For Quick Alerts
ALLOW NOTIFICATIONS  
For Daily Alerts

ವಾರ ಭವಿಷ್ಯ (ಜ.15-ಜ.21): ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ

|

ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು, ಸುಗ್ಗಿಯ ಹಬ್ಬ ನಿಮಗೆ ಆಯುರ್‌-ಐಶ್ವರ್ಯ ನೀಡಲಿ.

weekly horoscope

ಜ್ಯೋತಿಷ್ಯದ ಪ್ರಕಾರ ಜನವರಿ15ರಿಂದ ಜನವರಿ 21ರವರೆಗೆ ಪ್ರತಿಯೊಂದು ರಾಶಿಗಳ ರಾಶಿಫಲ ಹೇಗಿದೆ ಎಂದು ನೋಡೋಣ ಬನ್ನಿ:

ಮೇಷ ರಾಶಿ

ಮೇಷ ರಾಶಿ

ವಾರದ ಆರಂಭವು ನಿಮಗೆ ತುಂಬಾ ಕಾರ್ಯನಿರತವಾಗಿರುತ್ತದೆ, ವಾರದ ಮಧ್ಯದ ನಂತರ ಸ್ವಲ್ಪ ಬಿಡುವು ಸಿಗಲಿದೆ. ನಿಮಗಾಗಿ ಮತ್ತು ಕುಟುಂಬಕ್ಕಾಗಿ ನೀವು ಸಾಕಷ್ಟು ಸಮಯವನ್ನು ಪಡೆಯುತ್ತೀರಿ. ಹಣದ ವಿಷಯದಲ್ಲಿ, ಈ 7 ದಿನಗಳು ನಿಮಗೆ ಬಹಳ ಮುಖ್ಯವಾಗಿರುತ್ತದೆ. ನಿಮ್ಮ ಆರ್ಥಿಕ ಪ್ರಯತ್ನ ಯಶಸ್ವಿಯಾಗಬಹುದು. ಈ ಸಮಯದಲ್ಲಿ ಹಳೆಯ ಸಾಲವಿದ್ದರೆ ಅದನ್ನು ಹಿಂತಿರುಗುಸಬಹುದು. ನಿಮ್ಮ ಎಲ್ಲಾ ಕೆಲಸಗಳು ಸಮಯಕ್ಕೆ ಪೂರ್ಣಗೊಳ್ಳುತ್ತವೆ. ಕೌಟುಂಬಿಕ ಜೀವನದಲ್ಲಿ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತದೆ. ಮನೆಯ ಸದಸ್ಯರ ಸಂಪೂರ್ಣ ಸಹಕಾರ ನಿಮಗೆ ದೊರೆಯಲಿದೆ. ಆರೋಗ್ಯ ಸುಧಾರಿಸುತ್ತದೆ.

ಅದೃಷ್ಟದ ಬಣ್ಣ: ಹಳದಿ

ಅದೃಷ್ಟದ ಸಂಖ್ಯೆ: 20

ಅದೃಷ್ಟದ ದಿನ: ಮಂಗಳವಾರ

ವೃಷಭ ರಾಶಿ

ವೃಷಭ ರಾಶಿ

ಈ ವಾರ ಕೇಲಸದ ಒತ್ತಡ ಅಧಿಕವಿರುತ್ತದೆ, ನೀವು ಹೆಚ್ಚು ಶ್ರಮ ಹಾಕುವಿರಿ. ವೈವಾಹಿಕ ಜೀವನದಲ್ಲಿ ಪರಿಸ್ಥಿತಿ ಅಷ್ಟು ಸರಿಯಿರಲ್ಲ, ನೀವು ಕೆಲಸದ ಜೊತೆಗೆ ಕುಟುಂಬದ ಕಡೆಗೂ ಗಮನ ನೀಡಿ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ. ದುಂದು ವೆಚ್ಚ ಮಾಡಬೇಡಿ. ನೀವು ಉಳಿತಾಯದತ್ತ ಹೆಚ್ಚು ಗಮನಹರಿಸಿದರೆ, ನಿಮ್ಮ ಹಣಕಾಸಿನ ಸಮಸ್ಯೆಗಳು ಶೀಘ್ರವಾಗಿ ಪರಿಹರಿಸಲ್ಪಡುತ್ತವೆ. ಮಗುವಿನ ಆರೋಗ್ಯ ಅಥವಾ ಶಿಕ್ಷಣದ ಚಿಂತೆ ಹೆಚ್ಚಬಹುದು.

ಅದೃಷ್ಟದ ಬಣ್ಣ: ಕಂದು

ಅದೃಷ್ಟದ ಸಂಖ್ಯೆ: 2

ಅದೃಷ್ಟದ ದಿನ: ಶನಿವಾರ

ಮಿಥುನ ರಾಶಿ

ಮಿಥುನ ರಾಶಿ

ಕಳೆದ ವಾರ ನಿಮ್ಮ ಯಾವುದೇ ಕೆಲಸವು ಅಪೂರ್ಣವಾಗಿದ್ದರೆ, ಈ ವಾರ ನೀವು ಅದನ್ನು ಪೂರ್ಣಗೊಳಿಸಲು ಶ್ರಮಿಸುತ್ತೀರಿ. ದೊಡ್ಡ ಗ್ರಾಹಕರೊಂದಿಗೆ ವ್ಯವಹರಿಸುವಾಗ ಬಹಳ ಜಾಗರೂಕರಾಗಿರಲು ಉದ್ಯಮಿಗಳಿಗೆ ಸಲಹೆ ನೀಡಲಾಗಿದೆ. ಒಂದು ಸಣ್ಣ ತಪ್ಪು ನಿಮ್ಮ ಎಲ್ಲಾ ಶ್ರಮವನ್ನು ಹಾಳುಮಾಡುತ್ತದೆ. ಈ ವಾರ ಹಣದ ವಿಷಯದಲ್ಲಿ ತುಂಬಾ ದುಬಾರಿಯಾಗಲಿದೆ. ಮನೆ ರಿಪೇರಿ ಮತ್ತು ಮಕ್ಕಳ ವಿದ್ಯಾಭ್ಯಾಸ ಇತ್ಯಾದಿಗಳಿಗೆ ಸಾಕಷ್ಟು ಹಣ ಖರ್ಚು ಮಾಡಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಆರೋಗ್ಯ ನಿರ್ಲಕ್ಷ್ಯ ಮಾಡಬೇಡಿ.

ಅದೃಷ್ಟದ ಬಣ್ಣ: ಆಕಾಶ ನೀಲಿ

ಅದೃಷ್ಟದ ಸಂಖ್ಯೆ: 11

ಅದೃಷ್ಟದ ದಿನ: ಭಾನುವಾರ

ಕರ್ಕ ರಾಶಿ

ಕರ್ಕ ರಾಶಿ

ಪ್ರೇಮಿಗಳಿಗೆ ಈ ವಾರ ವಿಶೇಷವಾಗಿರುತ್ತದೆ, ನಿಮ್ಮ ಸಂಬಂಧದ ಬಗ್ಗೆ ಮನೆಯಲ್ಲಿ ಹೇಳಿ ಒಪ್ಪಿಗೆ ಪಡೆಯಬಹುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಸೌಕರ್ಯಗಳು ಹೆಚ್ಚಳವಾಗಬಹುದು. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ವ್ಯಾಪಾರಸ್ಥರು, ಉದ್ಯೋಗಸ್ಥರು ಲಾಭಗಳಿಸಬಹುದು. ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ದೀರ್ಘ ಸಮಯದಿಂದ ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ.

ಅದೃಷ್ಟದ ಬಣ್ಣ: ನೀಲಿ

ಅದೃಷ್ಟದ ಸಂಖ್ಯೆ: 16

ಅದೃಷ್ಟದ ದಿನ: ಸೋಮವಾರ

ಸಿಂಹ ರಾಶಿ

ಸಿಂಹ ರಾಶಿ

ಈ ಅವಧಿಯಲ್ಲಿ ನಿಮ್ಮ ಅನಿಯಂತ್ರಿತ ಕೋಪ ನಿಮ್ಮ ನೆಮ್ಮದಿ, ಕೆಲಸ ಹಾಳು ಮಾಡಬಹುದು, ಆದ್ದರಿಂದ ಕೋಪವನ್ನು ನಿಯಂತ್ರಿಸಿ. ಕೆಲಸದ ಬಗ್ಗೆ ಹೇಳುವುದಾದರೆ ನೀವು ಕುಟುಂಬ ವ್ಯವಹಾರ ಮಾಡುತ್ತಿದ್ದರೆ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಹಿರಿಯರಿಂದ ಸಲಹೆ ಪಡೆಯಿರಿ. ಮತ್ತೊಂದೆಡೆ, ನೀವು ನಿಮ್ಮ ಕೆಲಸವನ್ನು ಬಿಟ್ಟು ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಆತುರದ ನಿರ್ಧಾರ ಬೇಡ ಎಂದು ಸಲಹೆ ನೀಡಲಾಗಿದೆ. ಹಣದ ವಿಷಯದಲ್ಲಿ ಈ ವಾರ ನಿಮಗೆ ಮಿಶ್ರಫಲ. ನಿಮ್ಮ ಆದಾಯವು ಉತ್ತಮವಾಗಿರುತ್ತದೆ ಆದರೆ ವೆಚ್ಚಗಳು ಹೆಚ್ಚಾಗಬಹುದು. ಜೊತೆಗೆ ಹಳೆ ಸಾಲದ ಚಿಂತೆ ಕಾಡಬಹುದು. ನಿಮ್ಮ ಆರೋಗ್ಯ ಸ್ವಲ್ಪಮಟ್ಟಿಗೆ ದುರ್ಬಲವಾಗಿರಬಹುದು.

ಅದೃಷ್ಟದ ಬಣ್ಣ: ಕೆಂಪು

ಅದೃಷ್ಟದ ಸಂಖ್ಯೆ: 26

ಅದೃಷ್ಟದ ದಿನ: ಶುಕ್ರವಾರ

ಕನ್ಯಾ ರಾಶಿ

ಕನ್ಯಾ ರಾಶಿ

ಹಣದ ವಿಷಯದಲ್ಲಿ, ಈ ವಾರ ನಿಮಗೆ ಏರಿಳಿತಗಳಿಂದ ಕೂಡಿರುತ್ತದೆ. ನಿಮ್ಮಲ್ಲಿ ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರು ಒಳ್ಳೆಯ ಲಾಭ ಗಳಿಸಬಹುದು. ವ್ಯಾಪಾರಸ್ಥರ ವ್ಯಾಪಾರದಲ್ಲಿ ಹೆಚ್ಚಳವಾಗಲಿದೆ. ನಿಮ್ಮ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯಲು ನೀವು ಉತ್ತಮ ಅವಕಾಶವನ್ನು ಪಡೆಯುತ್ತೀರಿ. ಸಂಗಾತಿಯೊಂದಿಗೆ ಈ ಸಮಯವು ತುಂಬಾ ಉತ್ತಮವಾಗಿರುತ್ತದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ನೀವು ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಸಣ್ಣಪುಟ್ಟ ಸಮಸ್ಯೆ ಬಂದರೂ ನಿರ್ಲಕ್ಷಿಸಬೇಡಿ.

ಅದೃಷ್ಟದ ಬಣ್ಣ: ಗುಲಾಬಿ

ಅದೃಷ್ಟದ ಸಂಖ್ಯೆ: 30

ಅದೃಷ್ಟದ ದಿನ: ಬುಧವಾರ

ತುಲಾ ರಾಶಿ

ತುಲಾ ರಾಶಿ

ಉದ್ಯೋಗಸ್ಥರಿಗೆ ಈ ವಾರ ಬಹಳ ಮಹತ್ವದ್ದಾಗಿದೆ. ಈ ಅವಧಿಯಲ್ಲಿ ನೀವು ನಿರುದ್ಯೋಗಿಗಳಾಗಿದ್ದರೆ ಮತ್ತು ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ, ನಿಮಗೆ ಉತ್ತಮ ಅವಕಾಶಗಳು ಸಿಗುತ್ತವೆ. ವ್ಯಾಪಾರಸ್ಥರಿಗೆ ಈ ಅವಧಿ ಲಾಭಕರವಾಗಿದೆ. ಈ ವಾರ ಬಾಕಿಯುಳಿದಿರು ಕೆಲಸವನ್ನು ಪೂರ್ಣಗೊಳಿಸಬಹುದು. ಹಣದ ವಿಷಯದಲ್ಲಿ ಈ ವಾರ ದುಬಾರಿಯಾಗಲಿದೆ. ಆದರೂ ಯಾವುದೇ ದೊಡ್ಡ ಸಮಸ್ಯೆ ಇರುವುದಿಲ್ಲ. ವಿಶೇಷವಾಗಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ. ಆರೋಗ್ಯದ ವಿಷಯದಲ್ಲಿ, ಈ ಸಮಯವು ನಿಮಗೆ ಏರಿಳಿತಗಳಿಂದ ತುಂಬಿರುತ್ತದೆ. ಈ ಅವಧಿಯಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುತ್ತವೆ.

ಅದೃಷ್ಟದ ಬಣ್ಣ: ತಿಳಿ ಹಸಿರು

ಅದೃಷ್ಟದ ಸಂಖ್ಯೆ: 14

ಅದೃಷ್ಟದ ದಿನ: ಭಾನುವಾರ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಆರ್ಥಿಕ ಪರಿಸ್ಥಿತಿ ಹದಗೆಡುವ ಲಕ್ಷಣಗಳಿವೆ. ಹಣದ ನಷ್ಟ ಉಂಟಾಗಬಹುದು. ಹಣಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸ ಮಾಡುವಾಗ ತುಂಬಾನೇ ಎಚ್ಚರವಹಿಸಬೇಕಾಗಿದೆ. ಈ ಅವಧಿಯಲ್ಲಿ ನಿಮ್ಮ ಮೇಲಿನ ಕೆಲಸದ ಹೊರೆಯೂ ಹೆಚ್ಚಾಗುತ್ತದೆ. ನೀವು ಈ ವಾರ ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡಬೇಕು . ಕಠಿಣ ಪರಿಶ್ರಮಕ್ಕೆ ಶೀಘ್ರದಲ್ಲೇ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಸಣ್ಣ ವ್ಯಾಪಾರಸ್ಥರಿಗೆ ಈ ವಾರ ತುಂಬಾ ಲಾಭದಾಯಕವಾಗಿರುತ್ತದೆ. ನೀವು ಸ್ಟಾಕ್ ಅನ್ನು ಹೆಚ್ಚಿಸಲು ಯೋಜಿಸುತ್ತಿದ್ದರೆ ಈ ಸಮಯ ಸೂಕ್ತವಾಗಿದೆ. ಸಂಗಾತಿಗೆ ಆರೋಗ್ಯ ಸಮಸ್ಯೆಗಳಿರಬಹುದು. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ಕೆಲಸದ ಒತ್ತಡ ಮತ್ತು ಆತಂಕದಿಂದಾಗಿ ನಿಮ್ಮ ಆರೋಗ್ಯವು ದುರ್ಬಲವಾಗಿರುತ್ತದೆ.

ಅದೃಷ್ಟದ ಬಣ್ಣ: ಕೆನೆ

ಅದೃಷ್ಟದ ಸಂಖ್ಯೆ: 19

ಅದೃಷ್ಟದ ದಿನ: ಮಂಗಳವಾರ

ಧನು ರಾಶಿ

ಧನು ರಾಶಿ

ನೀವು ಇತ್ತೀಚೆಗೆ ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ, ಈ ಅವಧಿಯಲ್ಲಿ ನೀವು ಹೆಚ್ಚು ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಆರೋಗ್ಯದಲ್ಲಿ ಭಾರಿ ಕುಸಿತ ಉಂಟಾಗಬಹುದು. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಬಲವಾದ ಸಾಧ್ಯತೆಯಿದೆ. ಈ ಅವಧಿಯಲ್ಲಿ ನೀವು ಹೊಸ ಆದಾಯದ ಮೂಲವನ್ನು ಪಡೆಯಬಹುದು. ಉದ್ಯೋಗಸ್ಥರು ಕಚೇರಿಯಲ್ಲಿ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ಸಣ್ಣಪುಟ್ಟ ತಪ್ಪುಗಳಾಗದಂತೆ ಎಚ್ಚರವಹಿಸಿದರೆ ಒಳ್ಳೆಯದು. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸವೂ ಕುಸಿಯಬಹುದು. ನೀವು ತಾಳ್ಮೆಯಿಂದ ಕೆಲಸದ ಕಡೆ ಗಮನ ನೀಡಿ. ವ್ಯಾಪಾರಸ್ಥರು ಈ ವಾರ ಮಿಶ್ರ ಲಾಭವನ್ನು ಪಡೆಯುತ್ತಾರೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತದೆ. ಪೋಷಕರ ಆಶೀರ್ವಾದ ಸಿಗಲಿದೆ.

ಅದೃಷ್ಟದ ಬಣ್ಣ: ನೀಲಿ

ಅದೃಷ್ಟದ ಸಂಖ್ಯೆ: 2

ಅದೃಷ್ಟದ ದಿನ: ಬುಧವಾರ

ಮಕರ ರಾಶಿ

ಮಕರ ರಾಶಿ

ಹಣದ ವಿಷಯದಲ್ಲಿ ಈ ವಾರ ನಿಮಗೆ ತುಂಬಾ ಮಂಗಳಕರವಾಗಿರುತ್ತದೆ. ಆಸ್ತಿಗೆ ಸಂಬಂಧಿಸಿದ ಕೆಲವು ದೊಡ್ಡ ಲಾಭವನ್ನು ನೀವು ಪಡೆಯಬಹುದು. ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಜಿಗಿತವನ್ನು ಕಾಣಬಹುದು. ನೀವು ಯಾವುದೇ ಬೆಲೆಬಾಳುವ ವಸ್ತುವನ್ನು ಖರೀದಿಸಲು ಯೋಜಿಸುತ್ತಿದ್ದರೆ ನಿಮ್ಮ ಆಸೆ ಈಡೇರಬಹುದು. ಕೆಲಸದ ಬಗ್ಗೆ ಹೇಳುವುದಾದರೆ ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಂಪೂರ್ಣ ಬೆಂಬಲ ಸಿಗುತ್ತದೆ. ನಿಮ್ಮ ಆತ್ಮವಿಶ್ವಾಸವೂ ಹೆಚ್ಚುತ್ತದೆ. ನಿಮ್ಮ ಎಲ್ಲಾ ಕೆಲಸಗಳನ್ನು ನೀವು ಪೂರ್ಣ ಶಕ್ತಿ ಮತ್ತು ಉತ್ಸಾಹದಿಂದ ಪೂರ್ಣಗೊಳಿಸುತ್ತೀರಿ. ಮತ್ತೊಂದೆಡೆ, ಈ ವಾರ ಉದ್ಯಮಿಗಳಿಗೆ ತುಂಬಾ ಒಳ್ಳೆಯದು. ಈ ಅವಧಿಯಲ್ಲಿ, ನೀವು ಅನೇಕ ಸಣ್ಣ ಪ್ರಯೋಜನಗಳನ್ನು ಹೊಂದಬಹುದು. ಮನೆಯ ವಾತಾವರಣವು ಧನಾತ್ಮಕವಾಗಿರುತ್ತದೆ. ಆರೋಗ್ಯದ ವಿಷಯದಲ್ಲಿ ಈ ವಾರ ನಿಮಗೆ ಸರಾಸರಿಯಾಗಲಿದೆ.

ಅದೃಷ್ಟದ ಬಣ್ಣ: ಹಳದಿ

ಅದೃಷ್ಟದ ಸಂಖ್ಯೆ: 25

ಅದೃಷ್ಟದ ದಿನ: ಶನಿವಾರ

ಕುಂಭ ರಾಶಿ

ಕುಂಭ ರಾಶಿ

ಉದ್ಯೋಗಸ್ಥರು ತಮ್ಮ ಶ್ರಮಕ್ಕೆ ತಕ್ಕ ಫಲಿತಾಂಶವನ್ನು ಪಡೆಯುತ್ತಾರೆ. ಈ ಅವಧಿಯಲ್ಲಿ ನಿಮ್ಮ ನೆಚ್ಚಿನ ಯೋಜನೆಯಲ್ಲಿ ಕೆಲಸ ಮಾಡಲು ನಿಮಗೆ ಅವಕಾಶ ನೀಡಲಾಗುತ್ತದೆ. ನೀವು ವ್ಯಾಪಾರಸ್ಥರಾಗಿದ್ದರೆ ಮತ್ತು ಹೊಸ ಕೆಲಸವನ್ನು ಪ್ರಾರಂಭಿಸಲಿದ್ದರೆ, ನಿಮ್ಮ ದಾರಿಯಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕಬಹುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಬಜೆಟ್‌ಗೆ ಅನುಗುಣವಾಗಿ ಖರ್ಚು ಮಾಡಲು ಸಲಹೆ ನೀಡಲಾಗಿದೆ. ನ್ಯಾಯಾಲಯಕ್ಕೆ ಸಂಬಂಧಿಸಿದ ಯಾವುದೇ ವಿಷಯವು ನಿಮಗೆ ತೊಂದರೆ ನೀಡುತ್ತಿದ್ದರೆ, ವಕೀಲರಿಂದ ಕಾನೂನು ಸಲಹೆ ಪಡೆಯಲು ಇದು ಸರಿಯಾದ ಸಮಯ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ತೀವ್ರವಾಗಿರುತ್ತದೆ. ಒಟ್ಟಿಗೆ ನೀವು ಮನೆಯ ಜವಾಬ್ದಾರಿಗಳನ್ನು ಪೂರೈಸುವಿರಿ. ಆರೋಗ್ಯದ ದೃಷ್ಟಿಯಿಂದ ಈ ಸಮಯವು ನಿಮಗೆ ಉತ್ತಮವಾಗಿರುತ್ತದೆ.

ಅದೃಷ್ಟದ ಬಣ್ಣ: ನೇರಳೆ

ಅದೃಷ್ಟದ ಸಂಖ್ಯೆ: 42

ಅದೃಷ್ಟದ ದಿನ: ಭಾನುವಾರ

ಮೀನ ರಾಶಿ

ಮೀನ ರಾಶಿ

ಕುಟುಂಬದ ಬಗ್ಗೆ ಹೇಳುವುದಾದರೆ ಈ ವಾರ ನಿಮಗೆ ತುಂಬಾ ಒಳ್ಳೆಯದು. ಮನೆಯ ಸದಸ್ಯರೊಂದಿಗೆ ನಿಮ್ಮ ಭಾವನಾತ್ಮಕ ಬಾಂಧವ್ಯ ಹೆಚ್ಚಾಗುತ್ತದೆ. ಈ ಅವಧಿಯಲ್ಲಿ, ಮನೆಯಲ್ಲಿ ಯಾವುದೇ ಶುಭ ಕಾರ್ಯಕ್ರಮವನ್ನು ಆಯೋಜಿಸಬಹುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆದರೆ, ಹಣವನ್ನು ಗಳಿಸಲು ಶಾರ್ಟ್‌ಕಟ್‌ಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗಿದೆ, ಇಲ್ಲದಿದ್ದರೆ ನೀವು ತೊಂದರೆಗೆ ಒಳಗಾಗಬಹುದು. ಕೆಲಸದ ಬಗ್ಗೆ ಹೇಳುವುದಾದರೆ ಕಚೇರಿಯಲ್ಲಿ ನಿಮ್ಮ ಸ್ಥಾನವು ಬಲವಾಗಿರುತ್ತದೆ. ಈ ಅವಧಿಯಲ್ಲಿ ನೀವು ಉನ್ನತ ಅಧಿಕಾರಿಗಳ ಸಂಪೂರ್ಣ ಸಹಕಾರವನ್ನು ಪಡೆಯುತ್ತೀರಿ. ಇದರೊಂದಿಗೆ ಬಾಸ್ ಕೂಡ ನಿಮ್ಮೊಂದಿಗೆ ತುಂಬಾ ಸಂತೋಷವಾಗಿರುತ್ತಾರೆ. ವ್ಯಾಪಾರಕ್ಕೆ ಸಂಬಂಧಿಸಿದ ಜನರು ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು. ವಿಶೇಷವಾಗಿ ನೀವು ಕಬ್ಬಿಣದ ವ್ಯಾಪಾರಿಯಾಗಿದ್ದರೆ, ನಿಮಗೆ ಉತ್ತಮ ಅವಕಾಶ ಸಿಗುವ ಸಾಧ್ಯತೆಯಿದೆ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಆದರೆ ನಿಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಲು ಸಲಹೆ ನೀಡಲಾಗಿದೆ.

ಅದೃಷ್ಟದ ಬಣ್ಣ: ಕೇಸರಿ

ಅದೃಷ್ಟದ ಸಂಖ್ಯೆ: 9

ಅದೃಷ್ಟದ ದಿನ: ಗುರುವಾರ

English summary

Weekly Rashi Bhavishya for January 15 to January 21, 2023

Weekly Horoscope in Kannada - Read horoscope for January 15 to January 21 predictions for all 12 zodiac signs and know about love, finance, health, and career.
Story first published: Sunday, January 15, 2023, 9:48 [IST]
X
Desktop Bottom Promotion