For Quick Alerts
ALLOW NOTIFICATIONS  
For Daily Alerts

Rashi Bhavishya 2020: ನಿಮ್ಮ ಜೀವನದಲ್ಲಿ ಏನೇನಾಗುತ್ತದೆ? ಇಲ್ಲಿದೆ ನಿಮ್ಮ ವರ್ಷ ಭವಿಷ್ಯ

|

ನೂತನ ವರ್ಷಾರಂಭಕ್ಕೆ ಇನ್ನೇನು ದಿನಗಣನೆ ಆರಂಭವಾಗಿದೆ. ಹೊಸವರ್ಷ ಎಂದರೆ ಪ್ರತಿಯೊಬ್ಬರು ಹೊಸ-ಹೊಸ ನಿರೀಕ್ಷೆಗಳು, ಕನಸುಗಳನ್ನು ಹೊಂದಿರುತ್ತಾರೆ. ತಮ್ಮ ಗುರಿ, ಕನಸುಗಳ ಬೆನ್ನತ್ತಲು ಪ್ರಯತ್ನಿಸುತ್ತಾರೆ. ಕಷ್ಟಗಳು ಕಳೆದು ಸುಖದ ಜೀವನ ಬರಲಿ, ನೆಮ್ಮದಿಯು ನಮ್ಮ ಪಾಲಾಗಲಿ ಎಂದು ಆಶಿಸುತ್ತಾರೆ. 2020 ನೂತನ ವರ್ಷದಲ್ಲಿ ನಿಮ್ಮ ಗ್ರಹಗತಿಗಳು ಹೇಗಿದೆ, ಹೊಸ ವರ್ಷದಲ್ಲಿ 12 ರಾಶಿಚಕ್ರ ಭವಿಷ್ಯ ಏನ್ನನು ಹೇಳುತ್ತದೆ, ಯಾರಿಗೆ ಶುಭವಾಗಲಿದೆ, ಯಾರಿಗೆ ಅಶುಭ, ಯಾವ ರಾಶಿಗಳು ಎಚ್ಚರಿಕೆ ವಹಿಸಬೇಕು, ನೀವು ಯಾವ ಕ್ಷೇತ್ರದಲ್ಲಿ ಸಾಧನೆ ಹೊಂದುತ್ತೀರಿ ಮತ್ತು ಯಾವ ಕ್ಷೇತ್ರವು ನಿಮಗೆ ಸವಾಲಾಗಿರುತ್ತದೆ ಎಂದು ಈ ವರ್ಷದ ರಾಶಿಫಲದ ಮೂಲಕ ತಿಳಿಯೋಣ.

ಮೇಷ ರಾಶಿ: 21 ಮಾರ್ಚ್ - 19 ಏಪ್ರಿಲ್

ಮೇಷ ರಾಶಿ: 21 ಮಾರ್ಚ್ - 19 ಏಪ್ರಿಲ್

ಮೇಷ ರಾಶಿಯವರಿಗೆ 2020ನೇ ವರ್ಷವು ತಮ್ಮ ಕಾರ್ಯ ಕ್ಷೇತ್ರದಲ್ಲಿ ಬಹಳ ಶುಭದಾಯಕವಾಗಿರುತ್ತದೆ. ನೀವು ಖಂಡಿತವಾಗಿಯೂ ಉದ್ಯೋಗ ಅಥವಾ ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಈ ವರ್ಷ ನೀವು ಹೆಚ್ಚು ಹಣ ಸಂಪಾದಿಸಲು ಉತ್ತಮ ಅವಕಾಶಗಳನ್ನು ಪಡೆಯಬಹುದು. ಆದರೆ ನಿಮ್ಮ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಮನೆಯಲ್ಲಿ ಒಂದು ಶುಭ ಕಾರ್ಯಕ್ರಮವನ್ನು ಈ ವರ್ಷ ಆಯೋಜಿಸಬಹುದು. ವರ್ಷದ ಮಧ್ಯಭಾಗದಲ್ಲಿ ನಿಮ್ಮ ಕಿರಿಯ ಸಹೋದರ ಅಥವಾ ಸಹೋದರಿಯ ವಿವಾಹದ ಸಾಧ್ಯತೆಯಿದೆ. ನಿಮ್ಮ ಆರೋಗ್ಯದ ಬಗ್ಗೆ ನೀವು ಹೆಚ್ಚಿನ ಕಾಳಜಿ ವಹಿಸಬೇಕು.

ವೃಷಭ ರಾಶಿ: 20 ಏಪ್ರಿಲ್ - 20 ಮೇ

ವೃಷಭ ರಾಶಿ: 20 ಏಪ್ರಿಲ್ - 20 ಮೇ

ಕಳೆದ ವರ್ಷ ನೀವು ತುಂಬಾ ಕಷ್ಟದ ಸಂದರ್ಭಗಳನ್ನು ಎದುರಿಸಿದ್ದೀರಿ ಆದರೆ, ಈ ವರ್ಷ ನಿಮಗೆ ನೆಮ್ಮದಿ ಸಿಗುತ್ತದೆ. ನಿಮ್ಮ ಅನೇಕ ಸಮಸ್ಯೆಗಳನ್ನು ಪರಿಹರಿಸಲಾಗುವುದು ಮತ್ತು ನಿಮ್ಮ ಎಲ್ಲಾ ಚಿಂತೆಗಳು ಮಾಯವಾಗುತ್ತವೆ. ಕಳೆದ ವರ್ಷ ಅಪೂರ್ಣವಾಗಿದ್ದ ಕೆಲಸಗಳು ಈ ವರ್ಷ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 2020ನೇ ಸಾಲನಲ್ಲಿ ನಿಮ್ಮ ವೃತ್ತಿಜೀವನದಲ್ಲಿ ನಿಮಗೆ ಫಲಪ್ರದ ಫಲಿತಾಂಶಗಳನ್ನು ನೀಡುತ್ತದೆ ಮತ್ತು ಪ್ರಗತಿಯ ಬಾಗಿಲು ತೆರೆಯುತ್ತದೆ. ಹಣದ ವಿಷಯದಲ್ಲಿ ಮಿಶ್ರ ಫಲಿತಾಂಶಗಳನ್ನು ನಿರೀಕ್ಷಿಸಲಾಗಿದೆ. ಆರೋಗ್ಯವು ಉತ್ತಮವಾಗಿರುತ್ತದೆ ಆದರೆ ನಿರ್ಲಕ್ಷ್ಯ ತಪ್ಪಿಸಬೇಕು.

ಮಿಥುನ ರಾಶಿ: 21 ಮೇ - 20 ಜೂನ್

ಮಿಥುನ ರಾಶಿ: 21 ಮೇ - 20 ಜೂನ್

ನೂತನ ವರ್ಷದಲ್ಲಿ ಮಿಥುನ ರಾಶಿಯವರಿಗೆ ಮಿಶ್ರ ಫಲಿತಾಂಶಗಳು ಸಿಗಲಿದೆ. ನೀವು ಸಂತೋಷವನ್ನು ಅನುಭವಿಸುತ್ತೀರಿ ಆದರೆ ಅದೇ ಸಮಯದಲ್ಲಿ, ಸವಾಲುಗಳನ್ನು ಸಹ ಎದುರಿಸಬೇಕಾಗಬಹುದು. ಕೆಲಸ ಮತ್ತು ಆರೋಗ್ಯದ ವಿಷಯಗಳ ಬಗ್ಗೆ ಸಮಸ್ಯೆಗಳಿರಬಹುದು. ಸಣ್ಣ ಅಡೆತಡೆಗಳಿಂದಾಗಿ ವ್ಯಾಪಾರಿಗಳ ಕೆಲವು ಪ್ರಸ್ತುತ ಕಾರ್ಯಗಳು ಹಾಳಾಗಬಹುದು. ಉದ್ಯೋಗದಲ್ಲಿರುವ ವ್ಯಕ್ತಿಗಳು ಸಹ ಅರ್ಧ ವರ್ಷ ಕಳೆಯುವವರೆಗೂ ಯಾವುದೇ ವಿಶೇಷ ಯಶಸ್ಸನ್ನು ಪಡೆಯುವುದಿಲ್ಲ. ಮೊದಲ ಮೂರು ತಿಂಗಳ ಆರ್ಥಿಕ ಪರಿಸ್ಥಿತಿಗಳು ಬಹಳ ಶುಭವಾಗಿರುತ್ತದೆ, ಆದರೆ ಕ್ರಮೇಣ ತೊಂದರೆಗಳು ಹೆಚ್ಚಾಗಬಹುದು. ಕುಟುಂಬದಲ್ಲಿ ಏರಿಳಿತ ಇರುತ್ತದೆ. ಆದರೂ, ನೀವು ಒಡಹುಟ್ಟಿದವರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ.

ಕರ್ಕ ರಾಶಿ: 21 ಜೂನ್ - 22 ಜುಲೈ

ಕರ್ಕ ರಾಶಿ: 21 ಜೂನ್ - 22 ಜುಲೈ

ಕರ್ಕ ರಾಶಿಯವರಿಗೆ 2020 ಸಾಲು ಬಹಳ ಮುಖ್ಯವಾಗಲಿದೆ. ಈ ವರ್ಷ ಹೊಸ ಸಂಬಂಧವನ್ನು ನೀವು ಪ್ರಾರಂಭಿಸುವ ಸಾಧ್ಯತೆ ಇದೆ. ನಿಮ್ಮ ಪ್ರೀತಿಪಾತ್ರರು ಈ ವರ್ಷ ನಿಮ್ಮ ಜೀವನಕ್ಕೆ ಪ್ರವೇಶಿಸಬಹುದು, ಈ ಮೂಲಕ ನಿಮ್ಮ ಪ್ರೀತಿಯ ಹುಡುಕಾಟ ಅಂತ್ಯವಾಗುತ್ತದೆ. ಕೆಲಸದ ಸ್ಥಳದಲ್ಲಿ ಸಹ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಲಾಗಿದೆ. ನಿಮ್ಮ ಕೆಲಸದ ಸಾಮರ್ಥ್ಯ ಹೆಚ್ಚಾಗುತ್ತದೆ. ವ್ಯಾಪಾರಿಗಳಿಗೆ ಲಾಭ ಗಳಿಸಲು ಅದ್ಭುತ ಅವಕಾಶಗಳು ಸಿಗುತ್ತವೆ ಮತ್ತು ನಿಮ್ಮ ವ್ಯವಹಾರವೂ ಬಲಗೊಳ್ಳುತ್ತದೆ. ಈ ವರ್ಷ, ಮನೆಯಲ್ಲಿ ಕೆಲವು ಆರ್ಥಿಕ ಸಮಸ್ಯೆಗಳು ತಲೆದೋರಬಹುದು, ಜಾಣ್ಮೆಯಿಂದ ಪರಿಹರಿಸಿ. ಈ ವರ್ಷ ಆರೋಗ್ಯ ಉತ್ತಮವಾಗಿರುವುದಿಲ್ಲ.

ಸಿಂಹ ರಾಶಿ: 23 ಜುಲೈ - 22 ಆಗಸ್ಟ್

ಸಿಂಹ ರಾಶಿ: 23 ಜುಲೈ - 22 ಆಗಸ್ಟ್

ಮುಂದಿನ ನೂತನ ವರ್ಷದಲ್ಲಿ ನೀವು ಅಭಿವೃದ್ಧಿ ಕಾಣಲು ಅಥವಾ ಮುಂದುವರಿಯಲು ಅನೇಕ ಅವಕಾಶಗಳನ್ನು ಪಡೆಯುತ್ತೀರಿ, ಆದರೆ ಅದಕ್ಕೆ ತಕ್ಕಂತೆ ನೀವು ಶ್ರಮಪಟ್ಟರೆ ಇದರ ಫಲವನ್ನು ಅನುಭವಿಸಬಹುದು. ನಿಮ್ಮ ಹೋರಾಟ ಮತ್ತು ಕಠಿಣ ಪರಿಶ್ರಮದ ಫಲಿತಾಂಶಗಳನ್ನು ಖಂಡಿತವಾಗಿ ಪಡೆಯುತ್ತೀರಿ. ನೀವು ಉದ್ಯೋಗದಲ್ಲಿದ್ದರೆ ಉನ್ನತ ಸ್ಥಾನವನ್ನು ಪಡೆಯಬಹುದು. ಈ ವರ್ಷ ವ್ಯಾಪಾರಿಗಳಿಗೆ ದೊಡ್ಡ ಯಶಸ್ಸು ಸಿಗಲಿದೆ. ನಿಮ್ಮ ವ್ಯವಹಾರವನ್ನು ವಿಸ್ತರಿಸುವಲ್ಲಿ ಅಥವಾ ಹೊಸ ವ್ಯವಹಾರವನ್ನು ಆರಂಭಿಸುವಲ್ಲಿ ನಿಮ್ಮ ಅದೃಷ್ಟವನ್ನು ಪರಿಶೀಲಿಸಬಹುದು. ಈ ಸಾಲು ವಿದ್ಯಾರ್ಥಿಗಳಿಗೆ ಉತ್ತಮವಾಗಿರುತ್ತದೆ. ಆರಂಭದಲ್ಲಿ ಶೈಕ್ಷಣಿಕವಾಗಿ ಕೆಲವು ಅಡೆತಡೆಗಳು ಎದುರಾಗುತ್ತವೆ ಆದರೆ ಕ್ರಮೇಣ ಪರಿಸ್ಥಿತಿ ಸುಧಾರಿಸುತ್ತದೆ. ಅನೇಕ ಹಣಕಾಸಿನ ಸವಾಲುಗಳು ಇರಬಹುದು ಆದರೆ ಇದರ ಹೊರತಾಗಿಯೂ, ನಿಮ್ಮ ಹಣಕಾಸಿನ ಸ್ಥಿತಿ ದೃಢವಾಗಿರುತ್ತದೆ.

ಕನ್ಯಾ ರಾಶಿ: 23 ಆಗಸ್ಟ್ - 22 ಸೆಪ್ಟೆಂಬರ್

ಕನ್ಯಾ ರಾಶಿ: 23 ಆಗಸ್ಟ್ - 22 ಸೆಪ್ಟೆಂಬರ್

ನೀವು ವಿದೇಶಕ್ಕೆ ಹೋಗಲು ಬಯಸಿದರೆ ಮತ್ತು ದೀರ್ಘಕಾಲದವರೆಗೆ ಅದರ ಕಡೆಗೆ ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತಿದ್ದರೆ 2020ರಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಉದ್ಯೋಗದಲ್ಲಿರುವವರಿಗೆ ಈ ವರ್ಷ ಬಹಳ ಮುಖ್ಯವಾಗುತ್ತದೆ. ನೀವು ಪ್ರಗತಿ ಅಥವಾ ನಿರೀಕ್ಷಿತ ವರ್ಗಾವಣೆಯನ್ನು ಪಡೆಯುವ ಸಾಧ್ಯತೆಯಿದೆ. ವ್ಯಾಪಾರಿಗಳಿಗೆ ಈ ವರ್ಷವು ಏರಿಳಿತಗಳಿಂದ ತುಂಬಿರುತ್ತದೆ ಆದರೆ ಕೊನೆಯಲ್ಲಿ ನೀವು ಯಶಸ್ವಿಯಾಗುತ್ತೀರಿ. ಉತ್ತಮ ಆರ್ಥಿಕ ಪರಿಸ್ಥಿತಿಗಳೊಂದಿಗೆ ಹೊಸ ಮನೆ ಅಥವಾ ಹೊಸ ವಾಹನದ ನಿಮ್ಮ ಕನಸು ಸಹ ಈಡೇರಬಹುದು. ಕುಟುಂಬದಲ್ಲಿ ಯಾವುದೇ ದೊಡ್ಡ ಸಮಸ್ಯೆ ಇದ್ದರೆ ನೀವು ಅದನ್ನು ತೊಡೆದುಹಾಕಬಹುದು. ಈ ವರ್ಷ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. ಹೆಚ್ಚು ಕೆಲಸದ ಒತ್ತಡ ಹೇರುವುದನ್ನು ತಪ್ಪಿಸಿ.

ತುಲಾ ರಾಶಿ: 23 ಸೆಪ್ಟೆಂಬರ್ - 22 ಅಕ್ಟೋಬರ್

ತುಲಾ ರಾಶಿ: 23 ಸೆಪ್ಟೆಂಬರ್ - 22 ಅಕ್ಟೋಬರ್

ಮುಂಬರಲಿರುವ 2020 ನೂತನ ವರ್ಷವು ನಿಮ್ಮ ಜೀವನದಲ್ಲಿ ತುಂಬಾ ವಿಭಿನ್ನ ಮತ್ತು ಹೊಸದಾಗಿರುತ್ತದೆ. ವೃತ್ತಿಜೀವನದ ದೃಷ್ಟಿಯಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಎಲ್ಲಾ ಶ್ರಮಕ್ಕೆ ಈ ವರ್ಷ ಖಂಡಿತವಾಗಿಯೂ ಪ್ರತಿಫಲ ದೊರೆಯುತ್ತದೆ. ನಿಮ್ಮ ಅತ್ಯುತ್ತಮ ಕಾರ್ಯಕ್ಷಮತೆಯಿಂದಾಗಿ, ಕೆಲಸದ ಸ್ಥಳದಲ್ಲಿ ನಿಮ್ಮ ಖ್ಯಾತಿಯೂ ಹೆಚ್ಚುತ್ತದೆ. 2020ರಲ್ಲಿ ನಿಮಗೆ ಬಡ್ತಿ ಸಿಗುವ ಸಾಧ್ಯತೆಗಳೂ ಇವೆ. ನೀವು ಉದ್ಯಮಿಗಳಾಗಿದ್ದರೆ ದೊಡ್ಡ ಉದ್ಯಮವನ್ನು ಪ್ರಾರಂಭಿಸಬಹುದು. ಆದರೆ ಸರಿಯಾದ ಸಲಹೆಯ ನಂತರವೇ ಹೆಜ್ಜೆ ಮುಂದಿಡಲು ಮರೆಯದಿರಿ. ಆರ್ಥಿಕ ಪರಿಸ್ಥಿತಿಗಳು ವರ್ಷದುದ್ದಕ್ಕೂ ಉತ್ತಮವಾಗಿರುತ್ತದೆ. ಆದರೂ ನಿಮ್ಮ ಖರ್ಚುಗಳನ್ನು ಪರಿಶೀಲಿಸುವುದು ಉತ್ತಮ. ಈ ಸಾಲಿನಲ್ಲಿ ಆರೋಗ್ಯ ಸಮಸ್ಯೆಗಳು ನಿಮಗೆ ತೊಂದರೆ ಉಂಟುಮಾಡಬಹುದು ಎಚ್ಚರ.

ವೃಶ್ಚಿಕ ರಾಶಿ: 23 ಅಕ್ಟೋಬರ್ - 21 ನವೆಂಬರ್

ವೃಶ್ಚಿಕ ರಾಶಿ: 23 ಅಕ್ಟೋಬರ್ - 21 ನವೆಂಬರ್

ವೃಶ್ಚಿಕ ರಾಶಿಗೆ 2020ನೇ ನೂತನ ವರ್ಷವು ಅನೇಕ ಸಂದರ್ಭಗಳಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ವರ್ಷದ ಆರಂಭದಲ್ಲಿ ನೀವು ಕೆಲವು ದೊಡ್ಡ ಪ್ರಗತಿಯನ್ನು ಪಡೆಯಬಹುದು. ಇದಲ್ಲದೆ ಈ ಅವಧಿಯಲ್ಲಿ ಯಾವುದೇ ಹೊಸ ಕೆಲಸಗಳನ್ನು ಸಹ ಪ್ರಾರಂಭಿಸಬಹುದು. ಈ ವರ್ಷ ಹಣಕಾಸಿನ ಸಂದರ್ಭಗಳು ತುಂಬಾ ಉತ್ತಮವಾಗಿರುತ್ತವೆ ಮತ್ತು ನೀವು ಸಾಕಷ್ಟು ಹಣವನ್ನು ಸಂಪಾದಿಸಲು ಸಾಧ್ಯವಾಗುತ್ತದೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ಬಗ್ಗೆ ಯೋಚಿಸುತ್ತಿರುವ ವಿದ್ಯಾರ್ಥಿಗಳು ವರ್ಷದ ಮಧ್ಯದಲ್ಲಿ ತಮ್ಮ ಆಶಯವನ್ನು ಈಡೇರಿಸಿಕೊಳ್ಳಬಹುದು. ಈ ವರ್ಷ ಆರೋಗ್ಯ ಸಾಮಾನ್ಯ ಸ್ಥಿತಿಯಲ್ಲಿರುವ ನಿರೀಕ್ಷೆಯಿದೆ.

ಧನು ರಾಶಿ: 22 ನವೆಂಬರ್ - 21 ಡಿಸೆಂಬರ್

ಧನು ರಾಶಿ: 22 ನವೆಂಬರ್ - 21 ಡಿಸೆಂಬರ್

ಕುಟುಂಬಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುವುದರಿಂದ ನಿಮಗೆ ಸಾಕಷ್ಟು ನೆಮ್ಮದಿ ಸಿಗುತ್ತದೆ. ಈ ವರ್ಷ ನಿಮ್ಮ ಸಂಬಂಧಗಳ ಬಗ್ಗೆ ನೀವು ಹೆಚ್ಚು ಗಮನ ಹರಿಸುತ್ತೀರಿ ಮತ್ತು ಅವುಗಳನ್ನು ಬಲಪಡಿಸುವಲ್ಲಿ ಯಶಸ್ವಿಯಾಗುತ್ತೀರಿ. ನಿಮ್ಮ ಯಾವುದೋ ಒಂದು ದೊಡ್ಡ ಯೋಜನೆ ಈ ವರ್ಷ ಪೂರ್ಣಗೊಳ್ಳದಿರಬಹುದು. ಕೆಲಸದ ವಿಷಯದಲ್ಲಿ ಈ ವರ್ಷವು ವ್ಯಾಪಾರಿಗಳಿಗೆ ತುಂಬಾ ಒಳ್ಳೆಯದಾಗಲಿದೆ. ಆದರೂ ನಿಮ್ಮ ಸಂಗಾತಿಯ ನಿರ್ಧಾರಗಳನ್ನು ಮರುಪರಿಶೀಲಿಸುವುದು ಉತ್ತಮ. ನಿರುದ್ಯೋಗಿಗಳು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಲೇ ಇರಿ,2020 ವರ್ಷದ ಅಂತ್ಯದ ವೇಳೆಗೆ ನೀವು ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಹಣಕಾಸಿನ ದೃಷ್ಟಿಯಿಂದ, ನೀವು ಹೆಚ್ಚು ಕೆಲಸ ಮಾಡಿದರೆ ಹೆಚ್ಚು ಹಣ ಗಳಿಸುತ್ತೀರಿ. ಕೌಟುಂಬಿಕ ಜೀವನವು ಸಂತೋಷವಾಗಿರುತ್ತದೆ. ಈ ವರ್ಷ ನಿಮ್ಮ ಮನೆಯಲ್ಲಿ ಹೊಸ ಸದಸ್ಯರನ್ನು ನಿರೀಕ್ಷಿಸಲಾಗಿದೆ. ಆರೋಗ್ಯದ ದೃಷ್ಟಿಯಿಂದ ಮಿಶ್ರ ಫಲಿತಾಂಶ ನಿಮ್ಮದಾಗಲಿದೆ.

ಮಕರ ರಾಶಿ: 22 ಡಿಸೆಂಬರ್ - 19 ಜನವರಿ

ಮಕರ ರಾಶಿ: 22 ಡಿಸೆಂಬರ್ - 19 ಜನವರಿ

ಮಕರ ರಾಶಿಯವರಿಗೆ 2020 ನೂತನ ವರ್ಷದಲ್ಲಿ ತುಂಬಾ ಕಷ್ಟದ ಪರಿಸ್ಥಿತಿಗಳು ಎದುರಾಗಬಹುದು, ನಿಮ್ಮ ಮೇಲೆ ನಂಬಿಕೆ ಇಟ್ಟುಕೊಳ್ಳಿ. ಈ ವರ್ಷ ನೀವು ಕೆಲವು ಚಿಂತನಶೀಲ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಅದು ನಿಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರುತ್ತದೆ. ಉತ್ತಮ ಕಂಪನಿಯಲ್ಲಿ ಶಾಶ್ವತ ಉದ್ಯೋಗ ನಿಮ್ಮದಾಗಬಹುದು, ದೀರ್ಘಕಾಲದ ಹೋರಾಟವು ಈ ಮೂಲಕ ಅಂತ್ಯವಾಗುವುದರಿಂದ ವರ್ಷವು ನಿರುದ್ಯೋಗಿಗಳಿಗೆ ಶುಭ ಫಲಿತಾಂಶವನ್ನು ತರಲಿದೆ. ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿ. ವ್ಯಾಪಾರಿಗಳು ಈ ವರ್ಷ ಯಾವುದೇ ಅಪಾಯದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಹಣಕಾಸಿನ ವಿಷಯಗಳಲ್ಲಿ ಕೆಲವು ತೊಂದರೆಗಳು ಉಂಟಾಗಬಹುದು. ನಿಮಗೆ ಬರುವ ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು.

ಕುಂಭ ರಾಶಿ: 20 ಜನವರಿ - 18 ಫೆಬ್ರವರಿ

ಕುಂಭ ರಾಶಿ: 20 ಜನವರಿ - 18 ಫೆಬ್ರವರಿ

ಕುಂಭ ರಾಶಿಯವರಿಗೆ 2020 ವರ್ಷವು ಅನೇಕ ಸವಾಲುಗಳನ್ನು ತರುತ್ತದೆ. ಸಂದರ್ಭಗಳು ಏನೇ ಇರಲಿ, ನೀವು ಅದನ್ನು ಪೂರ್ಣ ಧೈರ್ಯದಿಂದ ಎದುರಿಸಲು ಸಾಧ್ಯವಾಗುತ್ತದೆ. ನಿಮ್ಮ ವೃತ್ತಿಜೀವನದ ಬಗ್ಗೆ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಕೆಲಸವನ್ನು ಬದಲಾಯಿಸುವ ಅಥವಾ ವರ್ಗಾವಣೆಯನ್ನು ಪಡೆಯಲು ಬಗ್ಗೆ ಬಹಳ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ. ವ್ಯಾಪಾರಿಗಳು ಹೊಸ ಉದ್ಯಮವನ್ನು ಪ್ರಾರಂಭಿಸಲು ಬಯಸಿದರೆ ಅನುಭವಿ ಮತ್ತು ವಿಶ್ವಾಸಾರ್ಹ ಜನರೊಂದಿಗೆ ಕೆಲಸ ಮಾಡಲು ಸೂಚಿಸಲಾಗುತ್ತದೆ. ನಿಮ್ಮ ಕಡಿಮೆ ಅಜಾಗರೂಕತೆಯಿಂದ ಹೆಚ್ಚು ವೆಚ್ಚವಾಗಬಹುದು ಎಂಬ ಕಾರಣಕ್ಕೆ ನೀವು ಈ ವರ್ಷ ಆರೋಗ್ಯದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಹಣಕಾಸಿನ ದೃಷ್ಟಿಯಿಂದ ಈ ವರ್ಷದ ನಿಮ್ಮ ಆದಾಯವು ನಿಯಮಿತವಾಗಿರುತ್ತದೆ ಮತ್ತು ನೀವು ಹೊಸ ಆದಾಯದ ಮೂಲವನ್ನು ಪಡೆಯಬಹುದು.

ಮೀನ ರಾಶಿ: 19 ಫೆಬ್ರವರಿ - 20 ಮಾರ್ಚ್

ಮೀನ ರಾಶಿ: 19 ಫೆಬ್ರವರಿ - 20 ಮಾರ್ಚ್

2020 ವರ್ಷವು ನಿಮಗೆ ತುಂಬಾ ಅದೃಷ್ಟ ಎಂಬುದನ್ನು ಹಲವು ನಿದರ್ಶನಗಳು ಸಾಬೀತುಪಡಿಸುತ್ತದೆ. ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ ಅದು ನಿಮ್ಮ ಮನಸ್ಸನ್ನು ಸಂತೋಷಪಡಿಸುತ್ತದೆ. ಕೆಲಸದ ಸ್ಥಳದಲ್ಲಿ ದೊಡ್ಡ ಸಾಧನೆಗಳು ಸಾಧ್ಯವಾಗಬಹುದು ಅದು ಇತರರಲ್ಲಿ ನಿಮ್ಮ ಬಗೆಗಿನ ಗೌರವವನ್ನು ಹೆಚ್ಚಿಸುತ್ತದೆ. ವ್ಯಾಪಾರಿಗಳು ಹಠಾತ್ ಪ್ರಯೋಜನಗಳನ್ನು ಪಡೆಯುವ ನಿರೀಕ್ಷೆಯಿದೆ. ನಿಮ್ಮ ವಿರೋಧಿಗಳೊಂದಿಗೆ ಜಾಗರೂಕರಾಗಿರಲು ಸೂಚಿಸಲಾಗಿದೆ. ಹಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಯತ್ನಗಳು ಯಶಸ್ವಿಯಾಗುತ್ತವೆ ಮತ್ತು ನಿಮ್ಮ ಹಣಕಾಸಿನ ಸ್ಥಿತಿ ಸದೃಢವಾಗಿರುತ್ತದೆ. ಈ ವರ್ಷ ನೀವು ಅನೇಕ ಮೂಲಗಳಿಂದ ಹಣಕಾಸಿನ ಪ್ರಯೋಜನಗಳನ್ನು ಪಡೆಯುವ ನಿರೀಕ್ಷೆಯಿದೆ. ಆರೋಗ್ಯದ ದೃಷ್ಟಿಯಿಂದ ಆರಂಭಿಕ ತಿಂಗಳುಗಳು ಉತ್ತಮವಾಗಿರುತ್ತವೆ ಆದರೆ ನೀವು ನಂತರ ಸಮಸ್ಯೆಗಳನ್ನು ಎದುರಿಸಬಹುದು.

English summary

Yearly Rashi Bhavishya 2020 For The 12 Zodiac Signs

The year 2019 is about to pass and soon the new year i.e. 2020 will begin. If you want to know how this coming year will be for you, read your annual horoscope to know more.
X
Desktop Bottom Promotion