ಹಾಸ್ಯಪ್ರಜ್ಞೆಯ ವಿಷಯದಲ್ಲಿ ನಿಮ್ಮ ರಾಶಿ ಏನು ಹೇಳುತ್ತದೆ?

ನಕ್ಕರೆ ಆಯಸ್ಸು ಹೆಚ್ಚುತ್ತದೆ ಎಂಬ ಮಾತಿನಂತೆ ನಗುವೆಂಬುದು ನಮ್ಮ ಜೀವನದ ಬಹು ಮುಖ್ಯ ಅಂಗ. ನಗುವಿಲ್ಲದ ಜೀವನ ನಿಜಕ್ಕೂ ಬೇಸರ. ಮನೆಯಲ್ಲಿ ಯಾರಾದರೂ ಒಬ್ಬ ನಗೆಗಾರನಿದ್ದರೆ ಆ ಇಡೀ ಮನೆ ಖುಷಿಯಿಂದ ಆರೋಗ್ಯದಿಂದ ಕೂಡಿರುತ್ತದೆ. ನಗುವಿನ ಶಕ್ತಿಯೇ ಅಂತಹದ್ದು.

ನಗುವೆಂಬುದು ಇಬ್ಬರನ್ನು ಹತ್ತಿರ ಸೆಳೆಯುತ್ತದೆ ಮತ್ತು ಇಬ್ಬರ ಗೆಳೆತನವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಕೇವಲ ಒಂದು ನಗು ನಮ್ಮ ಬಿಡುವಿಲ್ಲದ ಜೀವನದಲ್ಲಿ ಒಂದು ಸಣ್ಣ ವಿರಾಮ ತೆಗೆದುಕೊಳ್ಳಲು ಮತ್ತು ನಮ್ಮ ಬಗ್ಗೆ ನಾವು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

humor sense

ನಾವು ನಗದೇ ಇದ್ದರೆ ನಮಗಾಗುವ ನಷ್ಟವನ್ನು ನಾವೇ ಲೆಕ್ಕ ಹಾಕಿಕೊಳ್ಳಬೇಕು. ಅಲ್ಲವೇ? ನಗುವಿನ ವಿಷಯದಲ್ಲಿ ಒಂದೊಂದು ರಾಶಿಯ ಗುಣ ಲಕ್ಷಣಗಳು ಒಂದೊಂದು ರೀತಿ ಇರುತ್ತವೆ. ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮ ಗುಣ ಲಕ್ಷಣಗಳು ಹೇಗಿರುವವು ಎಂದು ತಿಳಿದುಕೊಳ್ಳುವ ಕಾತುರ ನಿಮಗಿದ್ದರೆ ಈ ಲೇಖನವನ್ನು ಪೂರ್ತಿ ಓದಿ.\

ಮೇಷ ರಾಶಿಯವರು ಹಾಸ್ಯ ಪ್ರಸಂಗದವರು

ಮೇಷ ರಾಶಿಯವರು ಹಾಸ್ಯ ಪ್ರಸಂಗದವರು

ಒಂದು ವೇಳೆ ನಿಮ್ಮ ಜೊತೆ ಮೇಷ ರಾಶಿಯವರಿದ್ದರೆ, ನಿಮಗೆ ಬೇಸರವೇ ಆಗುವುದಿಲ್ಲ. ಯಾವಾಗಲೂ ಹಾಸ್ಯ ಪ್ರಿಯರಾಗಿ ತಾವು ನಕ್ಕು ತಮ್ಮ ಜೊತೆ ಇರುವವರನ್ನೂ ಸಂತೋಷವಾಗಿಡುವ ಗುಣ ಇವರಲ್ಲಿರುತ್ತದೆ. ಇವರಿಗೆ ಸಂದರ್ಭಗಳಿಗೆ ಅನುಗುಣವಾಗಿ ಹಾಸ್ಯಗಳು ಮನಸ್ಸಿನಲ್ಲಿ ಉದ್ಭವವಾಗುತ್ತವೆ. ಕೆಲವೊಮ್ಮೆ ಬಹಳ ಆಶ್ಚರ್ಯಕರವಾಗಿರುತ್ತವೆ ಕೂಡ. ಆದರೆ ಇವರಿಗೆ ಸ್ವಲ್ಪ ಚಾತುರ್ಯದ ಕೊರತೆ ಕಂಡು ಬರುತ್ತದೆ. ತಮ್ಮ ಪ್ರೀತಿಪಾತ್ರರನ್ನು ಪಡೆಯುವಲ್ಲಿ ವಿಫಲತೆಯನ್ನು ಕಾಣುತ್ತಾರೆ.

ವೃಷಭ ರಾಶಿಯವರು ಬೇರೆಯವರಿಂದ ಹಾಸ್ಯವನ್ನು ನಿರೀಕ್ಷಿಸುವವರಾಗಿರುತ್ತಾರೆ

ವೃಷಭ ರಾಶಿಯವರು ಬೇರೆಯವರಿಂದ ಹಾಸ್ಯವನ್ನು ನಿರೀಕ್ಷಿಸುವವರಾಗಿರುತ್ತಾರೆ

ಸಾಮಾನ್ಯವಾಗಿ ವೃಷಭ ರಾಶಿಯವರು ಖುಷಿ ಸಂತೋಷವನ್ನು ಇನ್ನೊಬ್ಬರಿಂದ ನಿರೀಕ್ಷಿಸುತ್ತಾರೆ. ಇನ್ನೊಬ್ಬರು ಮಾಡುವ ತಮಾಷೆಯನ್ನು ಅತ್ಯಂತ ಖುಷಿಯಿಂದ ನಕ್ಕು ನಲಿದು ಆನಂದಿಸುತ್ತಾರೆ. ಆದರೆ ತಾವು ಮಾತ್ರ ತಮ್ಮ ಪ್ರೀತಿಪಾತ್ರರನ್ನು ಖುಷಿಯಾಗಿಡುವಲ್ಲಿ ಸೋಲುತ್ತಾರೆ. ಯಾವುದಾದರೂ ಹಾಸ್ಯ ಪ್ರಸಂಗವನ್ನು ವಿವರಿಸುವಲ್ಲಿ ಪೂರ್ಣತೆಯನ್ನು ಸಾಧಿಸುವುದಿಲ್ಲ.

ಮಿಥುನ ರಾಶಿಯವರು ಹಾಸ್ಯಕ್ಕೆ ಹಾಸ್ಯವನ್ನು ಉಂಟು ಮಾಡುವವರು

ಮಿಥುನ ರಾಶಿಯವರು ಹಾಸ್ಯಕ್ಕೆ ಹಾಸ್ಯವನ್ನು ಉಂಟು ಮಾಡುವವರು

ಹುಟ್ಟು ಹಾಸ್ಯಗಾರರು ಎಂದರೆ ಅದು ಮಿಥುನ ರಾಶಿಯವರು. ಸದಾ ನಿಮ್ಮ ಕಾಲೆಳೆಯುವ ಮತ್ತು ತಮಾಷೆ ಮಾಡುವ ಪ್ರವೃತ್ತಿಯಿಂದ ಪ್ರಸಿದ್ಧಿ ಆಗುತ್ತೀರಿ. ಆದರೆ ನಿಮ್ಮ ಮನಸ್ಸು ಮಾತ್ರ ಮಗುವಿನ ತರಹ. ಕೆಲವೊಮ್ಮೆ ನಿಮ್ಮ ಮುಗ್ಧತೆಯಿಂದ ನಿಮ್ಮ ಅಕ್ಕಪಕ್ಕದವರನ್ನೂ ನಗಿಸಿ ನೀವು ಕೂಡ ಸಂತೋಷದಿಂದಿರುತ್ತೀರಿ. ನಿಮ್ಮ ಈ ಗುಣದಿಂದಲೇ ನೀವು ಇನ್ನೊಬ್ಬರಿಗೆ ಇಷ್ಟವಾಗುತ್ತೀರಿ ಮತ್ತು ಆಡುವ ಮಾತುಗಳ ಮೇಲೆ ಬಹಳವೇ ಗಮನಕೊಟ್ಟು ಇನ್ನೊಬ್ಬರನ್ನು ನಿಮ್ಮ ಬಳಿ ಸೆಳೆಯುತ್ತೀರಿ. ಅಂದರೆ ನಿಮಗೆ ಚಾತುರ್ಯತೆ ಸಹ ಅಷ್ಟೇ ಇರುತ್ತದೆ.

ಕರ್ಕಾಟಕ ರಾಶಿಯವರು ಮನಸ್ಸಿನೊಳಗೆ ಖುಷಿ ಪಡುವವರು

ಕರ್ಕಾಟಕ ರಾಶಿಯವರು ಮನಸ್ಸಿನೊಳಗೆ ಖುಷಿ ಪಡುವವರು

ಈ ರಾಶಿಯವರು ಒಬ್ಬರು ಮಾಡುವ ಹಾಸ್ಯವನ್ನು ಇತರರ ಜೊತೆ ಕುಳಿತು ಖುಷಿಯಾಗಿ ಯಾರಿಗೂ ಬೇಸರವಾಗದಂತೆ ಇಷ್ಟ ಪಟ್ಟು ಆನಂದಿಸುತ್ತಾರೆ. ಆದರೆ ಮನಸ್ಸಿನೊಳಗೆ ಮಾತ್ರ ಮಗುವಿನ ರೀತಿ ಮುಗ್ಧತೆ ಇದ್ದು, ನಿಮ್ಮ ಹಾಸ್ಯ ಕೇವಲ ನಿಮಗೆ ಮಾತ್ರ ಖುಷಿ ನೀಡುವುದೇ ಹೊರತು ಬೇರೆಯವರು ಅದರಿಂದ ಆನಂದ ಅನುಭವಿಸಲಾರರು. ಇದು ನಿಜಕ್ಕೂ ಸ್ವಲ್ಪ ಬೇಸರವಾಗುವ ವಿಷಯ.

ಸಿಂಹ ರಾಶಿಯವರು ತಮ್ಮ ಮಾತಿನಲ್ಲಿ ತೂಕ ಹೊಂದಿರುತ್ತಾರೆ

ಸಿಂಹ ರಾಶಿಯವರು ತಮ್ಮ ಮಾತಿನಲ್ಲಿ ತೂಕ ಹೊಂದಿರುತ್ತಾರೆ

ಈ ರಾಶಿಯವರು ಬಹಳ ಬುದ್ಧಿವಂತರು. ಪ್ರತಿ ಸಂದರ್ಭದಲ್ಲೂ ಇನ್ನೊಬ್ಬರಿಗೆ ಮಾದರಿಯಾಗಿರುತ್ತೀರಿ ಮತ್ತು ನೀವು ನಗುವಾಗ ಸಹ ಜಾಗ್ರತೆ ವಹಿಸುತ್ತೀರಿ. ನಿಮ್ಮ ಸ್ವಭಾವ ಸೂಕ್ಷ್ಮತೆಯಿಂದ ಕೂಡಿದ್ದರೂ ಸಹ ಸದಾ ದೊಡ್ಡವರಂತೆ ವರ್ತಿಸುತ್ತೀರಿ. ಭೌತಿಕವಾಗಿ ನೀವು ಸ್ವಲ್ಪ ಉದ್ವಿಗ್ನಗೊಂಡಂತೆ ಕಂಡರೂ ನಿಮ್ಮ ಸ್ವಭಾವವನ್ನು ಇತರರನ್ನು ನಿಮ್ಮತ್ತ ಸೆಳೆಯುವ ವಿಷಯದಲ್ಲಿ ಉಪಯೋಗಿಸುತ್ತೀರಿ.

ಕನ್ಯಾ ರಾಶಿಯವರು ತೀರಾ ನಾಚಿಕೆ ಸ್ವಭಾವ ಹೊಂದಿರುವವರು

ಕನ್ಯಾ ರಾಶಿಯವರು ತೀರಾ ನಾಚಿಕೆ ಸ್ವಭಾವ ಹೊಂದಿರುವವರು

ನಿಮಗೆ ಹಾಸ್ಯಪ್ರಜ್ಞೆ ಅಷ್ಟಾಗಿ ಇರುವುದಿಲ್ಲ. ನಿಮ್ಮ ಸುತ್ತಮುತ್ತಲಿನವರು ಮಾಡುವ ಹಾಸ್ಯವನ್ನು ಅನುಭವಿಸುವಲ್ಲಿ ನೀವು ವಿಫಲತೆ ಕಾಣುತ್ತೀರಿ ಮತ್ತು ಸಾರ್ವಜನಿಕವಾಗಿ ಇತರರ ಜೊತೆ ಸುಲಭವಾಗಿ ಬೆರೆಯಲು ನಾಚಿಕೆ ಪಡುತ್ತೀರಿ. ಕೆಲವೊಮ್ಮೆ ಇತರರು ಮಾಡುವ ಹಾಸ್ಯದಿಂದ ನಿಮಗೆಲ್ಲಿ ತೊಂದರೆಯಾಗುತ್ತದೆಯೋ ಎಂದು ಆತಂಕಕ್ಕೊಳಗಾಗುವಿರಿ ಮತ್ತು ನೀವು ನಗುವಾಗ ತುಂಬಾ ವಿವೇಚನೆಯನ್ನು ಬಳಕೆ ಮಾಡುವಿರಿ. ನೀವು ಇನ್ನೊಬ್ಬರಿಗೆ ಹಾಸ್ಯದಿಂದ ಖುಷಿ ಕೊಡಲಾರಿರಿ

ತುಲಾ ರಾಶಿಯವರು ಹಾಸ್ಯಪ್ರಜ್ಞೆಯ ಸ್ವಭಾವ ಹೊಂದಿರುತ್ತಾರೆ

ತುಲಾ ರಾಶಿಯವರು ಹಾಸ್ಯಪ್ರಜ್ಞೆಯ ಸ್ವಭಾವ ಹೊಂದಿರುತ್ತಾರೆ

ತುಲಾ ರಾಶಿಯವರು ಹಾಸ್ಯಪ್ರಜ್ಞೆಯನ್ನು ಹೊಂದಿರುವವರಾಗಿದ್ದು ಅದನ್ನು ಸರಿಯಾದ ಸಮಯದಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಚಾಣಾಕ್ಷತೆಯನ್ನು ಹೊಂದಿರುತ್ತಾರೆ. ಸರಳವಾಗಿ ಹೇಳಬೇಕೆಂದರೆ ಬೇರೊಬ್ಬರಿಂದ ಖುಷಿಯನ್ನು ಹೆಚ್ಚಾಗಿ ನಿರೀಕ್ಷಿಸಿ, ಇವರೂ ಖುಷಿಯನ್ನು ಅನುಭವಿಸಿ, ಮತ್ತೊಬ್ಬರಿಗೂ ತಮ್ಮ ಹಾಸ್ಯ ಮಾಡುವ ಪ್ರವೃತ್ತಿಯಿಂದ ಖುಷಿಯನ್ನು ನೀಡುತ್ತಾರೆ.

ವೃಶ್ಚಿಕ ರಾಶಿ, ಬೇಸರ ಮತ್ತು ಖುಷಿ ಎರಡು ನಿಮ್ಮಲ್ಲಿರುತ್ತದೆ

ವೃಶ್ಚಿಕ ರಾಶಿ, ಬೇಸರ ಮತ್ತು ಖುಷಿ ಎರಡು ನಿಮ್ಮಲ್ಲಿರುತ್ತದೆ

ಈ ರಾಶಿಯವರು ಅತ್ಯುತ್ತಮ ಹಾಸ್ಯ ನಟರಾಗುವ ಎಲ್ಲಾ ಗುಣಗಳನ್ನು ಹೊಂದಿರುತ್ತಾರೆ. ಜೊತೆಗೆ ತಮ್ಮ ವಿಪರೀತ ಬೇಸರದ ಸ್ವಭಾವದಿಂದ ಇನ್ನೊಬ್ಬರಿಗೂ ಬೇಸರವನ್ನುಂಟು ಮಾಡುತ್ತಾರೆ. ಇವರು ಪ್ರತಿಯೊಂದು ವಿಷಯಕ್ಕೂ ನಗುತ್ತಾರೆ ಆದರೆ ಇವರ ಜೊತೆ ಇನ್ನೊಬ್ಬರನ್ನು ನಗಲಿ ಎಂದು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಅದು ಸಾಧ್ಯವಾಗದಿದ್ದಾಗ ಬೇಸರಕ್ಕೆ ಒಳಗಾಗುತ್ತಾರೆ.

ಧನಸು ರಾಶಿಯವರು ಆಕರ್ಷಣೆಯ ಕೇಂದ್ರಬಿಂದುವಾಗುತ್ತಾರೆ

ಧನಸು ರಾಶಿಯವರು ಆಕರ್ಷಣೆಯ ಕೇಂದ್ರಬಿಂದುವಾಗುತ್ತಾರೆ

ಈ ರಾಶಿಯವರು ತಮ್ಮ ಹೆಚ್ಚಿನ ಹಾಸ್ಯ ಸ್ವಭಾವದಿಂದ ಇತರರನ್ನು ತಮ್ಮತ್ತ ಸೆಳೆಯುವ ಸಲುವಾಗಿ ಏನಾದರೊಂದು ಹಾಸ್ಯ ಪ್ರಸಂಗವನ್ನು ಉಂಟು ಮಾಡುವ ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ. ಸಭೆಗಳಲ್ಲಿ ಹಾಗೂ ಜನರು ಸೇರಿದ ಸಂದರ್ಭದಲ್ಲಿ ಒಳ್ಳೆಯ ಮಾತುಗಾರರಾಗಿ ಮತ್ತು ಹಾಸ್ಯಗಾರರಾಗಿ ಪ್ರಸಿದ್ಧತೆಯನ್ನು ಪಡೆದು ಸಂದರ್ಭ ಜಡವಾಗಿರುವ ಸಮಯದಲ್ಲಿ ತಮ್ಮ ಅಮೋಘ ಮಾತುಗಾರಿಕೆಯಿಂದ ಇಡೀ ಸಭೆಯನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತಾರೆ.

ಮಕರ ರಾಶಿಯವರು ಸೂಕ್ಷ್ಮತೆಯ ಹಾಸ್ಯಪ್ರಜ್ಞೆಯ ಜನರು

ಮಕರ ರಾಶಿಯವರು ಸೂಕ್ಷ್ಮತೆಯ ಹಾಸ್ಯಪ್ರಜ್ಞೆಯ ಜನರು

ಈ ರಾಶಿಯವರು ಅಷ್ಟಾಗಿ ಹಾಸ್ಯವನ್ನು ಅನುಭವಿಸುವುದಿಲ್ಲ ಜೊತೆಗೆ ಹಾಸ್ಯವಿರುವ ವಿಷಯವನ್ನು ಬಹಳ ತಡವಾಗಿ ಅರ್ಥ ಮಾಡಿಕೊಳ್ಳುವ ಪ್ರವೃತ್ತಿ ಹೊಂದಿರುತ್ತಾರೆ. ಇವರಿಗೆ ಹಾಸ್ಯವನ್ನು ಉಂಟು ಮಾಡಿದ ಪ್ರಸಂಗವನ್ನು ನಂತರದ ದಿನಗಳಲ್ಲಿ ಶ್ಲಾಘಿಸುತ್ತಾರೆ.

ಕುಂಭ ರಾಶಿಯವರು ಚತುರತೆಯ ಹಾಸ್ಯಗಾರರು

ಕುಂಭ ರಾಶಿಯವರು ಚತುರತೆಯ ಹಾಸ್ಯಗಾರರು

ಉತ್ತಮ ಹಾಸ್ಯ ಪ್ರಜ್ಞೆ ಹೊಂದಿರುವ ಜನರಲ್ಲಿ ಕುಂಭ ರಾಶಿಯವರು ಸಹ ಸೇರಿರುತ್ತಾರೆ. ವಿಷಯವನ್ನು ತೀರಾ ಆಳವಾಗಿ ಯೋಚಿಸದೇ ಸಂದರ್ಭವನ್ನು ಅರ್ಥ ಮಾಡಿಕೊಂಡು ಬಹಳ ಬೇಗನೆ ಪ್ರತಿಕ್ರಿಯೆ ನೀಡುವ ಸ್ವಭಾವ ಹೊಂದಿರುತ್ತಾರೆ. ನಿಮ್ಮ ನಿಜ ಹಾಸ್ಯ ಸ್ವಭಾವದಿಂದ ಇತರರನ್ನು ಸಂತೋಷವಾಗಿಡುವ ಬುದ್ಧಿವಂತಿಕೆ ನಿಮ್ಮಲ್ಲಿ ಇರುತ್ತದೆ.

English summary

What Is Your Zodiac Sign Says About Your Humor Sense

Laughing has so many good effect on our health. Laughing is health but make people to laugh is a skill. Here we have told what your zodiac sign says about your humor sense, Read on.
Story first published: Thursday, January 23, 2020, 14:41 [IST]
X
Desktop Bottom Promotion