Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಕುಡಿದ ಮತ್ತಿನಲ್ಲಿ ಹಾವಿನ ಜೊತೆ ಆಟ, ಗ್ರಾಮಸ್ಥರಿಗೆ ಪ್ರಾಣ ಸಂಕಟ!
ಹಾವು ಕಂಡರೆ ಮಾರುದ್ದ ದೂರ ಹೋಗುತ್ತೇವೆ. ಎಲ್ಲಿ ಕಚ್ಚಿ ಬಿಡುತ್ತೆ ಅನ್ನೋ ಭಯ. ವಿಷಕಾರಕ ಹಾವು ಕಚ್ಚಿದರೆ ತಕ್ಷಣವೇ ಚಿಕಿತ್ಸೆ ಪಡೆಯದಿದ್ದರೆ ಪ್ರಾಣಕ್ಕೆ ಅಪಾಯ. ಆದರೆ ಇಲ್ಲೊಬ್ಬ ಹಾವಿನ ಜೊತೆ ಆಟವಾಡೋ ಮೂಲಕ ನೋಡುಗರಿಗೆ ಭಯ ಹುಟ್ಟಿಸಿದ್ದಾನೆ. ಈತನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.

ಈ ಕೆಳಗಿನ ವೀಡಿಯೋ ನೋಡಿದರೆ, ಈತನ ಭಂಡ ಧೈರ್ಯ ಅರ್ಥವಾಗುತ್ತದೆ. ಕಂಠಪೂರ್ತಿ ಕುಡಿದು, ಮತ್ತಿನಲ್ಲೇ ಹಾವನ್ನು ತನ್ನ ಸಹೋದರ ಎಂದು ಮಾತನಾಡಿಸಿದ್ದಾನೆ. ಇಷ್ಟೇ ಅಲ್ಲ ನಿನ್ನನ್ನು ಎಲ್ಲಿಗೂ ಹೋಗಲು ಬಿಡುವುದಿಲ್ಲ. ಇಲ್ಲೇ ಇರು ಎಂದು ಹಾವಿನ ಜೊತೆ ಮಾತನಾಡುತ್ತಿರುವ ದೃಶ್ಯ ವೈರಲ್ ಆಗಿದೆ.
ಹೊಲದಲ್ಲಿ ಕುಳಿತ ಈತ ತನ್ನ ಎದುರಿಗಿರುವ ಹಾವಿನ ಜೊತೆ ಸಂಭಾಷಣೆಯಲ್ಲಿ ತೊಡಗಿದ್ದಾನೆ. ಭಯಗೊಂಡ ಹಾವು ಈತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ಅಮಲಿನಲ್ಲಿರುವ ಈತ ಮಾತ್ರ, ಸಹೋದರ ನಾ ನಿನ್ನ ಬಿಡಲಾರೆ ಎಂದು ಹಿಂದೆ ಬಿದ್ದಿದ್ದಾನೆ. ಗ್ರಾಮಸ್ಥರು ತಕ್ಷಣವೇ ಹಾವಿನಿಂದ ದೂರ ಹೋಗುವಂತೆ ಮನವಿ ಮಾಡುತ್ತಿದ್ದಾರೆ. ಆದರೆ ಇದ್ಯಾವುದನ್ನು ಕೇಳುವ ಪರಿಸ್ಥಿತಿಯಲ್ಲಿ ಆತನಿಲ್ಲ.
ವಿಷಕಾರಕ ಹಾವು ಕಚ್ಚುತ್ತೆ. ಹಾವಿನ ಬಳಿಯಿಂದ ದೂರ ಸರಿಯಲು ಹಲವರು ಮನವಿ ಮಾಡಿದ್ದಾರೆ. ಆದರೆ ಈ ಹಾವು ಕಚ್ಚುವುದಿಲ್ಲ. ಕಾರಣ ಇದು ನನ್ನ ಸಹೋದರ ಎಂದು ಹಾವನ್ನೇ ಹಿಡಿಯಲು ಹೋಗಿದ್ದಾನೆ. ಈತನ ವರ್ತನೆಗೆ ಬೆಚ್ಚಿ ಬಿದ್ದ ಹಾವು ಅಲ್ಲಿಂದ ಸರಿಯಲು ಮುಂದಾಗಿದೆ. ತಕ್ಷಣವೇ ಕೈಯಿಂದ ಹಿಡಿಯಲು ಹೋದಾಗ ಹಾವು ಕಚ್ಚಲು ಬಂದಿದೆ. ಹೀಗಾಗಿ ಎತ್ತಿ ಬಿಸಾಡಿದ್ದಾನೆ. ಈತನ ಹಾವು ಪ್ರೀತಿ ಇಷ್ಟಕ್ಕೆ ಮುಗಿಯಲಿಲ್ಲ.
ನೆರದಿದ್ದವರೂ ಅದೆಷ್ಟೇ ಮನವಿ ಮಾಡಿದರೂ ಈತ ಮಾತ್ರ ಹಾವಿನ ಜೊತೆಗಿನ ಆಟದಿಂದ ಹಿಂದೆ ಸರಿಯಲಿಲ್ಲ. ಒಂದೆರಡು ಬಾರಿ ಹಾವು ಕಚ್ಚಲು ಪ್ರಯತ್ನಿಸಿದರೂ ಈತ ತಪ್ಪಿಸಿಕೊಂಡ. ಕೊನೆಗೆ ಹಾವಿನ ಬಾಲ ಹಿಡಿದು ಮೇಲಕ್ಕೆತ್ತಿದೆ. ದೂರದಲ್ಲಿ ನಿಂತಿದ್ದ ಗ್ರಾಮಸ್ಥರ ಬಳಿಗೆ ಹಾವನ್ನು ಹಿಡಿದು ಆಗಮಿಸಿದ. ಇದನ್ನು ನೋಡಿದ ಗ್ರಾಮಸ್ಥರು ಅಲ್ಲಿಂದ ಕಾಲ್ಕಿತ್ತರು. ಈ ವೀಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಿದೆ.



Click it and Unblock the Notifications
