Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ನಿಮ್ಮ ವ್ಯಕ್ತಿತ್ವ ಹೇಳಲಿದೆ ಕಿರುಬೆರಳು ಉಂಗುರಬೆರಳಿನ ನಡುವಿನ ಎತ್ತರ
ನಮ್ಮ ಅಂಗೈಯಲ್ಲೆ ನಮ್ಮ ಭವಿಷ್ಯವಿದೆ ಎಂದು ಹೇಳಲಾಗುತ್ತದೆ, ಸತ್ಯವೋ ಅಥವಾ ಮಿಥ್ಯವೋ ಈ ಭವಿಷ್ಯದ ಬಗ್ಗೆ ಹಲವರಿಗೆ ಕುತೂಹಲ ಅಂತೂ ಇದ್ದೇ ಇರುತ್ತದೆ. ನಿಮ್ಮ ಅಂಗೈ ನಿಮಗೆ ಭವಿಷ್ಯ ಹೇಳುವಂತೆ ನಿಮ್ಮ ಕಿರುಬೆರಳು ಸಹ ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ ಎಂಬುದು ನಿಮಗೆ ಗೊತ್ತೆ?.
ಹೌದು ಒಂದು ನಂಬಿಕೆಯ ಪ್ರಕಾರ ನಿಮ್ಮ ಕಿರುಬೆರಳು ಉಂಗುರ ಬೆರಳಿಗೆ ಎಷ್ಟು ಅಂತರದಲ್ಲಿ ವ್ಯತ್ಯಾಸವನ್ನು ಹೊಂದಿದೆ ಎಂದು ಆಧರಿಸಿ ನಿಮ್ಮ ವ್ಯಕ್ತಿತ್ವವನ್ನು ಹೇಳಲಾಗುತ್ತದೆ. ಹೇಗೆ, ಏನು ಎಂಬುದರ ವಿವರ ಮುಂದಿದೆ ನೋಡಿ:

1. ಉಂಗುರದ ಬೆರಳಿನ ಜಂಟಿಗೆ ಕಿರುಬೆರಳು ಸಮವಾದರೆ
ನಿಮ್ಮ ಉಂಗುರದ ಬೆರಳಿನ ಮೇಲ್ಭಾಗದ ಜಾಯಿಂಟ್‌ನ ಆರಂಭದ ಸಾಲಿನಲ್ಲಿ ನಿಮ್ಮ ಕಿರು ಬೆರಳಿನ ಮೇಲ್ಭಾಗವು ಸರಿಯಾಗಿ ನಿಂತರೆ, ನೀವು ಸಮವಾಗಿ ಇರಿಸಿದ ಕಿರುಬೆರಳನ್ನು ಹೊಂದಿದ್ದೀರಿ ಎಂದು ಮತ್ತು 'ಎ' ವಿಧಾನವಾಗಿದೆ.
ಎ' ವಿಧಾನ ವ್ಯಕ್ತಿತ್ವಗಳು ಸ್ವಲ್ಪ ರಿಸರ್ವ್ ಗುಣದವರು, ಅಷ್ಟು ಬೇಗ ಎಲ್ಲದಕ್ಕೂ ಹೊಂದಿಕೆ ಆಗುವುದಿಲ್ಲ ಮತ್ತು ತುಂಬಾ ಅಂತರ್ಮುಖಿಯಾಗಿರುತ್ತಾರೆ. ನಿಮಗೆ ಹತ್ತಿರವಿರುವ ಜನರೂ ಸೇರಿಂದತೆ ಇತರರೊಂದಿಗೂ ನೀವು ಅಷ್ಟು ಸುಲಭವಾಗಿ ಸ್ನೇಹ ಮಾಡುವುದಿಲ್ಲ, ಬೆರೆಯುವುದಿಲ್ಲ. ಇನ್ನೂ ಅಪರಿಚಿತರಿಂದಂತೂ ನೀವು ಬಹಳ ದೂರವೇ ಎನ್ನಬಹುದು. ನೀವು ಹೊರಗಿನ ಪ್ರಪಂಚಕ್ಕೆ ಬಹಳ ಸ್ವತಂತ್ರ ಗುಣದವರಂತೆ ಕಾಣುತ್ತೀರಿ.
ಅಪ್ರಾಮಾಣಿಕತೆಯು ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮನ್ನು ಕೋಪಗೊಳಿಸುತ್ತದೆ. ನೀವು ಒಬ್ಬ ಪ್ರಾಮಾಣಿಕ, ನೇರವಾದ ವ್ಯಕ್ತಿಯಾಗಿದ್ದು, ನಿಮ್ಮ ಪ್ರೀತಿಪಾತ್ರರಿಗಾಗಿ ನಿಮ್ಮ ಕೈಮೀರಿ ಸಹಾಯಹಸ್ತ ಚಾಚುತ್ತೀರಿ, ಅಲ್ಲದೇ ಪ್ರತಿಯಾಗಿ ಅವರು ನಿಮಗಾಗಿ ಅದೇ ರೀತಿ ಮಾಡುತ್ತಾರೆ ಎಂದು ನಿರೀಕ್ಷಿಸುತ್ತಾರೆ.

2. ಉಂಗುರು ಬೆರಳಿನ ಜಂಟಿಯ ಮೇಲೆ ಕಿರು ಬೆರಳಿದ್ದರೆ (ಕಿರುಬೆರಳು ಉದ್ದವಿದ್ದರೆ)
ನಿಮ್ಮ ಕಿರು ಬೆರಳು ಉಂಗುರದ ಬೆರಳಿನ ಮೇಲಿನ ಜಂಟಿ ರೇಖೆಯನ್ನು ದಾಟಿದರೆ, ನೀವು ಉದ್ದವಾದ ಕಿರು ಬೆರಳನ್ನು ಹೊಂದಿದ್ದೀರಿ ಮತ್ತು ಇದು 'ಬಿ' ವಿಧಾನವಾಗಿದೆ
ಬಿ' ವಿಧಾನ ಅವರ ಸ್ನೇಹಿತರಿಗೆ ಅತ್ಯಂತ ನಿಷ್ಠಾವಂತರು ಮತ್ತು ಅತ್ಯಂತ ಸೂಕ್ಷ್ಮ ಜನರು. ನೀವು ಹೊಸ ಗೆಳೆಯ ಅಥವಾ ಗೆಳತಿಯರೇ ನಿಮ್ಮ ಇಡೀ ಪ್ರಪಂಚವಾಗುತ್ತಾರೆ. ಅವರು ಯಾವಾಗಲೂ ನಿಮ್ಮ ಆಲೋಚನೆಗಳಲ್ಲೇ ಇರುತ್ತಾರೆ ಮತ್ತು ನೀವು ಸಾಧ್ಯವಾದಷ್ಟು ಆಳವಾದ ಮಟ್ಟದಲ್ಲಿ ಅವರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತೀರಿ.

3. ಉಂಗುರದ ಬೆರಳಿನ ಜಂಟಿಗೆ ಹೋಲಿಸಿದರೆ ಕಿರುಬೆರಳು ಚಿಕ್ಕದಿದ್ದರೆ
ನಿಮ್ಮ ಕಿರುಬೆರಳು ಉಂಗುರ ಬೆರಳಿನ ಜಂಟಿ ರೇಖೆಯನ್ನು ತಲುಪದಿದ್ದರೆ ಅಥವಾ ಚಿಕ್ಕದಿದ್ದರೆ ಇದು 'ಸಿ' ವಿಧಾನವಾಗಿದೆ.
ಸಿ' ವಿಧಾನದವರು ಆಶಾವಾದಿಗಳು, ಉತ್ಸಾಹಭರಿತ ವ್ಯಕ್ತಿತ್ವದವರು, ಅವರ ಬಳಿ ಆದಷ್ಟು ನಕಾರಾತ್ಮಕತೆ ಸುಳಿಯುವುದಿಲ್ಲ. ಇವರು ಜನರನ್ನು ಸುಲಭವಾಗಿ ಕ್ಷಮಿಸುತ್ತಾರೆ ಹಾಗೂ ಕೋಪದ ಕಾರಣವನ್ನು ಮರೆತುಬಿಡುತ್ತಾರೆ.
ನಿಮ್ಮ ಅತಿಯಾದ ಶಕ್ತಿಯು ನಿಮ್ಮನ್ನು ಸ್ವಯಂ-ಕೇಂದ್ರಿತವಾಗುವಂತೆ ಮತ್ತು ಕೆಲವೊಮ್ಮೆ ನಿಮ್ಮ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸುವಂತೆ ಮಾಡುತ್ತದೆ. ನೀವು ಸರಿ ಎಂದಾಗ ಯಾವುದೇ ಕಾರಣಕ್ಕೂ ನಿಮ್ಮ ವಾದವನ್ನು ನಿಲ್ಲಿಸುವುದೇ ಇಲ್ಲ. ಆದರೆ, ಸಂದರ್ಭಗಳು ಅತಿರೇಕಕ್ಕೆ ಹೋದರೆ ಅಥವಾ ವಿಷಯಗಳು ತುಂಬಾ ದೂರ ಹೋದರೆ ನೀವೇ ಮೊದಲು "ಕ್ಷಮಿಸಿ" ಎಂದು ಹೇಳುವಿರಿ.



Click it and Unblock the Notifications
