Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ರಾಶಿಯವರು ಎಂದಿಗೂ ವಿಶ್ವಾಸಕ್ಕೆ ಅರ್ಹರಲ್ಲ!
ವಿಶ್ವಾಸ ಎನ್ನುವುದು ಬಹಳ ದೊಡ್ಡ ಪದ. ಇದರ ಗಳಿಕೆಗೆ ತ್ಯಾಗ, ಪ್ರೀತಿಯೆಂಬ ಆರೈಕೆ ಅತ್ಯಗತ್ಯ. ಆದರೆ ಈ ಅವಿಶ್ವಾಸಿಗಳು ಹಲವು ಬಾರಿ ಸ್ವಾರ್ಥ ಗುಣಗಳಿಂದ ಅಥವಾ ತಮ್ಮದೇ ಸ್ವಹಿತಸಾಧನೆಯಿಂದಾಗಿ ಇತರರ ನೆರವಿಗೆ ಎಂದಿಗೂ ಧಾವಿಸುವುದಿಲ್ಲ. ಮೇಲ್ನೋಟಕ್ಕೆ ಸಹಾಯ ಮಾಡುವ ಹಂಬಲ ಇರುವುದಾಗಿ ತೋರುತ್ತಾರೆಯೇ ವಿನಃ, ಇವರ ಪರಿಸ್ಥಿತಿಯಾಗಲಿ, ಮನಸ್ಥಿತಿಯಾಗಲೀ ಸಹಾಯ ಮಾಡುವ ಯಾವ ಸೂಚನೆಯನ್ನು ಹೊಂದಿರುವುದಿಲ್ಲ.
ಇನ್ನು ಇಂಥ ಅವಿಶ್ವಾಸಿಗಳನ್ನು ನಂಬಿ ಯಾವುದಾದರೂ ಕೆಲಸಗಳಿಗೆ ಕೈಹಾಕಿದರಂತೂ ಮುಗಿದೇ ಹೋಯಿತು. ತುರ್ತಾಗಿ ಸಹಾಯ ಕೇಳಿದಾಗಲೂ ನೆರವಿಗೆ ಬರದೇ ಇರುವುದು ಅವಿಶ್ವಾಸಿಗಳ ಲಕ್ಷಣ. ಇಂತಹ ಗುಣಗಳು ನಮಗೂ ಹಲವು ಬಾರಿ ಕಿರಿಕಿರಿ ಎನಿಸಿರುತ್ತದೆ. ನಿಮಗೂ ಇಂಥದ್ದೇ ಕಿರಿಕಿರಿ ಉಂಟಾಗಿದೆಯೇ?, ಇವರನ್ನು ಪತ್ತೆ ಮಾಡುವುದು ಹೇಗೆ ಎಂಬುದು ನಿಮ್ಮ ಪ್ರಶ್ನೆಯೇ?.

ರಾಶಿಗಳನ್ನು ಆಧರಿಸಿ ಸಹ ಅವಿಶ್ವಾಸ ಗುಣಗಳನ್ನು ಹೊಂದಿದ್ದಾರೆ ಎಂದು ಪತ್ತೆ ಮಾಡಬಹುದು. ರಾಶಿಭವಿಷ್ಯದ ಪ್ರಕಾರ ಕೆಳಗಿನ ಕೆಲವು ರಾಶಿಯವರು ವಿಶ್ವಾಸಕ್ಕೆ ಅರ್ಹರೇ ಅಲ್ಲ, ಎಂದಿಗೂ ಇವರನ್ನು ನಿಮ್ಮ ವಿಶ್ವಾಸಾರ್ಹರ ಪಟ್ಟಿಯಲ್ಲಿ ಇಡಲೇಬೇಡಿ ಎಂದು ಜ್ಯೋತಿಶಾಸ್ತ್ರ ಹೇಳುತ್ತದೆ.

ಮಿಥುನ ರಾಶಿ
ಅವಿಶ್ವಾಸಿಗಳು ಎಂಬ ಪಟ್ಟಿಯಲ್ಲಿ ಮಿಥುನ ರಾಶಿ ಮೊದಲನೇ ಸಾಲಿನಲ್ಲಿ ನಿಲ್ಲುತ್ತದೆ. ಇವರು ನಿಮ್ಮ ಜತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರಬಹುದು, ನಿಮ್ಮ ಎಲ್ಲಾ ಪೋಸ್ಟ್ ಗಳಿಗೆ ಲೈಕ್, ಕಮೆಂಟ್ ಗಳನ್ನೂ ಕೊಡಬಹುದು, ಆದರೆ ಮಿಥುನ ರಾಶಿಯವರು ನಿಮಗಾಗಿ ಇಷ್ಟನ್ನು ಮಾತ್ರ ಮಾಡುತ್ತಾರೆ. ಇದನ್ನು ಹೊರತುಪಡಿಸಿ ಅವರಿಂದ ಹೆಚ್ಚಿನ ಸಹಾಯ ನಿರೀಕ್ಷಿಸಲಾಗದು. ಇವರು ತಾವು ಹೆಚ್ಚು ಕಾರ್ಯನಿರತರಾಗಿದ್ದೇವೆಂದು ಆದ್ದರಿಂದ ಸಂಪರ್ಕಿಸಲು ಸಾಧ್ಯವಿಲ್ಲವೆಂದು ಹೇಳಿಕೊಳ್ಳುತ್ತಾರೆ. ನಿಮ್ಮೊಂದಿಗೆ ಸಣ್ಣ ಚಿಟ್ ಚಾಟ್ ಮಾಡಲು ಸಹ ಇವರು ಆಸಕ್ತಿ ಹೊಂದಿರುವುದಿಲ್ಲ. ಇನ್ನು ವಿಶೇಷವೆಂದರೆ ಇವರು ನಿಮಗಾಗಿ ಸಮಯ ಮೀಸಲಿಟ್ಟು ಆನ್‌ಲೈನ್ ಚಾಟ್ ಮಾಡುವುದಿಲ್ಲ, ಮತ್ತೊಂದು ಕೆಲಸದ ನಡುವೆ ಸುಮ್ಮನೆ ಸಂದೇಶಗಳ ವಿನಿಮಯ ಮಾಡುತ್ತಿರುತ್ತಾರೆ ಅಷ್ಟೇ.

ಧನು ರಾಶಿ
ಬಿಲ್ಲಿನ ಸಂಕೇತವುಳ್ಳ ಧನು ರಾಶಿಯವರು ಹೊರಗೆ ಹೋಗಲು ಇಷ್ಟಪಡುವಷ್ಟು ನಾಲ್ಕು ಗೋಡೆಗಳ ನಡುವೆ ಮನೆಯಲ್ಲಿ ಇರಲು ಇಚ್ಚಿಸುವುದಿಲ್ಲ. ಆದ್ದರಿಂದಲೇ ಅವರು ನಿಮ್ಮನ್ನು ಭೇಟಿ ಮಾಡಲು ಅವರಿಗೆ ಸಮಯವೇ ಸಿಗುವುದಿಲ್ಲ. ಆದರೆ, ಇದರರ್ಥ ನೀವು ಅವರಿಗೆ ಏನೂ ಅಲ್ಲ ಏಂದೇನಲ್ಲ. ನೀವು ಅವರ ಪ್ರೀತಿಯ, ಆಪ್ತ ಸ್ನೇಹಿತರಿರಬಹುದು ಆದರೂ, ಅವರು ತಮ್ಮದೇ ಅದ ರೀತಿಯಲ್ಲಿ, ತಮಗೆ ಇಷ್ಟಬಂದತೆ ತಮ್ಮ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ. ಆದರೆ ಒಬ್ಬ ವಿಶ್ವಾಸಾರ್ಹ ಗೆಳೆಯ ಎಂದರೆ ಈ ಗುಣವಿದ್ದರೆ ಅವರನ್ನು ವಿಶ್ವಾಸದ ತೆಕ್ಕೆಗೆ ತೆಗೆದುಕೊಳ್ಳು ಸಾಧ್ಯವೆ?.

ಮಕರ
ಮಕರ ರಾಶಿಯವರು ಎಂದಿನಂತೆ ಯಾವಾಗಲೂ ಬ್ಯುಸಿ ಇರುತ್ತಾರೆ ಇದರಲ್ಲಿ ಸಂದೇಹ ಬೇಡ. ಇವರು ಎಷ್ಟು ಬ್ಯುಸಿ, ಕಾರ್ಯನಿರತರು ಎಂದರೆ ಇವರನ್ನು ಭೇಟಿ ಮಾಡಲು ನೀವು ಸಾಕಷ್ಟು ಪಡಬೇಕಾಗುತ್ತದೆ, ಇಷ್ಟಾದರೂ ಸಿಗುತ್ತಾರೆ ಎಂಬ ನಂಬಿಕೆ ಇರುವುದಿಲ್ಲ. ಆದರೆ ವಿಶೇಷವೆಂದರೆ ಮಕರ ರಾಶಿಯವರು ನೀವು ಸಹ ಇವರನ್ನು ಭೇಟಿ ಮಾಡಬೇಕೆಂದು ಬಯಸುವುದಿಲ್ಲ. ಪ್ರತಿ ಬಾರಿ ಕರೆ ಅಥವಾ ಆನ್ ಲೈನ್ ಚಾಟ್ ನಲ್ಲಿ ಸಿಕ್ಕಾಗ ನಿಮ್ಮನ್ನು ಭೇಟಿಯಾಗಬೇಕೆಂದು ಇಚ್ಚೆ ವ್ಯಕ್ತಪಡಿಸುತ್ತಾರೆ ಹಾಗೂ ಬಯಸುತ್ತಾರೆಯೇ ವಿನಃ ಭೇಟಿಯಾಗುವುದಿಲ್ಲ. ಇವರನ್ನು ನಂಬಿ ಎಂದಿಗೂ ಪ್ರಮುಖ ಕೆಲಸಕ್ಕೆ ಕೈಹಾಕಬೇಡಿ.

ಕುಂಭ ರಾಶಿ
ಕುಂಭ ರಾಶಿಯವರ ವಿಷಯಕ್ಕೆ ಬಂದರೆ ಇವರ ಮರೆಗುಳಿತನವೇ ಇವರ ದೊಡ್ಡ ಶತ್ರು-ಮಿತ್ರ. ನೀವು ಇವರಿಗೆ ಕಳುಹಿಸಿರುವ ಪ್ರಮುಖ ಸಂದೇಶಗಳನ್ನು ಓದದೇ ಇರಬಹುದು ಅಥವಾ ಒಮ್ಮೆ ಓದಿದರೂ ಮತ್ತೆ ಅದಕ್ಕೆ ಪ್ರತ್ಯುತ್ತರ ನೀಡದಿರಬಹುದು ಅದ್ದರಿಂದಲೇ ಇವರ ಬೇಟಿ ಬಹಳ ದೂರದ ಮಾತು. ನಿಮ್ಮ ಸಂದೇಶದಲ್ಲಿರುವ ಪ್ರಮುಖ ವಿಷಯಗಳನ್ನು ಅವರು ಓದಿದರೆ ತಾನೇ ತಿಳಿಯಲು ಸಾಧ್ಯ. ಅತ್ಯಂತ ಆಸಕ್ತಿದಾಯಕ ಮತ್ತೊಂದು ಭಾಗವೆಂದರೆ ಅವರು ನಿಮಗೆ ಉತ್ತರಿಸಿದ್ದಾರೆ ಎಂಬುದನ್ನೆ ಹಲವು ಭಾರಿ ಮರೆತಿರುತ್ತಾರೆ!.



Click it and Unblock the Notifications











