Latest Updates
-
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು!
ಜ್ಯೋತಿಶ್ಯಾಸ್ತ್ರದ ಪ್ರಕಾರ ಹಲ್ಲಿ ಮೈ ಮೇಲೆ ಬಿದ್ದರೆ ಶುಭವೋ? ಅಶುಭವೋ?
ಪುರುಷ-ಮಹಿಳೆಯರ ಮೈ ಮೇಲೆ ಹಲ್ಲಿ ಬಿದ್ದರೆ ಹೀಗಾಗುತ್ತಾ?
ಹಲ್ಲಿ ಬಿದ್ದರೆ ಆಪತ್ತು ಅನ್ನೋ ಭಯ ನಮ್ಮನ್ನು ಕಾಡುತ್ತಿರುತ್ತೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಲ್ಲಿ ಬಿದ್ದರೆ ಶುಭ ಹಾಗೂ ಅಶುಭವು ಇದೆ. ಆದರೆ ಇದು ನಿರ್ಧಾರವಾಗುವುದು ಹಲ್ಲಿ ಬಿದ್ದ ಜಾಗ ಹಾಗೂ ಸಮಯ. ಕೆಲವೊಂದು ಸಮಯ ನಮಗೆ ಶುಭವಾಗಿದ್ರೆ, ಇನ್ನೂ ಕೆಲವು ಸಮಯಗಳು ನಮಗೆ ಅಶುಭವಾಗಲಿದೆ. ಅಷ್ಟಕ್ಕೂ ಹಲ್ಲಿ ಮೈ ಮೇಲೆ ಬೀಳುವ ನಂಬಿಕೆಯ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಏನು ಉಲ್ಲೇಖವಾಗಿದೆ ಅಂತ ನೋಡೋಣ.

ಹಿಂದು ಸಂಪ್ರದಾಯದಲ್ಲಿ ಜ್ಯೋತಿಷ್ಯದ ಪ್ರಕಾರ ಪುರುಷ ಅಥವಾ ಮಹಿಳೆಯ ದೇಹದ ಯಾವ ಭಾಗದಲ್ಲಿ ಬಿದ್ದರೆ ಏನು ಅರ್ಥ ಎಂದು ಹೇಳಲಾಗಿದೆ. ಇದರ ನಂಬಿಕೆ ಹಾಗೂ ಅಪನಂಬಿಕೆ ಅವರವರಿಗೆ ಬಿಟ್ಟದ್ದು ಆದರೂ ನಮ್ಮ ಶಾಸ್ತ್ರದ ಪ್ರಕಾರ ಏನು ಹೇಳುತ್ತದೆ ಎಂಬುದನ್ನು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.
ಜ್ಯೋತಿಶಷ್ಯಾಸ್ತ್ರದ ಪ್ರಕಾರ ಪುರುಷರ ಹಾಗೂ ಮಹಿಳೆಯರ ದೇಹ ಯಾವ ಭಾಗದಲ್ಲಿ ಬಿದ್ದರೆ ಏನರ್ಥ, ಯಾವುದು ಶುಭ, ಯಾವುದು ಅಶುಭ ಮುಂದೆ ನೋಡೋಣ:

1. ಹಲ್ಲಿಯು ಪುರುಷರ ದೇಹದ ಯಾವ ಭಾಗದಲ್ಲಿ ಬಿದ್ದರೆ ಏನರ್ಥ
ತಲೆ
ತಲೆಯ ಮೇಲೆ ಬಿದ್ದರೆ ಏನೋ ಜಗಳ, ಕಲಹ ಅಥವ ಮನಸ್ಥಾಪ ಆಗುವ ಸಾಧ್ಯತೆ ಇದೆ ಎಂದರ್ಥ.
ತಲೆಯ ಮೇಲೆ
ತಲೆಯ ಮೇಲೆ ಬಿದ್ದರೆ ಸಾವಿನ ಭಯ ಕಾಡುತ್ತದೆ.
ಕನಸಿನಲ್ಲಿ ಬಿದ್ದರೆ
ನಾವು ಮಲಗಿದ್ದಾಗ ಕನಸು ಕಾಣುವ ವೇಳೆ ಹಲ್ಲಿ ಬಿದ್ದರೆ ಅಧಿಕಾರ ಅಥವಾ ನಮ್ಮ ಆಳ್ವಿಕೆಯನ್ನು ಕಳೆದುಕೊಳ್ಳುವುದನ್ನು ಸೂಚಿಸುತ್ತದೆ.

ಮುಖ
ಮುಖದ ಮೇಲೆ ಬಿದ್ದರೆ ಹಣದ ಲಾಭವನ್ನು ಸೂಚಿಸುತ್ತದೆ.
ಎಡಗಣ್ಣು
ಎಡಗಡೆಯ ಕಣ್ಣಿನ ಮೇಲೆ ಬಿದ್ದರೆ ನಿಮಗೆ ಶುಭ ಸುದ್ಧಿ ಕಾದಿದೆ.
ಬಲಗಣ್ಣು
ಬಲಗಡೆಯ ಕಣ್ಣಿನ ಮೇಲೆ ಬಿದ್ದರೆ ಸೋಲು, ವಿಫಲ ಪ್ರಯತ್ನ, ಏನನ್ನೋ ಕಳೆದುಕೊಳ್ಳುವುದನ್ನು ಸೂಚಿಸುತ್ತದೆ.
ಹಣೆ
ಹಣೆಯ ಮೇಲೆ ಹಲ್ಲಿ ಬಿದ್ದರೆ ಯಾವುದಲ್ಲೂ ಆಸಕ್ತಿ ಇಲ್ಲದಿರುವುದು ಹಾಗೂ ನಮ್ಮ ಪ್ರೀತಿಪಾತ್ರರಿಂದ ದೂರಾಗುವುದನ್ನು ಸೂಚಿಸುತ್ತದೆ.
ಬಲಕೆನ್ನೆ
ಬಲಕೆನ್ನೆಯ ಮೇಲೆ ಹಲ್ಲಿ ಬಿದ್ದರೆ ನಿಮಗೆ ಯಾವುದೋ ದುರ್ವಾತೆ ಕಾದಿದೆ ಎಂದರ್ಥ.
ಎಡ ಕಿವಿ
ಎಡ ಕಿವಿಯ ಮೇಲೆ ಬಿದ್ದರೆ ಲಾಭ ಹಾಗೂ ಸಾಕಷ್ಟು ಹಣ ನಿಮ್ಮದಾಗುತ್ತದೆ.

ಕೈ
ಕೈ ಮೇಲೆ ಬಿದ್ದರೆ ಆರ್ಥಿಕ ನಷ್ಟ ಅಥವಾ ವಿಫಲತೆಯನ್ನು ಸೂಚಿಸುತ್ತದೆ.
ಮೊಣಕೈ
ಮೊಣಕೈ ಮೇಲೆ ಹಲ್ಲಿ ಬಿದ್ದರೆ ಸೌಂದರ್ಯತ್ವ ಅಥವಾ ಉತ್ತಮ ಬದಲಾವಣೆಯನ್ನು ಸೂಚಿಸುತ್ತದೆ.
ಬೆರಳುಗಳು
ಬೆರಳುಗಳ ಮೇಲೆ ಹಲ್ಲಿ ಬಿದ್ದರೆ ನಮ್ಮ ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಸೂಚನೆಯಾಗಿದೆ.
ಬಲಗೈ
ನಮ್ಮ ಬಲಗೈ ಮೇಲೆ ಬಿದ್ದರೆ ಸಮಸ್ಯೆ ಎದುರಾಗಬಹುದು, ಪರಿಸ್ಥಿತಿ ಬಿಗಡಾಯಿಸಬಹುದು ಎಂದರ್ಥ.
ಎಡಗೈ
ನಿಮ್ಮ ಎಡಗೈ ಮೇಲೆ ಹಲ್ಲಿ ಬಿದ್ದರೆ ನಿಮಗೆ ನಾಚಿಕೆ ಅಗುವಂಥ ಸಂದರ್ಭ ಎದುರಾಗುತ್ತದೆ.
ತೊಡೆ
ತೊಡೆಯ ಮೇಲೆ ಬಿದ್ದರೆ ಬಟ್ಟೆ ಕಳೆದುಹೋಗುವ ಅಥವಾ ಹಾಳಾಗುವ ಸೂಚನೆ.
ಮೀಸೆ
ಮೀಸೆಯ ಮೇಲೆ ಬಿದ್ದರೆ ಕೆಲವು ಕಷ್ಟಕರ ಸಂದರ್ಭ ಹಾಗೂ ಪರಿಸ್ಥಿತಿಗಳು ಎದುರಾಗುತ್ತದೆ ಎಂದರ್ಥ.

ಕಾಲು
ಕಾಲಿನ ಮೇಲೆ ಹಲ್ಲಿ ಬಿದ್ದರೆ ಕಷ್ಟದ ಅಥವಾ ಸಮಸ್ಯಾತ್ಮಕ ಪರಿಸ್ಥಿತಿಗಳು ಮುಂದೆ ಎದುರಾಗಲಿದೆ ಎಂದರ್ಥ.
ಕಾಲಿನ ಹಿಂಭಾಗ
ಕಾಲಿನ ಹಿಂಭಾಗ ಹಲ್ಲಿ ಬಿದ್ದರೆ ಪ್ರವಾಸಕ್ಕೆ ಅಥವಾ ಪ್ರಯಾಣಕ್ಕೆ ಸಿದ್ಧರಾಗಿ ಎಂದರ್ಥ.
ಪಾದ
ಪಾದದ ಮೇಲೆ ಹಲ್ಲಿ ಬಿದ್ದರೆ ಇದು ಅನಾರೋಗ್ಯದ ಮುನ್ಸೂಚನೆ.

2. ಮಹಿಳೆಯರ ದೇಹದ ಯಾವ ಭಾಗದಲ್ಲಿ ಹಲ್ಲಿ ಬಿದ್ದರೆ ಏನರ್ಥ?
ತಲೆ
ತಲೆಯ ಮೇಲೆ ಹಲ್ಲಿ ಬಿದ್ದರೆ ಸಾವಿನ ಭಯ ಕಾಡುತ್ತದೆ.
ತಲೆ ಕೂದಲ ಮೇಲೆ
ಹೆಂಗಸರ ತಲೆ ಕೂದಲ ಮೇಲೆ ಹಲ್ಲಿ ಬಿದ್ದರೆ ಅನಾರೋಗ್ಯದ ಮುನ್ಸೂಚನೆ.

ಕಣ್ಣು
ಎಡಗಣ್ಣು
ಎಡಕಣ್ಣಿನ ಮೇಲೆ ಬಿದ್ದರೆ ನಿಮ್ಮ ಪತಿ ಅಥವಾ ಪ್ರೇಮಿಯಿಂದ ಹೆಚ್ಚು ಪ್ರೀತಿ ನಿಮ್ಮದಾಗುತ್ತದೆ.
ಬಲಗಣ್ಣು
ಬಲ ಕಣ್ಣಿನ ಮೇಲೆ ಹಲ್ಲಿ ಬಿದ್ದರೆ ಮಾನಸಿಕ ಒತ್ತಡ ನಿಮ್ಮದಾಗಬಹುದು.
ಬಲಕೆನ್ನೆ
ಬಲಕೆನ್ನೆಯ ಮೇಲೆ ಹಲ್ಲಿ ಬಿದ್ದರೆ ಶುಭ ಸಂಕೇತವಾಗಿದ್ದು, ನೀವು ಗಂಡು ಮಗುವಿನ ತಾಯಿ ಆಗುತ್ತೀರಿ ಎಂದರ್ಥ.
ಬಲ ಕಿವಿಯ ಮೇಲ್ಭಾಗ
ಬಲ ಕಿವಿಯ ಮೇಲ್ಭಾಗ ಹಲ್ಲಿ ಬಿದ್ದರೆ ಹಣದ ಲಾಭ ನಿಮಗಿದೆ ಎಂದರ್ಥ.

ತುಟಿಯ ಮೇಲೆ
ತುಟಿಯ ಮೇಲೆ ಹಲ್ಲಿ ಬಿದ್ದರೆ ಜಗಳಕ್ಕೆ ಸಿದ್ಧರಾಗಿ ಎಂದರ್ಥ.
ತಟಿಯ ಕೆಳಗೆ
ತುಟಿಯ ಕೆಳಗೆ ಹಲ್ಲಿ ಬಿದ್ದರೆ ನಿಮಗೆ ಹೊಸ ವಸ್ತು ಸಿಗುತ್ತದೆ ಎಂದರ್ಥ.
ಎರಡು ತುಟಿ
ನಿಮ್ಮ ಎರಡು ತುಟಿಗಳ ಮೇಲೆ ಹಲ್ಲಿಬಿದ್ದರೆ ಜಗಳ ಅಥವಾ ಕಲಹ ಎದುರಾಗಬಹುದು ಎಂದರ್ಥ.
ಹಿಂಭಾಗ
ದೇಹದ ಹಿಂಭಾಗ ಹಲ್ಲಿ ಬಿದ್ದರೆ ಸಾವಿನ ಸುದ್ದಿ ನಿಮ್ಮದಾಗಬಹುದು ಎಂದರ್ಥ.

ಕೈ
ಕೈಗಳ ಮೇಲೆ ಹಲ್ಲಿ ಬಿದ್ದರೆ ಆರ್ಥಿಕ ಲಾಭ ಇದೆ ಎಂದು.
ಉಗುರು
ನಿಮ್ಮ ಉಗುರುಗಳ ಮೇಲ ಹಲ್ಲಿ ಬಿದ್ದರೆ ಜಗಳ ಅಥವಾ ವಾದ-ವಿವಾದದ ಸೂಚನೆ.
ಎಡಗೈ
ನಿಮ್ಮ ಎಡಗೈ ಮೇಲೆ ಹಲ್ಲಿ ಬಿದ್ದರೆ ನಿಮಗೆ ಮಾನಸಿಕ ಒತ್ತಡ ಎದುರಾಗುತ್ತದೆ ಎಂಬುದರ ಮುನ್ಸೂಚನೆ.
ಬೆರಳು
ನಿಮ್ಮ ಬೆರಳುಗಳ ಮೇಲೆ ಹಲ್ಲಿ ಬಿದ್ದರೆ ನಿಮಗೆ ಆಭರಣಗಳು ಸಿಗುತ್ತದೆ ಎಂದರ್ಥ.
ಬಲಗೈ
ಬಲ ಮುಂಗೈ ಮೇಲೆ ಹಲ್ಲಿ ಬಿದ್ದರೆ ರೋಮಾನ್ಸ್, ಪ್ರೀತಿ,ಪ್ರೇಮ ಪ್ರಣಯದ ಸಂದರ್ಭ ಮುಂದೆ ಇದೆ ಎಂಬ ಸೂಚನೆಯಾಗಿದೆ.
ಭುಜ
ಭುಜಗಳ ಮೇಲೆ ಹಲ್ಲಿ ಬಿದ್ದರೆ ನಿಮಗೆ ಆಭರಣ/ಒಡವೆಗಳು ಮುಂದೆ ಸಿಗಲಿದೆ ಎಂದರ್ಥ.

ಕಾಲು
ತೊಡೆ
ತೊಡೆಯ ಮೇಲೆ ಹಲ್ಲಿ ಬಿದ್ದರೆ ನೀವು ರೋಮಾನ್ಸ್, ಪ್ರೀತಿ,ಪ್ರೇಮ ಪ್ರಣಯವನ್ನು ಬಯಸುತ್ತಿದ್ದೀರಿ ಎಂದರ್ಥ.
ಮೊಣಕಾಲು
ಮೊಣಕಾಲಿನ ಮೇಲೆ ಹಲ್ಲಿ ಬಿದ್ದರೆ ಪ್ರೀತಿ, ಒಲವು ಮತ್ತು ಆತ್ಮೀಯತೆಯ ಸಂಕೇತ.
ಪಾದ
ಪಾದದ ಮೇಲೆ ಹಲ್ಲಿ ಬಿದ್ದರೆ ಸಮಸ್ಯೆ ಅಥವಾ ಗೊಂದಲದ ಸಂಕೇತ.
ಕಾಲಿನ ಹಿಂಭಾಗ
ಕಾಲಿನ ಹಿಂಭಾಗ ಬಿದ್ದರೆ ನೆಂಟರು, ಸಂಬಂಧಿಕರು ಅಥವಾ ಸ್ನೇಹಿತರು ಮನೆಗೆ ಬರುವ ಸೂಚನೆ.
ಬಲಗಾಲು
ಬಲಗಾಲಿನ ಮೇಲೆ ಹಲ್ಲಿ ಬಿದ್ದರೆ ನಿಮಗೆ ಸೋಲು ಅಥವಾ ನಷ್ಟವಾಗುವ ಸಾಧ್ಯತೆ ಇದೆ.
ಕಾಲ್ಬೆರಳು
ಕಾಲಿನ ಬೆರಳ ಮೇಲೆ ಹಲ್ಲಿ ಬಿದ್ದರೆ ಗಂಡು ಮಗು ಜನಿಸುತ್ತದೆ ಎಂದರ್ಥ.



Click it and Unblock the Notifications