Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜ್ಯೋತಿಷ್ಯ: ಈ 5 ರಾಶಿಗಳಿಗೆ ಅತ್ಯಂತ ಶ್ರೀಮಂತರು ಹಾಗೂ ಪ್ರಸಿದ್ಧರಾಗುವ ಅದೃಷ್ಟವಿದೆಯಂತೆ!
ಶ್ರೀಮಂತರಾಗಲು ಅಥವಾ ಪ್ರಸಿದ್ಧ ವ್ಯಕ್ತಿಗಳಾಗಲು ಯಾರಿಗೆ ತಾನೆ ಇಷ್ಟವಿಲ್ಲ. ಕೆಲವರಿಗೆ ಹುಟ್ಟಿನಿಂದಲೇ ಪೋಷಕರ ಕಟಾಕ್ಷದಿಂದ ಖ್ಯಾತಿ ಹಾಗೂ ಸಂಪತ್ತು ಲಭಿಸಿದರೆ ಬಹುತೇಕರು ಬಹಳ ಶ್ರಮಪಟ್ಟು, ತಮ್ಮ ಬುದ್ಧಿವಂತಿಕೆಯಿಂದ ಗಳಿಸುತ್ತಾರೆ. ಇಂಥವರು ಕೇವಲ ಅದೃಷ್ಟವನ್ನು ನಂಬುವುದಿಲ್ಲ, ಆಂತರಿಕವಾಗಿ ಅಪಾರ ಶ್ರಮಶೀಲರು ಮತ್ತು ಮಹತ್ವಾಕಾಂಕ್ಷೆಯುಳ್ಳವರು. ಇವರ ಕೆಲವು ನಿಯಮಗಳು ಮತ್ತು ನೀತಿಗಳನ್ನು ಅನುಸರಿಸುತ್ತಾರೆ, ಅದು ಯಶಸ್ಸಿನ ಏಣಿಯನ್ನು ಏರಲು ಸಹಾಯ ಮಾಡುತ್ತದೆ.

ಜ್ಯೋತಿಷ್ಯಾಸ್ತ್ರದ ಪ್ರಕಾರ ಕೆಲವು ರಾಶಿಯವರು ಶ್ರೀಮಂತರಾಗಲು ಹಾಗೂ ಪ್ರಸಿದ್ಧ ವ್ಯಕ್ತಿಗಳಾಗಲು ಸಾಧ್ಯವಂತೆ. ಈ ರಾಶಿಯವರ ಶ್ರಮದ ಸ್ವಭಾವ, ಬುದ್ಧಿವಂತಿಕೆ, ಸ್ಮಾರ್ಟ್ ವರ್ಕ್, ಇವರ ಗುಣಸ್ವಭಾವ, ಕೆಲಸದ ಮೇಲಿನ ಶ್ರದ್ಧೆ ಹಾಗೂ ದೃಢ ನಿರ್ಧಾರಗಳು ಇವರನ್ನು ಗೆಲ್ಲಿಸುತ್ತದೆಯಂತೆ.
ಶ್ರೀಮಂತ ಮತ್ತು ಪ್ರಸಿದ್ಧರಾಗುವ ಸಾಧ್ಯತೆಯಿರುವ ಪ್ರಮುಖ ರಾಶಿಚಕ್ರಗಳು ಇದೇ ನೋಡಿ:

ಮೇಷ ರಾಶಿ
ಮೇಷ ರಾಶಿಯವರಿಗೆ ತಾಳ್ಮೆಯ ಕೊರತೆ ಇದ್ದರೂ, ಇವರು ತಮ್ಮ ಜೀವನವನ್ನು ಯಶಸ್ವಿಗೊಳಿಸಲು ಬಹಳ ಸಮರ್ಪಿತರಾಗಿರುವ ಜನರು. ಅವರು ತಮ್ಮ ಪೂರ್ಣ ಉತ್ಸಾಹವನ್ನು ಕೆಲಸವಾಗಿ ಪರಿವರ್ತಿಸುತ್ತಾರೆ, ಅವರು ತುಂಬಾ ಸ್ಮಾರ್ಟ್ ಆಗಿ ಕೆಲಸ ಮಾಡುತ್ತಾರೆ ಮತ್ತು ಬುದ್ಧಿವಂತರು ಸಹ. ಇದೇ ಇವರು ಪ್ರಸಿದ್ಧರಾಗಲು ಹಾಗೂ ಶ್ರೀಮಂತ ವ್ಯಕ್ತಿಯಾಗಲು ಕಾರಣ. ಇದರಿಂದಲೇ ಇವರು ತಮ್ಮ ಜೀವನವನ್ನು ಆನಂದಿಸಬಹುದು.

ವೃಷಭ ರಾಶಿ
ವೃಷಭ ರಾಶಿಯವರು ತುಂಬಾ ತಾಳ್ಮೆ ಮತ್ತು ಅತ್ಯಂತ ನಿಷ್ಠುರರಾಗಿದ್ದಾರೆ. ಅವರು ಗೆಲ್ಲುವವರೆಗೂ ಅದನ್ನು ಬಿಡುವುದಿಲ್ಲ, ತುಂಬಾ ಹಠಮಾರಿಗಳು ಪ್ರಯತ್ನವನ್ನು ಮುಂದುವರಿಸುತ್ತಾರೆ. ಐಷಾರಾಮಿ ಜೀವನವನ್ನು ನಡೆಸುವ ಅವರ ಬಯಕೆಯು ಅವರಿಗೆ ಕಷ್ಟಪಟ್ಟು ಕೆಲಸ ಮಾಡಲು ಪ್ರೇರಣೆ ನೀಡುತ್ತದೆ. ಅವರು ಅನೇಕ ಬಾರಿ ಅದೃಷ್ಟವನ್ನು ತಮ್ಮ ಪಾಲಿಗೆ ಹೊಂದುತ್ತಾರೆ.

ಸಿಂಹ ರಾಶಿ
ಸಿಂಹ ರಾಶಿಯವರು ಮಾಡುವ ಪ್ರತಿಯೊಂದು ಕೆಲಸದಕ್ಕೂ ತಮ್ಮದೇ ಆದ ಒಂದು ನಿರ್ದಿಷ್ಠ ಮಾರ್ಗವನ್ನು ಹೊಂದಿರುತ್ತಾರೆ ಮತ್ತು ಜೀವನದ ಪ್ರತಿಯೊಂದು ಸನ್ನಿವೇಶವನ್ನು ಪೂರ್ಣ ಸಾಮರ್ಥ್ಯದೊಂದಿಗೆ ಸ್ವೀಕರಿಸುತ್ತಾರೆ. ಅವರು ವೈಫಲ್ಯವನ್ನು ನಿರಾಶಾದಾಯಕವಾಗಿ ತೆಗೆದುಕೊಳ್ಳುವುದಿಲ್ಲ, ಪ್ರತಿಯಾಗಿ ಒಂದು ಪಾಠವಾಗಿ ಇನ್ನಷ್ಟು ಛಲದೊಂದಿಗೆ ಮತ್ತು ಅದನ್ನು ಉತ್ತಮವಾಗಿ ಮಾಡಲು ಪ್ರೇರಣೆಯಾಗಿ ತೆಗೆದುಕೊಳ್ಳುತ್ತಾರೆ. ಅವರು ಸದಾ ಲೈಮ್‌ಲೈಟ್ ಅಲ್ಲಿರಲು ಇಷ್ಟಪಡುತ್ತಾರೆ, ಆದ್ದರಿಂದ ಅವರು ಅಂತಿಮವಾಗಿ ಅವಿರತ ಶ್ರಮದಿಂದ ಶ್ರೀಮಂತರು, ಪ್ರಸಿದ್ಧರು ಮತ್ತು ಯಶಸ್ವಿಯಾಗುತ್ತಾರೆ.

ಕನ್ಯಾ ರಾಶಿ
ಕನ್ಯಾ ರಾಶಿಯವರು ಉಕ್ಕಿನಷ್ಟು ಬಲವಾಗಿರುತ್ತಾರೆ. ಅವರ ಖ್ಯಾತಿ ಮತ್ತು ಅದೃಷ್ಟದ ಹಾದಿಯಿಂದ ಯಾವುದೂ ಸಹ ಅವರ ದಾರಿಯನ್ನು ತಪ್ಪಿಸಲು ಸಾಧ್ಯವಿಲ್ಲ. ಅವರು ತುಂಬಾ ಶ್ರಮಜೀವಿಗಳು ಮತ್ತು ವೈಫಲ್ಯವನ್ನು ಅವರು ಒಪ್ಪುವುದೇ ಇಲ್ಲ, ಅಡೆತಡೆಗಳನ್ನು ಮೀರಿ ಅವರು ಪ್ರಯತ್ನ ಪಡುತ್ತಾರೆ. ಅವರು ಸಾಧಾರಣ ವಿಷಯಗಳಿಗೆ ನೆಲೆಗೊಳ್ಳುವುದಿಲ್ಲ ಮತ್ತು ಇದು ಅವರಿಗೆ ಉತ್ತಮವಾದುದನ್ನು ಸಾಧಿಸಲು ಸಹಾಯ ಮಾಡುತ್ತದೆ.

ಮಕರ ರಾಶಿ
ಮಕರ ರಾಶಿಯವರು ಬಹಳಷ್ಟು ಯಶಸ್ವಿ ವ್ಯಕ್ತಿಗಳು. ಈ ರಾಶಿಯವರಿಗೆ ಅಧಿಕಾರತ್ವ ಬಹಳ ಕರಗತವಾಗಿದೆ, ಹೇಳಿ ಮಾಡಿಸುವ ಕೆಲಸವನ್ನು ಚೆನ್ನಾಗಿ ಮಾಡುತ್ತಾರೆ. ಅವರ ದೃಢವಾದ ಸ್ವಭಾವವು ಕಾರ್ಪೊರೇಟ್ ಏಣಿಯನ್ನು ಏರಲು ಮತ್ತು ಕಂಪನಿಯ ಮುಖ್ಯಸ್ಥರಾಗಲು ಸಹಾಯ ಮಾಡುತ್ತದೆ. ಮಕರ ರಾಶಿಯವರು ಎಲ್ಲರಿಗಿಂತಲೂ ಶ್ರೇಷ್ಠರಾಗಿರುವ ಆರ್ಥಿಕ ಸವಲತ್ತುಗಳನ್ನು ಸಹ ಆನಂದಿಸುವವರು.



Click it and Unblock the Notifications