Latest Updates
-
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ
ಜ್ಯೋತಿಶಾಸ್ತ್ರದ ಪ್ರಕಾರ ಈ ರಾಶಿಯವರು ಸಿಕ್ಕಾಪಟ್ಟೆ ಸೋಮಾರಿಗಳಂತೆ!
ಸೋಮಾರಿತನ ಎಂಬುದು ಮನುಷ್ಯನ ಒಂದು ದೊಡ್ಡ ಕಾಯಿಲೆ, ಇದು ಇವರನ್ನು ಗೆಲವು, ಯಶಸ್ಸು, ಸಾಧನೆ ಇವುಗಳಿಂದ ಬಹಳ ದೂರ ಇಡುತ್ತದೆ. ಸೋಮಾರಿತನ ಯಾರಿಗೂ ರಕ್ತಗತವಾಗಿ ಬರುವುದಲ್ಲ, ಇದನ್ನು ಇವರೇ ಸ್ವತಃ ಮೈಗೂಡಿಸಿಕೊಳ್ಳುವುದು. ಸೋಮಾರಿಗಳಿಗೆ ಮುಂದೂಡುವುದೇ ಇಷ್ಟ ಮತ್ತು ಇವರು ಮಾಡುವ ಪ್ರತಿಯೊಂದು ಕೆಲಸದ ಬಗ್ಗೆಯೂ ಇವರು ನಾಳೆ ಬಾ ಎಂದು ಎನ್ನುತ್ತಾರೆ.

ಅವರು ತಮ್ಮ ಯಾವುದೇ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಲು ದ್ವೇಷಿಸುತ್ತಾರೆ. ಕೊನೆಯ ಕ್ಷಣದವರೆಗೂ ಕಾದು ಅಂತಿಮ ಕ್ಷಣದಲ್ಲಿ ಆತುರಾತುರವಾಗಿ ಕೆಲಸ ಮುಗಿಸುತ್ತಾರೆ.
ಜ್ಯೋತಿಶಾಸ್ತ್ರದಲ್ಲಿ ಈ ಸೋಮಾರಿಗಳನ್ನು ಸುಲಭವಾಗಿ ಪತ್ತೆ ಮಾಡಬಹುದು ಗೊತ್ತೇ?, ಜ್ಯೋತಿಶಾಸ್ತ್ರದ ಪ್ರಕಾರ ಈ ರಾಶಿಚಕ್ರದವರು ಸಿಕ್ಕಾಪಟ್ಟೆ ಸೋಮಾರಿಗಳಂತೆ, ಇವರಿಗೆ ಯಾವುದಾದರೂ ಜವಾಬ್ದಾರಿ ಕೆಲಸ ವಹಿಸುವ ಮುನ್ನ ಸಾಕಷ್ಟು ಎಚ್ಚರಿಕೆ ನೀಡಿ ನಂತರ ಜವಾಬ್ದಾರಿಗಳನ್ನು ವಹಿಸಿ. ಹೆಚ್ಚು ಸೋಮಾರಿಯಾಗಿರುವ ರಾಶಿಚಕ್ರಗಳು ಯಾವುವು ಮುಂದೆ ನೋಡೋಣ:

ಧನು ರಾಶಿ
ಧನು ರಾಶಿಯವರಿಗೆ ಪ್ರತಿದಿನ ಒಂದೇ ರೀತಿಯ ಜೀವನಶೈಲಿ ಬಹಳ ಬೋರಿಂಗ್ ಆಗಿರುತ್ತದೆ. ಈ ರಾಶಿಯವರು ಎಂದಿಗೂ ಸಮಯಕ್ಕೆ ಸರಿಯಾಗಿ ಕೆಲಸ ಮಾಡುವುದಿಲ್ಲ, ಹಾಗೇ ನೀವು ನಿರೀಕ್ಷಿಸಲೂಬೇಡಿ. ಇವರಿಗೆ ಬೇಕಾಗಿರುವುದು ಚೆನ್ನಾಗಿ ವಿಶ್ರಾಂತಿ ಮಾಡುವುದು, ಆ ಕ್ಷಣವನ್ನು ಆನಂದಿಸುವುದು ಅಷ್ಟೇ.

ವೃಷಭ ರಾಶಿ
ವೃಷಭ ರಾಶಿಯವರು ತುಂಬಾ ಹಠಮಾರಿಗಳು ಮತ್ತು ಅವರು ಬಯಸದ ಹೊರತು ಯಾವುದೇ ಕೆಲಸವನ್ನು ಮಾಡುವುದಿಲ್ಲ. ಇವರೇ ಇಷ್ಟಪಟ್ಟಾಗ ತುಂಬಾ ಕೆಲಸ ಮಾಡುವರು ಮತ್ತು ತುಂಬಾ ಶ್ರಮಿಸಬಹುದು, ಆದರೆ ಯಾರೂ ಅವರನ್ನು ಕೆಲಸ ಮಾಡು ಎಂದು ಒತ್ತಾಯಿಸುವಂತಿಲ್ಲ, ಅವರೇ ಮಾಡುವವರೆಗೂ ಕಾಯಬೇಕು. ಅಲ್ಲದೇ ಅವರು ಕೆಲಸ ಮಾಡುವಾಗ ಸೌಕರ್ಯವನ್ನು ಸಹ ನೋಡುತ್ತಾರೆ.

ಕುಂಭ ರಾಶಿ
ಕುಂಭ ರಾಶಿಯವರು ತಮ್ಮ ಸೃಜನಶೀಲತೆಗೆ ಧಕ್ಕೆಯಾಗುವಂಥ ಮಂದ ವಾತಾವರಣದಲ್ಲಿ ಕೆಲಸ ಮಾಡಲು ಇಷ್ಟಪಡುವುದಿಲ್ಲ. ಆದ್ದರಿಂದ, ಕೆಲವು ಸಂದರ್ಭಗಳಲ್ಲಿ ಏನನ್ನೂ ಮಾಡದೇ ವಿಶ್ರಾಂತಿ ಪಡೆಯುತ್ತಾರೆ, ತಮ್ಮ ಸುತ್ತಲಿನ ಪ್ರದೇಶವನ್ನು ಚೆನ್ನಾಗಿ ಗಮನಿಸುತ್ತಾರೆ. ಅವರ ಸೃಜನಾತ್ಮಕತೆಗೆ ಅವಕಾಶ ಇರದ ಹಾಗೂ ಇಷ್ಟಪಡದ ಕೆಲಸವನ್ನು ಮಾಡುವುದಕ್ಕಿಂತ ವಿಶ್ರಾಂತಿ ಮಾಡುವುದು ಹೆಚ್ಚು ಶಾಂತಿಯುತವಾಗಿದೆ ಎಂದು ಅವರು ಭಾವಿಸುತ್ತಾರೆ.

ಮೀನ ರಾಶಿ
ಮೀನ ರಾಶಿಯವರು ತಮ್ಮ ಕೆಲಸವನ್ನು ಪೂರೈಸುವ ವಿಷಯ ಬಂದಾಗ ಅವರು ಎಲ್ಲಾ ಸ್ಥಳಗಳಲ್ಲೂ ಇರುತ್ತಾರೆ. ಆದರೆ ಅವರು ತಮ್ಮ ಫ್ಯಾಂಟಸಿ ಜಗತ್ತಿನಲ್ಲಿ ನೆಮ್ಮದಿಯಾಗಿರಲು ಬಯಸುತ್ತಾರೆ, ಅಲ್ಲಿ ಅವರು ಅತ್ಯುತ್ತಮ ಜೀವನವನ್ನು ಹೊಂದಬಹುದು ಎಂದು ಬಯಸುತ್ತಾರೆ. ಅವರು ಯೋಚಿಸುವುದು ಮತ್ತು ಕಲ್ಪನೆಯಲ್ಲಿ ವಾಸಿಸುವುದೇ ಇವರಿಗೆ ಹೆಚ್ಚು ಹಿತ ನೀಡುತ್ತದೆ.

ಮಿಥುನ ರಾಶಿ
ಮೀನ ರಾಶಿಯವರು ಮಾತಿನಲ್ಲೇ ಎಲ್ಲವನ್ನೂ ತೋರಿಸುತ್ತಾರೆ ಆದರೆ ಇದರಿಂದ ಯಾವುದೇ ಲಾಭವಿರುವುದಿಲ್ಲ. ಅವರು ಪ್ರಾಯೋಗಿಕವಾಗಿ ಅದನ್ನು ಮಾಡಲು ಒತ್ತಾಯಿಸುವವರೆಗೂ ಅವರು ಏನನ್ನೂ ಮಾಡುವುದಿಲ್ಲ. ಅವರು ಇಷ್ಟಪಡುವ ಕೆಲಸಗಳನ್ನು ಮಾತ್ರ ಮಾಡುತ್ತಾರೆ ಮತ್ತು ಅವರ ಇಷ್ಟದ ಕೆಲಸದಿಂದ ಯಾವುದೇ ಫಲಿತಾಂಶ ಸಿಗದೇ ಇರುವುದೇ ಅವರ ಕಡೆಯಿಂದ ದೊಡ್ಡ ನಿರಾಶೆಯಾಗಿದೆ.



Click it and Unblock the Notifications











