Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
2021ರಲ್ಲಿ ನಿಮ್ಮ ರಾಶಿಗೆ ಅನುಗುಣವಾಗಿ ಪ್ರೇಮ/ವೈವಾಹಿಕ ಸಂಬಂಧ ಹೇಗಿರಲಿದೆ?
ನಮ್ಮ ಮುಂದಿನ ಬದುಕು ಹೇಗಿರುತ್ತದೆ ಎಂದು ಹೇಳುವುದೇ ಭವಿಷ್ಯ. ಜ್ಯೋತಿಷ್ಯ ಪ್ರಕಾರ ತಮ್ಮ ರಾಶಿಗೆ ಅನುಗುಣವಾಗಿ ನಮ್ಮ ಸ್ವಭಾವ, ಭವಿಷ್ಯ ಹೇಗಿರುತ್ತದೆ ಎಂದು ಹೇಳಲಾಗುತ್ತದೆ. ಮುಂಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ನಾವೆಲ್ಲಾ ಹೇಳುತ್ತೇವೆ, ಆದರೆ ನಮ್ಮ ಮುಂದಿನ ಬದುಕಿನ ಕುರಿತು ಸ್ವಲ್ಪ ತಿಳಿದರೆ ಕೆಲವೊಂದು ಘಟನೆಗಳನ್ನು ತಪ್ಪಿಸಲು ಪ್ರಯತ್ನಿಸಬಹುದು.

ಇಲ್ಲಿ ಜ್ಯೋತಿಷ್ಯ ಪ್ರಕಾರ 2021ರಲ್ಲಿ ನೀವು ವಿವಾಹಿತರಾಗಿದ್ದರೆ ನಿಮ್ಮ ವೈವಾಹಿಕ ಬದುಕು ಹೇಗಿರುತ್ತದೆ, ಪ್ರೇಮಿಯಾಗಿದ್ದರೆ ಪ್ರಣಯ ಜೀವನ ಹೇಗಿರುತ್ತದೆ, 2021ರಲ್ಲಿ ಮದುವೆ ಕುರಿತು ಯೋಚಿಸುತ್ತಿದ್ದರೆ ಅದರ ಸಾಧ್ಯತೆ ಇದೆಯೇ ಎಂಬುವುದನ್ನು ಜ್ಯೋತಿಷ್ಯ ಪ್ರಕಾರ ಹೇಳಲಾಗಿದೆ ನೋಡಿ:
ಶ್ರೀ ಶ್ರೀನಿವಾಸ್ ಗುರೂಜಿ
ಶ್ರೀ ಸಾಯಿ ಅನುಗ್ರಹ ಜ್ಯೋತಿಷ್ಯ ಪೀಠ
ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ
ಕರಾವಳಿ ವಂಶಪರಂಪರೆ ಮನೆತನದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ನಿಮ್ಮ ಸಮಸ್ಯೆಗಳಾದ-
ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿ ಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲ ಭಾದೆ, ಲವ್ ಪ್ರಾಬ್ಲಮ್ ಇನ್ನು ಯಾವುದೇ ಜಟಿಲ ಸಮಸ್ಯೆಗಳಿಗೆ ಪರಿಹಾರ ತಿಳಿಸುತ್ತಾರೆ. ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಶ್ರೀ ಸಾಯಿ ಬಾಬಾ ಪೂಜೆ ಶಕ್ತಿಯಿಂದ ಯಾವುದೇ ಸಮಸ್ಯೆ ಇದ್ದರೂ( 5) ದಿನದಲ್ಲಿಶಾಶ್ವತ ಪರಿಹಾರ ತಿಳಿಸುತ್ತಾರೆ.
ಮನೆ ವಿಳಾಸ- #37/17 27th cross 12 th main 4th block ಜಯನಗರ ಬೆಂಗಳೂರು
M. 9986623344
web: www.sadguru-sai.com

ಮೇಷ ರಾಶಿ:
ನಿಮ್ಮ ದಾಂಪತ್ಯ ಜೀವನದಲ್ಲಿ ಈ ವರ್ಷ ಹೆಚ್ಚಿನ ಸಮಯ ಉದ್ವಿಗ್ನವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದಲ್ಲಿ ಕಹಿ ಇರುತ್ತದೆ. ಸಣ್ಣ ವಿಷಯಕ್ಕೂ ನಿಮ್ಮ ನಡುವೆ ವ್ಯತ್ಯಾಸಗಳು ಉಂಟಾಗುವುದು. ಅಂತಹ ಪರಿಸ್ಥಿತಿಯಲ್ಲಿ ಮನೆಯ ವಾತಾವರಣವೂ ಹದಗೆಡಬಹುದು. ನೀವು ಸಮಯಕ್ಕೆ ಸರಿಯಾಗಿ ವಿಷಯಗಳನ್ನು ನಿರ್ವಹಿಸದಿದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡುವುದು.
ಇನ್ನು ನೀವು ಪ್ರೇಮಿಯಾಗಿದ್ದರೆ ವರ್ಷದ ಆರಂಭವು ನಿಮಗೆ ತುಂಬಾ ರೋಮ್ಯಾಂಟಿಕ್ ಆಗಿರುತ್ತದೆ. ಈ ಸಮಯದಲ್ಲಿ ನೀವಿಬ್ಬರೂ ಪರಸ್ಪರರ ಪ್ರೀತಿಯಲ್ಲಿ ಮುಳುಗುತ್ತೀರಿ.
ವರ್ಷದ ಮಧ್ಯದಲ್ಲಿ ಸ್ವಲ್ಪ ವೈಮನಸ್ಸು ಉಂಟಾಗುವುದು. ನಿಮ್ಮ ಪ್ರೇಮದ ವಿಷಯ ತೆಗೆದು ಮನೆಯಲ್ಲಿ ವಿರೋಧ ಎದುರಿಸಬೇಕಾಗುವುದು. ಆದಾಗ್ಯೂ, ವರ್ಷದ ಅಂತ್ಯದ ವೇಳೆಗೆ ಪರಿಸ್ಥಿತಿಗಳು ಸುಧಾರಿಸುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ನಿಮ್ಮ ಸಂಬಂಧಕ್ಕೆ ಮನೆಯವರಿಂದ ಒಪ್ಪಿಗೆ ದೊರೆಯಬಹುದು.

ವೃಷಭ ರಾಶಿ:
ವರ್ಷದ ಪ್ರಾರಂಭವು ನಿಮಗೆ ಅಷ್ಟು ಸರಿಯಾಗಿಲ್ಲ. ಈ ಸಮಯದಲ್ಲಿ ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ಯಾವುದೇ ಪರಿಸ್ಥಿತಿ ಇರ ನಿಮ್ಮ ಮಾತು ಮತ್ತು ಕೋಪವನ್ನು ನಿಯಂತ್ರಿಸಲು ನಿಮಗೆ ಸೂಚಿಸಲಾಗುತ್ತದೆ, ಇಲ್ಲದಿದ್ದರೆ ನಿಮ್ಮ ಸಂಗಾತಿಯ ಮನಸ್ಸಿಗೆ ತುಂಬಾ ನೋವುಂಟಾಗಿ ಅದರಿಂದ ಭಿನ್ನಾಭಿಪ್ರಾಯ ಉಂಟಾಗುವುದು. ಏಪ್ರಿಲ್ ನಂತರದ ಸಮಯ ನಿಮಗೆ ಚೆನ್ನಾಗಿರುತ್ತದೆ.
ಪ್ರೇಮಿಗಳ ಜೀವನದ ಬಗ್ಗೆ ಹೇಳುವುದಾದರೆ ನಿಮ್ಮ ಪ್ರೀತಿಗೆ ಒಪ್ಪಿಗೆ ದೊರೆಯಲು ತುಂಬಾ ಶ್ರಮಿಸಬೇಕಾಗುವುದು. ನೀವು ನಿಮ್ಮ ಪ್ರಯತ್ನ ಮಾಡುತ್ತಿದ್ದರೆ ನಿಮ್ಮ ಸಂಬಂಧವನ್ನು ಅಂತಿಮವಾಗಿ ಅನುಮೋದಿಸಬಹುದು. ವರ್ಷದ ಅಂತ್ಯದ ವೇಳೆಗೆ ಮದುವೆಯಾಗಬಹುದು.

ಮಿಥುನ ರಾಶಿ
ಈ ವರ್ಷ, ನಿಮ್ಮ ವೈವಾಹಿಕ ಜೀವನದ ಸಂತೋಷವು ಹೆಚ್ಚಾಗುತ್ತದೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ದೀರ್ಘಕಾಲದವರೆಗೆ ಸರಿಯಾಗಿ ಆಗದಿದ್ದರೆ, ಈ ವರ್ಷ ನಿಮ್ಮ ನಡುವಿನ ಅಂತರವು ಕಡಿಮೆಯಾಗುತ್ತದೆ, ವಿಶೇಷವಾಗಿ ವರ್ಷದ ಪ್ರಾರಂಭವು ನಿಮಗೆ ತುಂಬಾ ಒಳ್ಳೆಯದು. ಈ ಸಮಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ಟ್ರಿಪ್ ಹೋಗಬಹುದು. ವರ್ಷದ ಮಧ್ಯದಲ್ಲಿ ಅತ್ತೆ ಕಡೆಯಿಂದ ಕೆಲವು ಉದ್ವಿಗ್ನತೆ ಸಾಧ್ಯ. ಆದಾಗ್ಯೂ ಶೀಘ್ರದಲ್ಲೇ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತದೆ.
ಪ್ರೀತಿಯ ಜೀವನದ ಬಗ್ಗೆ ಹೇಳುವುದಾದರೆ ಕಣ್ಣು ಮುಚ್ಚಿ ಸಂಗಾತಿಗೆ ನಂಬಬೇಡಿ, ನಿಮ್ಮಿಬ್ಬರ ನಡುವೆ ವೈಮನಸ್ಸು ಉಂಟಾಗಿ ಪ್ರತ್ಯೇಕತೆಯೂ ಸಾಧ್ಯ.

ಕರ್ಕ ರಾಶಿ
ಕರ್ಕ ರಾಶಿಯವರಿಗೆ ವೈವಾಹಿಕ ಜೀವನದಲ್ಲಿ2021 ವರ್ಷವು ನಿಮಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿ ಏರಿಳಿತಗಳು ಕಂಡುಬರುತ್ತವೆ, ಇದರಿಂದ ಭಿನ್ನಾಭಿಪ್ರಾಯ ಉಂಟಾಗುವುದು, ಆದರೆ ನಿಮಗೆ ಎಲ್ಲವನ್ನೂ ಬುದ್ಧಿವಂತಿಕೆಯಿಂದ ನಿಭಾಯಿಸಲು ಸಾಧ್ಯವಾಗುತ್ತದೆ. ವರ್ಷದ ಆರಂಭದಲ್ಲಿ ಮಕ್ಕಳಿಂದ ತೊಂದರೆ ಸಾಧ್ಯ. ವರ್ಷದ ಮಧ್ಯ ಭಾಗವು ನಿಮಗೆ ಹೆಚ್ಚು ಒತ್ತಡವನ್ನುಂಟುಮಾಡುತ್ತದೆ. ವರ್ಷದ ಅಂತ್ಯವು ನಿಮಗೆ ಉತ್ತಮವೆಂದು ಸಾಬೀತುಪಡಿಸುತ್ತದೆ.
ಈ ಸಮಯದಲ್ಲಿ, ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದಲ್ಲಿ ಪ್ರೀತಿ ಹೆಚ್ಚಾಗುತ್ತದೆ, ನಿಮ್ಮ ಸಂಗಾತಿಯ ಭಾವನಾತ್ಮಕ ಬೆಂಬಲವನ್ನೂ ನೀವು ಪಡೆಯುತ್ತೀರಿ.
ನೀವು ಅವಾಹಿತರಾಗಿದ್ದು ನೀವು ಪ್ರೇಮ ವಿವಾಹವನ್ನು ಬಯಸಿದರೆ ಅನೇಕ ಅಡೆತಡೆಗಳು ಎದುರಾಗಬಹುದು. ಕುಟುಂಬವು ನಿಮ್ಮ ಸಂಬಂಧವನ್ನು ವಿರೋಧಿಸಬಹುದು.

ಸಿಂಹ ರಾಶಿ
ವರ್ಷದ ಆರಂಭವು ನಿಮಗೆ ತುಂಬಾ ಒಳ್ಳೆಯದು. ಈ ಸಮಯದಲ್ಲಿ ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ತುಂಬಾ ಚೆನ್ನಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಭಾವನಾತ್ಮಕ ಬಾಂಧವ್ಯವೂ ಹೆಚ್ಚಾಗುತ್ತದೆ. ಪ್ರತಿಕೂಲ ಸಂದರ್ಭಗಳಲ್ಲಿ ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲವನ್ನೂ ನೀವು ಪಡೆಯುತ್ತೀರಿ. ವರ್ಷದ ಮಧ್ಯ ಭಾಗವು ನಿಮಗೆ ಸರಿಹೊಂದುವುದಿಲ್ಲ. ಈ ಸಮಯದಲ್ಲಿ, ವೈವಾಹಿಕ ಅಪಶ್ರುತಿ ಹೆಚ್ಚಾಗುತ್ತದೆ. ನಿಮ್ಮ ಈ ಅವಧಿಯಲ್ಲಿ ನೀವು ಖಿನ್ನತೆಗೆ ಒಳಗಾಗುತ್ತೀರಿ. ಈ ಅವಧಿಯಲ್ಲಿ ನೀವು ಖಿನ್ನತೆಗೆ ಒಳಗಾಗುತ್ತೀರಿ. ನಿಮ್ಮಿಬ್ಬರ ನಡುವಿನ ಉದ್ವಿಗ್ನತೆಯು ನಿಮ್ಮ ಮಗುವಿನ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ವರ್ಷದ ಅಂತ್ಯದ ವೇಳೆಗೆ, ನಿಮ್ಮ ವೈವಾಹಿಕ ಜೀವನದ ಶಾಂತಿ ಮರಳುವ ಸಾಧ್ಯತೆಯಿದೆ. ಆದಾಗ್ಯೂ ನಿಮ್ಮ ನಡವಳಿಕೆ ಮತ್ತು ಮಾತಿನ ಬಗ್ಗೆ ಹೆಚ್ಚಿನ ಗಮನ ಹರಿಸಲು ನಿಮಗೆ ಸೂಚಿಸಲಾಗಿದೆ.
ಪ್ರಣಯ ಜೀವನದ ಬಗ್ಗೆ ಹೇಳುವುದಾದರೆ ನೀವು ಒಬ್ಬಂಟಿಯಾಗಿದ್ದರೆ ಈ ವರ್ಷ ನಿರ್ದಿಷ್ಟ ವ್ಯಕ್ತಿಯ ಪ್ರವೇಶವು ನಿಮ್ಮ ಜೀವನದಲ್ಲಿ ಆಗಿರಬಹುದು. ಮತ್ತೊಂದೆಡೆ ನಿಮಗೆ ಪ್ರೇಮ ವಿವಾಹವೂ ತುಂಬಾ ಸಾಧ್ಯತೆ ಇದೆ.

ಕನ್ಯಾ ರಾಶಿ
2021 ವರ್ಷವು ನಿಮ್ಮ ವೈವಾಹಿಕ ಜೀವನಕ್ಕೆ ಬಹಳ ಶುಭವಾಗಲಿದೆ. ನಿಮ್ಮ ವೈವಾಹಿಕ ಜೀವನದ ಸಂತೋಷ ಹೆಚ್ಚಾಗುತ್ತದೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವೂ ಬಲವಾಗಿರುತ್ತದೆ. ವರ್ಷದ ಆರಂಭದಲ್ಲಿ ನಿಮ್ಮಸಂಗಾತಿಗೆ ಯಶಸ್ಸು ಸಿಗಬಹುದು. ಅವರ ಸಾಧನೆಗಳ ಬಗ್ಗೆ ನಿಮಗೆ ತುಂಬಾ ಹೆಮ್ಮೆ ಅನಿಸುತ್ತದೆ. ಆಗಸ್ಟ್ ನಂತರ ನಿಮ್ಮ ಸಂಗಾತಿ ಕೆಲಸದಲ್ಲಿ ಮಗ್ನವಾಗುವುದರಿಮದ ಈ ಅವಧಿಯಲ್ಲಿ ಅವರಿಗೆ ನಿಮಗೆ ಸಾಕಷ್ಟು ಸಮಯವನ್ನು ನೀಡಲು ಸಾಧ್ಯವಾಗುವುದಿಲ್ಲ.
ಆದಾಗ್ಯೂ ಪರಸ್ಪರ ಹೊಂದಾಣಿಕೆಯಿಂದಾಗಿ ಯಾವುದೇ ದೊಡ್ಡ ಸಮಸ್ಯೆ ಇರುವುದಿಲ್ಲ.
ಪ್ರಣಯ ಜೀವನದಲ್ಲೂ ಪ್ರೀತಿ ಮತ್ತು ಉತ್ಸಾಹ ಉಳಿಯುತ್ತದೆ. ನಿಮ್ಮ ಸಂಬಂಧದಲ್ಲಿ ಅದ್ಭುತ ಆಕರ್ಷಣೆಯನ್ನು ನೀವು ಅನುಭವಿಸುವಿರಿ. ಬಹುಶಃ ಈ ಅವಧಿಯಲ್ಲಿ ನಿಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸಲೂ ಮದುವೆ ಕುರಿತು ಯೋಚನೆ ಮಾಡುವಿರಿ.

ತುಲಾ ರಾಶಿ
ನಿಮ್ಮ ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ 2021 ವರ್ಷವು ನಿಮಗೆ ಹೆಚ್ಚು ಉತ್ತಮವಾಗುವುದಿಲ್ಲ. ವರ್ಷದ ಆರಂಭದಿಂದ ನಿಮ್ಮಿಬ್ಬರ ನಡುವೆ ಉದ್ವಿಗ್ನತೆ ಉಂಟಾಗುತ್ತದೆ. ಸಣ್ಣ ವಿಷಯಕ್ಕೂ ನಿಮ್ಮ ನಡುವೆ ಅಭಿಪ್ರಾಯ ವ್ಯತ್ಯಾಸಗಳಿರಬಹುದು. ಹಣದ ವಿಷಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ನೀವು ಅಸಮಾಧಾನಗೊಳ್ಳುತ್ತೀರಿ. ನೀವು ವರ್ಷದ ಮಧ್ಯದಲ್ಲಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು, ಇದು ನಿಮ್ಮ ವೈವಾಹಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ. ವರ್ಷದ ಕೊನೆಯಲ್ಲಿ ಅಳಿಯಂದಿರೊಂದಿಗೆ ಚರ್ಚೆಯಾಗುವ ಸಾಧ್ಯತೆಯಿದೆ.
ನಿಮ್ಮ ಪ್ರೀತಿಯ ಜೀವನದ ಬಗ್ಗೆ ಹೇಳುವುದಾದರೆಈ ಸಮಯವು ನಿಮಗೆ ತುಂಬಾ ಶುಭವಾಗಲಿದೆ. ನಿಮ್ಮ ಪ್ರೀತಿಸಿದ ವ್ಯಕ್ತಿಯನ್ನು ಮದುವೆಯಾಗುವ ಸಾಧ್ಯತೆಯಿದೆ. ನಿಮ್ಮ ಸಂಬಂಧದಲ್ಲಿ ಪ್ರೀತಿ ವೃದ್ಧಿಸುವುದು.

ವೃಶ್ಚಿಕ ರಾಶಿ
ವೈವಾಹಿಕ ಜೀವನದ ವಿಷಯದಲ್ಲಿ 2021 ವರ್ಷವು ನಿಮಗೆ ಅಷ್ಟು ಚೆನ್ನಾಗಿಲ್ಲ. ನಿಮ್ಮ ವೈವಾಹಿಕ ಜೀವನದಲ್ಲಿ ಅನೇಕ ಸವಾಲುಗಳಿವೆ ಆದರೆ ಇದರ ಹೊರತಾಗಿಯೂ ನಿಮ್ಮ ಸಂಬಂಧವು ದೃಢವಾಗಿ ಉಳಿಯುತ್ತದೆ. ಹೇಗಾದರೂ, ಈ ಸಮಯದಲ್ಲಿ ನಿಮ್ಮ ಸಂಗಾತಿಯು ಅವರ ಕೆಲಸದಲ್ಲಿ ಹೆಚ್ಚು ಕಾರ್ಯನಿರತರಾಗಿರುವುದರಿಂದ ನೀವಿಬ್ಬರು ಹೆಚ್ಚಿನ ಸಮಯವನ್ನು ಕಳೆಯಲು ನಿಮಗೆ ಅವಕಾಶ ಸಿಗುವುದಿಲ್ಲ. ಮತ್ತೊಂದೆಡೆ, ಸಂಗಾತಿಯು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬಹುದು ಅದು ನಿಮ್ಮ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ.
ಈ ವರ್ಷ ಪ್ರೇಮಿಗಳಿಗೆ ಮಿಶ್ರಫಲ. ನಿಮ್ಮ ಪ್ರೇಮಿಯೊಂದಿಗಿನ ನಿಮ್ಮ ಸಂಬಂಧವು ದುರ್ಬಲಗೊಳ್ಳುತ್ತಿದೆ. ಸಣ್ಣ ವಿಷಯಕ್ಕೆ ನಿಮ್ಮ ನಡುವೆ ತಪ್ಪು ತಿಳುವಳಿಕೆ ಇರಬಹುದು. ನಿಮ್ಮ ವೈಯಕ್ತಿಕ ವಿಷಯಗಳಲ್ಲಿ ಯಾವುದೇ ಮೂರನೇ ವ್ಯಕ್ತಿ ಹಸ್ತಕ್ಷೇಪ ಮಾಡಲು ನೀವು ಬಿಡದಿರುವುದು ಉತ್ತಮ.

ಧನು ರಾಶಿ
ವರ್ಷದ ಆರಂಭದಲ್ಲಿ ನಿಮ್ಮ ಸಂಗಾತಿಗೆ ಆರೋಗ್ಯದ ಸಮಸ್ಯೆ ಇರಬಹುದು. ಈ ಸಮಯದಲ್ಲಿ ನೀವು ಅವರ ಆರೋಗ್ಯದ ಬಗ್ಗೆ ತುಂಬಾ ಚಿಂತೆ ಮಾಡುತ್ತೀರಿ. ಈ ಅವಧಿಯಲ್ಲಿನಿಮ್ಮ ಹೆಚ್ಚಿನ ಸಮಯವನ್ನು ವೈದ್ಯರು ಮತ್ತು ಆಸ್ಪತ್ರೆಗಳ ಸುತ್ತಲೂ ಕಳೆಯಲಾಗುತ್ತದೆ. ವರ್ಷದ ಮಧ್ಯಭಾಗವು ನಿಮಗೆ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಅವಧಿಯಲ್ಲಿ, ಸಂಗಾತಿಯ ಆರೋಗ್ಯವೂ ಸುಧಾರಿಸಬಹುದು. ಈ ಅವಧಿಯಲ್ಲಿ, ನಿಮ್ಮ ನಡುವಿನ ನಿಕಟತೆಯೂ ಹೆಚ್ಚಾಗುತ್ತದೆ. ಭವಿಷ್ಯದ ಬಗ್ಗೆ ನೀವು ಯಾವುದೇ ಪ್ರಮುಖ ನಿರ್ಧಾರವನ್ನು ಸಹ ತೆಗೆದುಕೊಳ್ಳಬಹುದು. ಅಕ್ಟೋಬರ್ ನಂತರದ ಸಮಯವು ನಿಮಗೆ ಸಾಮಾನ್ಯವಾಗಲಿದೆ.
ಪ್ರಣಯ ಜೀವನದ ಬಗ್ಗೆ ಹೇಳುವುದಾದರೆ ಈ ಅವಧಿಯಲ್ಲಿ ನಿಮ್ಮ ನಡುವೆ ಅನೇಕ ಸಮಸ್ಯೆಗಳಿರಬಹುದು. ಸಣ್ಣ ಸಂಗತಿಗಳಗೆನಿಮ್ಮ ಸಂಗಾತಿಯನ್ನು ಅನಗತ್ಯವಾಗಿ ಅನುಮಾನಿಸದಂತೆ ನೀವು ಕಾಳಜಿ ವಹಿಸಬೇಕು, ಇಲ್ಲದಿದ್ದರೆ ನಿಮ್ಮ ಸಂಬಂಧ ಇನ್ನಷ್ಟು ಹದಗೆಡಬಹುದು.

ಮಕರ ರಾಶಿ
ನಿಮ್ಮ ದಾಂಪತ್ಯ ಜೀವನಕ್ಕೆ ಜನವರಿಯಿಂದ ಏಪ್ರಿಲ್ ವರೆಗಿನ ಅವಧಿ ತುಂಬಾ ಕಷ್ಟಕರವಾಗಿರುತ್ತದೆ. ಈ ಸಮಯದಲ್ಲಿ, ನಿಮ್ಮ ಸಂಗಾತಿಯೊಂದಿಗೆ ನೀವು ವೈಮನಸ್ಸು ಹೊಂದಿರಬಹುದು, ಈ ಕಾರಣದಿಂದಾಗಿ ಮನೆಯ ವಾತಾವರಣವು ಸಾಕಷ್ಟು ಉದ್ವಿಗ್ನವಾಗಿರುತ್ತದೆ. ನಿಮ್ಮ ನಡುವಿನ ಅಂತರವನ್ನು ಕಡಿಮೆ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಸೆಪ್ಟೆಂಬರ್ ನಂತರದ ಸಮಯವು ನಿಮಗೆ ಸಮಾಧಾನಕರವಾಗಿರುತ್ತದೆ. ಈ ಸಮಯದಲ್ಲಿ, ಸಂಗಾತಿಯ ನಡವಳಿಕೆಯಲ್ಲಿ ನೀವು ಮೃದುತ್ವವನ್ನು ನೋಡುತ್ತೀರಿ. ಅವರ ನಡವಳಿಕೆಯಲ್ಲಿ ದೊಡ್ಡ ಬದಲಾವಣೆಯಾಗಬಹುದು. ನಿಮ್ಮ ವೈವಾಹಿಕ ಜೀವನದ ಶಾಂತಿಯನ್ನು ಕಾಪಾಡಲು ನೀವೂ ಸಹ ಪ್ರಯತ್ನಿಸಬೇಕು.
ಪ್ರೇಮಿಗಳಿಗೆ ಈ ವರ್ಷ ನಿಮಗೆ ತುಂಬಾ ಶುಭವಾಗಲಿದೆ. ನಿಮ್ಮ ಸಂಗಾತಿಗೆ ನೀವು ತುಂಬಾ ಹತ್ತಿರವಾಗುತ್ತೀರಿ. ನಿಮ್ಮ ನಡುವೆ ವಿಶ್ವಾಸ ಬೆಳೆಯುತ್ತದೆ ಮತ್ತು ನಿಮ್ಮ ಸಂಬಂಧದ ಬಗ್ಗೆ ಸಹ ನೀವು ತುಂಬಾ ಸಂತೋಷವಾಗಿರುತ್ತೀರಿ. ಈ ವರ್ಷ ನೀವು ಮದುವೆಯಾಗಲು ನಿರ್ಧರಿಸಬಹುದು.

ಕುಂಭ ರಾಶಿ
2021 ವರ್ಷವು ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷವನ್ನು ತರುತ್ತದೆ. ನಿಮ್ಮ ನಡುವೆ ಯಾವುದೇ ಅಭಿಪ್ರಾಯ ವ್ಯತ್ಯಾಸಗಳಿದ್ದರೆ, ಎಲ್ಲಾ ಸಮಸ್ಯೆಗಳು ಈ ವರ್ಷ ಕೊನೆಗೊಳ್ಳುತ್ತವೆ. ನಿಮ್ಮ ಪ್ರೀತಿ ಹೆಚ್ಚಿ ನಿಮ್ಮ ಸಂಬಂಧವೂ ಬಲವಾಗಿರುತ್ತದೆ. ಅದು ವ್ಯವಹಾರವಾಗಲಿ, ಕೆಲಸವಾಗಲಿ, ನಿಮ್ಮ ಸಂಗಾತಿಯು ಈ ವರ್ಷ ದೊಡ್ಡ ಯಶಸ್ಸನ್ನು ಪಡೆಯುವ ಪ್ರಬಲ ಸಾಧ್ಯತೆಯನ್ನು ಹೊಂದಿದೆ. ಅವರ ಪ್ರಗತಿಯ ಬಗ್ಗೆ ನೀವು ತುಂಬಾ ಸಂತೋಷವಾಗಿರುತ್ತೀರಿ. ಸೆಪ್ಟೆಂಬರ್ ನಂತರದ ಸಮಯವು ನಿಮಗೆ ತುಂಬಾ ಅನುಕೂಲಕರವಾಗಿರುತ್ತದೆ.
ಪ್ರೀತಿಯ ಪ್ರೀತಿಯ ಬಗ್ಗೆ ಹೇಳುವುದಾದರೆ ಈ ವರ್ಷ ನಿಮ್ಮ ಪ್ರಣಯ ಜೀವನದಲ್ಲಿ ಸ್ಥಿರತೆ ಇರುತ್ತದೆ. ನಿಮ್ಮ ಸಂಬಂಧದಿಂದ ನೀವು ತೃಪ್ತರಾಗುತ್ತೀರಿ ಮತ್ತು ನಿಮ್ಮ ಸಂಗಾತಿಯ ಮೇಲಿನ ನಂಬಿಕೆ ಬಲವಾಗಿರುತ್ತದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ನಿಮ್ಮ ಸಂಬಂಧವನ್ನು ಚರ್ಚಿಸಲು ನೀವು ಯೋಜಿಸುತ್ತಿದ್ದರೆ, ಏಪ್ರಿಲ್ ನಂತರದ ಸಮಯವು ಅದಕ್ಕೆ ಅನುಕೂಲಕರವಾಗಿರುತ್ತದೆ.

ಮೀನ ರಾಶಿ
2021 ವರ್ಷವು ನಿಮ್ಮ ವೈವಾಹಿಕ ಜೀವನಕ್ಕೆ ಉತ್ತಮವಾಗಿದೆ ಎಂದು ಸಾಬೀತುಪಡಿಸುತ್ತದೆ. ಜನವರಿಯಿಂದ ಮಾರ್ಚ್‌ವರೆಗಿನ ಅವಧಿಯನ್ನು ಸಂಗಾತಿಯೊಂದಿಗೆ ಬಹಳ ಸಂತೋಷದಿಂದ ಕಳೆಯಲಾಗುವುದು. ನಿಮ್ಮ ಸಂಬಂಧದಲ್ಲಿ ಮಾಧುರ್ಯವು ಹೆಚ್ಚಾಗುತ್ತದೆ ಮತ್ತು ನಿಮ್ಮ ಸಂಬಂಧದಲ್ಲಿ ನೀವು ಹೊಸತನವನ್ನು ಅನುಭವಿಸುವಿರಿ. ನಿಮ್ಮ ನಡುವೆ ಕೆಲವೊಂದು ಭಿನ್ನಾಭಿಪ್ರಾಯ ಇದ್ದರೂ ಅದು ದೊಡ್ಡ ಸಮಸ್ಯೆಯಾಗುವುದಿಲ್ಲ. ಮಗುವಿನ ಕಡೆಯಿಂದಲೂ ಸಂತೋಷ ಬರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಅವರ ಸಾಧನೆ ಬಹಳ ಮೆಚ್ಚುಗೆಗೆ ಪಾತ್ರವಾಗಲಿದೆ.
ಪ್ರೀತಿಯ ವಿಷಯದಲ್ಲಿ ಈ ಸಮಯವು ನಿಮಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಈ ಸಮಯದಲ್ಲಿ, ನಿಮ್ಮ ನಡುವೆ ತಪ್ಪು ತಿಳುವಳಿಕೆ ಮತ್ತು ವ್ಯತ್ಯಾಸಗಳು ಕಂಡುಬರುತ್ತವೆ, ಆದರೆ ಇದರ ಹೊರತಾಗಿಯೂ ಪರಸ್ಪರರೊಂದಿಗಿನ ನಿಮ್ಮ ಬಾಂಧವ್ಯ ಕಡಿಮೆಯಾಗುವುದಿಲ್ಲ. ಪ್ರತಿ ಅಡಚಣೆಯನ್ನು ದಾಟುವ ಮೂಲಕ ನಿಮ್ಮ ಸಂಬಂಧವನ್ನು ಬಲಪಡಿಸಲು ನೀವು ಪ್ರಯತ್ನಿಸುತ್ತೀರಿ.
ಶ್ರೀ ಶ್ರೀನಿವಾಸ್ ಗುರೂಜಿ
ಶ್ರೀ ಸಾಯಿ ಅನುಗ್ರಹ ಜ್ಯೋತಿಷ್ಯ ಪೀಠ
ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ
ಕರಾವಳಿ ವಂಶಪರಂಪರೆ ಮನೆತನದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ನಿಮ್ಮ ಸಮಸ್ಯೆಗಳಾದ-
ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿ ಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲ ಭಾದೆ, ಲವ್ ಪ್ರಾಬ್ಲಮ್ ಇನ್ನು ಯಾವುದೇ ಜಟಿಲ ಸಮಸ್ಯೆಗಳಿಗೆ ಪರಿಹಾರ ತಿಳಿಸುತ್ತಾರೆ. ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಶ್ರೀ ಸಾಯಿ ಬಾಬಾ ಪೂಜೆ ಶಕ್ತಿಯಿಂದ ಯಾವುದೇ ಸಮಸ್ಯೆ ಇದ್ದರೂ( 5) ದಿನದಲ್ಲಿಶಾಶ್ವತ ಪರಿಹಾರ ತಿಳಿಸುತ್ತಾರೆ.
ಮನೆ ವಿಳಾಸ- #37/17 27th cross 12 th main 4th block ಜಯನಗರ ಬೆಂಗಳೂರು
M. 9986623344
web: www.sadguru-sai.com



Click it and Unblock the Notifications











