Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜ್ಯೋತಿಷ್ಯ: ಈ ರಾಶಿಯವರು ಒಂದೇ ಕೆಲಸದಲ್ಲಿ ಹೆಚ್ಚು ಕಾಲ ಇರುವುದೇ ಇಲ್ಲವಂತೆ!
ನಮ್ಮಲ್ಲಿನ ಕೆಲವು ವರ್ತನೆಗಳು ನಮ್ಮನ್ನು ಸಾಧನೆಯ ಪಥದತ್ತ ಕೊಂಡೊಯ್ದರೆ, ಇನ್ನು ಕೆಲವು ವರ್ತನೆಗಳು ನಮ್ಮ ಅವನತಿಯತ್ತ ದೂಡುತ್ತದೆ. ಹಾಗೆಯೇ, ನಾವು ಉದ್ಯೋಗ ಮಾಡುವ ಸ್ಥಳದಲ್ಲಿ ಸಹ ನಮ್ಮ ವರ್ತನೆ ಸಂದರ್ಭಾನುಸಾರ ಅರಿತು ವರ್ತಿಸಬೇಕು, ಇಲ್ಲವಾದಲ್ಲಿ ನಮ್ಮ ಈ ವರ್ತನೆಯೇ ನಮ್ಮ ಕೆಲಸದಿಂದ ಕಿತ್ತೊಗೆಯಲು ಕಾರಣವಾಗಬಹುದು.
ಜ್ಯೋತಿಷ್ಯದ ಪ್ರಕಾರ ಈ ರಾಶಿಯವರು ತಮ್ಮ ಕೆಲಸದ ಸ್ಥಳದಲ್ಲಿ ಯಾವುದರ ಬಗ್ಗೆಯೂ ಲೆಕ್ಕಸದೇ, ಹಿಂದೆ ಮುಂದೇ ನೋಡದೇ ತಮ್ಮ ನೇರ ವರ್ತನೆ ಹಾಗೂ ಮಾತಿನಿಂದಲೇ ಕೆಲಸದಿಂದ ವಜಾಗೊಳ್ಳುವರು. ಇವರು ಇತರರಿಗಿಂತ ಹೆಚ್ಚು ಸವಾಲುಗಳನ್ನು ಎದುರಿಸುತ್ತಾರೆ ಏಕೆಂದರೆ ಅವರು ಸಾಮಾನ್ಯವಾಗಿ ಅತ್ಯಂತ ಸೂಕ್ಷ್ಮವಾಗಿರುತ್ತಾರೆ, ಇವರ ಮಾತು ಸತ್ಯವಾದರೂ, ಸಂದರ್ಭ ಅರಿಯದೇ ಆಡುವ ಮಾತು ಇವರ ಉದ್ಯೋಗಕ್ಕೆ ಕಳಂಕವಂತೆ.
ಆದ್ದರಿಂದ, ತಮ್ಮ ಉದ್ಯೋಗದಿಂದ ವಜಾಗೊಳಿಸುವ ಹೆಚ್ಚಿನ ಅವಕಾಶಗಳನ್ನು ಹೊಂದಿರುವ ಕೆಲವು ರಾಶಿಚಕ್ರ ಚಿಹ್ನೆಗಳನ್ನು ನಾವು ಪಟ್ಟಿ ಮಾಡಿದ್ದೇವೆ:

ಮೇಷ ರಾಶಿ
ಮೇಷ ರಾಶಿಯವರು ತಮ್ಮ ಕಾರ್ಯಗಳು ಮತ್ತು ಪದಗಳೊಂದಿಗೆ ಬಹಳ ಹಠಾತ್ ಅಥವಾ ತಡಮಾಡದೇ ಮಾಡುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಆದ್ದರಿಂದ, ಮೇಷ ರಾಶಿಯವರು ತಮ್ಮ ಕೆಲಸದಿಂದ ವಜಾಗೊಳ್ಳುವ ಹೆಚ್ಚಿನ ಸಂಭವನೀಯತೆಯನ್ನು ಹೊಂದಿದ್ದಾರೆ. ತಮಗೆ ಸರಿ ಎನಿಸುವುದನ್ನು ಹಿಂದೆ ಮುಂದೆ ನೋಡದೇ ಮಾತನಾಡಬೇಕು ಎಂದು ಅವರು ಭಾವಿಸುತ್ತಾರೆ, ತಮ್ಮ ಮಾತಿನಿಂದ ಅವರ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಪರಿಣಾಮಗಳ ಬಗ್ಗೆ ಅವರು ಯೋಚಿಸುವುದೇ ಇಲ್ಲ.

ವೃಷಭ ರಾಶಿ
ವೃಷಭ ರಾಶಿಯವರು ತುಂಬಾ ಹಠಮಾರಿಗಳು ಮತ್ತು ಅವರು ಏನಾದರೂ ಸರಿ ಎಂದು ಭಾವಿಸಿದರೆ, ತಮ್ಮ ನಿರ್ಧಾರಕ್ಕೆ ಬದ್ಧರಾಗುತ್ತಾರೆ. ಅವರು ಇತರರ ಮಾತನ್ನು ಕೇಳುವುದೇ ಇಲ್ಲ, ಅವರ ಮೇಲಧಿಕಾರಿಗಳೇ ಆಗಿರಲಿ ಅಥವಾ ಸಿಬ್ಬಂದಿಯೇ ಆಗಿರಲಿ, ಇವರ ಈ ವರ್ತನೆಯೇ ಅವರನ್ನು ಕೆಲಸದಿಂದ ತೆಗೆದುಹಾಕಲು ಕಾರಣವಾಗಬಹುದು. ಆದರೆ ವೃಷಭ ರಾಶಿಯವರು ತಮ್ಮ ಬದ್ಧತೆಯಂತೆಯೇ ಬುದ್ಧಿವಂತರು ಸಹ, ಅವರು ಶೀಘ್ರದಲ್ಲೇ ಕೆಲಸದಿಂದ ತೆಗೆದುಹಾಕಲ್ಪಡುತ್ತಾರೆ ಎಂದು ಅವರು ಭಾವಿಸಿದರೆ, ಮೊದಲೇ ಮತ್ತೊಂದು ಕೆಲಸವನ್ನು ಹುಡುಕಿಕೊಂಡಿರುತ್ತಾರೆ.

ಮಿಥುನ ರಾಶಿ
ಮಿಥುನ ರಾಶಿಯವರು ಏನಾದರೂ ಹೇಳುವುದನ್ನು ಗಮನದಲ್ಲಿಟ್ಟುಕೊಳ್ಳುವ ಬಗ್ಗೆ ಹೆಚ್ಚು ಪರಿಗಣಿಸುವುದಿಲ್ಲ. ಅವರ ತೀಕ್ಷ್ಣವಾದ ನಾಲಿಗೆಯು ಆಕ್ರಮಣಕಾರಿಯಾಗಿರಬಹುದು, ಅವರು ಅದನ್ನು ಎಂದಿಗೂ ಅರ್ಥಮಾಡಿಕೊಳ್ಳುವುದೇ ಇಲ್ಲ. ಇವರ ಈ ಸ್ವಭಾವವು ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳೊಂದಿಗೆ ಟ್ರಿಕಿ ಸಂದರ್ಭಗಳಲ್ಲಿ ಅವರಿಗೆ ಮುಳುವಾಗಬಹುದು. ಇದರ ಬಗ್ಗೆ ಖಂಡಿತವಾಗಿಯೂ ಇವರು ಗಮನಹರಿಸಲೇಬೇಕು. ಇವರ ಈ ಗುಣವನ್ನು ಯಾರೂ ಇಷ್ಟಪಡುವುದಿಲ್ಲ.

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಎಲ್ಲಾ ಸಂದರ್ಭಗಳಲ್ಲಿ ಹೊಂದಿಕೊಳ್ಳಲು ಕಷ್ಟವಾಗುತ್ತದೆ. ಈ ವರ್ತನೆಯಿಂದಾಗಿ ಅವರು ಕೆಲಸದ ಸ್ಥಳದಲ್ಲಿ ಸುಲಭವಾಗಿ ಶತ್ರುಗಳನ್ನು ಸೃಷ್ಟಿಸುಕೊಳ್ಳುತ್ತಾರೆ. ಈ ರಾಶಿಯವರು ತಂಡದ ಆಟಗಾರನಾಗಲು ನಿರಾಕರಿಸಬಹುದು,ಇದು ಇತರ ಸಹೋದ್ಯೋಗಿಗಳಿಗೆ ಕಿರಿಕಿರಿ ಎನಿಸಬಹುದು. ಸಿಂಹ ರಾಶಿಯವರು ತುಲನಾತ್ಮಕವಾಗಿ ವರ್ತಿಸಿದಿದ್ದರೆ, ಸಂದರ್ಭಕ್ಕೆ ಅನುಗುಣವಾಗಿ ಹೊಂದಾಣಿಕೆ ಆಗದಿದ್ದರೆ ಮತ್ತು ಸಮನ್ವಯದಿಂದ ವರ್ತಿಸದಿದ್ದರೆ, ಅವರು ಶೀಘ್ರದಲ್ಲೇ ಕೆಲಸದಿಂದ ತೆಗೆದುಹಾಕಬಹುದು ಎಚ್ಚರ!.



Click it and Unblock the Notifications