For Quick Alerts
ALLOW NOTIFICATIONS  
For Daily Alerts

ವಾರ ಭವಿಷ್ಯ: ತುಲಾ, ವೃಶ್ಚಿಕ, ಧನು ರಾಶಿಯವರಿಗೆ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು

|

ಜೀವನ ಎಂದ ಮೇಲೆ ಖುಷಿ, ಸಂಕಟ, ಲಾಭ-ನಷ್ಟ ಇವೆಲ್ಲಾ ನಾಣ್ಯದ ಎರಡು ಮುಖಗಳಿದ್ದಂತೆ. ಅನೇಕ ಸವಾಲುಗಳು ಬರುತ್ತವೆ, ಅದನ್ನು ಮೆಟ್ಟಿ ನಿಂದಾಗ ಖುಷಿ, ಅದೃಷ್ಟಿ ಹಿಂಬಾಲಿಸುತ್ತದೆ. ಈ ವಾರ ನಿಮ್ಮ ಜೀವನ ಖುಷಿಯಿಂದ ಇರಲಿ ಎಂಬುವುದೇ ನಮ್ಮ ಆಶಯ. ಕೆಲವೊಂದು ಮುನ್ನೆಚ್ಚರಿಕೆ ತೆಗೆದುಕೊಂಡರೆ ಮುಂದೆ ಬರುವ ಅಪಾಯ ತಪ್ಪಿಸಬಹುದು ಅಂತಾರೆ.

Weekly Rashi Bhavishya for October 4th to October 10th

ಹಾಗೆಯೇ ಜ್ಯೋತಿಷ್ಯದಲ್ಲಿ ಭವಿಷ್ಯತ್‌ ಕಾಲವನ್ನು ನಮ್ಮ ರಾಶಿಯ ಅನುಗುಣವಾಗಿ ಹೇಳಲಾಗುವುದು. ಜ್ಯೋತಿಷ್ಯ ಪ್ರಕಾರ ಭವಿಷ್ಯ ಕೆಲವೊಂದು ಅಪಾಯವನ್ನು ತಪ್ಪಿಸಲು ಏನು ಪರಿಹಾರವೆಂದು ಕೂಡ ಸೂಚಿಸುತ್ತದೆ.

ಬನ್ನಿ ಅಕ್ಟೋಬರ್‌4ರಿಂದ 10ರವರೆಗಿನ ನಿಮ್ಮ ವಾರ ಭವಿಷ್ಯ ಹೇಗಿದೆ ಎಂದು ತಿಳಿಯೋಣ:

ಮೇಷ ರಾಶಿ:

ಮೇಷ ರಾಶಿ:

ಕೆಲಸದ ದೃಷ್ಟಿಯಿಂದ ನೋಡುವುದಾದರೆ ಈ ವಾರ ನಿಮಗೆ ಮಿಶ್ರ ಫಲ. ನೀವು ಕೆಲಸದ ಜಾಗದಲ್ಲಿ ಅವಕಾಶಗಳನ್ನು ಬಳಸಿಕೊಳ್ಳುವುದನ್ನು ಕಲಿಯಬೇಕು. ಅಲ್ಲದೆ ನೀವು ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಈ ವಾರ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಯಾವುದೇ ವಿಷಯದಲ್ಲೂ ನಿರ್ಲಕ್ಷ್ಯ ಮಾಡಬೇಡಿ, ಮಾಡಿದ್ದೇ ಆದರೆ ತೊಂದರೆಗೆ ಸಿಲುಕಿಕೊಳ್ಳುವಿರಿ. ಇನ್ನು ಕೌಟಂಬಿಕ ಜೀವನದಲ್ಲೂ ಸ್ವಲ್ಪ ಏರಳಿತ ಉಂಟಾಗುವುದು, ಆದ್ದರಿಂದ ಸ್ವಲ್ಪ ಮನಸ್ಸಿಗೆ ನೋವುಂಟಾಗುವುದು. ಮನೆಯ ಸದಸ್ಯರಲ್ಲಿ ಒಬ್ಬರು ನಿಮ್ಮ ವಿರುದ್ಧವಾಗಿ ಮಾತನಾಡಬಹುದು. ನೀವು ಹೊಂದಾಣಿಕೆಗೆ ಮನಸ್ಸು ಮಾಡಬೇಕು, ಆಗ ಮಾತ್ರ ಮನೆಯಲ್ಲಿ ಶಾಂತಿ ನೆಲೆಸಲು ಸಾಧ್ಯ. ಈ ವಾರ ಸ್ವಲ್ಪ ಅಧಿಕ ಮಾನಸಿಕ ಒತ್ತಡಕ್ಕೆ ಒಳಗಾಗುವುದರಿಂದ ಅದು ನಿಮ್ಮ ಆರೋಗ್ಯದ ಮೇಲೂ ಪ್ರಭಾವ ಬೀಳಬಹುದು. ಇನ್ನು ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆವಹಿಸುವುದು ಒಳ್ಳೆಯದು. ಆರೋಗ್ಯದ ಕಡೆ ಜೋಪಾನ.

ಅದೃಷ್ಟದ ಬಣ್ಣ : ನೀಲಿ

ಅದೃಷ್ಟದ ಸಂಖ್ಯೆ: 20

ಅದೃಷ್ಟದ ವಾರ: ರವಿವಾರ

 ವೃಷಭ ರಾಶಿ

ವೃಷಭ ರಾಶಿ

ವೃಷಭ ರಾಶಿಯವರೇ ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ವಾರ ಸುಧಾರಣೆಯ ಲಕ್ಷಣಗಳಿವೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಈ ವಾರ ಹಣ ಖರ್ಚಿನ ಬಗ್ಗೆ ತುಂಬಾ ಎಚ್ಚರಿಕೆ ವಹಿಸುತ್ತೀರಿ ಅಲ್ಲದೆ ಭವಿಷ್ಯದ ದೃಷ್ಟಿಯಿಂದ ಹಣದ ಹೂಡಿಕೆಯನ್ನೂ ಮಾಡಬಹುದು. ನೀವು ಉದ್ಯಮಿಯಾಗಿದ್ದರೆ ಕಾನೂನು ಬಾಹಿರವಾದ ಯಾವುದೇ ಕೆಲಸ ಮಾಡಬೇಡಿ. ಕೆಲಸದ ವಿಷಯದಲ್ಲಿ ಇದ್ದಕ್ಕಿದ್ದಂತೆ ಪ್ರಯಾಣ ಮಾಡಬೇಕಾಗಿ ಬರಬಹುದು. ಈ ಪ್ರಯಾಣದಿಂದ ಆರ್ಥಿಕ ಲಾಭ ಪಡೆಯುವಿರಿ. ಮಕ್ಕಳು ತಪ್ಪು ಮಾಡಿದಾಗ ಅವರಿಗೆ ತಿಳಿ ಹೇಳಿ. ಇನ್ನು ಆರೋಗ್ಯ ದೃಷ್ಟಿಯಿಂದಲೂ ಯಾವುದೇ ತೊಂದರೆಯಿಲ್ಲ, ಹಾಗಂತ ಅಸಡ್ಡೆ ಬೇಡ.

ಅದೃಷ್ಟದ ಬಣ್ಣ : ಆಕಾಶ

ಅದೃಷ್ಟದ ಸಂಖ್ಯೆ: 2

ಅದೃಷ್ಟದ ವಾರ: ಬುಧವಾರ

ಮಿಥುನ ರಾಶಿ

ಮಿಥುನ ರಾಶಿ

ಕೆಲಸದ ದೃಷ್ಟಿಯಿಂದ ನೋಡುವುದಾದರೆ ಈ ವಾರ ಶುಭಕರವಾಗಿದೆ. ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ನಿರೀಕ್ಷೆ ಮಾಡಬಹುದು. ಅಲ್ಲದೆ ನಿಮ್ಮ ಕೆಲಸಕ್ಕೆ ಮನ್ನಣೆ ದೊರೆಯುವುದು. ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಆದಾಯ ಹೆಚ್ಚಲಿದೆ., ಅದರಲ್ಲೂ ದೊಡ್ಡ ವ್ಯಾಪಾರಿಗಳಿಗೆ ತುಂಬಾನೇ ಅನುಕೂಲಕರವಾಗಿದೆ. ಈ ವಾರ ನಿಮ್ಮ ವ್ಯವಹಾರವು ಮತ್ತಷ್ಟು ಪ್ರಗತಿಯನ್ನು ಕಾಣುತ್ತದೆ. ಪೆಟ್ರೋಲ್, ಡೀಸೆಲ್, ಎಲೆಕ್ಟ್ರಾನಿಕ್ಸ್, ರಿಯಲ್‌ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದರೆ ಅಧಿಕ ಲಾಭ ಈ ವಾರ ಲಭಿಸಲಿದೆ.ಈ ವಾರ, ನಿಮ್ಮ ಮನೆಯಲ್ಲಿ ಕೆಲವು ಶುಭ ಕೆಲಸಗಳನ್ನು ಮಾಡಬಹುದು. ಮನೆಯ ವಾತಾವರಣವು ಆಹ್ಲಾದಕರವಾಗಿರುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗಿನ ಸಂಬಂಧಗಳು ವೃದ್ಧಿಯಾಗುವುದು. ಅಲ್ಲದೆ ಆದಾಯ ಹೆಚ್ಚಿಸಲು ಮತ್ತಷ್ಟು ಪ್ರಯತ್ನ ಮಾಡುವಿರಿ, ಇದರಲ್ಲಿ ಯಶಸ್ವಿಯೂ ಆಗುತ್ತೀರಿ. ವೈವಾಹಿಕ ಜೀವನದಲ್ಲಿ ಸ್ವಲ್ಪ ಏರಿಳಿತ ಉಂಟಾಗಬಹುದು. ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬೇಡಿ.

ಅದೃಷ್ಟದ ಬಣ್ಣ : ನೇರಳೆ

ಅದೃಷ್ಟದ ಸಂಖ್ಯೆ: 15

ಅದೃಷ್ಟದ ವಾರ: ಶುಕ್ರವಾರ

 ಕರ್ಕ ರಾಶಿ

ಕರ್ಕ ರಾಶಿ

ಈ ವಾರ ಕರ್ಕರಾಶಿಯವರಿಗೆ ಅಷ್ಟೊಂದು ಅನುಕೂಲಕರವಾಗಿಲ್ಲ, ನಿಮ್ಮ ಆರೋಗ್ಯದಲ್ಲಿ ಏರಳಿತ ಉಂಟಾಗಬಹುದು. ನೀವು ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು ಅಲ್ಲದೆ ಯಾವುದೇ ಕೆಲಸದಲ್ಲೂ ಎಚ್ಚರಿಕೆ ವಹಿಸಿ. ಸಂಗಾತಿಯ ಮೇಲೆ ನಿಮಗಿರುವ ಅಪನಂಬಿಕೆಯಿಂದಾಗಿ ನಿಮ್ಮಿಬ್ಬರ ನಡುವಿನ ಅಂತರ ಹೆಚ್ಚುವುದು. ನೀವು ವೈವಾಹಿಕ ಜೀವನ ಖುಷಿಯಾಗಿರಲು ಬಯಸುವುದಾದರೆ ಪರಸ್ಪರ ಅರ್ಥ ಮಾಡಿಕೊಳ್ಳುವುದು ಒಳ್ಳೆಯದು. ಇನ್ನು ಕೆಲಸದ ಜಾಗದಲ್ಲಿ ಪರಿಸ್ಥಿತಿ ನಿಮಗೆ ಅನುಕೂಲಕರವಾಗಿರಲಿದೆ. ವ್ಯಾಪಾರ ಮಾಡುತ್ತಿದ್ದರೆ ಕೆಲವೊಂದು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಉದ್ಯೋಗಿಗಳಾಗಿದ್ದರೆ ಸಹೋದ್ಯೋಗಿಗಳಿಂದ ಹಾಗೂ ಮೇಲಾಧಿಕಾರಿಗಳೊಂದಿಗೆ ಹೊಂದಾಣಿಕೆಯಿಂದ ಇರುವುದು ಒಳ್ಳೆಯದು, ಅನಗ್ಯತ ಚರ್ಚೆಗೆ ಹೋಗಬೇಡಿ, ನಿಮ್ಮ ಕೆಲಸದ ಕಡೆ ಮಾತ್ರ ಗಮನ ಹರಿಸಿ. ಇನ್ನು ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಯಾವುದೇ ತೊಂದರೆಯಿಲ್ಲ ಅಲ್ಲದೆ ಆದಾಯ ಹೆಚ್ಚಿಸಲು ಪ್ರಯತ್ನಿಸಿದರೆ ಯಶಸ್ವಿ ಕಾಣುವಿರಿ.

ಅದೃಷ್ಟದ ಬಣ್ಣ : ಹಳದಿ

ಅದೃಷ್ಟದ ಸಂಖ್ಯೆ: 27

ಅದೃಷ್ಟದ ವಾರ: ಗುರುವಾರ

 ಸಿಂಹರಾಶಿ:

ಸಿಂಹರಾಶಿ:

ಈ ವಾರ ನಿಮ್ಮ ಆತುರದ ಬುದ್ಧಿಯಿಂದ ತೊಂದರೆಗೆ ಸಿಲುಕುವ ಸಾಧ್ಯತೆ ಇದೆ, ಆದ್ದರಿಂದ ತಾಳ್ಮೆ ಮುಖ್ಯವಾಗಿದೆ. ನೀವು ನಿರದ್ಯೋಗಿಗಳಾಗಿದ್ದರೆ ಶುಭ ಸುದ್ದಿ ದೊರೆಯುವುದು. ಇನ್ನು ವೃತ್ತಿಯಲ್ಲಿದ್ದರೆ ವೃತ್ತಿ ಜೀವನ ಉತ್ತಮವಾಗಿರಲಿದೆ, ಅಲ್ಲದೆ ನಿಮ್ಮ ಕೌಶಲ್ಯ ಮತ್ತಷ್ಟು ವೃದ್ಧಿಯಾಗಲು ಶ್ರಮಿಸುತ್ತೀರಿ. ನಿಮಗೆ ಉನ್ನತ ಅಧಿಕಾರಿಗಳಿಗೆ ನಿಮ್ಮ ಬಗ್ಗೆ ದೂರು ನೀಡುವ ಯಾವುದೇ ಅವಕಾಶ ನೀಡಬೇಡಿ. ಅಲ್ಲದೆ ಸಣ್ಣ ವ್ಯಾಪಾರಿಗಳಿಗೆ ಸರಕಾರದಿಂದ ಸಿಗುವ ಸವಲತ್ತು ಪಡೆದುಕೊಳ್ಳಬಹುದು. ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ವಾರ ಖರ್ಚು ಸ್ವಲ್ಪ ಅಧಿಕವಿರಲಿದೆ. ಇದರಿಂದ ಸಾಲ ಕೂಡ ಮಾಡಬೇಕಾಗಿ ಬರಬಹುದು. ಕೌಟಂಬಿಕ ಜೀವನ ಸುಖಕರವಾಗಿರಲಿದೆ.

ಅದೃಷ್ಟದ ಬಣ್ಣ : ಗುಲಾಬಿ

ಅದೃಷ್ಟದ ಸಂಖ್ಯೆ: 12

ಅದೃಷ್ಟದ ವಾರ: ಶನಿವಾರ

 ಕನ್ಯಾ ರಾಶಿ

ಕನ್ಯಾ ರಾಶಿ

ಈ ವಾರ ವಿದ್ಯಾರ್ಥಿಗಳಿಗೆ ಉತ್ತಮವಾಗಿರಲಿದೆ, ಈ ವಾರ ಹೊಸ ವಿಷಯಗಳನ್ನು ಕಲಿಯುವ ಅವಕಾಶ ದೊರೆಯುವುದು, ನಿಮಗೆ ಗುರುಗಳ ಸೂಕ್ತ ಮಾರ್ಗದರ್ಶನ ಕೂಡ ಸಿಗುವುದು. ಇನ್ನು ಉದ್ಯೋಗಿಗಳಿಗೆ ಇದು ಸ್ವಲ್ಪ ಏರಳಿತದ ವಾರವಾಗಿದೆ, ಕೆಲಸದ ಒತ್ತಡ ಸ್ವಲ್ಪ ಅಧಿಕವಿರಲಿದೆ. ನಿಮ್ಮ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡಿ ಮುಗಿಸಿದರೆ ವೃತ್ತಿ ಜೀವನದಲ್ಲಿ ಪ್ರಗತಿ ಉಂಟಾಗುವುದು. ಈ ವಾರ ವ್ಯಾಪಾರಿಗಳಿಗೆ ಸಾಮಾನ್ಯವಾಗಿರಲಿದೆ. ಕೌಟಂಬಿಕ ಜೀವನದಲ್ಲಿ ಚಿಕ್ಕ-ಪುಟ್ಟ ವೈಮನಸ್ಸು ಬರುವ ಸಾಧ್ಯತೆ ಇದೆ. ನೀವು ಅಂಥ ಪರಿಸ್ಥಿತಿಯಲ್ಲಿ ಶಾಂತವಾಗಿದ್ದರೆ ಎಲ್ಲವೂ ತಿಳಿಯಾಗುವುದು, ಕೋಪಗೊಂಡರೆ ಸುಮ್ಮನೆ ಮಾನಸಿಕ ನೆಮ್ಮದಿ ಕಳೆದುಕೊಳ್ಳಬೇಕಾಗುತ್ತದೆ. ಇನ್ನು ಆರ್ಥಿಕ ದೃಷ್ಟಿಯಿಂದ ಈ ವಾರ ಲಾಭದಾಯಕವಾಗಿದೆ. ಹಣದ ಉಳಿತಾಯವಾಗುವುದು.

ಅದೃಷ್ಟದ ಬಣ್ಣ : ಕೇಸರಿ

ಅದೃಷ್ಟದ ಸಂಖ್ಯೆ: 25

ಅದೃಷ್ಟದ ವಾರ: ಸೋಮವಾರ

 ತುಲಾ ರಾಶಿ

ತುಲಾ ರಾಶಿ

ಕೆಲಸದ ದೃಷ್ಟಿಯಿಂದ ನೋಡುವುದಾದರೆ ಈ ವಾರ ಉತ್ತಮವಾಗಿರಲಿದೆ. ನಿಮ್ಮ ಆತ್ಮವಿಶ್ವಾಸ ಹಾಗೂ ಕಠಿಣ ಶ್ರಮದಿಂದ ಸವಾಲುಗಳನ್ನು ಸುಲಭವಾಗಿ ಎದುರಿಸುವಿರಿ. ನೀವು ಉದ್ಯೋಗಿಗಳಾಗಿದ್ದರೆ ನಿಮ್ಮ ಕೌಶಲ್ಯ ಪ್ರದರ್ಶನಕ್ಕೆ ಸುವರ್ಣ ಅವಕಾಶ ಸಿಗುವುದು. ಅಲ್ಲದೆ ಹಣಕಾಸಿನ ತೊಂದರೆ ಕೂಡ ಕೊನೆಯಾಗುವುದು. ಆದರೆ ನೀವು ಕಠಿಣ ಪರಿಶ್ರಮ ಹಾಕಬೇಕಾಗುತ್ತದೆ. ಇನ್ನು ಕೌಟಂಬಿಕ ಜೀವನ ಸುಖಕರವಾಗಿರಲಿದೆ. ಕುಟುಂಬದೊಂದಿಗೆ ಖುಷಿಯಾಗಿ ಸಮಯ ಕಳೆಯುವಿರಿ. ಇದರಿಂದ ಮತ್ತಷ್ಟು ಉಲ್ಲಾಸ ಸಿಗುವುದು. ಈ ವಾರದ ಕೊನೆಯಲ್ಲಿ ಪೂರ್ವಜರ ಆಸ್ತಿಗೆ ಸಂಬಂಧಿಸಿದ ಶುಭ ಸುದ್ದಿ ದೊರೆಯಬಹುದು. ಮೂತ್ರ ಸೋಂಕಿಗೆ ಸಂಬಂಧಿಸಿದ ಸಮಸ್ಯೆ ಕಾಣಿಸಬಹುದು ಆದ್ದರಿಂದ ಸ್ವಚ್ಛತೆ ಕಡೆಗೆ ಗಮನ ಹರಿಸಿ.

ಅದೃಷ್ಟದ ಬಣ್ಣ : ಕ್ರೀಮ್

ಅದೃಷ್ಟದ ಸಂಖ್ಯೆ: 20

ಅದೃಷ್ಟದ ವಾರ: ಶನಿವಾರ

 ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಈ ವಾರ ಕೆಲಸದ ಒತ್ತಡ ಕಡಿಮೆ ಇರುವುದರಿಂದ ಸ್ವಲ್ಪ ನಿರಾಳವಾಗಿರುವಿರಿ. ಮಾಡಬೇಕಾದ ಕೆಲಸವನ್ನು ಅವಧಿಗೆ ಮುನ್ನವೇ ಮಾಡಿ ಮುಗಿಸುವಿರಿ. ನೀವು ಕಬ್ಬಿಣ ಅಥವಾ ಚಿನ್ನದ ಬೆಳ್ಳಿಯನ್ನು ವ್ಯಾಪಾರ ಮಾಡಿದರೆ ಈ ಸಮಯವು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ಮತ್ತೊಂದೆಡೆ, ನೀವು ನಿಮ್ಮ ಸ್ವಂತ ಸಣ್ಣ ಉದ್ಯೋಗ ಮಾಡಬಯಸುವುದಾದರೆ ಕೆಲವೊಂದು ಅವಕಾಶಗಳು ದೊರೆಯಲಿವೆ.

ಆದಾಗ್ಯೂ, ನಿಮ್ಮ ನಿರ್ಧಾರವನ್ನು ನೀವು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ಮನೆಯ ವಾತಾವರಣ ಆಹ್ಲಾದಕರವಾಗಿರುತ್ತದೆ. ಆರ್ಥಿಕ ದೃಷ್ಟಿಯಿಂದಲೂ ಉತ್ತಮವಾಗಿದೆ. ನೀವು ಸಾಲದ ಕಂತು ಪಾವತಿಸದಿದ್ದರೆ ಈ ವಾರದಿಂದ ಪಾವತಿಸಲು ಸಾಧ್ಯವಾಗುವುದು. ಆರೋಗ್ಯದ ಕಡೆ ಗಮನ ಹರಿಸಿ. ಹೊರಗಿನ ಆಹಾರಗಳನ್ನು ದೂರವಿಡಿ.

ಅದೃಷ್ಟದ ಬಣ್ಣ : ಬಿಳಿ

ಅದೃಷ್ಟದ ಸಂಖ್ಯೆ: 2

ಅದೃಷ್ಟದ ವಾರ: ಸೋಮವಾರ

 ಧನುರಾಶಿ:

ಧನುರಾಶಿ:

ಧನುರಾಶಿಯವರಿಗೆ ವಾರದ ಆರಂಭವು ಶುಭಕರವಾಗಿದೆ. ನಿಮ್ಮ ಪ್ರಯತ್ನಗಳಿಗೆ ಯಶಸ್ವಿಯಾಗಲಿದೆ. ನಿಮ್ಮ ಕ್ಷೇತ್ರದಲ್ಲಿ ಅವಕಾಶಗಳು ದೊರೆಯುವುದು. ಆದರೂ ಜಾಗೂರೂಕತೆಯಿಂದ ವರ್ತಿಸಿ. ಇನ್ನು ಕೋರ್ಟ್ ಕೇಸ್ ಇದ್ದರೆ ಅದರಿಂದ ಹೊರ ಬರುವಿರಿ. ವೈಯಕ್ತಿಕ ಜೀವನದ ಬಗ್ಗೆ ನೋಡುವುದಾದರೆ ಸಂಗಾತಿಯಿಂದ ದೂರ ಇರಬೇಕಾಗಿ ಬರಬಹುದು ಆದರೂ ನಿಮ್ಮಿಬ್ಬರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವುದು. ಆರ್ಥಿಕ ದೃಷ್ಟಿಯಿಂದ, ಈ ಸಮಯವು ನಿಮಗೆ ಒಳ್ಳೆಯದು. ನಿಮ್ಮ ಆದಾಯವು ಉತ್ತಮವಾಗಿರುತ್ತದೆ, ನೀವು ಹೆಚ್ಚು ಉಳಿಸಲು ಸಹ ಸಾಧ್ಯವಾಗುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ ಈ ಸಮಯದಲ್ಲಿ ನೀವು ಈ ಸಮಸ್ಯೆಯನ್ನು ತೊಡೆದುಹಾಕಬಹುದು. ಆದರೆ ಅಸಡ್ಡೆ ಬೇಡ.

ಅದೃಷ್ಟದ ಬಣ್ಣ : ಹಸಿರು

ಅದೃಷ್ಟದ ಸಂಖ್ಯೆ: 33

ಅದೃಷ್ಟದ ವಾರ: ಮಂಗಳವಾರ

 ಮಕರರಾಶಿ

ಮಕರರಾಶಿ

ಈ ಸಮಯದಲ್ಲಿ ನಿಮ್ಮ ಕುಟುಂಬ ಜೀವನದ ಬಗ್ಗೆ ನೀವು ಹೆಚ್ಚು ಗಮನ ಹರಿಸುತ್ತೀರಿ. ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸಲು ನೀವು ನಿಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತೀರಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು, ಮನೆಯ ಸಂತೋಷವು ನಿಮ್ಮ ನಿರ್ಧಾರವನ್ನು ಅವಲಂಭಿಸಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ. ನೀವು ವಿವಾಹಿತರಾಗಿದ್ದರೆ ಮತ್ತು ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಸರಿಯಾಗಿ ಆಗದಿದ್ದರೆ, ಈ ಸಮಯದಲ್ಲಿ ನೀವು ನಿಮ್ಮ ಸಮಸ್ಯೆ ಹೇಗೆ ಬಗೆಹರಿಸಬಹುದೆಂಬ ತೀರ್ಮಾನಕ್ಕೆ ಬರುವಿರಿ. ಹಣದ ದೃಷ್ಟಿಯಿಂದ ಈ ವಾರ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಹಣಕಾಸಿನ ಪ್ರಯತ್ನಗಳು ಯಶಸ್ವಿಯಾಗುತ್ತವೆ ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹಾರವಾಗುವುದು. ವೃತ್ತಿ ಜೀವನದಲ್ಲಿ ನಿಮ್ಮ ಕೌಶಲ್ಯಕ್ಕೆ ಪ್ರದರ್ಶಿಸುವ ಅವಕಾಶವನ್ನು ಬಳಸಿಕೊಳ್ಳಿ. ಇನ್ನು ಆರೋಗ್ಯದ ದೃಷ್ಟಿಯಿಂದಲೂ ಈ ವಾರ ಅನುಕೂಲಕರವಾಗಿರಲಿದೆ.

ಅದೃಷ್ಟದ ಬಣ್ಣ : ಹಳದಿ

ಅದೃಷ್ಟದ ಸಂಖ್ಯೆ: 14

ಅದೃಷ್ಟದ ವಾರ: ಶನಿವಾರ

ಕುಂಭ ರಾಶಿ

ಕುಂಭ ರಾಶಿ

ಈ ವಾರ ನಿಮ್ಮ ಕೆಲವು ಪ್ರಮುಖ ಕಾರ್ಯಗಳು ಸಮಯಕ್ಕೆ ಪೂರ್ಣಗೊಳ್ಳಲಿದ್ದು ಇದರಿಂದ ನಿಮಗೆ ಮತ್ತಷ್ಟು ಒಳಿತಾಗಲಿದೆ. ಉದ್ಯೋಗಿಗಳಿಗೆ ಕೆಲಸದ ಹೊರೆ ಕಡಿಮೆ ಇರುತ್ತದೆ. ವ್ಯಾಪಾರಿಗಳು ಸಹ ಈ ವಾರ ಉತ್ತಮ ಲಾಭವನ್ನು ಪಡೆಯಬಹುದು. ಈ ಅವಧಿಯಲ್ಲಿ, ನೀವು ಹೊಸ ಕೆಲಸವನ್ನು ಪ್ರಾರಂಭಿಸಿದರೆ ಅಥವಾ ಹೊಸ ಹೂಡಿಕೆ ಮಾಡಿದರೆ, ನೀವು ಉತ್ತಮ ಫಲವನ್ನು ಪಡೆಯುತ್ತೀರಿ. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಸಾಮಾನ್ಯವಾಗಲಿದೆ. ಸಹೋದರ ಸಹೋದರಿಯರೊಂದಿಗಿನ ಸಂಬಂಧವು ಸುಧಾರಿಸುತ್ತದೆ ಮತ್ತು ನೀವು ಪೋಷಕರಿಂದಲೂ ಬೆಂಬಲವನ್ನು ಪಡೆಯುತ್ತೀರಿ. ನೀವು ವಿವಾಹಿತರಾಗಿದ್ದರೆ, ನಿಮ್ಮ ಸಂಗಾತಿಯೊಂದಿಗೆ ಅನಗತ್ಯ ವಾದಗಳನ್ನು ತಪ್ಪಿಸಿ. ನಿಮ್ಮ ನಿರ್ಧಾರಗಳನ್ನು ನೀವು ಅವರ ಮೇಲೆ ಹೇರಬಾರದು, ಆದರೆ ಅವರ ಇಷ್ಟಗಳು ಮತ್ತು ಇಷ್ಟಪಡದಿರುವಿಕೆಗಳನ್ನು ನೀವು ನೋಡಿಕೊಳ್ಳುವುದು ಸಹ ಮುಖ್ಯವಾಗಿದೆ. ಈ ವಾರ ಹಣದ ವಿಷಯದಲ್ಲಿ ಮಿಶ್ರ ಫಲಿತಾಂಶಗಳನ್ನು ಕಾಣುವಿರಿ. ಈ ಸಮಯದಲ್ಲಿ ನಿಮ್ಮ ಆದಾಯವನ್ನು ಹೆಚ್ಚಿಸುವ ಸಾಧ್ಯತೆಯಿದೆ, ಆದರೆ ನೀವು ಬಯಸದಿದ್ದರೂ ಸಹ ಕೆಲ ದೊಡ್ಡ ಖರ್ಚು ಮಾಡಬೇಕಾಗುತ್ತದೆ, ಆರೋಗ್ಯದ ದೃಷ್ಟಿಯಿಂದ ತೊಂದರೆಯಿಲ್ಲ.

ಅದೃಷ್ಟದ ಬಣ್ಣ : ಕಿತ್ತಳೆ

ಅದೃಷ್ಟದ ಸಂಖ್ಯೆ: 11

ಅದೃಷ್ಟದ ವಾರ: ಗುರುವಾರ

 ಮೀನರಾಶಿ

ಮೀನರಾಶಿ

ಈ ವಾರ ಕೆಲಸದ ಒತ್ತಡ ಅಧಿಕವಿರುವುದರಿಂದ ನಿಮಗಾಗಿ ಸಮಯ ಮೀಸಲಿಡಲು ಸಾಧ್ಯವಾಗುವುದಿಲ್ಲ. ಉದ್ಯೋಗಿಗಳಿಗೆ ಈ ವಾರ ಪ್ರಮುಖ ಜವಾಬ್ದಾರಿಗಳು ಬರಬಹುದು. ನಿಮ್ಮ ಕೆಲಸವನ್ನು ನೀವು ಯಶಸ್ವಿಯಾಗಿ ಪೂರ್ಣಗೊಳಿಸಿದರೆ, ವಾರದ ಕೊನೆಯಲ್ಲಿ ನಿಮ್ಮ ಪ್ರಗತಿಯ ಸುವಾರ್ತೆಯನ್ನು ನೀವು ಪಡೆಯಬಹುದು.ಇಂತಹ ಪರಿಸ್ಥಿತಿಯಲ್ಲಿ, ಶ್ರಮವಹಿಸಿ ಮತ್ತು ನಿಮ್ಮ ಉನ್ನತ ಅಧಿಕಾರಿಗಳ ಹೃದಯವನ್ನು ಗೆಲ್ಲಲು ಪ್ರಯತ್ನಿಸಿ. ವ್ಯಾಪಾರಸ್ಥರಿಗೆ ಈ ವಾರ ಸಾಮಾನ್ಯವಾಗಿರಲಿದೆ. ಮನೆಯಲ್ಲಿ ಮಂಗಳಕಾರ್ಯ ನಡೆಯಬಹುದು. ಮನೆಯ ವಾತಾವರಣ ಖುಷಿಯಾಗಿರುತ್ತದೆ, ಆರ್ಥಿಕ ದೃಷ್ಟಿಕೋನದಿಂದ, ಈ ಸಮಯವು ನಿಮಗೆ ತುಂಬಾ ದುಬಾರಿಯಾಗಿದೆ. ನೀವು ಯೋಚಿಸಿ ಖರ್ಚು ಮಾಡಿದರೆ, ಆಗ ನಿಮಗೆ ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರುವುದಿಲ್ಲ.

ಅದೃಷ್ಟದ ಬಣ್ಣ : ಬಿಳಿ

ಅದೃಷ್ಟದ ಸಂಖ್ಯೆ: 22

ಅದೃಷ್ಟದ ವಾರ: ರವಿವಾರ

English summary

Weekly Rashi Bhavishya for October 4th to October 10th

Here are weekly rashi bhavishya for October 4th to 10th, Read on...
X
Desktop Bottom Promotion