Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ರಾಶಿಗಳಿಗೆ ಸುಳ್ಳನ್ನು ಹೇಗೆ ಹೇಳಬೇಕೆಂದು ಗೊತ್ತಿಲ್ಲ!
ರಾಶಿ ಭವಿಷ್ಯ ಕೇವಲ ವ್ಯಕ್ತಿಯ ಭೂತ, ಭವಿಷ್ಯಗಳನ್ನು ತಿಳಿಯುವುದಷ್ಟೇ ಅಲ್ಲ ನಮ್ಮ ವ್ಯಕ್ತಿತ್ವ, ಗುಣಗಳನ್ನು ಸಹ ತಿಳಿಸುತ್ತದೆ. ಯಾವ ರಾಶಿಯವರು ಅದೃಷ್ಟವಂತರು, ಯಾರಿಗೆ ಹೆಚ್ಚು ಕೋಪ ಬರುತ್ತದೆ, ಯಶಸ್ಸಿನ ರಹಸ್ಯ, ಆರ್ಥಿಕ ಸ್ಥಿತಿಗತಿ, ಸುಖೀಗಳು, ಕೆಲಸದ ಜೀವನ, ಅವರ ಮಾತು-ನಡವಳಿಕೆ ಹೇಗಿರುತ್ತದೆ ಎಂಬುದು ಸೇರಿದಂತೆ ಹಲವು ಅಂಶಗಳನ್ನು ರಾಶಿಯಿಂದಲೇ ತಿಳಿಯಬಹುದು.

ನಮ್ಮ ಸುತ್ತಮುತ್ತ ಹಲವು ಸಂದರ್ಭಗಳಲ್ಲಿ ನಾವು ನೋಡುತ್ತಲೇ ಇರುತ್ತೇವೆ, ಕೆಲವರು ಎಷ್ಟು ಚೆನ್ನಾಗಿ ಸುಳ್ಳುಗಳನ್ನು ಹೇಳುತ್ತಾರೆ ಎಂದರೆ ಅದು ಸುಳ್ಳು ಎಂದು ನಾವು ಅಲ್ಲಗಳೆಯುವಂತೆಯೇ ಇಲ್ಲ, ಬಹಳ ಕುಶಲತೆಯಿಂದ ಸುಳ್ಳುಗಳನ್ನು ಸೃಷ್ಟಿಸುತ್ತಾರೆ. ಆದರೆ, ಕೆಲವರು ಹೇಳುವ ಸುಳ್ಳುಗಳು ಅವರ ಮುಖದಲ್ಲೇ ಗೋಚರಿಸುತ್ತಿರುತ್ತದೆ. ಹೀಗೆ ಸುಳ್ಳುಗಳನ್ನೇ ಹೇಳಲು ಬಾರದ ಕೆಲವು ರಾಶಿಗಳಿವೆ. ಈ ರಾಶಿಯವರಿಗೆ ಸುಳ್ಳುಗಳನ್ನು ಹೇಳಲು ಬರುವುದಿಲ್ಲ ಅಥವಾ ಇವರು ಹೇಳುವ ಸುಳ್ಳುಗಳು ಬಹಳ ಸುಲಭವಾಗಿ ತಿಳಿಯಬಹುದು. ಬನ್ನಿ ಯಾವ ರಾಶಿಗಳು ಇಂತಹ ಸ್ವಭಾವವನ್ನು ಹೊಂದಿದೆ ತಿಳಿಯೋಣ.

ವೃಷಭ ರಾಶಿ
ವೃಷಭ ರಾಶಿಯವರು ತಾವು ನ್ಯಾಯಯುತವಾಗಿ ಇರಲು ಇಷ್ಟಪಡುತ್ತಾರೆ. ಹೆಚ್ಚಿನ ರಹಸ್ಯಗಳನ್ನು ಎದುರಿಸಲು, ಹೇಳದೆ ಮುಚ್ಚಿಡಲು ಇವರು ಇಷ್ಟಪಡುವುದಿಲ್ಲ. ಪ್ರಾಮಾಣಿಕತೆ ವೃಷಭ ರಾಶಿಯವರ ಪ್ರಮುಖ ಸ್ವಭಾವ. ವೃಷಭ ರಾಶಿಯ ಬಹುತೇಕ ಹೆಣ್ಣುಮಕ್ಕಳಿಗೆ ತಮ್ಮ ನಿಷ್ಠೆ, ನ್ಯಾಯವೇ ಅವರ ವಿರೋಧಿಗಳಾಗಿರುತ್ತವೆ. ವೃಷಭಬ ರಾಶಿಯವರು ತೆರೆದ ಪುಸ್ತಕದಂಥ ಗುಣವನ್ನು ಹೊಂದಿರುವವರು ಎಂದರೆ ತಪ್ಪಾಗಲಾರದು.

ಕನ್ಯಾ ರಾಶಿ
ಕನ್ಯಾರಾಶಿಯವರು ಹೆಚ್ಚು ಪ್ರಾಮಾಣಿಕರಾಗಿದ್ದು, ಮನಬಿಚ್ಚಿ ಎಲ್ಲರೊಂದಿಗೆ ಬೆರೆಯಲು ಸರಿಯಾದ ಸಮಕ್ಕೆ ಕಾಯುವವರಾಗಿರುತ್ತಾರೆ. ಪರಿಪೂರ್ಣತೆಯ ಇವರ ಪ್ರಮುಖ ಗುಣ. ಸುಳ್ಳುಗಳನ್ನು ಹೇಳಿ ಯಾವುದೇ ಕೆಲಸ ಮಾಡಿದರು ಅಥವಾ ಇನ್ಯಾವುದೇ ವಿಷಯದಲ್ಲೂ ಸುಳ್ಳು ಹೇಳಿದಾಗ ಇವರಿಗೆ ಪರಿಪೂರ್ಣತೆ ಎನಿಸುವುದೇ ಇಲ್ಲ. ಇಷ್ಟೇ ಅಲ್ಲದೆ, ಇವರೇನಾದರೂ ಸುಳ್ಳುಗಳನ್ನು ಹೇಳಿದರೂ ಇವರ ಸ್ನೇಹಿತರು ಮತ್ತು ಶತ್ರುಗಳು ಬಹಳ ಸುಲಭವಾಗಿ ಸುಳ್ಳನ್ನು ಹೇಳುತ್ತಿದ್ದಾರೆ ಎಂದು ಪತ್ತೆ ಮಾಡುತ್ತಾರೆ. ಬುದ್ಧಿವಂತರಾಗಿದ್ದರೂ, ಅವರು ನ್ಯಾಯಯುತವಾಗಿರಲು ಇಷ್ಟಪಡುತ್ತಾರೆ ಮತ್ತು ಸುಳ್ಳು ಹೇಳುವಲ್ಲಿ ವಿಫಲರಾಗುತ್ತಾರೆ.

ವೃಶ್ಚಿಕ ರಾಶಿ
ಸುಳ್ಳುಗಳನ್ನು ಹೇಳುವಲ್ಲಿ ವೃಶ್ಚಿಕ ರಾಶಿಯವರು ಬಹಳ ಪ್ರಬುದ್ಧರು. ಬಹಳ ಕಠಿಣ ಸಂದರ್ಭಗಳಲ್ಲಿ ಮಾತ್ರ ವೃಶ್ಚಿಕ ರಾಶಿಯವರು ಸುಳ್ಳುಗಳನ್ನು ಹೇಳುತ್ತಾರೆ.
ಇವರಿಗೆ ವ್ಯವಹಾರದ ಹೊರತಾಗಿ ಉಳಿದೆಲ್ಲವೂ ಗೌಣವಾಗಿ ಪರಿಗಣಿಸುತ್ತಾರೆ. ಈ ಗುಣಲಕ್ಷಣದಿಂದಲೇ ಇವರು ಸರಿಯಾದ್ದನ್ನೇ ಮಾಡುತ್ತಾರೆ ಹಾಗೂ ಸಮರ್ಥ ನಿರ್ಧಾರಗಳನ್ನು ಕೈಗೊಳ್ಳುವ ಗುಣದವರು ಎನ್ನಲಾಗುತ್ತದೆ. ಸುಳ್ಳುಗಳನ್ನು ಹೇಳುವುದರಿಂದ ಇವರಿಗೆ ಕಿರಿಕಿರಿ ಎನಿಸುತ್ತದೆ, ಪ್ರಾಮಾಣಿಕವಾಗಿರುವುದು ಇವರದಲ್ಲಿ ನಿರಾಳತೆಯ ಭಾವ ಮೂಡಿಸುತ್ತದೆ.

ಧನಸ್ಸು ರಾಶಿ
ಧನು ರಾಶಿಯವರು ತಮ್ಮ ಜೀವನದಲ್ಲಿ ಎಂದಿಗೂ ಅಪ್ರಾಮಾಣಿಕತೆಯನ್ನು ಪ್ರದರ್ಶಿಸುವುದಿಲ್ಲ. ಸುಳ್ಳು ಹೇಳುವ, ನಕಲಿ ಗುಣಗಳನ್ನು ಹೊಂದಿರುವ ವ್ಯಕ್ತಿಗಳಿಂದ ಇವರು ಆದಷ್ಟು ದೂರವಿರುತ್ತಾರೆ. ಸದಾ ಮುಂಚೂಣಿಯಲ್ಲಿರುವ ಧೈರ್ಯದ ಸ್ವಭಾವದವರಾದ ಇವರು ಸುಳ್ಳುಗಳನ್ನು ಹೇಳಿದ ನಂತರ ಅದನ್ನು ನೆನಪಿಟ್ಟುಕೊಳ್ಳುವ, ಅದನ್ನು ನಿಭಾಯಿಸುವ ಗುಣವನ್ನು ಹೊಂದಿಲ್ಲ. ಸುಳ್ಳು ಹೇಳಲು ಬಾರದ ಇವರು, ಸತ್ಯ ಹೇಳಿ ನೆಮ್ಮದಿ ಇಂದ ಇರುತ್ತಾರೆ.

ಮಕರ ರಾಶಿ
ಜನರು ಏಕೆ ಸುಳ್ಳುಗಳನ್ನು ಹೇಳುತ್ತಾರೆ ಎಂಬುದನ್ನೇ ಅರ್ಥಮಾಡಿಕೊಳ್ಳುವಲ್ಲಿ ಮಕರ ರಾಶಿಯವರು ಸೋಲುತ್ತಾರೆ. ನಮ್ಮ ಪ್ರತಿ ಕ್ರಿಯೆಗೂ ಅಥವಾ ಏನನ್ನೇ ಮಾಡಿದರು ಅದಕ್ಕೆ ಒಂದು ಉತ್ತಮ ಕಾರಣ ಇರಬೇಕು ಎಂದು ಇವರು ಬಯಸುತ್ತಾರೆ. ಸುಳ್ಳುಗಳನ್ನು ಹೇಳುವುದು ಇವರಿಗೆ ಅಷ್ಟು ಸುಲಭವಾಗಿ ಒಲಿಯುವುದಿಲ್ಲ. ಇವರು ಸಮಸ್ಯೆಯಲ್ಲಿ ಸಿಲುಕಿದ್ದರೂ ಸಹ ಸತ್ಯವನ್ನೆ ಹೇಳುತ್ತಾರೆ ಮತ್ತು ಅದರ ಪರಿಣಾಮವನ್ನು ಎದುರಿಸುತ್ತಾರೆ. ಸಾಧ್ಯವಾದಷ್ಟು ಇವರು ಸುಳ್ಳು ಹೇಳಲು ಇಷ್ಟಪಡುವುದಿಲ್ಲ, ಅಪ್ಪಿತಪ್ಪಿ ಸುಳ್ಳು ಹೇಳಿದರೂ ಅದರಲ್ಲಿ ಇವರು ವಿಫಲರಾಗುತ್ತಾರೆ.

ಮೀನ ರಾಶಿ
ಪ್ರಾಮಾಣಿಕತೆ ಎಂಬುದು ಇವರಿಗೆ ಹುಟ್ಟಿನಿಂದಲೇ ಬಂದಿದೆ, ಇದು ಇವರ ಜೀವನದ ಒಂದು ಭಾಗವೆಂದರೆ ತಪ್ಪಾಗಲಾರದು. ಅಪ್ಪಿತಪ್ಪಿ ಇವರು ಸುಳ್ಳು ಹೇಳಿದರೂ, ಸ್ವಯಂ ಇದನ್ನು ಒಪ್ಪಿಕೊಂಡು ಸತ್ಯವನ್ನು ಹೇಳುತ್ತಾರೆ. ಇವರು ತಮ್ಮ ಮನಸಿನಲ್ಲಿ ಇರುವ ವಿಷಯವನ್ನು ಹಾಗೆಯೇ ಹೇಳಿಬಿಡುತ್ತಾರೆ, ಇವರನ್ನು ಮುಗ್ದರು ಎಂದೂ ಸಹ ಕರೆಯಬಹುದು.



Click it and Unblock the Notifications