Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
Vishakha Nakshatra 2023 Predictions : ವೈಶಾಖ ನಕ್ಷತ್ರದವರಿಗೆ 2023ನೇ ವರ್ಷ ಅದೃಷ್ಟಕರ
27 ನಕ್ಷತ್ರಗಳಲ್ಲಿ 16ನೇ ನಕ್ಷತ್ರ ವೈಶಾಖ ನಕ್ಷತ್ರ. ತುಲಾ ಹಾಗೂ ವೃಶ್ಚಿಕ ರಾಶಿಯವರಿಗೆ ಈ ನಕ್ಷತ್ರ ಬರುತ್ತದೆ. ಗುರು ಈ ನಕ್ಷತ್ರದ ಅಧಿಪತಿ.
ವೈಶಾಖ ನಕ್ಷತ್ರದವರ 2023 ನಕ್ಷತ್ರ ಭವಿಷ್ಯ ನೋಡುವುದಾದರೆ

2023ರಲ್ಲಿ ಯಾವ ತಿಂಗಳು ಒಳ್ಳೆಯದು?
ವೈಶಾಖ ನಕ್ಷತ್ರದವರಿಗೆ 2023ರಲ್ಲಿ ಫೆಬ್ರವರಿ, ಮಾರ್ಚ್, ಜೂನ್, ಜುಲೈ, ಆಗಸ್ಟ್ , ಅಕ್ಟೋಬರ್ ತಿಂಗಳು ಒಳ್ಳೆಯದು. ಜನವರಿ. ಏಪ್ರಿಲ್, ಡಿಸೆಂಬರ್ ತಿಂಗಳಿನಲ್ಲಿ ಜಾಗ್ರತೆಯಿಂದಿರಬೇಕು. ಮೇ ಹಾಗೂ ನವೆಂಬರ್ ತಿಂಗಳಿನಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ.
ವೈಶಾಖ ನಕ್ಷತ್ರದವರ ವೃತ್ತಿ ಜೀವನ
ನೀವು ನಿಮ್ಮ ವೃತ್ತಿ ಜೀವನದಲ್ಲಿ ಮತ್ತಷ್ಟು ಬೆಳೆಯಲು ಹೊಸ ಪ್ರಯೋಗಗಳಿಗೆ ಮುಂದಾಗುತ್ತೀರಿ. ಮೊದಲ ಅರ್ಧ ವರ್ಷದಲ್ಲಿ ನಿಮ್ಮ ವೃತ್ತಿ ಜೀವನದ ಅಡೆತಡೆಗಳನ್ನು ಹೊರದೂಡಲು ತುಂಬಾ ಪ್ರಯತ್ನಿಸುತ್ತೀರಿ. ವರ್ಷದ ಮಧ್ಯ ಭಾಗದಲ್ಲಿ ವೃತ್ತಿ ಜೀವನದಲ್ಲಿ ಒಳ್ಳೆಯ ಫಲಿತಾಂಶ ಕಾಣುತ್ತೀರಿ. ಅಲ್ಲದೆ ಗ್ರಹಗತಿಗಳ ಸ್ಥಾನವೂ ಕೂಡ ನಿಮಗೆ ಅನುಕೂಲಕರವಾಗಿದೆ.
ವೈಶಾಖ ನಕ್ಷತ್ರದವರ ಆರ್ಥಿಕ ಸ್ಥಿತಿ
ಗ್ರಹಗತಿಗಳ ಅನುಕೂಲಕರವಾದ ಸ್ಥಾನದಿಂದಾಗಿ ಈ ವರ್ಷ ನಿಮಗೆ ತುಂಬಾ ಅನುಕೂಲಕರವಾಗಿದೆ. ನೀವು ಸಾಲದಿಂದ ಮುಕ್ತರಾಗಬಹುದು. ಜುಲೈ ಮಧ್ಯದಿಂದ ಆರ್ಥಿಕ ಸ್ಥಿತಿಯಲ್ಲಿ ತುಂಬಾನೇ ಪ್ರಗತಿ ಕಾಣುವಿರಿ. ಈ ವರ್ಷದಲ್ಲಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ತುಂಬಾನೇ ಬೆಳವಣಿಗೆಯಾಗುವುದು, ಇದು ನಿಮ್ಮ ಮುಂಈದನ ಭವಿಷ್ಯಕ್ಕೂ ಅನುಕೂಲಕರವಾಗಿದೆ.
ವೈಶಾಖ ನಕ್ಷತ್ರ ಭವಿಷ್ಯ 2023ರ ಪ್ರಕಾರ ಸಂಬಂಧ ಹೇಗಿರಲಿದೆ?
2023ರಲ್ಲಿ ನಿಮ್ಮ ಕೌಟುಂಬಿಕ ಜೀವನ ಚೆನ್ನಾಗಿರಲಿದೆ, ನೀವು ವಾಸ್ತವದಲ್ಲಿ ಜೀವಿಸಲು ಇಷ್ಟಪಡುತ್ತೀರ, ಆದ್ದರಿಂದ ದೊಡ್ಡ ತೊಂದರೆಗಳು ಇಲ್ಲ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ನಿಮ್ಮ ಪ್ರೀತಿ ಧೈರ್ಯವಾಗಿ ವ್ಯಕ್ತಪಡಿಸಿ, ಅವರಿಂದಲೂ ಉತ್ತಮ ಪ್ರತಿಕ್ರಿಯೆ ದೊರೆಯಲಿದೆ.' ಒಟ್ಟಿನಲ್ಲಿ 2023 ವೈಶಾಖ ನಕ್ಷತ್ರದವರಿಗೆ ಪ್ರೇಮ ಹಾಗೂ ಕೌಟುಂಬಿಕ ಜೀವನಕ್ಕೆ ಅನುಕೂಲಕರವಾಗಿದೆ.
ವೈಶಾಖ ನಕ್ಷತ್ರದವರ ಆರೋಗ್ಯ ಭವಿಷ್ಯ 2023
ಈ ವರ್ಷ ನಿಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ, ನಿಮ್ಮ ಜೀವನಶೈಲಿ ಮತ್ತಷ್ಟು ಉತ್ತಮವಾಗಿಸಲು ಪ್ರಯತ್ನಿಸುತ್ತೀರಿ. ಏನಾದರೂ ಆರೋಗ್ಯ ಸಮಸ್ಯೆ ಇದ್ದರೆ 2023ರಲ್ಲಿ ಸುಧಾರಣೆ ಕಾಣಲಿದೆ. ಆದರೆ ಜೂನ್-ಆಗಸ್ಟ್ ನಡುವೆ ನಿಮ್ಮ ಆರೋಗ್ಯದ ಬಗ್ಗೆ ಗಮನ ನೀಡಬೇಕಾಗಿದೆ.
ಒಟ್ಟಿನಲ್ಲಿ ವೈಶಾಖ ನಕ್ಷತ್ರದವರಿಗೆ 2023 ತುಂಬಾನೇ ಫಲಪ್ರದವಾಗಿದೆ.



Click it and Unblock the Notifications
