Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಜ್ಯೋತಿಷ್ಯ: ಈ ರಾಶಿಯವರಿಗೆ ಪ್ರೇಮ ವಿರಹವನ್ನು ಸಹಿಸಲು ಸಾಧ್ಯವಿಲ್ಲ
ಪ್ರೇಮದ ವಿಚಾರದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯ ಇರುತ್ತದೆ. ಕೆಲವರು ಪ್ರೇಮವನ್ನು ಮನಸ್ಸಿನ ಆಳಕ್ಕೆ ತೆಗೆದುಕೊಂಡರು, ಇನ್ನು ಹಲವರು ಪ್ರೇಮ ಎಂಬುದು ಕೇವಲ ಜೀವನದ ಒಂದು ಭಾಗವಷ್ಟೇ. ಅದರೆ ಜ್ಯೋತಿಶಾಸ್ತ್ರದ ಪ್ರಕಾರ ಈ ರಾಶಿಯವರು ಪ್ರೇಮದಿಂದ ದೂರಾದರೆ, ತಮ್ಮ ಪ್ರೇಮಿಯಿಂದ ವಿಘಟನೆಯಾದರೆ ಅದನ್ನು ಸಹಿಸುವ ಶಕ್ತಿ ಅವರಿಗಿಲ್ಲ.
ಇವರಿಗೆ ತಮ್ಮ ಮಾಜಿ ವ್ಯಕ್ತಿಯನ್ನು ಮರೆಯಲು ಸಾಧ್ಯವಿಲ್ಲ. ತಮ್ಮ ಹಿಂದಿನ ಸಂಬಂಧದ ನೆನಪುಗಳು ಅವರನ್ನು ಸದಾ ಕಾಡುತ್ತಿರುವಾಗ ಅವರು ಇತರ ಜನರು ಮತ್ತು ವಸ್ತುಗಳ ಬಗ್ಗೆ ಯೋಚಿಸಲು ಬಹಳ ಕಷ್ಟಪಡುತ್ತಾರೆ. ಕೆಳಗೆ ಹೇಳಲಿರುವ ಈ ರಾಶಿಚಕ್ರದವರು ಎಂದಿಗೂ ಪ್ರೇಮವಿರಹವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ, ಯಾವ ರಾಶಿಯವರು ಮುಂದೆ ನೋಡೋಣ:

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಸಂಬಂಧಗಳ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ. ಆದ್ದರಿಂದ, ಅವರು ಯಾರಿಗಾದರೂ ತಮ್ಮನ್ನು ಒಪ್ಪಿಸಿಕೊಂಡಾಗ ಅವರು ತಮ್ಮ ಸಂಗಾತಿಯೊಂದಿಗೆ ಜೀವಿತಾವಧಿಯಲ್ಲಿ ಇರಬೇಕೆಂದು ನಿರೀಕ್ಷಿಸುತ್ತಾರೆ. ಮತ್ತು ಅದು ಉತ್ತಮ ಸಂಬಂಧವಾಗಿ ಹೊರಹೊಮ್ಮದಿದ್ದಾಗ, ಸಂಬಂಧದಲ್ಲಿ ಬಿರುಕು ಉಂಟಾದಾಗ ಅವರು ದುಃಖ ಮತ್ತು ನಿರಾಶೆಯಲ್ಲಿ ಮುಳುಗುತ್ತಾರೆ. ಈ ದುಃಖವ್ನು ಭರಿಸುವ ಶಕ್ತಿ ಅವರಿಗೆ ಇರುವುದಿಲ್ಲ. ಅವರು ತಮ್ಮ ನೋವನ್ನು ಏಕಾಂಗಿಯಾಗಿ ಅನುಭವಿಸುತ್ತಾರೆ. ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ.

ಸಿಂಹ ರಾಶಿ
ಸಿಂಹ ರಾಶಿಯವರು ಎಷ್ಟೇ ಆತ್ಮವಿಶ್ವಾಸದಿಂದ ಕಾಣುತ್ತಿದ್ದರೂ, ಸಿಂಹ ರಾಶಿಯವರು ಸಂಬಂಧದಿಂದ ದೂರಾದಾಗ ಅಥವಾ ವಿಘಟನೆಯ ಸಮಯದಲ್ಲಿ ತುಂಬಾ ಕುಗ್ಗಿಹೋಗುತ್ತಾರೆ. ಅವರು ತಮ್ಮ ಸಂಬಂಧದಲ್ಲಿದ್ದವರನ್ನು ಮರೆಯುವುದು ಅವರಿಗೆ ತುಂಬಾ ಕಷ್ಟ. ಅವರು ತಮ್ಮ ಮಾಜಿ ಪ್ರೇಮಿ ಮತ್ತು ವಿಘಟನೆಯನ್ನು ತಡೆಯಲು ಅವರು ಮಾಡಿದ ವ್ಯತ್ಯಾಸದ ಬಗ್ಗೆ ಅಳುತ್ತಾರೆ ಮತ್ತು ದುಃಖಿಸುತ್ತಾರೆ.

ವೃಷಭ ರಾಶಿ
ವೃಷಭ ರಾಶಿಯವರು ಸಂಬಂಧದ ವಿಷಯಕ್ಕೆ ಬಂದಾಗ ಅವರು ತುಂಬಾ ಹಠಮಾರಿಗಳು. ಒಮ್ಮೆ ಅವರು ತಮ್ಮ ಮನಸ್ಸನ್ನು ಯಾರಿಗಾದರೂ ಕೊಟ್ಟರೆ ಮತ್ತೆ ಹಿಂದೆ ಬರುವುದು ತುಂಬಾ ಕಷ್ಟ, ಈ ಸಂಬಂಧವನ್ನು ತೊರೆಯಲು ಬಯಸುವುದಿಲ್ಲ. ವಿಘಟನೆಯ ನಂತರವೂ ಅವರು ತಮ್ಮ ಮಾಜಿ ಬಗ್ಗೆ ಯೋಚಿಸುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಆಗಾಗ್ಗೆ ಪದೇ ಪದೇ ತಮ್ಮ ಹಿಂದಿನ ಪ್ರೇಮದ ಬಗ್ಗೆ ಮೆಲುಕು ಹಾಕುತ್ತಿರುತ್ತಾರೆ.

ಮೇಷ ರಾಶಿ
ಮೇಷ ರಾಶಿಯವರು ಅವರ ಹೃದಯದಲ್ಲಿ ಒಳ್ಳೆಯ ನೆನಪುಗಳನ್ನು ಇಟ್ಟುಕೊಳ್ಳಲು ಬಯಸುತ್ತಾರೆ. ಇದೇ ಇವರಿಗೆ ತಮ್ಮ ಮಾಜಿ ವ್ಯಕ್ತಿಯನ್ನು ಬಿಡಲು ಸಾಧ್ಯವಾಗದ ಏಕೈಕ ಕಾರಣವಾಗಿದೆ. ಹಿಂದಿನದನ್ನು ಹಿಡಿದಿಟ್ಟುಕೊಳ್ಳುವ ಅವರ ಬಯಕೆಯು ಅವರು ತಮ್ಮ ಮಾಜಿ ಜೊತೆ ಕಳೆದ ಎಲ್ಲಾ ಒಳ್ಳೆಯ ಸಮಯವನ್ನು ನೆನಪಿಸುತ್ತದೆ. ಅಂತಹ ವಿಷಯಗಳ ಬಗ್ಗೆ ಯೋಚಿಸುವುದು ಅವರು ಕಳೆದುಕೊಳ್ಳುತ್ತಿರುವುದನ್ನು ನೆನಪಿಸುತ್ತದೆ.

ಮಿಥುನ ರಾಶಿ
ಮಿಥುನ ರಾಶಿಯವರು ಕಷ್ಟಪಟ್ಟು ಪಾರ್ಟಿ ಮಾಡುವ ಮೂಲಕ ಮತ್ತು ಇತರರೊಂದಿಗೆ ಬೆರೆಯುವ ಮೂಲಕ ತಮ್ಮ ಮಾಜಿ ವ್ಯಕ್ತಿಯನ್ನು ಮರೆಯಲು ಪ್ರಯತ್ನಿಸಿದರೂ, ಅವರು ಅದನ್ನು ಮಾಡಲು ಸಾಧ್ಯವಿಲ್ಲ. ಮಿಥುನ ರಾಶಿಯವರಿಗೆ ತಮ್ಮ ಹಿಂದಿನವರನ್ನು ಮರೆತು ಹೋಗುವುದು ಕಷ್ಟದ ಕೆಲಸ. ಅವರು ಬಹಳಷ್ಟು ಸುತ್ತಾಡುತ್ತಾರೆ ಮತ್ತು ತಮ್ಮ ದುಃಖಗಳನ್ನು ಮರೆಯಲು ಕೆಟ್ಟ ಅಭ್ಯಾಸಗಳಿಗೆ ಒಳಗಾಗುತ್ತಾರೆ.



Click it and Unblock the Notifications
