲ್ಲ. ಆತನನ್ನು ಅದು ಪುಡಿ ಮಾಡಬಹುದು. ಆದ್ರೆ ಆತನಿಗೆ ಅದು ಗೊತ್ತಾಗುವುದು ಹೇಗೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ಆತ ಯಾವ ಮದ್ಯದ ಬ್ರಾಂಡ್ ಕುಡಿದಿದ್ದಾನೆ ಎಂಬುದನ್ನು ಯಾರಾದರು ಕಂಡು ಹಿಡಿಯಿರಿ. ಆ ಬ್ರಾಂಡ್ ಎಷ್ಟು ದರವಾದರು ತರಿಸಬೇಕು ಎಂದು ಮತ್ತೊಬ್ಬರು ತಮಾಷೆಯ ಕಮೆಂಟ್ ಮಾಡಿದ್ದಾರೆ.



Click it and Unblock the Notifications