Latest Updates
-
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ
ಈ ರಾಶಿಯವರು ನಿಮ್ಮ ಪ್ರೇಮಿಯಾಗಿದ್ದರೆ ನೀವೇ ಅದೃಷ್ಟಂತರು
ಪ್ರೀತಿಯನ್ನು ಭಾವಿಸಬೇಕೆ ಹೊರತು ಇದರ ಅನುಭಾವವನ್ನು ವಿವರಿಸಲು ಸಾಧ್ಯವಿಲ್ಲ. ನಿಷ್ಕಲ್ಮಷವಾದ ಸ್ವಾರ್ಥರಹಿತ ಪ್ರೀತಿ ಪಡೆಯುವುದು ಅಷ್ಟು ಸುಲಭವಲ್ಲ. ಸಾಕಷ್ಟು ತ್ಯಾಗ, ಸಹಿಷ್ಣುತೆ, ಪ್ರಬುದ್ಧತೆಗಳ ಮಿಶ್ರಣವೇ ಪ್ರೀತಿ ಎನ್ನಬಹುದು. ಇದನ್ನು ಪಡೆಯಲು ಸಹ ಯೋಗಾಯೋಗ ಇರಬೇಕು ಎನ್ನುತ್ತದೆ ಜ್ಯೋತಿಶಾಸ್ತ್ರ.
ಪ್ರೀತಿಗೂ ಜ್ಯೋತಿಶಾಸ್ತ್ರಕ್ಕೂ ಏನು ಸಂಬಂಧ ಎನ್ನುತ್ತೀರಾ ಖಂಡಿತಾ ಇದೆ, ಜ್ಯೋತಿಶಾಸ್ತ್ರದ ಪ್ರಕಾರ ಈ ರಾಶಿಯವರನ್ನು ನೀವು ಇಷ್ಟಪಟ್ಟರೆ ಅತ್ಯುತ್ತಮವಾದ ಪ್ರೀತಿಯ ಜೀವನ ನಿಮ್ಮದಾಗುತ್ತದೆ. ಹೌದು, ಪ್ರೇಮ-ಪ್ರೀತಿ ಎಂಬ ಅಮೂಲ್ಯ ಸಂಪತ್ತು ಕೆಲವು ರಾಶಿಗಳ ವ್ಯಕ್ತಿತ್ವದ ಆಸ್ತಿಯಾಗಿದೆ.

ಇವರ ಪ್ರೀತಿ ಅಗಾಧ, ಅಪರಿಮಿತ, ಆದರೆ ಪ್ರೀತಿಯನ್ನು ವ್ಯಕ್ತಪಡಿಸುವ ವಿಧಾನ ಮಾತ್ರ ಭಿನ್ನ. ಜ್ಯೋತಿಶಾಸ್ತ್ರದ ಪ್ರಕಾರ ಕೆಲವುರಾಶಿಯವರಿಗೆ ಪ್ರೇಮದಲ್ಲಿ ಸಾಕಷ್ಟು ಅದೃಷ್ಟ ಇದೆಯಂತೆ, ಇವರು ಅತ್ಯುತ್ತಮ ಪ್ರೇಮಿಯಾಗಿರುತ್ತಾರೆ ಹಾಗೂ ನಿಷ್ಕಲ್ಮಷವಾದ ಪ್ರೇಮವನ್ನು ನೀಡುತ್ತಾರೆ.
ಯಾವೆಲ್ಲಾ ರಾಶಿಗಳು ಪ್ರೇಮದಲ್ಲಿ ಅತ್ಯುತ್ತಮರು, ಅವರಿಗೆ ಹೇಗೆಲ್ಲಾ ಪ್ರೇಮದ ಅದೃಷ್ಟ ಇದೆ ಎಂದು ಮುಂದೆ ತಿಳಿಯೋಣ.

ಕರ್ಕ ರಾಶಿ
ಭಾವನೆಗಳನ್ನು ನಿಗ್ರಹಿಸುವುದು ಒಂದು ಕಲೆ, ಆದರೆ ಕರ್ಕ ರಾಶಿಯವರಿಗೆ ಇದು ಕರಗತ ಎಂದೇ ಹೇಳಬಹುದು. ಕಾರಣ ಕರ್ಕ ರಾಶಿಯವರು ತಮ್ಮ ಭಾವನೆಗಳನ್ನು ಸಾಕಷ್ಟು ಬಿಗಿಯಾಗಿ ಹಿಡಿದಿಟ್ಟುಕೊಳ್ಳುತ್ತಾರೆ. ಅವರು ತಮ್ಮ ಸಂಗಾತಿಯ ಸಣ್ಣ ಸಣ್ಣ ಮುದ್ದಾದ ವಿಷಯಗಳ ಮೂಲವನ್ನು ಸಹ ಹಿಡಿಯಲು ಪ್ರಯತ್ನಿಸುತ್ತಾರೆ. ಕರ್ಕ ರಾಶಿಯವರ ಪರಾನುಭೂತಿಯ ಗುಣ ಇವರನ್ನು ಉತ್ತಮ ಪ್ರೇಮಿಯನ್ನಾಗಿ ಮಾಡುತ್ತದೆ. ಕರ್ಕ ರಾಶಿಯ ಹಲವು ಪ್ರೇಮಿಗಳು ತನ್ನ ಪ್ರೇಮಿಯೊಂದಿಗೆ ವ್ಯವಹರಿಸುವಾಗ ಬಹಳ ರಕ್ಷಣಾತ್ಮಕವಾಗಿರುತ್ತಾರೆ. ನಿಮಗೂ ಸಹ ಕರ್ಕ ರಾಶಿಯ ಪ್ರೇಮಿ ಇದ್ದರೆ ಸಂಬಂಧವನ್ನು ಕಾಪಾಡಿಕೊಳ್ಳಲು ಪ್ರಾಮುಖ್ಯತೆ ನೀಡಿ, ಏಕೆಂದರೆ ಇವರು ಅತ್ಯುತ್ತಮ ಪ್ರೇಮಿಯಾಗಿರುತ್ತಾರೆ.

ವೃಷಭ ರಾಶಿ
ವೃಷಭ ರಾಶಿಯವರು ತಮ್ಮ ತಾಳ್ಮೆ ಹಾಗೂ ಬಹಳ ಸುಲಭವಾಗಿ ಎಲ್ಲವನ್ನು ಸಂವಹನ ಮಾಡುವ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಇವರು ತಮ್ಮದೇ ಆದ ರೀತಿಯಲ್ಲಿ ಕೆಲಸಗಳನ್ನು ಮಾಡಲು ಇಷ್ಟಪಡುತ್ತಾರೆ. ವೃಷಭ ರಾಶಿಯವರಿಗೆ ಸಂಬಂಧ ಎಂದಿಗೂ ಆಯ್ಕೆ ಅಲ್ಲವೇ ಅಲ್ಲ. ಸಂಬಂಧವನ್ನು ಕಾಪಾಡಿಕೊಳ್ಳುವ ವಿಚಾರದಲ್ಲಿ ಇವರು ತುಂಬಾ ಶ್ರದ್ಧೆ ಮತ್ತು ಬದ್ಧರಾಗಿರುವ ಪ್ರೇಮಿಗಳು. ನಿಮ್ಮ ಪ್ರೀತಿಗೆ ಪ್ರತಿಯೊಂದು ದಿನ ಹೆಚ್ಚಾಗುತ್ತಿದ್ದಂತೆ ವೃಷಭ ರಾಶಿಯವರು ನಿಮ್ಮನ್ನು ಪ್ರೀತಿಸುವ ಗಾಢತೆ ಇನ್ನಷ್ಟು ಹೆಚ್ಚಾಗುತ್ತದೆ. ವೃಷಭ ರಾಶಿಯವರು ಪ್ರೀತಿಯಲ್ಲಿದ್ದಾರೆ ಎಂದರೆ ಪ್ರೀತಿ ಮತ್ತು ಸೌಂದರ್ಯದ ದೇವತೆಗಳು ಇವರ ಪ್ರೀತಿಗೆ ಅಸ್ತು ಎನ್ನುತ್ತದೆ ಎಂದು ಜ್ಯೋತಿಶಾಸ್ತ್ರ ಹೇಳುತ್ತದೆ.

ಮೀನ ರಾಶಿ
ಎಲ್ಲಾ ರಾಶಿಚಕ್ರಗಳಲ್ಲಿ ಸಾಕಷ್ಟು ಪ್ರಾಮಾಣಿಕ ರಾಶಿ ಎಂದರೆ ಮೀನ ರಾಶಿ. ಇವರು ನಿಸ್ವಾರ್ಥ ಪ್ರೀತಿಯನ್ನು ನೀಡುತ್ತಾರೆ ಹಾಗೂ ಈ ಸಂಬಂಧದಲ್ಲೇ ಸಂಪೂರ್ಣವಾಗಿ ಮುಳುಗುತ್ತಾರೆ. ಅಲ್ಲದೇ ಭಾವನಾತ್ಮಕ ಜೀವಿ ಎಂದೇ ಹೆಸರುವಾಸಿಯಾಗಿರುವ ಮೀನ ರಾಶಿಯವರು ಆಳವಾದ ಮತ್ತು ಸಹಾನುಭೂತಿಯ ಪ್ರೇಮವನ್ನು ಇಷ್ಟಪಡುತ್ತಾರೆ. ಮೀನ ರಾಶಿಯವರಿಗೆ ಅಗಾಧವಾದ ಅರ್ಥಗರ್ಭಿತ ಶಕ್ತಿಯು ಆಶೀರ್ವಾದವಾಗಿ ಬಂದಿದೆ. ಆದ್ದರಿಂದ ಮೀನ ರಾಶಿಯವರನ್ನು ತಪ್ಪುದಾರಿಗೆ ಎಳೆಯುವುದು ಅಸಾಧ್ಯದ ಮಾತು.

ಕನ್ಯಾರಾಶಿ
ಕನ್ಯಾರಾಶಿಯವರು ತಮ್ಮ ಸ್ಥಿರ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಅಲ್ಲದೇ, ವಿರುದ್ಧ ಲಿಂಗದವರನ್ನು ಆಕರ್ಷಿಸುವುದು ಸಹಜವಾಗಿಯೇ ಕನ್ಯಾರಾಶಿಗೆ ಕರಗತವಾಗಿರುವ ಗುಣವಾಗಿದೆ. ಕನ್ಯಾ ರಾಶಿಯವರು ತಮ್ಮ ಪ್ರೇಯಸಿಯಿಂದ ಬಯಸುವ ಸಾಕಷ್ಟು ಸಮಯ ಮತ್ತು ಪ್ರೀತಿಯನ್ನು ನೀಡಿದರೆ ಸಾಕು ಅವರು ನಿಮ್ಮ ಅತ್ಯುತ್ತಮ ಆಯ್ಕೆ ಹಾಗೂ ಬೆಸ್ಟ್ ಪ್ರೇಮಿ ಎಂದು ಸಾಬೀತುಪಡಿಸುತ್ತಾರೆ.

ಕುಂಭ ರಾಶಿ
ಕುಂಭ ರಾಶಿಯವರ ಸಂವಹನ ಬಹಳ ತೀವ್ರಸ್ವರೂಪದಲ್ಲಿರುತ್ತದೆ. ಇವರು ತಮ್ಮ ಪ್ರೇಮವನ್ನು ಮುಂಚೂಣಿಯಲ್ಲಿ ಮುನ್ನಡೆಸಲು ಇಷ್ಟಪಡುತ್ತಾರೆ, ಆದ್ದರಿಂದ ಸಹಜವಾಗಿಯೇ ಇವರ ಪ್ರೇಮಿಯನ್ನು ಸಹ ಇವರೇ ಅತೀವ ಕಾಳಜಿಯಿಂದ ತಮ್ಮ ನೇತೃತ್ವದಲ್ಲೇ ನಡೆಸಿಕೊಂಡೇ ಹೋಗುತ್ತಾರೆ. ಪ್ರೇಮೋದ್ರೇಕ ಎಂಬುದು ಇವರ ಅವರ ರಕ್ತದಲ್ಲೇ ಇದೆ, ಇವರ ಮನಸ್ಸಿಗೆ ಇಷ್ಟವಾಗುವ ಅತ್ಯುತ್ತಮ ಜತೆಗಾರರು ಜೀವನ ಸಂಗಾತಿಯಾದರೆ ಇವರ ಪ್ರೀತಿ ಹೇಳತೀರದ್ದಾಗಿರುತ್ತದೆ. ತಮ್ಮ ಪ್ರೇಮಿಯ ಯಾರಾದರೂ ಅನಗತ್ಯ ವಿಷಯಗಳನ್ನು ಚರ್ಚಿಸಿದರೂ ಇವರು ಅದಕ್ಕೆ ತಲೆಯೇ ಕೆಡಿಸಿಕೊಳ್ಳುವುದಿಲ್ಲ.

ಧನು ರಾಶಿ
ಧನು ರಾಶಿಯವರು ಪ್ರೀತಿಯ ವಿಚಾರದಲ್ಲಿ ವಿಚಾರಶಕ್ತಿ ಹಾಗೂ ಬುದ್ಧಿವಂತಿಕೆಯನ್ನು ಸಾಕಷ್ಟು ಪ್ರಶಂಸಿಸಲೇಬೇಕು. ಧನುರಾಶಿಯ ಪ್ರೇಮಿಗಳು ಬೈಕ್ ನಲ್ಲಿ ಪ್ರವಾಸ ಹೋಗುವುದು ಹಾಗೂ ಸಂಬಂಧಗಳಲ್ಲಿ ಎದುರಾಗುವ ಅಡೆತಡೆಗಳನ್ನು ಸಹ ನೆನಪಿಸಿಕೊಳ್ಳಲು ಇಷ್ಟಪಡುತ್ತಾರೆ. ಅವರ ಸ್ವಾತಂತ್ರ್ಯದ ಪ್ರಜ್ಞೆಯಿಂದಾಗಿಯೇ ಇವರು ಸಾಮಾನ್ಯ ಪ್ರೇಮಿಯಾಗಲು ಸಾಧ್ಯವಿಲ್ಲವಾಗಿದೆ. ಆದರೆ ಇವರನ್ನು ಒಮ್ಮೆ ಪ್ರೀತಿಸಿದರೆ ಅವರ ಪ್ರೇಯಸಿಯು ಸಾಧ್ಯವಾದಷ್ಟು ಜೀವನವನ್ನು ಅನುಭವಿಸುವಷ್ಟು ಧನು ರಾಶಿಯವರು ಸಂತೋಷವನ್ನು ನೀಡುತ್ತಾರೆ.

ವೃಶ್ಚಿಕ ರಾಶಿ
ಮಾಡು ಇಲ್ಲವೇ ಮಡಿ ಎನ್ನುವ ಮಾತಿಗೆ ವೃಶ್ಚಿಕ ರಾಶಿಯ ಪ್ರೇಮಿಗಳು ಹೇಳಿಮಾಡಿಸಿದ್ದಾರೆ. ಅವರು ಬಹಳ ತೀವ್ರತೆ ಮತ್ತು ಉತ್ಸಾಹದಿಂದ ತುಂಬಿರುತ್ತಾರೆ. ನಿಜವಾದ ಪ್ರೀತಿ ತನ್ನದೇ ಆದ ರೀತಿಯಲ್ಲಿ ವ್ಯಕ್ತವಾಗುತ್ತದೆ ಎಂಬುದನ್ನು ಸಾಕಷ್ಟು ನಂಬುವ ರಾಶಿ ವೃಶ್ಚಿಕ. ಇವರು ಪ್ರೀತಿಯ ಭಾಷೆಯನ್ನು ಚೆನ್ನಾಗಿಯೇ ತಿಳಿದಿರುತ್ತಾರೆ. ಅವರು ತಮ್ಮ ಪ್ರೇಮಿಯೊಂದಿಗೆ ತೀವ್ರವಾದ ಅನ್ಯೋನ್ಯತೆ ಮತ್ತು ಭಾವನಾತ್ಮಕ ಬೆಳವಣಿಗೆ ವೃದ್ಧಿಸುವುದನ್ನು ಗೌರವಿಸುತ್ತಾರೆ. ಪ್ರೀತಿಯ ವಿಷಯದಲ್ಲಿ ವೃಶ್ಚಿಕ ರಾಶಿಯವರು ಭಾವೋದ್ರಿಕ್ತರು ಹಾಗೂ ತುಂಬಾ ಸ್ವಾರ್ಥಿಗಳು.



Click it and Unblock the Notifications











