ಡಿ. 11ಕ್ಕೆ ವೃಶ್ಚಿಕ ರಾಶಿಗೆ ಶುಕ್ರನ ಸಂಚಾರ: ಇದರಿಂದ ಈ ರಾಶಿಯವರಿಗೆ ತುಂಬಾನೇ ಅದೃಷ್ಟದ ಯೋಗ

ಜ್ಯೋತಿಷ್ಯ ಪ್ರಕಾರ ಪ್ರತಿಯೊಂದು ಗ್ರಹ ಸಂಚಾರವು ಮನುಷ್ಯನ ಮೇಲೆ ಪ್ರಭಾವ ಬೀರುವುದು. ಈ ಡಿಸೆಂಬರ್ 11ರಂದಯ ಬೆಳಗ್ಗೆ 5.04ಕ್ಕೆ ಶುಕ್ರನು ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಸಂಚರಿಸುತ್ತಿದ್ದಾನೆ.

Venus Transit in Scorpio On 11 December 2020 Effects On Zodiac Signs in kannada

ಈ ಸಂಚಾರ ಕೆಲ ರಾಶಿಗಳಿಗಂತೂ ತುಂಬಾ ಒಳ್ಳೆಯದು ಮಾಡಲಿದೆ. ನಿಮ್ಮ ರಾಶಿಗೆ ಶುಕ್ರನ ಈ ಸಂಚಾರದ ಪ್ರಭಾವ ಹೇಗಿರಲಿದೆ ಎಂದು ನೋಡೋಣ:
ಜ್ಯೋತಿಷ್ಯ ಪ್ರಕಾರ ಪ್ರತಿಯೊಂದು ಗ್ರಹ ಸಂಚಾರವು ಮನುಷ್ಯನ ಮೇಲೆ ಪ್ರಭಾವ ಬೀರುವುದು. ಈ ಡಿಸೆಂಬರ್ 11ರಂದಯ ಬೆಳಗ್ಗೆ 5.04ಕ್ಕೆ ಶುಕ್ರನು ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಸಂಚರಿಸುತ್ತಿದ್ದಾನೆ.

ಈ ಸಂಚಾರ ಕೆಲ ರಾಶಿಗಳಿಗಂತೂ ತುಂಬಾ ಒಳ್ಳೆಯದು ಮಾಡಲಿದೆ. ನಿಮ್ಮ ರಾಶಿಗೆ ಶುಕ್ರನ ಈ ಸಂಚಾರದ ಪ್ರಭಾವ ಹೇಗಿರಲಿದೆ ಎಂದು ನೋಡೋಣ:

 ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರಲ್ಲಿ ಶುಕ್ರನು 8ನೇ ಮನೆಗೆ ಸಂಚಾರ ಮಾಡುತ್ತಿದ್ದಾನೆ. ಶುಕ್ರನ ಈ ಸಂಚಾರ ಮೇಷ ರಾಶಿಯವರಿಗೆ ಅಷ್ಟು ಶುಭಕರವಾಗಿಲ್ಲ. ಏಕೆಂದರೆ 8ನೇ ಮನೆಯನ್ನುಕೆಟ್ಟ ಶಕ್ತಿಯ ಮನೆಯಂದು ಪರಿಗಣಿಸಲಾಗಿದೆ. ಈ ಸಂದರ್ಭದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಸೂಚಿಸಲಾಗಿದೆ. ಇನ್ನು ಅಧಿಕ ಹಣ ಖರ್ಚು ಮಾಡುವುದರಿಂದ ಹಣಕಾಸಿನ ತೊಂದರೆ ಉಂಟಾಗುವುದು. ನೀವು ಯಾರನ್ನಾದರೂ ಪ್ರಿತಿಸುತ್ತಿದ್ದರೆ ಅವರ ಮನೆಯವರನ್ನು ಭೇಟಿಯಾಗುವಿರಿ. ವ್ಯವಹಾರದಲ್ಲಿ ಏರಳಿತ ಉಂಟಾಗುವುದು, ಇದರಿಂದಾಗಿ ಮಾನಸಿಕ ಒತ್ತಡ ಹೆಚ್ಚುವುದು. ಈ ಸಮಯದಲ್ಲಿ ನೀವು ಯಾವುದೇ ಹಣ ಹೂಡಿಕೆ ಮಾಡಬೇಡಿ, ಮಾಡಿದರೆ ನಷ್ಟ ಅನುಭವಿಸಬೇಕಾಗುವುದು.

ಪರಿಹಾರ: ಪ್ರತಿ ಶುಕ್ರವಾರ ಶಿವನ ದೇವಾಲಯಕ್ಕೆ ಹೋಗಿ ಅರ್ಚನೆ ಮಾಡಿಸಿ.

ವೃಷಭ ರಾಶಿ

ವೃಷಭ ರಾಶಿ

ವೃಷಭ ರಾಶಿಯವರಲ್ಲಿ ಶುಕ್ರನು 7ನೇ ಮನೆಗೆ ಸಂಚರಿಸುತ್ತದ್ದಾನೆ. ಇದನ್ನು ಆಮದು-ರಫ್ತು, ವೈವಾಹಿಕ ಸಂಬಂಧಕ್ಕೆ ಕುರಿತ ಮನೆಯಂದು ಪರಿಗಣಿಸಲಾಗಿದೆ. ಈ ಸಂಚಾರ ನಿಮಗೆ ತುಂಬಾ ಅನುಕೂಲಕರವಾಗಿದೆ. ತುಂಬಾ ದಿನದಿಂದ ಕಾಯಿಲೆಯಿಂದ ಬಳಲುತ್ತಿದ್ದರೆ ಈ ಸಮಯದಲ್ಲಿ ಗುಣಮುಖರಾಗುವಿರಿ. ಜನರು ಕೂಡ ನಿಮ್ಮ ಗುಣಗಳತ್ತ ಆಕರ್ಷಿತರಾಗುತ್ತಾರೆ. ಆರ್ಥಿಕ ದೃಷ್ಟಿಯಿಂದ ಕೂಡ ಈ ಸಮಯ ಕೂಡ ಅನುಕೂಲಕರವಾಗಿದೆ. ವ್ಯವಹಾರದಲ್ಲಿ ಲಾಭ ಉಂಟಾಗುವುದು. ನೀವು ಪಾಲುದಾರಿಕೆಯಿಂದ ಮಾಡಿರುವ ವ್ಯವಹಾರದಲ್ಲಿ ಕೂಡ ಲಾಭ ಕಾಣುವಿರಿ. ಇನ್ನು ವೈವಾಹಿಕ ಜೀವನ ಕೂಡ ಚೆನ್ನಾಗಿರುತ್ತದೆ. ಸಾಮಾಜಿಕವಾಗಿ ನಿಮ್ಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಇದೊಂದು ಒಳ್ಳೆಯ ಅವಕಾಶ.

 ಮಿಥುನ ರಾಶಿ

ಮಿಥುನ ರಾಶಿ

ಮಿಥುನ ರಾಶಿಯವರಲ್ಲಿ ಶುಕ್ರನು 6ನೇ ಮನೆಗೆ ಸಂಚರಿಸುತ್ತಿದ್ದಾನೆ. ಇದನ್ನು ಜಗಳ, ದೈಹಿಕ ಸಮಸ್ಯೆ, ಸಾಲ, ಶತ್ರುಗಳು, ವಿರೋಧಿಗಳ ಮನೆಯಂದು ಪರಿಗಣಿಸಲಾಗಿದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಆರೋಗ್ಯದಲ್ಲಿ ಕುಸಿತ ಕಂಡು ಬರುವುದು, ಮೂತ್ರ ಸೋಂಕಿನ ಸಮಸ್ಯೆ ಕಾಣಿಸಬಹುದು, ಆದ್ದರಿಂದ ನಿಮ್ಮ ಆಹಾರದ ಕಡೆ ಗಮನ ನೀಡಿ. ಈ ಸಂಚಾರದ ಪರಿಣಾಮದಿಂದ ಖರ್ಚು ಹೆಚ್ಚುವುದು. ಈ ಸಂಚಾರದ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ವಿದ್ಯಾರ್ಥಿಗಳು ಅಧ್ಯಯನದ ಕಡೆ ಹೆಚ್ಚಿನ ಗಮನ ಹರಿಸಬೇಕು. ನೀವು ಹಣ ಹೇಗೆ ಖರ್ಚು ಮಾಡಬೇಕೆಂದು ಒಂದು ಲೆಕ್ಕಾಚಾರ ಮಾಡಿ, ಅದರಂತೆ ಖರ್ಚು ಮಾಡಿದರೆ ಒಳ್ಳೆಯದು. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ನಿಮ್ಮಿಬ್ಬರ ಬಂಧ ಮತ್ತಷ್ಟು ಗಟ್ಟಿಯಾಗಲು ಇದು ಸೂಕ್ತ ಸಮಯವಾಗಿದೆ,

ಕರ್ಕ ರಾಶಿ

ಕರ್ಕ ರಾಶಿ

ಕರ್ಕ ರಾಶಿಯವರಲ್ಲಿ ಶುಕ್ರನು 5ನೇ ಮನೆಗೆ ಸಂಚಾರ ಮಾಡುತ್ತಿದ್ದಾನೆ. ಇದನ್ನು ಅದೃಷ್ಟದ ಮನೆಯಂದು ಪರಿಗಣಿಸಲಾಗಿದೆ. ಈ ಮನೆಯನ್ನು ಸಾಮಾರ್ಥ್ಯ, ಪ್ರೀತಿ ಸಂಬಂಧ, ಮಕ್ಕಳು, ಕಲೆಯ ಮನೆಯಂದು ಪರಿಗಣಿಸಲಾಗಿದೆ.

ಈ ಸಂಚಾರದಲ್ಲಿ ಸಂಬಂಧದಲ್ಲಿ ಇದ್ದ ವೈಮನಸ್ಸು ದೂರವಾಗಿ ಪ್ರೀತಿ ಹೆಚ್ಚುವುದು. ನಿಧಾನಕ್ಕೆ ನಿಮ್ಮ ಆದಾಯ ಕೂಡ ಹೆಚ್ಚುವುದು. ನಿಮ್ಮಲ್ಲಿರುವ ಕಲೆ ನಿಮಗೆ ಆರ್ಥಿಕ ಲಾಭವನ್ನು ಕೂಡ ತರುತ್ತದೆ. ನಿಮಗೆ ಮಕ್ಕಳಿದ್ದರೆ ಈ ಸಮಯದಲ್ಲಿ ಮಕ್ಕಳಿರುವ ವಿಶೇಷ ಕಲೆಯನ್ನು ಗುರುತಿಸುವಿರಿ, ಅಲ್ಲದೆ ಅವರಿಂದ ನಿಮಗೆ ಮನಸ್ಸಿಗೆ ಖುಷಿ ಸಿಗುವುದು

 ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರಲ್ಲಿ ಶುಕ್ರನು ನಾಲ್ಕನೇ ಮನೆಗೆ ಸಂಚರಿಸುತ್ತಿದ್ದಾನೆ. ಇದನ್ನು ತಾಯಿ, ಖುಷಿ, ಸಂಪತ್ತಿನ ಮನೆಯಂದು ಪರಿಗಣಿಸಲಾಗಿದೆ. ಈ ಸಂಚಾರದಲ್ಲಿ ಖುಷಿ ಹೆಚ್ಚುವುದು. ಮನೆಗೆ ಹೊಸ ವಸ್ತುಗಳನ್ನು ಖರೀದಿ ಮಾಡುವಿರಿ. ಮನೆಯ ವಾತಾವರಣ ಆಹ್ಲಾದಕರವಾಗಿರುತ್ತದೆ. ಈ ಅವಧಿಯಲ್ಲಿ ನಿಮ್ಮ ತಾಯಿಗೆ ಕೂಡ ಒಳಿತಾಗುವುದು. ನೀವು ಕೆಲಸದಲ್ಲಿ ತುಂಬಾ ಗಮನಹರಿಸಬೇಕು. ಆದರೆ ಮಾತ್ರ ವೃತ್ತಿಯಲ್ಲಿ ಯಶಸ್ಸು ಸಿಗಲು ಸಾಧ್ಯ.

ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯವರಲ್ಲಿ ಶುಕ್ರನು 3ನೇ ಮನೆಗೆ ಸಂಚರಿಸುತ್ತಿದ್ದಾನೆ. ಇದನ್ನು ಸಂವಹನ, ಪ್ರಯಾಣ, ಸಂಬಂಧಿಗಳು, ಕಿರಿಯ ಒಡಹುಟ್ಟಿದವರ ಮನೆಯಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ನಿಮ್ಮ ಕೆಲಸದಲ್ಲಿ ವೇಗ ಹೆಚ್ಚುವುದು. ಅಪೂರ್ಣವಾದ ಕೆಲಸಗಳನ್ನು ಈ ಸಮಯದಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುವುದು, ಇದರಿಂದಾಗಿ ಆರ್ಥಿಕ ಲಾಭ ಕೂಡ ಉಂಟಾಗುವುದು.

ನಿಮ್ಮ ಕಿರಿಯ ಸಹೋದರ/ಸಹೋದರಿಗೆ ಸಹಾಯ ಮಾಡುವಿರಿ. ಸಂಬಂಧಿಕರ ಮನೆಗೆ ಭೇಟಿ ನೀಡುವಿರಿ. ನಿಮ್ಮ ನೆರೆಯವರ ಜೊತೆ ಅಥವಾ ಕುಟುಂಬಸ್ಥರ ಜೊತೆ ಯಾವುದೇ ಚರ್ಚೆ/ಜಗಳ ಮಾಡಲು ಹೋಗಬೇಡಿ.

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯವರಲ್ಲಿ ಶುಕ್ರನು 2ನೇ ಮನೆಗೆ ಸಂಚರಿಸುತ್ತಿದ್ದಾನೆ. ಇದನ್ನು ಸಂಪತ್ತು, ಕುಟುಂಬ, ತಿನ್ನುವ ಹವ್ಯಾಸ, ಮುಖ, ಧ್ವನಿಯ ಮನೆಯಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಅನೇಕ ಕಡೆಯಿಂದ ಧನ ಲಾಭ ಉಂಟಾಗುವುದು. ನಿಮ್ಮ ಕುಟುಂಬದಲ್ಲಿ ತುಂಬಾ ಸಮಯದಿಂದ ಇದ್ದ ಸಮಸ್ಯೆ ಬಗೆ ಹರಿಯುವುದು, ಮನೆಯ ಸದಸ್ಯರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವಿರಿ, ಕೆಲವೊಮ್ಮೆ ಪರಿಸ್ಥಿತಿಯನ್ನು ಹತೋಟಿಗೆ ತರಲು ನೀವು ಸ್ವಲ್ಪ ಕಠೋರವಾಗಿ ವರ್ತಿಸಬೇಕಾಗುವುದು. ನೀವು ನಿಮ್ಮ ಇಷ್ಟದ ವಸ್ತುಗಳಿಗಾಗಿ ಹಣವನ್ನು ಖರ್ಚು ಮಾಡುವಿರಿ. ನೀವು ಉಳಿತಾಯ ಮಾಡುವಿರಿ. ವ್ಯವಹಾರದಲ್ಲೂ ಲಾಭ ಉಂಟಾಗುವುದು.

 ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಶುಕ್ರನು ವೃಶ್ಚಿಕ ರಾಶಿಗೆ ಸಂಚರಿಸುತ್ತಿದ್ದಾನೆ. ಮೊದಲ ಮನೆಯನ್ನು ಬುದ್ಧಿ, ಯೋಚನೆ, ಸಾಮಾಜಿಕ, ದೈಹಿಕ ರೂಪ, ಬಣ್ಣದ ಮನೆಯಂದು ಪರಿಗಣಿಸಲಾಗಿದೆ. ನೀವು ಹೊಸ ವಸ್ತುವೊಂದನ್ನು ಖರೀದಿ ಮಾಡುವಿರಿ. ಈ ಸಮಯದಲ್ಲಿ ನಿಮ್ಮ ಖುಷಿಗಾಗಿ, ಗ್ಯಾಡ್ಜೆಟ್‌ಗಾಗಿ ಹಣ ಖರ್ಚು ಮಾಡುವಿರಿ. ಇವುಗಳಿಂದ ಖರ್ಚು ಹೆಚ್ಚಾದರೂ ನಿಮ್ಮದ ಇಷ್ಟದ ವಸ್ತುಗಳನ್ನು ಕೊಂಡಿರುವುದರಿಂದ ಹಣ ಚಿಂತೆ ಮಾಡುವುದಿಲ್ಲ. ಈ ಸಂಚಾರದ ಸಮಯದಲ್ಲಿ ನಿಮ್ಮ ವೈವಾಹಿಕ ಜೀವನ ಕೂಡ ಚೆನ್ನಾಗಿರುತ್ತದೆ. ನಿಮ್ಮ ವ್ಯವಹಾರ ಹೆಚ್ಚಾಗುವುದು, ಆರ್ಥಿಕ ಲಾಭ ಉಂಟಾಗುವುದು. ಕೆಲವರಿಗೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಬಹುದು.

ಧನು ರಾಶಿ

ಧನು ರಾಶಿ

ಧನು ರಾಶಿಯವರಲ್ಲಿ ಶುಕ್ರನು 12ನೇ ಮನೆಗೆ ಸಂಚರಿಸುತ್ತಿದ್ದಾನೆ. ಇದರಿಂದ ಮಿಶ್ರಫಲ ಉಂಟಾಗುವುದು. 12ನೇ ಮನೆಯನ್ನು ಖರ್ಚು, ವಿದೇಶ ಪ್ರಯಾಣ, ಆರೋಗ್ಯ ಸಮಸ್ಯೆ ಇವುಗಳನ್ನು ಪ್ರತಿನಿಧಿಸುತ್ತದೆ. ನೀವು ಈ ಸಂಚಾರದ ಸಮಯದಲ್ಲಿ ನಿಮ್ಮ ಸ್ಪರ್ಧಿಗಳ ನಡೆಯನ್ನು ಗಮನಿಸಬೇಕು, ಇಲ್ಲದಿದ್ದರೆ ಅವರು ನಿಮಗೆ ಆರ್ಥಿಕ ನಷ್ಟ ತರಬಹುದು. ಅದಲ್ಲದೆ ಹೆಚ್ಚುತ್ತಿರುವ ಖರ್ಚು ನಿಮ್ಮನ್ನು ಚಿಂತೆಗೀಡು ಮಾಡುವುದು. ಆರೋಗ್ಯದ ದೃಷ್ಟಿಯಿಂದ ಈ ಸಂಚಾರ ಆರೋಗ್ಯಕರವಾಗಿಲ್ಲ. ತಾಯಿ ಮನೆಯ ಕಡೆಯಿಂದ ಆರ್ಥಿಕ ನಷ್ಟ ಉಂಟಾಗುವುದು.

ಮಕರ ರಾಶಿ

ಮಕರ ರಾಶಿ

ಮಕರ ರಾಶಿಯವರಲ್ಲಿ ಶುಕ್ರನು 11ನೇ ಮನೆಗೆ ಸಂಚರಿಸುತ್ತಿದ್ದಾನೆ. ಈ ಮನೆಯನ್ನು ಅದೃಷ್ಟದ ಮನೆಯಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಎಲ್ಲಾ ರೀತಿಯ ಯಶಸ್ಸು ದೊರೆಯುವುದು. ವೃತ್ತಿ, ಆರ್ಥಿಕ ರಂಗದಲ್ಲಿ ಪ್ರಗತಿ ಕಾಣುವಿರಿ. ಸಾಮಾಜಿಕವಾಗಿಯೂ ನಿಮ್ಮ ಗೌರವ ಹೆಚ್ಚುವುದು. ನೀವು ಪ್ರೀತಿಸುತ್ತಿದ್ದರೆ ಪ್ರೀತಿಯಲ್ಲಿರುವ ಅಡೆತಡೆಗಳನ್ನು ನಿವಾರಿಸಲು ಈ ಸಂಚಾರ ಸಹಾಯ ಮಾಡುತ್ತದೆ.

ಕುಂಭ ರಾಶಿ

ಕುಂಭ ರಾಶಿ

ಕುಂಭ ರಾಶಿಯವರಲ್ಲಿ ಶುಕ್ರನು 10ನೇ ಮನೆಗೆ ಸಂಚರಿಸುತ್ತಿದ್ದಾನೆ. 10ನೇ ಮನೆಯನ್ನು ಕೂಡ ಅದೃಷ್ಟದ ಮನೆಯಂದು ಪರಿಗಣಿಸಲಾಗಿದೆ. ಈ ಸಂಚಾರದ ಸಮಸಯದಲ್ಲಿ ವೃತ್ತಿಯಲ್ಲಿ, ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಅದೃಷ್ಟ ನಿಮ್ಮ ಬೆಂಬಲಕ್ಕೆ ಇರುತ್ತದೆ. ಆದರೆ ನಿರ್ಲಕ್ಷ್ಯ ಮಾಡಬೇಡಿ, ಅದು ಒಳ್ಳೆಯದಲ್ಲ. ಯಾವುದೇ ಜಗಳ, ಗಾಸಿಪ್ ಇವುಗಳಲ್ಲಿ ಸಿಕ್ಕಿಕೊಳ್ಳಬೇಡಿ, ಇಲ್ಲದಿದ್ದರೆ ನಿಮಗೆ ಹಾನಿಯುಂಟಾಗುವುದು. ಕುಟುಂಬ ಸದಸ್ಯರ ಜೊತೆ ಸಾಮರಸ್ಯ ಚೆನ್ನಾಗಿರುತ್ತದೆ. ಕುಂಭ ರಾಶಿಯವರಲ್ಲಿ ಕೆಲವರು ಮನೆಯವರ ಸಹಾಯ ಕೇಳಬಹುದು, ಇದರಿಂದಾಗಿ ಕೆಲಸವನ್ನು ಮತ್ತಷ್ಟು ಉತ್ತಮವಾಗಿ ಮಾಡಲು ಸಾಧ್ಯವಾಗುವುದು.

ಮೀನ ರಾಶಿ

ಮೀನ ರಾಶಿ

ಮೀನ ರಾಶಿಯವರಲ್ಲಿ ಶುಕ್ರನು 9ನೇ ಮನೆಗೆ ಸಂಚರಿಸುತ್ತಿದ್ದಾನೆ. ಈ ಮನೆಯನ್ನು ಹಣೆಬರಹ, ತೀರ್ಥಯಶತ್ರೆ, ದಾನ, ಧರ್ಮಕ್ಕೆ ಸಂಬಂಧಿಸಿದ ಮನೆಯಂದು ಪರಿಗಣಿಸಲಾಗಿದೆ. ಈ ಸಂಚಾರದ ಸಮಯದಲ್ಲಿ ಕೆಲವೊಂದು ಏರಳಿತ ಉಂಟಾಗುವುದು. ತಂದೆಗೆ ಆರೋಗ್ಯ ಸಮಸ್ಯೆ ಕಂಡು ಬರುವುದು. ನಿಮ್ಮ ಕಿರಿಯ ಸಹೋದರ-ಸಹೋದರಿಯ ಬೆಂಬಲ ಸಿಗುವುದು. ನೀವು ಒಂದು ಚಿಕ್ಕ ಟ್ರಿಪ್ ಹೋಗುವಿರಿ. ವೃತ್ತಿಯಲ್ಲಿ ನಿಮ್ಮ ಪರಿಶ್ರಮಕ್ಕೆ ಒಳ್ಳೆಯ ಪ್ರಗತಿ ಕಾಣುವಿರಿ, ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಕಾಣಿಸುವುದು. ಆದ್ದರಿಂದ ಆರೋಗ್ಯದ ಕಡೆ ಗಮನ ನೀಡಿ.

English summary

Venus Transit in Scorpio On 11 December 2020 Effects On Zodiac Signs in kannada

Venus Transit in Scorpio Effects on Zodiac Signs in kannada : The Venus Transit in Scorpio will take place on 11 December 2020. Learn about remedies to perform in kannada,
X
Desktop Bottom Promotion