Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ರಾಶಿಚಕ್ರದ ಪ್ರಕಾರ ನಿಮ್ಮ ಆತ್ಮಸಂಗಾತಿ ಹೇಗಿದ್ದರೆ ನಿಮಗೆ ಒಳ್ಳೆಯದು
ಭಾರತೀಯರಲ್ಲಿ ಜನ್ಮ ಕುಂಡಲಿ ನೋಡಿಕೊಂಡು ಮದುವೆ ಮಾಡುವಂತಹ ಕ್ರಮವು ಹಿಂದಿನಿಂದಲೂ ಇತ್ತು. ಹುಡುಗ ಹಾಗೂ ಹುಡುಗಿಯ ಜನ್ಮ ಕುಂಡಲಿಯು ಸರಿ ಹೊಂದಿದರೆ ಆಗ ಮದುವೆ ನಿಶ್ಚಯ ಮಾಡುತ್ತಿದ್ದರು. ಜನ್ಮ ಕುಂಡಲಿಯಲ್ಲಿ ಯಾವುದೇ ದೋಷವಿದ್ದರೂ ಮದುವೆ ಮುಂದುವರಿಯುತ್ತಿರಲಿಲ್ಲ. ಆತ್ಮ ಸಂಗಾತಿಯಾಗುವಂತಹವರಲ್ಲಿ ಯಾವ್ಯಾವ ಗುಣಗಳು ಇರಬೇಕು ಎಂದು ಪ್ರತಿಯೊಬ್ಬ ಹುಡುಗ ಹುಡುಗಿಯು ಲೆಕ್ಕ ಹಾಕುತ್ತಲಿರುವರು. ಆದರೆ ಹೆಚ್ಚಿನ ಸಂದರ್ಭದಲ್ಲಿ ಬಯಸಿದಂತಹ ಆತ್ಮಸಂಗಾತಿಯು ಸಿಗುವುದು ತುಂಬಾ ಕಡಿಮೆ.
ಮದುವೆಯಾಗುವ ವೇಳೆ ನಿಮ್ಮ ರಾಶಿಗೆ ಅನುಗುಣವಾಗಿ ಆತ್ಮ ಸಂಗಾತಿಯಾಗವವರಲ್ಲಿ ಯವ್ಯಾವ ಗುಣಗಳು ಇರಬೇಕು ಎಂದು ನೀವು ತಿಳಿಯಬೇಕು. ಹೀಗೆ ಮಾಡಿದರೆ ಅದರಿಂದ ಖಂಡಿತವಾಗಿಯೂ ನಿಮಗೆ ನೆರವಾಗಲಿದೆ. ಯಾಕೆಂದರೆ ಆತ್ಮ ಸಂಗಾತಿ ಆಗಿರುವಂತಹವರು ನಿಮ್ಮ ಕಷ್ಟಸುಖ ಹಾಗೂ ಭವಿಷ್ಯದ ಪ್ರತಿಯೊಂದು ಯೋಜನೆಯಲ್ಲಿ ಭಾಗಿಯಾಗುವರು. ನೀವು ಏನೇ ಮಾತನಾಡದೆ ಇದ್ದರೂ ಅವರು ನಿಮ್ಮ ದೇಹ ಭಾಷೆಯನ್ನು ಅರ್ಥ ಮಾಡಿಕೊಂಡು ಕಷ್ಟ ಸುಖವನ್ನು ತಿಳಿಯುವರು.

ಸಂಬಂಧದಲ್ಲಿ ಜತೆಯಾಗಿ ಇರುವುದು ಯಾವಾಗಲೂ ಖುಷಿ ನೀಡುವುದು ಮತ್ತು ಇದು ನಿಮ್ಮ ಭವಿಷ್ಯದಲ್ಲಿ ಯಾವುದೇ ಗುರಿ ಸಾಧಿಸಲು ಸಹಕಾರಿ ಆಗಿರಲಿದೆ. ಕೆಲವೊಂದು ಸಲ ಜಗಳಗಳು ಆದರೂ ಅದನ್ನು ಕಡೆಗಣಿಸಿ ಸಂಬಂಧದಲ್ಲಿ ಮುಂದುವರಿಯಬೇಕು. ಆತ್ಮ ಸಂಗಾತಿಯು ಜೀವನದ ಬೇರೆ ವ್ಯಕ್ತಿಗಳಿಗಿಂತಲೂ ತುಂಬಾ ಭಿನ್ನವಾಗಿ ಇರುವುದು. ಯಾಕೆಂದರೆ ಆತ್ಮಸಂಗಾತಿಯು ಅದೃಷ್ಟದ ವ್ಯಕ್ತಿ ಆಗಿರುವರು. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಬಂದರೂ ಆಗ ಆತ್ಮಸಂಗಾತಿಯು ನೆರವಿಗೆ ಬರುವರು.
ರಾಶಿಚಕ್ರದ ಪ್ರಕಾರವಾಗಿ ಆತ್ಮಸಂಗಾತಿಯಲ್ಲಿ ಯಾವ ಗುಣಗಳು ಇರಬೇಕು ಎಂದು ಈ ಲೇಖನದ ಮೂಲಕ ತಿಳಿಯುವ ಮತ್ತು ಪ್ರೀತಿಯ ಹೊಂದಾಣಿಕೆಯು ಇಲ್ಲಿ ತಿಳಿಯಲಿದೆ.

ಮೇಷ (ಮಾರ್ಚ್21-ಎಪ್ರಿಲ್ 19)
ನಿಮಗೇ ಎದುರಾಗಿ ಸವಾಲು ಹಾಕುವಂತಹ ಸಂಗಾತಿಯು ನಿಮಗೆ ಬೇಕಾಗಿದೆ. ನೀವು ಯಾವುದೇ ಕೆಟ್ಟ ನಿರ್ಧಾರವನ್ನು ತೆಗೆದುಕೊಂಡಾಗ ಅದನ್ನು ಬೆಂಬಲಿಸುವಂತಹ ಸಂಗಾತಿ ನಿಮಗೆ ಸಿಗಬಾರದು. ನಿಮ್ಮಂತೆ ಇರುವ ಮತ್ತು ಎಲ್ಲದಕ್ಕೂ ತಯಾರಾಗಿ ಇರುವಂತಹ ಆತ್ಮಸಂಗಾತಿಯು ನಿಮಗೆ ಬೇಕು. ನಿಮ್ಮ ಆತ್ಮಸಂಗಾತಿಯು ನೈಜ ಸಂಗಾತಿ ಮತ್ತು ನಿಮ್ಮ ಬೆಳವಣಿಗೆಯನ್ನು ಪ್ರೋತ್ಸಾಹಿಸುವವರು ಆಗಿರಬೇಕು. ಅವರ ಮಟ್ಟಕ್ಕೆ ನೀವು ಕೆಳಗೆ ಇಳಿಯಬಾರದು, ಆದರೆ ಅವರ ಮಟ್ಟಕ್ಕೆ ಮೇಲೇರಲು ನೀವು ಬಯಸಬಹುದು.

ವೃಷಭ (ಎಪ್ರಿಲ್20-ಮೇ20)
ಪ್ರಾಮಾಣಿಕವಾಗಿ ಹೇಳುವುದಾದರೆ ನಿಮ್ಮಲ್ಲಿ ಕಿಡಿ ಹತ್ತಿಸುವಂತಹ ಆತ್ಮಸಂಗಾತಿಯು ನಿಮಗೆ ಬೇಕಾಗಿದೆ. ನೀವು ಸಂತೃಪ್ತರಾಗಿರುತ್ತೀರಿ ಮತ್ತು ವಿಷಯಗಳನ್ನು ಹಾಗೆ ಇರಲು ಬಯಸುತ್ತೀರಿ. ಆದರೆ ಅಂತಿಮವಾಗಿ ಇದು ನಿಮಗೆ ಒಳ್ಳೆಯದಲ್ಲ. ನಿಮ್ಮಲ್ಲಿ ಇರುವಂತಹ ಸಾಮರ್ಥ್ಯವನ್ನು ತಿಳಿದುಕೊಂಡು ಅದನ್ನು ಹೊರಚೆಲ್ಲಲು ನೆರವಾಗುವಂತಹ ಆತ್ಮಸಂಗಾತಿಯ ಅಗತ್ಯ ನಿಮಗಿದೆ. ನೀವು ಮನೆಯಲ್ಲೇ ಇರಲು ಮತ್ತು ಒಂದೇ ಕೆಲಸದಲ್ಲಿ 30 ವರ್ಷ ಕಳೆಯಲು ಹಿಂಜರಿಯಲ್ಲ. ಆದರೆ ನಿಮ್ಮ ಆತ್ಮ ಸಂಗಾತಿಯು ನಿಮಗೆ ದೊಡ್ಡ ಮಟ್ಟದ ಸಾಧನೆಯ ವ್ಯಾಪ್ತಿ ನೋಡುವರು.

ಮಿಥುನ (ಮೇ21-ಜೂನ್20)
ನಿಮ್ಮಲ್ಲಿ ಸ್ಥಿರತೆ ತರುವಂತಹ ಆತ್ಮಸಂಗಾತಿಯು ನಿಮಗೆ ಬೇಕಾಗಿರುವುದು. ಯಾಕೆಂದರೆ ನಿಮ್ಮಲ್ಲಿ ಸಾವಿರಾರು ಆಲೋಚನೆಗಳು ಇರುವುದು ಮತ್ತು ಇದರಿಂದಾಗಿ ಒಂದೇ ಕಡೆ ಗಮನಹರಿಸಲು ನಿಮಗೆ ತುಂಬಾ ಕಷ್ಟವಾಗುವುದು. ಇದರಿಂದ ನಿಮ್ಮ ಕ್ರಿಯಾತ್ಮಕತೆ ಹೊರಹಾಕಲು ಮತ್ತು ಒಂದೇ ಕಡೆ ದೃಷ್ಟಿ ನೆಡುವಂತೆ ಮಾಡುವ ಆತ್ಮಸಂಗಾತಿಯು ನಿಮಗೆ ಬೇಕಾಗಿದೆ. ಆತ್ಮಸಂಗಾತಿಯು ನಿಮಗೆ ಬಂಡೆಯಂತೆ ನಿಲ್ಲುವರು ಮತ್ತು ನೀವು ತುಂಬಾ ಸುರಕ್ಷಿತವಾಗಿ ಇರಲು ಸ್ಥಿರ ಅಡಿಪಾಯ ಹಾಕಿಕೊಡುವರು.

ಕರ್ಕ (ಜೂನ್ 21-ಜುಲೈ22)
ನಿಮ್ಮ ಎಲ್ಲಾ ಭಾವನೆಗಳನ್ನು ಯಾವುದೇ ಸಮಯದಲ್ಲಿ ಹಂಚಿಕೊಳ್ಳುವಂತಹ ಆತ್ಮಸಂಗಾತಿಯು ನಿಮಗೆ ಬೇಕಾಗಿದೆ. ಅವರು ನಿಮ್ಮ ಬಗ್ಗೆ ತೀರ್ಪು ನೀಡುವಂತೆ ಇರಬಾರದು. ಅವರು ಸ್ನೇಹಿತರಂತೆ ಇರಬೇಕು. ಇದರೊಂದಿಗೆ ಎಲ್ಲಾ ರೀತಿಯಿಂದಲೂ ಅವರು ನಿಮ್ಮೊಂದಿಗೆ ಇರಬೇಕು. ನಿಮಗೆ ಅಗತ್ಯವಿರುವಾಗ ಅವರು ನೆರವಾಗಬೇಕು ಮತ್ತು ಒಳ್ಳೆಯ ಮನಸ್ಸನ್ನು ಹೊಂದಿರಬೇಕು.

ಸಿಂಹ (ಜುಲೈ23-ಆಗಸ್ಟ್22)
ನಿಮಗೆ ಬೇರೆಯವರು ಹಾಕಿರುವಂತಹ ಮುಖವಾಡವನ್ನು ತೆಗೆದು, ನಿಮ್ಮ ನೈಜ ವ್ಯಕ್ತಿತ್ವ ಹೊರಗೆ ಹಾಕುವಂತಹ ಆತ್ಮಸಂಗಾತಿಯು ಬೇಕಾಗಿದೆ. ಕೇಂದ್ರೀಕೃತ ಗಮನ ಹೊಂದಿರಲು ನಿಮಗೆ ಯಾವುದೇ ಸಮಸ್ಯೆಯು ಇರುವುದಿಲ್ಲ. ಆದರೆ ಜನರ ಸುತ್ತಲು ಇರುವ ವೇಳೆ ನೀವು ಸ್ವಲ್ಪ ಒತ್ತಡ ಅನುಭವಿಸುವಿರಿ. ಆತ್ಮ ಸಂಗಾತಿಯು ನಿಮ್ಮ ನೈಜ ವ್ಯಕ್ತಿತ್ವ ನೋಡುವರು ಮತ್ತು ಪರಿಪೂರ್ಣರಾಗಿ ಇಲ್ಲದೆ ಇದ್ದರೂ ಸ್ವೀಕರಿಸುವರು. ಒಬ್ಬ ವ್ಯಕ್ತಿಯಾಗಿ ಅವರು ನಿಮ್ಮನ್ನು ಸ್ವೀಕರಿಸುವರು ಮತ್ತು ನಿಮಗೆ ಬದ್ಧವಾಗಿರುವ ವ್ಯಕ್ತಿ ಅವರು ಮಾತ್ರ.

ಕನ್ಯಾ (ಆಗಸ್ಟ್ 23- ಸೆ.22)
ನಿಮ್ಮನ್ನು ಸ್ವೀಕರಿಸಿ ಮತ್ತು ಪ್ರೀತಿಸಲು ಕಲಿಸುವಂತಹ ಆತ್ಮಸಂಗಾತಿಯು ನಿಮಗೆ ಬೇಕಾಗಿದೆ. ಸಣ್ಣ ತಪ್ಪುಗಳು ವೈಫಲ್ಯದಿಂದಾಗಿ ನೀವು ತುಂಬಾ ಕುಗ್ಗಿ ಹೋಗುವಿರಿ. ಈ ಸಮಯದಲ್ಲಿ ನೀವು ಪ್ರೀತಿಗೆ ತುಂಬಾ ಅರ್ಹರು ಎಂದು ತೋರಿಸಿಕೊಟ್ಟು ಪ್ರೇರೇಪಿಸುವಂತಹ ಆತ್ಮಸಂಗಾತಿಯು ಬೇಕಾಗಿದೆ. ಅಸುರಕ್ಷಿತವಾಗಿ ಇರುವುದು ನಿಮ್ಮ ಸಾಮರ್ಥ್ಯದ ವೆಚ್ಚ ಎನ್ನುವುದನ್ನು ತಿಳಿಯಬೇಕು.

ತುಲಾ (ಸೆ.23-ಅ.22)
ಏಕಾಂಗಿ ಆಗಿ ಇರುವುದನ್ನು ಪ್ರಶಂಸಿಸುವಂತಹ ಆತ್ಮಸಂಗಾತಿಯು ನಿಮಗೆ ಬೇಕಾಗಿದೆ. ನಿಮ್ಮ ಸುತ್ತಲು ಯಾವಾಗಲೂ ಜನರು ಇರಬೇಕು ಮತ್ತು ನೀವು ಅದನ್ನು ಆನಂದಿಸಬೇಕು ಎಂದು ಬಯಸುವಿರಿ. ಬೇರೆ ಜನರೊಂದಿಗೆ ಇರುವ ಹಾಗೆ ನೀವು ನಿಮ್ಮಷ್ಟಕ್ಕೆ ಇದ್ದರೂ ಕೂಡ ಆನಂದಿಸಬಹುದು ಎಂದು ಆತ್ಮಸಂಗಾತಿಯು ತೋರಿಸಿಕೊಡುವರು. ನಿಮ್ಮೊಂದಿಗೆ ನೀವು ಸರಿಯಾಗಿದ್ದರೆ ಆಗ ಸ್ವತಂತ್ರ ಮತ್ತು ಆತ್ಮವಿಶ್ವಾಸದಿಂದ ಇರಲು ಸಾಧ್ಯವಾಗುವುದು.

ವೃಶ್ಚಿಕ (ಅಕ್ಟೋಬರ್ 23- ನವಂಬರ್ 21)
ನೀವು ನಂಬಿಕೆ ಇಡಬಹುದಾದ ಆತ್ಮಸಂಗಾತಿಯು ನಿಮಗೆ ಬೇಕಾಗಿದೆ. ನೀವು ಅಷ್ಟು ಸುಲಭವಾಗಿ ಜನರನ್ನು ನಂಬುವುದಿಲ್ಲ ಮತ್ತು ಇದರಿಂದ ನಿಮಗೆ ತುಂಬಾ ನೋವಾಗುವುದು. ನೀವು ತಪ್ಪು ಮಾಡುತ್ತೀರಿ ಮತ್ತು ನಿಮ್ಮ ನೈಜತೆ ನೋಡಿಕೊಂಡು ಅವರು ನಿಮ್ಮನ್ನು ತಿರಸ್ಕರಿಸಿ ಬಿಡುವರು ಎನ್ನುವ ಭೀತಿಯು ನಿಮ್ಮಲ್ಲಿ ಇರುವುದು. ನಿಮಗೆ ತುಂಬಾ ಅಮೂಲ್ಯ ಮತ್ತು ನಿಮ್ಮ ಹೃದಯ ಬಿಚ್ಚಿ ಮಾತನಾಡಿಸುವಂತಹ ಆತ್ಮಸಂಗಾತಿಯು ನಿಮಗೆ ಬೇಕಾಗಿದೆ. ನೀವು ತುಂಬಾ ಬಲಿಷ್ಠ ವ್ಯಕ್ತಿಯಾಗಿದ್ದು, ನಿಮ್ಮ ಶಕ್ತಿಯನ್ನು ಗುರುತಿಸುವ ಆತ್ಮಸಂಗಾತಿಯು ಬೇಕಾಗಿದ್ದಾರೆ.

ಧನು (ನವಂಬರ್ 22- ಡಿಸೆಂಬರ್ 21)
ತುಂಬಾ ಬಹುಮುಖಿ ಆಗಿರುವ ಮತ್ತು ಬದಲಾವಣೆಗೆ ಹೆದರದೆ, ಅದನ್ನು ಆನಂದಿಸುವಂತಹ ಆತ್ಮಸಂಗಾತಿಯು ನಿಮಗೆ ಬೇಕಾಗಿದ್ದಾರೆ. ಎಲ್ಲಿಗೂ ಹೋಗದೆ, ಏನನ್ನೂ ಮಾಡದೆ ಇರುವಂತೆ ಸೂಚಿಸುವ ವ್ಯಕ್ತಿಯನ್ನು ನೀವು ಬಯಸುವುದಿಲ್ಲ. ನಿಮ್ಮಲ್ಲಿ ಅಂತಹ ತಾಳ್ಮೆಯು ಇಲ್ಲ. ನಿಮ್ಮ ತಿರುಗಾಟವನ್ನು ಪ್ರಶಂಸೆ ಮಾಡಿಕೊಂಡು ಅದನ್ನು ಹಂಚಿಕೊಳ್ಳುವ ಆತ್ಮಸಂಗಾತಿಯು ನಿಮಗೆ ಬೇಕಾಗಿದೆ. ಸಾಹಸಕ್ಕಾಗಿ ಹಪಹಪಿಸುವ ಮತ್ತು ಅನುಭದ ನಿಜವಾದ ಮೌಲ್ಯವನ್ನು ತಿಳಿದುಕೊಂಡಿರುವಂತಹ ಆತ್ಮಸಂಗಾತಿಯು ನಿಮಗೆ ಬೇಕಾಗಿದ್ದಾರೆ.

ಮಕರ (ಡಿಸೆಂಬರ್ 22-ಜನವರಿ 19)
ನಿಮ್ಮಲ್ಲಿ ನೈಜತೆಯನ್ನು ನೋಡುವಂತಹ ಆತ್ಮಸಂಗಾತಿಯು ನಿಮಗೆ ಬೇಕಾಗಿದ್ದಾರೆ. ಇದು ತುಂಬಾ ಊಹಿಸಬಹುದಾದ, ಸಾಪ್ರದಾಯಿಕತೆ ಎಂದು ಭಾವಿಸಬಹುದು. ಆದರೆ ನಿಜ ವಿಚಾರವೆಂದರೆ ನೀವು ಇದೆಲ್ಲಕ್ಕಿಂತಲೂ ಮೇಲ್ಪಟ್ಟವಾಗಿ ಚಿಂತಿಸುತ್ತೀರಿ. ಸಮಯಾನುಸಾರ ನಿಮ್ಮನ್ನು ಗುರುತಿಸಿ, ಪ್ರಶಂಸೆ ಮಾಡುವಂತಹ ವ್ಯಕ್ತಿಯು ನಿಮಗೆ ಬೇಕಿರುವರು.

ಕುಂಭ (ಜನವರಿ20-ಫೆಬ್ರವರಿ18)
ನಿಮ್ಮ ಆಲೋಚನೆಗಳು ತುಂಬಾ ಅಸ್ವಾಭಾವಿಕ ಮತ್ತು ಮೂರ್ಖತನದ್ದು ಎಂದು ತೋರಿಸುವ ಆತ್ಮಸಂಗಾತಿಯು ನಿಮಗೆ ಬೇಕಾಗಿದ್ದಾರೆ. ಆದರೆ ಜನರು ನಿಮ್ಮ ಆಲೋಚನೆಗಳನ್ನು ತುಂಬಾ ವಿಚಿತ್ರ ಹಾಗೂ ಅಸಂಪ್ರದಾಯಿಕ ಎಂದು ಭಾವಿಸಿದ್ದರೂ ಆತ್ಮಸಂಗಾತಿಯು ಬೆಂಬಲ ನೀಡಬೇಕು. ನಿಮ್ಮ ಬಗ್ಗೆ ಪ್ರತಿಯೊಬ್ಬರು ಸಂಶಯ ವ್ಯಕ್ತಪಡಿಸುವ ವೇಳೆ ಆತ್ಮಸಂಗಾತಿಯು ಬೆಂಬಲ ನೀಡಿ ಪ್ರೋತ್ಸಾಹಿಸಬೇಕು.

ಮೀನ (ಫೆಬ್ರವರಿ19-ಮಾರ್ಚ್ 20)
ನಿಮಗೆ ಪ್ರೇರಣೆ ಹಾಗೂ ಬೆಂಬಲ ನೀಡುವಂತಹ ಆತ್ಮ ಸಂಗಾತಿಯು ಬೇಕು. ಭಾವನಾತ್ಮಕವಾಗಿ ತುಂಬಾ ಆಳವಾಗಿ ನೀವು ಯಾರೊಂದಿಗಾದರೂ ಬೆಸೆಯುವಂತೆ ಆಗುವ ಮತ್ತು ನಿಮ್ಮ ಕ್ರಿಯಾತ್ಮಕತೆ ಹಾಗೂ ಧನಾತ್ಮಕ ಮನಸ್ಥಿತಿಯನ್ನು ತೋರಿಸಿಕೊಡುವಂತಹ ಆತ್ಮಸಂಗಾತಿಯು ಬೇಕಿರುವರು. ನೀವು ಏಕಾಂಗಿ ಆಗಿ ಇರುವ ವೇಳೆ ನಕಾರಾತ್ಮಕ ಆಲೋಚನೆಗಳನ್ನು ತುಂಬಿಕೊಂಡಿರುವಿರಿ.



Click it and Unblock the Notifications











