For Quick Alerts
ALLOW NOTIFICATIONS  
For Daily Alerts

ವಾರ ಭವಿಷ್ಯ- ಸೆಪ್ಟೆಂಬರ್ 22ರಿಂದ 28ರ ತನಕ

|

ಸಮಯ ಎನ್ನುವುದು ನಮ್ಮ ಬದುಕಿನ ಪಾಠವನ್ನು ಕಲಿಸುತ್ತದೆ. ಸಮಯಕ್ಕೆ ತಕ್ಕಂತೆ ನಾವು ನಮ್ಮನ್ನು ಬದಲಿಸಿಕೊಳ್ಳುವ ಕೌಶಲ್ಯವನ್ನು ಕಲಿತಿರಬೇಕು. ಇಲ್ಲವಾದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಬದಲಾವಣೆ ಎನ್ನುವುದು ನಿರಂತರವಾಗಿ ಹರಿಯುವ ನದಿಯಂತೆ ಅದು ಹೇಗೆ ಬರುತ್ತದೆಯೋ ಹಾಗೆ ನಾವು ಸ್ವೀಕರಿಸಬೇಕಾಗುವುದು.

horoscope

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರ ಸಾಕಷ್ಟು ಗ್ರಹಗಳ ಬದಲಾವಣೆಗಳು ಉಂಟಾಗುವುದು ಅವುಗಳ ಪ್ರಭಾವ ರಾಶಿಚಕ್ರಗಳ ಮೇಲೆ ಗಣನೀಯವಾಗಿರುತ್ತವೆ. ಆ ಬದಲಾವಣೆಗಳು ನಿಮ್ಮ ಜೀವನದಲ್ಲಿ ಹೇಗಿರುತ್ತದೆ ಮುಂದಿರುವ ವಿವರಣೆಯನ್ನು ಪರಿಶೀಲಿಸಿ. ಈ ಲೇಖನದಲ್ಲಿ ಪ್ರತಿಯೊಂದು ರಾಶಿಗಳ ವಾರಭವಿಷ್ಯ ನಿಮಗೆ ತಿಳಿಸಿಕೊಡಲಿದ್ದೇವೆ.

ಮೇಷ

ಮೇಷ

ಕೌಟುಂಬಿಕ ಜೀವನ ಸಂತೋಷದಿಂದ ತುಂಬಿರುತ್ತದೆ. ನೀವು ಯಾವುದೇ ರೀತಿಯ ಗೊಂದಲದಲ್ಲಿದ್ದರೆ, ಈ ಸಮಯದಲ್ಲಿ ನಿಮ್ಮ ಇಡೀ ಕುಟುಂಬವು ನಿಮಗಾಗಿ ನಿಲ್ಲುತ್ತದೆ. ನೀವು ಮಾಡಿರುವ ಸಹಾಯವು ನಿಮ್ಮ ನೆರವಿಗೆ ಬರಲಿದೆ. ನಿಮ್ಮ ನೆರವಿಗೆ ಬರುವವರ ಸಲಹೆಯನ್ನು ಅನುಸರಿಸುವುದು ಉತ್ತಮ. ಈ ವಾರ ನಿಮ್ಮ ಸುತ್ತ ಸಕಾರಾತ್ಮಕ ಶಕ್ತಿಯಿಂದ ಸುತ್ತುವರೆದಿರಲಿದೆ. ನೀವು ಎಲ್ಲಿಗೆ ಹೋದರೂ ಜನರು ನಿಮ್ಮತ್ತ ಆಕರ್ಷಿತರಾಗುತ್ತಾರೆ ಮತ್ತು ನೀವು ಎಲ್ಲರ ಗಮನವನ್ನು ಸೆಳೆಯುವಿರಿ. ವಿಶೇಷ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆಯಿದೆ. ಆದರೆ ಯಾವುದೇ ಭಾವನಾತ್ಮಕ ನಿರ್ಧಾರವನ್ನು ತೆಗೆದುಕೊಳ್ಳದಿರುವುದು ಒಳ್ಳೆಯದು. ದಂಪತಿಗಳಿಗೆ ಒಳ್ಳೆಯ ಸಮಯ. ನಿಮ್ಮ ಸಂಗಾತಿಗೆ ಹೆಚ್ಚು ಪ್ರಣಯ ಮನಸ್ಥಿತಿ ಇರುವ ಸಾಧ್ಯತೆಯಿದೆ. ಹಣದ ವಿಷಯದಲ್ಲಿ ಈ ವಾರ ನಿಮಗೆ ಮಿಶ್ರ ಪರಿಸ್ಥಿತಿ ಇರಲಿದೆ. ಹೊಸ ಆದಾಯದ ಮೂಲ ಲಭಿಸುವ ಸಾಧ್ಯತೆ ಇರುವುದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು. ಆದರೆ ಕೊಂಚ ಶ್ರಮ ಪಡಬೇಕಾಗುತ್ತದೆ. ಈ ವಾರ ಆರೋಗ್ಯ ವಿಷಯಗಳು ಸಾಮಾನ್ಯವಾಗಿಯೇ ಇರುತ್ತವೆ. ವಾರದ ಕೊನೆಯಲ್ಲಿ, ಮಗುವಿನ ಕಡೆಯಿಂದ ಕೆಲವು ಸಮಸ್ಯೆಗಳು ಬರಬಹುದು ಎಚ್ಚರದಿಂದಿರಿ.

ಅದೃಷ್ಟ ಬಣ್ಣ: ಕಡು ಹಸಿರು

ಅದೃಷ್ಟ ಸಂಖ್ಯೆ: 6

ಅದೃಷ್ಟ ದಿನ: ಬುಧವಾರ

ವೃಷಭ

ವೃಷಭ

ಈ ವಾರ ಉತ್ಸಾಹದಿಂದ ತುಂಬಿರುತ್ತೀರಿ. ಕೆಲಸದ ಮೇಲೆ ಸಂಪೂರ್ಣವಾಗಿ ಗಮನ ಹರಿಸುತ್ತೀರಿ. ಉದ್ಯೋಗದಲ್ಲಿರುವವರು ಕೆಲಸವನ್ನು ಬದಲಾಯಿಸಲು ಚಿಂತಿಸಬಹುದು. ಬಹುಶಃ ನೀವು ಉತ್ತಮ ಅವಕಾಶಗಳನ್ನು ಸಹ ಪಡೆಯುವ ನಿರೀಕ್ಷೆ ಇದೆ. ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಅಭಿವೃದ್ಧಿ ಸಾಧಿಸುತ್ತಾರೆ. ಈ ವಾರ ಕೆಲಸದ ಸಂಬಂಧ ಸಾಕಷ್ಟು ಪ್ರವಾಸ ಮಾಡುವ ಸಾಧ್ಯತೆ ಇದೆ. ಸಂಬಂಧಿಕರೊಂದಿಗೆ ವ್ಯವಹಾರದಲ್ಲಿ ಯಾವುದೇ ರೀತಿಯ ಪಾಲುದಾರಿಕೆಯನ್ನು ತಪ್ಪಿಸಬೇಕು. ಕೌಟುಂಬಿಕ ವಾತಾವರಣವು ಉತ್ತಮವಾಗಿರಲಿದೆ. ಸಂಬಂಧಗಳು ಬಲವಾಗಿರುತ್ತದೆ ಮತ್ತು ಅಗತ್ಯ ಬೆಂಬಲ ಸಿಗಲಿದೆ. ಯಾವುದೇ ವಿಷಯದ ಬಗ್ಗೆ ಹೆತ್ತವರ ಒಪ್ಪಿಗೆಯನ್ನು ನೀವು ಬಯಸುವುದಾದರೆ ಈ ಸಮಯದಲ್ಲಿ ಅವರ ನಂಬಿಕೆಯನ್ನು ಗೆಲ್ಲಬಹುದು. ಪೋಷಕರು ನಿಮ್ಮನ್ನು ಹೆಚ್ಚಾಗಿ ಅರ್ಥಮಾಡಿಕೊಳ್ಳಲಿದ್ದಾರೆ. ವೈವಾಹಿಕ ಜೀವನದ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಸಂಗಾತಿಯೊಂದಿಗಿನ ಸಂಬಂಧವು ಸುಧಾರಿಸುತ್ತದೆ. ಇಬ್ಬರೂ ಪರಸ್ಪರ ಉತ್ತಮ ಸಮಯವನ್ನು ಹೊಂದಬಹುದು. ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಮತ್ತು ಅವರ ಆರೋಗ್ಯದಲ್ಲಿ ಪ್ರಗತಿ ಸಾಧಿಸಲಿದ್ದಾರೆ. ಮಕ್ಕಳಿಂದಲೂ ಸಂತೋಷ ನಿರೀಕ್ಷಿಸಬಹುದು. ಬಹುತೇಕ ಪ್ರೀತಿಯ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಈ ವಾರ ನಿಮ್ಮ ಗೆಳೆಯ/ಗೆಳತಿಯನ್ನು ಭೇಟಿಯಾಗಲು ಹಲವು ಅವಕಾಶಗಳಿವೆ. ಹಣದ ವಿಷಯದಲ್ಲಿ ಉತ್ತಮವಾಗಿರುತ್ತದೆ. ನಿಮ್ಮ ಆರ್ಥಿಕ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಆರೋಗ್ಯದಲ್ಲಿ ಏರಿಳಿತಗಳನ್ನು ನೋಡಬಹುದು, ಅತಿಯಾದ ಕೆಲಸ ಮತ್ತು ಕಠಿಣ ಪರಿಶ್ರಮದಿಂದಾಗಿ ನೀವು ದಣಿಯದಿರಿ.

ಅದೃಷ್ಟ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ:43

ಅದೃಷ್ಟ ದಿನ: ಸೋಮವಾರ

ಮಿಥುನ

ಮಿಥುನ

ಆರೋಗ್ಯದ ದೃಷ್ಟಿಯಿಂದ ಈ ವಾರ ನಿಮಗೆ ತುಂಬಾ ಒಳ್ಳೆಯದು. ದೈಹಿಕ ಸದೃಢತೆಗೆ ವ್ಯಾಯಾಮ ಅನುಸರಿಸದೆ ಆಹಾರ ಪದ್ಧತಿಯಲ್ಲಿ ದೊಡ್ಡ ಬದಲಾವಣೆಗಳನ್ನು ತರುತ್ತೀರಿ. ದಂಪತಿಗಳಿಬ್ಬರೂ ಸಣ್ಣ ವಿಷಯಗಳ ಮೇಲೆ ಕಣ್ಣಿಟ್ಟಿರುತ್ತೀರಿ, ಈ ಕಾರಣದಿಂದಾಗಿ ನಿಮ್ಮ ಸಂಬಂಧವು ದುರ್ಬಲವಾಗಬಹುದು. ಇದಲ್ಲದೆ ಸಂಗಾತಿಯನ್ನು ಅನುಮಾನಿಸುವ ನಿಮ್ಮ ಗುಣ ಅವರನ್ನೂ ಮತ್ತಷ್ಟು ದೂರವಾಗಿಸುತ್ತದೆ. ನಿಮ್ಮಿಬ್ಬರ ತಪ್ಪು ತಿಳುವಳಿಕೆಯನ್ನು ತೆಗೆದುಹಾಕಲು ಅವರೊಂದಿಗೆ ಮುಕ್ತವಾಗಿ ಮಾತನಾಡುವುದು ಉತ್ತಮ. ಕೌಟುಂಬಿಕ ಜೀವನವು ಸಂತೋಷವಾಗಿರುತ್ತದೆ. ಸಂಗಾತಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದುವುದರಿಂದ ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳನ್ನು ಪರಿಹರಿಸುವಲ್ಲಿ ಸಾಕಷ್ಟು ಸಹಾಯವಾಗಬಹುದು. ತಾಯಿಯ ಆರೋಗ್ಯದಲ್ಲಿ ನೀವು ದೊಡ್ಡ ಸುಧಾರಣೆಯನ್ನು ನಿರೀಕ್ಷಿಸಬಹುದು, ಇದು ನಿಮ್ಮ ಆತಂಕವನ್ನೂ ಕಡಿಮೆ ಮಾಡುತ್ತದೆ. ಕೆಲಸದಲ್ಲಿ ಉತ್ತಮವಾಗಿರಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಹೊಸ ಉದ್ಯೋಗದ ಪ್ರಸ್ತಾಪ ಬರಬಹುದು, ಆದರೂ ಚಿಂತಿಸಿ ಮುಂದುವರೆಯಿರಿ. ವ್ಯವಹಾರಸ್ಥರು ಹಣದ ವಿಷಯದಲ್ಲಿ ಜಾಗರೂಕರಾಗಿರಬೇಕು. ಹೊಸ ವ್ಯವಹಾರದಲ್ಲಿ ಹೂಡಿಕೆ ಮಾಡಲು ಬಯಸಿದರೆ, ಮೊದಲು ನೀವು ಸಣ್ಣ ಮಟ್ಟದಲ್ಲಿ ಹೂಡಿಕೆ ಮಾಡುವುದು ಉತ್ತಮ.

ಅದೃಷ್ಟ ಬಣ್ಣ: ಹಸಿರು

ಅದೃಷ್ಟ ಸಂಖ್ಯೆ:32

ಅದೃಷ್ಟ ದಿನ: ಬುಧವಾರ

ಕರ್ಕ

ಕರ್ಕ

ಈ ವಾರ ನೀವು ಕೆಲಸದಲ್ಲಿ ಹೆಚ್ಚು ತೊಡಗಿರುತ್ತೀರಿ. ಉತ್ತಮ ಭವಿಷ್ಯಕ್ಕಾಗಿ ಕೆಲವು ಹೊಸ ಯೋಜನೆಗಳನ್ನು ಮಾಡಬಹುದು, ವಿಶೇಷವಾಗಿ ನೀವು ಕೆಲಸದ ಬಗ್ಗೆ ತುಂಬಾ ಗಂಭೀರವಾಗಿರುತ್ತೀರಿ. ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುವ ಕೆಲವು ಪ್ರಮುಖ ಬದಲಾವಣೆಗಳನ್ನು ಕಾಣಬಹುದು. ಇದ್ದಕ್ಕಿದ್ದಂತೆ ಕೆಲಸದ ಹೊರೆ ನಿಮಗೆ ಹೆಚ್ಚಾಗುವುದರಿಂದ ಕೆಲಸದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು. ಈವರೆಗೂ ನಿರಂತರ ಏರಿಳಿತ ಉಂಟಾಗುತ್ತಿದ್ದ ನಿಮ್ಮ ಜೀವನದಲ್ಲಿ ಈ ವಾರ ಸಾಕಷ್ಟು ಪರಿಹಾರಗಳನ್ನು ಪಡೆಯಲಿದ್ದೀರಿ. ಗ್ರಹಗಳ ಶುಭ ಸ್ಥಾನದಿಂದಾಗಿ ಹಣದ ಸಮಸ್ಯೆಗಳು ಪರಿಹಾರವಾಗುವುದು, ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ದೊಡ್ಡ ಏರಿಕೆ ಸಾಧ್ಯತೆ ಇದೆ. ಕುಟುಂಬದಲ್ಲೂ ಆಹ್ಲಾದಕರ ಫಲಿತಾಂಶಗಳನ್ನು ಪಡೆಯಬಹುದು. ಪ್ರತಿ ನಿರ್ಧಾರದಲ್ಲೂ ನಿಮ್ಮ ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಮತ್ತು ಎಲ್ಲರೊಂದಿಗಿನ ನಿಮ್ಮ ಸಂಬಂಧದ ಮಾಧುರ್ಯವು ಉಳಿಯುತ್ತದೆ. ವಿವಾಹಿತ ದಂಪತಿಗಳ ವೈವಾಹಿಕ ಜೀವನದಲ್ಲಿ ಸುಂದರವಾದ ತಿರುವು ಬರಬಹುದು. ಆರೋಗ್ಯದ ಬಗ್ಗೆ ಸ್ವಲ್ಪ ಜಾಗರೂಕರಾಗಿರಬೇಕು. ಕೆಲಸದ ಒತ್ತಡದ ನಡುವೆ ಫಿಟ್ ನೆಸ್ ಕಡೆ ಗಮನ ಕೊಡಲು ಮರೆಯಬೇಡಿ.

ಅದೃಷ್ಟ ಬಣ್ಣ:ಕೆಂಪು

ಅದೃಷ್ಟ ಸಂಖ್ಯೆ:45

ಅದೃಷ್ಟ ದಿನ: ಸೋಮವಾರ

ಸಿಂಹ

ಸಿಂಹ

ಈ ವಾರ ನೀವು ಮಾನಸಿಕವಾಗಿ ಸದೃಢರಾಗುತ್ತೀರಿ. ನಿಮ್ಮ ಹೆಚ್ಚಿನ ಪ್ರಯತ್ನಗಳು ಯಶಸ್ವಿಯಾಗಬಹುದು. ಎಲ್ಲಾ ಕೆಲಸಗಳನ್ನು ಯೋಜನೆಯ ಪ್ರಕಾರ ಮಾಡುತ್ತೀರಿ, ಇದರಿಂದ ಎಲ್ಲಾ ಕೆಲಸಗಳು ಸರಿಯಾಗಿ ಮತ್ತು ಸಮಯಕ್ಕೆ ಪೂರ್ಣಗೊಳ್ಳುತ್ತವೆ. ಉದ್ಯಮಿಯಾಗಿದ್ದರೆ ಮತ್ತು ಪಾಲುದಾರಿಕೆಯನ್ನು ಯೋಜಿಸುತ್ತಿದ್ದರೆ ಅಗತ್ಯವಾಗಿ ಸಕಾರಾತ್ಮಕ ನಿರ್ಧಾರ ಕೈಗೊಳ್ಳಿ, ಇದರಿಂದ ತುಂಬಾ ಪ್ರಯೋಜನಕಾರಿಯಾಗಲಿದೆ. ವೈವಾಹಿಕ ಜೀವನದಲ್ಲಿ ಇದ್ದ ಸಮಸ್ಯೆಗಳು ಕೊನೆಗೊಳ್ಳಬಹುದು ಮತ್ತು ನಿಮ್ಮ ಸಂಬಂಧವು ಬಲಗೊಳ್ಳುತ್ತದೆ. ನಿಮ್ಮ ಕೆಲಸದಿಂದ ಸ್ವಲ್ಪ ವಿರಾಮ ತೆಗೆದುಕೊಂಡು ಪ್ರಿಯಕರನೊಂದಿಗೆ ಸ್ವಲ್ಪ ಸಮಯ ಕಳೆಯಬಹುದು. ಅವಿವಾಹಿತರಾಗಿದ್ದರೆ ಮತ್ತು ಪ್ರೇಮ ವಿವಾಹವನ್ನು ನಡೆಸಲು ಬಯಸಿದರೆ ಶೀಘ್ರದಲ್ಲೇ ನಿಮ್ಮ ಈ ಆಸೆ ಈಡೇರಬಹುದು. ನೀವು ಹಣದ ಬಗ್ಗೆ ಯಾರೊಂದಿಗಾದರೂ ವಿವಾದವನ್ನು ಹೊಂದಿದ್ದರೆ ವಿಷಯಗಳನ್ನು ಇತ್ಯರ್ಥಪಡಿಸಬಹುದು. ಆದರೆ ಹಣಕಾಸಿನ ವಹಿವಾಟಿನಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ವಾರದ ಕೊನೆಯಲ್ಲಿ, ದೀರ್ಘ ಪ್ರಯಾಣವನ್ನು ರೂಪಿಸಬಹುದು.

ಅದೃಷ್ಟ ಬಣ್ಣ: ಕಿತ್ತಳೆ

ಅದೃಷ್ಟ ಸಂಖ್ಯೆ: 18

ಅದೃಷ್ಟ ದಿನ: ಶುಕ್ರವಾರ

ಕನ್ಯಾ

ಕನ್ಯಾ

ವೈವಾಹಿಕ ಜೀವನದ ತೊಂದರೆಗಳು ಹೆಚ್ಚಾಗಬಹುದು. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಕಹಿ ಉಂಟಾಗಬಹುದು. ಪರಸ್ಪರರ ಬಗ್ಗೆ ಭಾವನಾತ್ಮಕ ಬಾಂಧವ್ಯವನ್ನು ಸಹ ಕಡಿಮೆಯಾಗಬಹುದು. ಮನೆಯ ಇತರ ಸದಸ್ಯರು ನಿಮ್ಮ ಸಮಸ್ಯೆಯ ಬಗ್ಗೆ ತುಂಬಾ ಚಿಂತಿತರಾಗಬಹುದು, ವಿಶೇಷವಾಗಿ ನಿಮ್ಮ ಹೆತ್ತವರ ಒತ್ತಡವು ಈ ಸಮಯದಲ್ಲಿ ಹೆಚ್ಚಾಗುತ್ತದೆ. ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ತರಲು, ನಿಮ್ಮ ಸಂಗಾತಿಯ ಕಡೆಯವರನ್ನು ನೀವು ಅರ್ಥಮಾಡಿಕೊಳ್ಳಬೇಕು. ಆದಷ್ಟು ದಂಪತಿಗಳು ಜಾಗರೂಕರಾಗಿರಿ. ಕೆಲಸದಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಗುರಿಯನ್ನು ಸಾಧಿಸಲು ಪ್ರಯತ್ನಗಳು ವೇಗಗೊಳ್ಳುತ್ತವೆ. ಮೇಲಧಿಕಾರಿಗಳು ಕಚೇರಿಯಲ್ಲಿ ನಿಮ್ಮ ಕೆಲಸದ ಮೇಲೆ ಕಣ್ಣಿಡಬಹುದು. ಸಮಯವನ್ನು ವ್ಯರ್ಥ ಮಾಡುವುದರಿಂದ ಅವಕಾಶಗಳನ್ನು ಕಳೆದುಕೊಳ್ಳಬಹುದು. ವೆಚ್ಚಗಳ ಹೆಚ್ಚಳದ ಜೊತೆಗೆ, ತೀವ್ರ ಆರ್ಥಿಕ ಬಿಕ್ಕಟ್ಟು ಸಂಭವಿಸಬಹುದು. ಯಾವುದೇ ರೀತಿಯ ಹೂಡಿಕೆಗಾಗಿ ಯಾವುದೇ ಹಣಕಾಸು ಯೋಜನೆಯನ್ನು ಮಾಡಲು ಈ ವಾರ ಅನುಕೂಲಕರವಲ್ಲ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯವು ನಿಮ್ಮ ಸಮಸ್ಯೆಯನ್ನು ಹೆಚ್ಚಿಸಬಹುದು.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 21

ಅದೃಷ್ಟ ದಿನ: ಬುಧವಾರ

ತುಲಾ

ತುಲಾ

ವಾರದ ಆರಂಭವು ಸಾಮಾನ್ಯವಾಗಿರುತ್ತದೆ. ಯಾವುದೇ ಅಮೂಲ್ಯ ವಸ್ತುಗಳು ಇತ್ತೀಚೆಗೆ ಕಳೆದುಹೋಗಿದ್ದರೆ ಈ ಸಮಯದಲ್ಲಿ ಇದ್ದಕ್ಕಿದ್ದಂತೆ ಕಂಡುಕೊಳ್ಳಬಹುದು. ಇದು ನಿಮಗೆ ಪರಿಹಾರ ಮತ್ತು ಸಂತೋಷವನ್ನು ನೀಡುತ್ತದೆ. ಪ್ರೀತಿಯ ವಿಷಯದಲ್ಲಿ ನೀವು ತುಂಬಾ ಅದೃಷ್ಟಶಾಲಿಯಾಗುತ್ತೀರಿ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಪ್ರೀತಿ ಅಪಾರವಾಗಿರುತ್ತದೆ. ವಿವಾಹಿತರಿಗೆ ಒಳ್ಳೆಯ ವಾರ. ಸಂಗಾತಿಯೊಂದಿಗೆ ಸಂಬಂಧ ಮತ್ತು ಬಾಂಧವ್ಯ ಹೆಚ್ಚಾಗುತ್ತದೆ. ದೊಡ್ಡ ಅಥವಾ ಸಣ್ಣ ಪ್ರತಿಯೊಂದು ನಿರ್ಧಾರದಲ್ಲೂ ನೀವು ಅವರ ಅಭಿಪ್ರಾಯವನ್ನು ತೆಗೆದುಕೊಳ್ಳುವಿರಿ. ಕೆಲಸದಲ್ಲಿ ಈ ವಾರ ತುಂಬಾ ವಿಶೇಷವಾಗುವುದಿಲ್ಲ. ಯಾವುದೇ ದೊಡ್ಡ ಸಮಸ್ಯೆಗಳಿಲ್ಲದಿದ್ದರೂ, ವಿಶೇಷವಾಗಿ ಉದ್ಯೋಗಿಗಳಿಗೆ ಈ ವಾರ ಹೆಚ್ಚು ಪ್ರಯೋಜನಕಾರಿಯಲ್ಲ. ವಾರದ ಕೊನೆಯಲ್ಲಿ ಮನೆಯ ಸದಸ್ಯರೊಂದಿಗೆ ವಾಗ್ವಾದ ಎದುರಿಸಬಹುದು, ಅದು ನಿಮ್ಮನ್ನು ತಲ್ಲಣಗೊಳಿಸುತ್ತದೆ. ಆರೋಗ್ಯ ಸಮಸ್ಯೆಯಿಂದ ಮುಕ್ತಿ ಹೊಂದುವಿರಿ.

ಅದೃಷ್ಟ ಬಣ್ಣ: ಕಂದು

ಅದೃಷ್ಟ ಸಂಖ್ಯೆ: 9

ಅದೃಷ್ಟ ದಿನ: ಮಂಗಳವಾರ

ವೃಶ್ಚಿಕ

ವೃಶ್ಚಿಕ

ಈ ವಾರ ನಿಮ್ಮ ವೈಯಕ್ತಿಕ ಜೀವನದ ಮೇಲೆ ನಿಮ್ಮ ಗಮನ ಹೆಚ್ಚು ಇರುತ್ತದೆ. ವಾರದ ಆರಂಭದಲ್ಲಿ ಕುಟುಂಬ ಸದಸ್ಯರಿಂದ ದೂರವಿರುತ್ತೀರಿ. ನಿಮ್ಮ ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಲು ನೀವು ಬಯಸಿದರೆ ಪ್ರೀತಿಪಾತ್ರರೊಂದಿಗಿನ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸಬಹುದು. ತಾಯಿಯ ಆರೋಗ್ಯವು ದುರ್ಬಲವಾಗಿರುತ್ತದೆ, ಅವರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ದಾಂಪತ್ಯ ಜೀವನದಲ್ಲಿ ಸಂಗಾತಿಯೊಂದಿಗೆ ಆನಂದಮಯವಾಗಿರಲಿದೆ. ಅವರ ಬೆಂಬಲವು ನಿಮ್ಮ ತೊಂದರೆಗಳನ್ನು ಸುಲಭಗೊಳಿಸುತ್ತದೆ. ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಹೊಂದುವ ಉತ್ತಮ ಫಲಿತಾಂಶದಿಂದ ತುಂಬಾ ಸಂತೋಷಪಡುತ್ತೀರಿ. ಆರ್ಥಿಕವಾಗಿ ಈ ವಾರ ನೀವು ಕೆಲವು ಏರಿಳಿತಗಳನ್ನು ನೋಡಬಹುದು. ಈ ಸಮಯದಲ್ಲಿ ಆದಾಯಕ್ಕಿಂತ ಹೆಚ್ಚಿನ ಖರ್ಚು ಬರಬಹುದು. ಹೂಡಿಕೆ ಮಾಡುವ ಮುನ್ನ ಜಾಗರೂಕರಾಗಿರಿ. ಕೆಲಸದಲ್ಲಿ ಈ ವಾರ ಸಾಮಾನ್ಯವಾಗಲಿದೆ. ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಲು ಹೆಚ್ಚು ಶ್ರಮಿಸಬೇಕು. ವ್ಯಾಪಾರಸ್ಥರಿಗೆ ಈ ವಾರ ಯಾವುದೇ ದೊಡ್ಡ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ ನಿಮ್ಮ ಯೋಜನೆಯ ಪ್ರಕಾರ ನೀವು ಎಚ್ಚರಿಕೆಯಿಂದ ಹೋದರೆ, ವಾರದ ಅಂತ್ಯದ ವೇಳೆಗೆ ವಿಷಯಗಳು ನಿಮ್ಮ ಪರವಾಗಿರಬಹುದು.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 12

ಅದೃಷ್ಟ ದಿನ: ಶುಕ್ರವಾರ

ಧನು

ಧನು

ವಾರದ ಆರಂಭದಲ್ಲಿ ತುಂಬಾ ಜಾಗರೂಕರಾಗಿರಬೇಕು. ವಿಶೇಷವಾಗಿ ನೀವು ಜಗಳಗಳಿಂದ ದೂರವಿರುವುದು ಒಳ್ಳೆಯದು, ಇಲ್ಲವಾದಲ್ಲಿ ಕಾನೂನು ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತೀರಿ ಮತ್ತು ಈ ವಿಷಯಗಳು ದೀರ್ಘಕಾಲ ಕಾಡಲಿದೆ. ಹಣದ ದೃಷ್ಟಿಯಿಂದ ಈ ವಾರ ನಿಮಗೆ ಒಳ್ಳೆಯದು. ಹಠಾತ್ ದೊಡ್ಡ ಲಾಭದ ಲಕ್ಷಣಗಳಿವೆ. ನೀವು ಹೊಸ ಮನೆ ಅಥವಾ ವಾಹನವನ್ನು ಸಹ ಖರೀದಿಸಬಹುದು. ಕೆಲಸದಲ್ಲಿ ಈ ವಾರ ನಿಮಗೆ ಸವಾಲಾಗಿರುತ್ತದೆ. ಕೆಲಸದ ಹೊರೆ ಹೆಚ್ಚಾಗುವುದರಿಂದ ನೀವು ಸಿಟ್ಟಾಗುತ್ತೀರಿ. ಆದಾಗ್ಯೂ, ನಿಮ್ಮ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳ ಸಹಾಯದಿಂದ ಪರಿಸ್ಥಿತಿ ಕ್ರಮೇಣ ಸಾಮಾನ್ಯವಾಗುತ್ತದೆ. ವಾರದ ಕೊನೆಯಲ್ಲಿ ಹೆಚ್ಚಿನ ಸಮಯವನ್ನು ಅನಗತ್ಯವಾಗಿ ಖರ್ಚು ಮಾಡಲಾಗುವುದು. ವ್ಯವಹಾರಗಳು ವ್ಯರ್ಥವಾಗಿ ನಡೆಯಬಹುದು. ಇತರರ ವಿಷಯದಲ್ಲಿ ಹಸ್ತಕ್ಷೇಪ ಮಾಡದಂತೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕು ಮತ್ತು ಎರಡು ಬದಿಯ ಮಾತುಕತೆಯನ್ನು ತಪ್ಪಿಸಬೇಕು. ನಿಮ್ಮ ಆಲೋಚನೆಗಳನ್ನು ಎಲ್ಲರ ಮುಂದೆ ಬಹಿರಂಗವಾಗಿ ಇರಿಸಿ ಇಲ್ಲದಿದ್ದರೆ ತಪ್ಪುಗ್ರಹಿಕೆ ಸಂಭವಿಸಬಹುದು. ಈ ವಾರ ನಿಮ್ಮ ಆರೋಗ್ಯವು ದುರ್ಬಲವಾಗಿರುತ್ತದೆ, ನಿರ್ಲಕ್ಷ್ಯ ವಹಿಸಬೇಡಿ ಮತ್ತು ಸಮಯಕ್ಕೆ ವೈದ್ಯರನ್ನು ಸಂಪರ್ಕಿಸಿ.

ಅದೃಷ್ಟ ಬಣ್ಣ: ಆಕಾಶ ನೀಲಿ

ಅದೃಷ್ಟ ಸಂಖ್ಯೆ: 36

ಅದೃಷ್ಟ ದಿನ: ಭಾನುವಾರ

ಮಕರ

ಮಕರ

ಹಣದ ವಿಷಯದಲ್ಲಿ ಈ ವಾರ ನಿಮಗೆ ತುಂಬಾ ಶುಭವಾಗಲಿದೆ. ಕೆಲವು ಅಮೂಲ್ಯ ವಸ್ತುಗಳನ್ನು ಖರೀದಿಸಬಹುದು. ಹೊಸ ಆಸ್ತಿಯನ್ನು ಖರೀದಿಸಲು ಬಯಸುತ್ತಿದ್ದರೆ ಮತ್ತು ಅದರಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಈ ಸಮಯದಲ್ಲಿ ಅದು ದೂರ ಹೋಗುವ ಸಾಧ್ಯತೆಯಿದೆ. ಮಾಡುವ ಕೆಲಸದ ಬಗ್ಗೆ ನೀವು ಸಾಕಷ್ಟು ತೃಪ್ತರಾಗುತ್ತೀರಿ, ಜೊತೆಗೆ ನೀವು ತೆಗೆದುಕೊಳ್ಳುವ ಕೆಲವು ಪ್ರಮುಖ ನಿರ್ಧಾರಗಳು ಸಹ ಸರಿ ಎಂದು ಸಾಬೀತಾಗುತ್ತದೆ. ಕೆಲಸದಲ್ಲಿ ತುಂಬಾ ಶುಭವಾಗಿರುತ್ತದೆ. ಉದ್ಯೋಗಿಗಳು ಈ ಸಮಯದಲ್ಲಿ ಕಾಯುತ್ತಿರುವ ಸುವರ್ಣಾವಕಾಶವನ್ನು ಬಯಸಬಹುದು. ಯಾವುದೇ ನಿರ್ಧಾರವನ್ನು ಅವಸರದಲ್ಲಿ ತೆಗೆದುಕೊಳ್ಳಬೇಡಿ, ಆದರೆ ಚಿಂತನಶೀಲವಾಗಿ ಯೋಚಿಸಿ ಮತ್ತು ನಿಮ್ಮ ಪ್ರೀತಿಪಾತ್ರರ ಪ್ರತಿಕ್ರಿಯೆಯನ್ನು ತೆಗೆದುಕೊಳ್ಳುವ ಮೂಲಕ ಮಾತ್ರ ನಿರ್ಧಾರ ತೆಗೆದುಕೊಳ್ಳಲು ಪ್ರಯತ್ನಿಸಿ. ವ್ಯಾಪಾರಸ್ಥರು ಏನಾದರೂ ದೊಡ್ಡದನ್ನು ಮಾಡಲು ಮುಂದಾಗಬಹುದು, ನಿಮ್ಮ ವ್ಯವಹಾರವನ್ನು ಹೆಚ್ಚಿಸುತ್ತದೆ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಪ್ರೀತಿಪಾತ್ರರು ಒಟ್ಟಿಗೆ ಇರಲಿ. ಮನೆಯ ವಾತಾವರಣವು ಶಾಂತವಾಗಿರುತ್ತದೆ ಮತ್ತು ನೀವು ಮಾನಸಿಕ ಶಾಂತಿಯನ್ನು ಸಹ ಅನುಭವಿಸುವಿರಿ.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 21

ಅದೃಷ್ಟ ದಿನ: ಶನಿವಾರ

ಕುಂಭ

ಕುಂಭ

ಈ ವಾರ ಕೆಲವು ಸಂದರ್ಭಗಳಲ್ಲಿ ನಿಮಗೆ ಶುಭವಾಗಲಿದೆ, ಆದರೆ ಕೆಲವು ಸವಾಲುಗಳನ್ನು ಸಹ ಎದುರಿಸಬೇಕಾಗುತ್ತದೆ. ನಿಮ್ಮ ಕಠಿಣ ಪರಿಶ್ರಮ ಮತ್ತು ನಿಮ್ಮ ಕೆಲಸದಲ್ಲಿನ ನಿರಂತರ ಪ್ರಯತ್ನಗಳು ನಿರೀಕ್ಷಿತ ಫಲಿತಾಂಶಗಳನ್ನು ನೀಡಬಹುದು, ವಿಶೇಷವಾಗಿ ವ್ಯಾಪಾರಸ್ಥರಿಗೆ. ಕೆಲಸವು ಅತ್ಯಂತ ವೇಗವಾಗಿ ಪ್ರಗತಿಯಾಗುತ್ತದೆ ಮತ್ತು ಸಮಯಕ್ಕೆ ತೆಗೆದುಕೊಂಡ ಕಾರ್ಯಗಳು ಸಹ ಪೂರ್ಣಗೊಳ್ಳುತ್ತವೆ. ಕೆಲಸದ ನಿಮಿತ್ತ ಸಣ್ಣ ಪ್ರವಾಸಗಳನ್ನು ಮಾಡಬೇಕಾಗಬಹುದು, ಈ ಕಾರಣದಿಂದಾಗಿ ನೀವು ತುಂಬಾ ಕಾರ್ಯನಿರತರಾಗಿರುತ್ತೀರಿ. ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗದಿದ್ದರೂ, ಅವರ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ಸಂಗಾತಿಯೊಂದಿಗೆ ಕೆಲವು ವ್ಯತ್ಯಾಸಗಳನ್ನು ಹೊಂದಿರಬಹುದು, ಆದರೆ ಅವರ ಎಲ್ಲಾ ದೂರುಗಳನ್ನು ನೀವು ಪರಿಹರಿಸಲು ಸಾಧ್ಯವಾಗುತ್ತದೆ.

ಪ್ರಣಯ ಜೀವನದಲ್ಲಿ ನಿಮ್ಮ ಸಂಗಾತಿ ನಿಮ್ಮನ್ನು ಭಾವನಾತ್ಮಕವಾಗಿ ನೋಯಿಸಬಹುದು. ಹಣದ ವಿಚಾರದಲ್ಲಿ ಈ ವಾರ ಮಿಶ್ರ ಫಲಿತಾಂಶಗಳನ್ನು ನೀಡಬಹುದು. ಆರೋಗ್ಯದಲ್ಲಿ ಕೆಲವು ಏರಿಳಿತಗಳನ್ನು ಕಾಣಬಹುದು.

ಅದೃಷ್ಟ ಬಣ್ಣ: ಹಸಿರು

ಅದೃಷ್ಟ ಸಂಖ್ಯೆ: 32

ಅದೃಷ್ಟ ದಿನ: ಬುಧವಾರ

ಮೀನ

ಮೀನ

ನಿಮ್ಮ ಸೃಜನಶೀಲ ಪ್ರತಿಭೆ ಪ್ರಕಾಶಿಸಲಿದೆ ಮತ್ತು ನಿಮ್ಮನ್ನು ಸಾಕಷ್ಟು ಪ್ರಶಂಸಿಸಲಾಗುತ್ತದೆ. ಕೆಲವು ಜನರಿಗೆ ಸಹಾಯ ಮಾಡಲು ಮುಂದೆ ಬರುತ್ತೀರಿ ಮತ್ತು ನಿಸ್ವಾರ್ಥವಾಗಿ ಅವರನ್ನು ಕಠಿಣ ಪರಿಸ್ಥಿತಿಯಿಂದ ಹೊರಹಾಕುತ್ತೀರಿ, ವಿಶೇಷವಾಗಿ ನಿಮ್ಮ ಸ್ನೇಹಿತರು ನಿಮ್ಮಿಂದ ಸಹಾಯವನ್ನು ನಿರೀಕ್ಷಿಸಬಹುದು. ಕೆಲಸದಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದನ್ನು ಪೂರ್ಣ ಧೈರ್ಯದಿಂದ ಎದುರಿಸುತ್ತೀರಿ. ವೃತ್ತಿಪರ ಜೀವನದಲ್ಲಿ ನೀವು ಸಾಕಷ್ಟು ತೃಪ್ತರಾಗುತ್ತೀರಿ. ನೀವು ಉತ್ತಮ ತಂಡದ ನಾಯಕ ಎಂದು ಸಾಬೀತುಪಡಿಸುವಿರಿ. ವ್ಯಾಪಾರಸ್ಥರಿಗೆ ಉತ್ತಮವಾಗಿರುತ್ತದೆ. ಆದರೆ, ಕೆಲವು ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ನಿಮ್ಮ ಪ್ರೀತಿಯನ್ನು ಇನ್ನೊಬ್ಬರ ಮುಂದೆ ಪ್ರಸ್ತಾಪಿಸುವ ಮುನ್ನ ಆ ವ್ಯಕ್ತಿಯ ಹೃದಯವನ್ನು, ಆ ಬಗ್ಗೆ ಅವರ ಯೋಚನೆಯನ್ನು ತಿಳಿಯಲು ಪ್ರಯತ್ನಿಸಿ. ವಿವಾಹಿತ ದಂಪತಿಗಳಿಗೆ ಈ ಸಮಯ ತುಂಬಾ ಪ್ರೀತಿಯಿಂದ ಕೂಡಿರುತ್ತದೆ. ಬಹುಶಃ ಈ ವಾರ ಸಂಗಾತಿಯೊಂದಿಗೆ ನೀವು ವಿದೇಶ ಪ್ರವಾಸ ಮಾಡುತ್ತೀರಿ. ಪ್ರೀತಿಸುತ್ತಿರುವ ಜೋಡಿಗಳಿಗೆ ಈ ವಾರ ಸ್ವಲ್ಪ ಕಷ್ಟವಾಗುತ್ತದೆ. ಸಂಗಾತಿಯ ನಡವಳಿಕೆಯಲ್ಲಿ ಸ್ವಲ್ಪ ಬದಲಾವಣೆಯನ್ನು ನೀವು ನೋಡಬಹುದು, ನಿಮ್ಮ ಬಗ್ಗೆ ಅವರ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ನೀವು ಭಾವಿಸುವಿರಿ. ಆರೋಗ್ಯ ವಿಷಯಗಳು ಅತ್ಯುತ್ತಮವಾಗಿರುತ್ತವೆ. ನೀವು ತುಂಬಾ ಸಂತೋಷವಾಗಿರುತ್ತೀರಿ ಮತ್ತು ನಿಮ್ಮ ಮನಸ್ಸು ಸಹ ಶಾಂತವಾಗಿರುತ್ತದೆ.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 29

ಅದೃಷ್ಟ ದಿನ: ಗುರುವಾರ

English summary

Weekly Rashi Bhavishya For Sep 22nd to 28th 2019

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words "wpa" and scopos meaning "time" and "observer".
X
Desktop Bottom Promotion