Latest Updates
-
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ!
Shukra Gochar August 2022 : ಆ.31ಕ್ಕೆ ಸಿಂಹ ರಾಶಿಯಲ್ಲಿ ಶುಕ್ರ ಸಂಕ್ರಮಣ: 10 ರಾಶಿಗಳಿಗೆ ಶುಭ, 2 ರಾಶಿಗಳಿಗೆ ಮಿಶ್ರಫಲ
ಶುಕ್ರನನ್ನು ಐಶ್ವರ್ಯ, ಭೌತಿಕ ಸುಖ, ಸಂಗಾತಿ ಇವುಗಳ ಅಂಶವೆಂದು ಪರಿಗಣಿಸಲಾಗಿದೆ. ನಮ್ಮ ಕುಂಡಲಿಯಲ್ಲಿ ಶುಕ್ರ ಬಲವಾಗಿದ್ದರೆ ಅದೃಷ್ಟದ ಬೆಂಬಲ ನಮ್ಮ ಜೊತೆಗಿರುತ್ತದೆ. ಆಗಸ್ಟ್ 31ಕ್ಕೆ ಶುಕ್ರನು ಸಿಂಹ ರಾಶಿಗೆ ಪ್ರವೇಶಿಸಲಿದೆ. ಈ ಸಂಚಾರ 12 ರಾಶಿಗಳ ಮೇಲೆ ಪ್ರಭಾವ ಬೀರಲಿದ್ದು ಯಾವ ರಾಶಿಯ ಮೇಲೆ ಹೇಗೆ ಪ್ರಭಾವ ಬೀರಿದೆ ಎಂದು ಇಲ್ಲಿ ನೀಡಲಾಗಿದೆ ನೋಡಿ:


ಮೇಷ ರಾಶಿ
ಮೇಷ ರಾಶಿಯವರಲ್ಲಿ ಶುಕ್ರನು 5ನೇ ಮನೆಯಲ್ಲಿ ಇರಲಿದೆ. ಇದು ಶಿಕ್ಷಣ, ಪ್ರೀತಿ-ಸಂಬಂಧ ಮತ್ತು ಮಕ್ಕಳಿಗೆ ಸಂಬಂಧಿಸಿದ ಮನೆಯಾಗಿದೆ.
ಈ ಅವಧಿ ವಿದ್ಯಾರ್ಥಿಗಳಿಗೆ ತುಂಬಾ ಒಳ್ಳೆಯದಿದೆ, ನೀವು ನಿಮ್ಮ ಕ್ಷೇತ್ರದಲ್ಲಿ ಒಳ್ಳೆಯ ಪರ್ಫಾಮನ್ಸ್ ತೋರಿಸಬಹುದು.
ಪ್ರೇಮಿಗಳಿಗೆ ಈ ಅವಧಿ ಅಷ್ಟು ಅನುಕೂಲಕರವಾಗಿಲ್ಲ. ಈ ಸಮಯದಲ್ಲಿ ಈಗೋ ಸಮಸ್ಯೆ ಬರಬಹುದು. ಅವುಗಳನ್ನು ಬಗೆಹರಿಸಿ ಮದುವೆಯಾಗುವುದರ ಬಗ್ಗೆಯೂ ಚಿಂತಿಸಬಹುದು. ಇನ್ನು ಮದುವೆಯಾಗಲು ಬಯಸುವವರಿಗೆ ಒಳ್ಳೆಯ ಸಂಬಂಧ ಕೂಡಿ ಬರಲಿದೆ. ಇನ್ನು ಮಗುವಿನ ಅಪೇಕ್ಷಿತರು ಒಳ್ಳೆಯ ಸುದ್ದಿ ಪಡೆಯಬಹುದು. ಒಟ್ಟಾರೆಯಾಗಿ ನೋಡುವುದಾದರೆ ಮೇಷ ರಾಶಿಯವರಿಗೆ ಈ ಅವಧಿ ಪರ್ವಾಗಿಲ್ಲ.
ಪರಿಹಾರ: ಪ್ರತಿ ಶುಕ್ರವಾರ ಲಕ್ಷ್ಮಿಯನ್ನು ಪೂಜಿಸಿ.

ವೃಷಭ ರಾಶಿ
ವೃಷಭ ರಾಶಿಯ 4ನೇ ಮನೆಯಲ್ಲಿ ಶುಕ್ರನು ಇರಲಿದೆ. ಇದನ್ನು ಕೌಟಂಬಿಕ ಜೀವನ, ಮನೆ, ಗಾಡಿ, ಆಸ್ತಿಯ ಮನೆಯೆಂದು ಪರಿಗಣಿಸಲಾಗಿದೆ. ಈ ಶುಕ್ರ ಸಂಚಾರ ನಿಮಗೆ ಐಶ್ವರ್ಯ ತರಲಿದೆ. ಈ ಅವಧಿಯಲ್ಲಿ ನೀವು ದುಬಾರಿ ವಸ್ತುಗಳನ್ನು ಖರೀದಿಸಬಹುದು. ನಿಮ್ಮ ಕೌಟಂಬಿಕ ಜೀವನ ಚೆನ್ನಾಗಿರುತ್ತದೆ. ಇನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಈ ಅವಧಿ ಅನುಕೂಲಕರವಾಗಿದೆ. ಮನೆಗಾಗಿ ಸಾಲ ಮಾಡುತ್ತಿದ್ದರೆ ಈ ಅವಧಿಯಲ್ಲಿ ನಿಮಗೆ ಹಣ ದೊರೆಯಲಿದೆ.
ಪರಿಹಾರ: ಪ್ರತಿದಿನ ಶುಕ್ರ ಬೀಜ ಮಂತ್ರ ಪಠಿಸಿ.

ಮಿಥುನ ರಾಶಿ:
ಈ ಸಂಚಾರ ಅವಧಿಯಲ್ಲಿ ಶುಕ್ರನು ಮಿಥುನ ರಾಶಿಯವರ 3ನೇ ಮನೆಯಲ್ಲಿ ಇರಲಿದೆ. ಇದನ್ನು ಒಡಹುಟ್ಟಿದವರು, ಹವ್ಯಾಸ, ಪ್ರಯಾಣ, ಸಂವಹನದ ಮನೆಯೆಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ನಿಮ್ಮ ಕೆಲಸದಲ್ಲಿ ಕ್ರಿಯೇಟಿವಿಟಿ ಹೆಚ್ಚುವುದು. ನೀವು ಈ ಅವಧಿಯಲ್ಲಿ ಮನರಂಜನೆ, ಟ್ರಾವೆಲ್‌ಗಾಗಿ ಹಣ ಖರ್ಚು ಮಾಡುವಿರಿ. ಈ ಅವಧಿಯಲ್ಲಿ ಕೌಟಂಬಿಕ ಜೀವನ ಚೆನ್ನಾಗಿರುತ್ತದೆ, ಧಾರ್ಮಿಕ ಕಾರ್ಯದ ಕಡೆಗೆ ನಿಮ್ಮ ಒಲವು ಹೆಚ್ಚಾಗುವುದು.
ಪರಿಹಾರ: ನಿಮ್ಮ ನಕ್ಷತ್ರಕ್ಕೆ ಹೊಂದುವ ಹರಳನ್ನು ಬೆಳ್ಳಿ ಅಥವಾ ಚಿನ್ನದ ಉಗುರದಲ್ಲಿ ಧರಿಸಿ.

ಕರ್ಕ ರಾಶಿ
ಶುಕ್ರನು ಈ ಸಂಚಾರ ಅವಧಿಯಲ್ಲಿ ಕರ್ಕ ರಾಶಿಯವರ 2ನೇ ಮನೆಯಲ್ಲಿ ಇರಲಿದೆ. ಇದನ್ನು ಕುಟುಂಬ, ಉಳಿತಾತ, ಭಾಷಣದ ಮನೆಯೆಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರುತ್ತದೆ, ನೀವು ಉಳಿತಾಯವನ್ನು ಮಾಡಬಹುದು. ಈ ಅವಧಿಯಲ್ಲಿ ಯಾವುದಾದರೂ ದೀರ್ಘಾವಧಿ ಹೂಡಿಕೆ ಮಾಡುವುದು ಒಳ್ಳೆಯದು.
ಶುಕ್ರನ ಈ ಸಂಚಾರ ಅವಧಿ ವಿದ್ಯಾರ್ಥಿಗಳಿಗೂ ಹಾಗೂ ವೃತ್ತಿ ಪರರಿಗೆ ಅನುಕೂಲಕರವಾಗಿದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ಒಟ್ಟಿನಲ್ಲಿ ಈ ಅವಧಿ ನಿಮಗೆ ಅನುಕೂಲಕರವಾಗಿದೆ.
ಪರಿಹಾರ: ಮನೆಯನ್ನು ಬಿಡುವ ಮುನ್ನ ಒಂದು ತುಂಡು ಬೆಲ್ಲ ತೆಗೆದು ಬಾಯಿಗೆ ಹಾಕಿ.

ಸಿಂಹ ರಾಶಿ
ಶುಕ್ರ ಗ್ರಹವು ಸಿಂಹ ರಾಶಿಗೆ ಸಂಚಾರ ಮಾಡುತ್ತಿದೆ, ಈ ಸಂಚಾರ ಅವಧಿಯಲ್ಲಿ ಸಿಂಹ ರಾಶಿಯ ಲಗ್ನ ಮನೆಯಲ್ಲಿ ಶುಕ್ರನು ಇರಲಿದೆ.
ಈ ಅವಧಿಯಲ್ಲಿ ನಿಮಗೆ ಅತ್ಯುತ್ತಮ ಕಾರ್ಯವನ್ನು ಮಾಡಲು ಸಾಧ್ಯವಾಗುವುದು. ನೀವು ನಿಮ್ಮ ಬಾಹ್ಯ ಸೌಂದರ್ಯ ಹೆಚ್ಚಿಸುವತ್ತ ಹೆಚ್ಚು ಗಮನ ಕೊಡುತ್ತೀರಿ. ಪ್ರೀತಿ ಜೀವನ ಹಾಗೂ ವೈವಾಹಿಕ ಜೀವನ ಚೆನ್ನಾಗಿರುತ್ತದೆ. ವೃತ್ತಿಪರವಾಗಿ ಬೆಳವಣಿಗೆ ಕಾಣುವಿರಿ. ನಿಮ್ಮ ವ್ಯಕ್ತಿತ್ವ ಬೆಳವಣಿಗೆಗೆ ಇದು ಅತ್ಯುತ್ತಮವಾದ ಸಮಯವಾಗಿದೆ.
ಪರಿಹಾರ: ನಿಮ್ಮ ಸಂಗಾತಿಗೆ ಸುಗಂಧ ದ್ರವ್ಯ ಉಡುಗೊರೆಯಾಗಿ ನೀಡಿ.

ಕನ್ಯಾ ರಾಶಿ
ಈ ಸಂಚಾರ ಅವಧಿಯಲ್ಲಿ ಶುಕ್ರನು ಕ್ನಯಾ ರಾಶಿಯವರಲ್ಲಿ 12ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಬೆಳವಣಿಗೆ ಜೊತೆಗೆ ಖರ್ಚು ಕೂಡಿ ಇರಲಿದೆ. ವೃತ್ತಿ ಸಂಬಂಧಿತ ಪ್ರಯಾಣ ಲಾಭವನ್ನು ತರಲಿದೆ. ನೀವು ಆಮದು-ರಪ್ತು ಬ್ಯುಸ್‌ನೆಸ್ ಮಾಡುತ್ತಿದ್ದರೆ ಲಾಭ ಗಳಿಸುವರಿ. ಈ ಅವಧಿಯಲ್ಲಿ ನೀವು ನಿಮ್ಮಲ್ಲಿರುವ ಕ್ರಿಯೇಟಿವ್ ಸ್ಕಿಲ್ ಬೆಳೆಸುವತ್ತ ಗಮನ ಹರಿಸುವಿರಿ.
ಪರಿಹಾರ: ಈ ಸಂಚಾರ ಅವಧಿಯಲ್ಲಿ ವರಮಹಾಲಕ್ಷ್ಮಿ ಕತೆಗಳನ್ನು ಓದುವುದರಿಂದ ಹೆಚ್ಚಿನ ಶುಭ ಉಂಟಾಗುತ್ತದೆ.

ತುಲಾ ರಾಶಿ
ತುಲಾ ರಾಶಿಯವರಲ್ಲಿ ಈ ಅವಧಿಯಲ್ಲಿ ಶುಕ್ರನು 11ನೇ ಮನೆಯಲ್ಲಿ ಇರಲಿದೆ. ಇದನ್ನು ಆರ್ಥಿಕ ಲಾಭ, ಬಯಕೆ, ಅಣ್ಣ-ಅಕ್ಕ, ಮಾವಂದಿರ ಮನೆಯೆಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ಆರ್ಥಿಕವಾಗಿ ಬೆಳವಣಿಗೆ ಉಂಟಾಗುವುದು. ನಿಮ್ಮ ಆಸೆಗಳು ನೆರವೇರಲಿದೆ. ಕೌಟಂಬಿಕ ಜೀವನದಲ್ಲಿ ಖುಷಿಯಾಗಿ ಇರುತ್ತೀರಿ, ಮಕ್ಕಳಿಂದ ಸಂತೋಷದ ಸುದ್ದಿಗಳು ದೊರೆಯುವುದು. ಒಟ್ಟನಲ್ಲಿ ಈ ಸಂಚಾರ ನಿಮಗೆ ತುಂಬಾನೇ ಅನುಕೂಲಕರವಾಗಿದೆ.
ಪರಿಹಾರ: ಶುಕ್ರವಾರ ಲಕ್ಷ್ಮಿಯನ್ನು ಪೂಜಿಸಿ.

ವೃಶ್ಚಿಕ ರಾಶಿ
ಶುಕ್ರನು ಈ ಸಂಚಾರ ಅವಧಿಯಲ್ಲಿ ವೃಶ್ಚಿಕ ರಾಶಿಯವರ 10ನೇ ಮನೆಯಲ್ಲಿ ಇರಲಿದೆ. ಈ ಮನೆ ಪಾಲುದಾರಿಕೆ ವ್ಯವಹಾರಕ್ಕೆ ತುಂಬಾನೇ ಸೂಕ್ತವಾಗಿದೆ. ನೀವು ವ್ಯಾಪಾರದಲ್ಲಿ ಲಾಭ ಗಳಿಸುವಿರಿ. ಗಾಡಿ ಖದೀಸಬೇಕೆಂದು ಬಯಸಿದ್ದರೆ ಈ ಅವಧಿಯಲ್ಲಿ ನೆರವೇರಲಿದೆ. ಇನ್ನು ಮನೆ ರಿಪೇರಿ ಕೆಲಸಗಳಿಗೆ ಹಣ ಖರ್ಚು ಮಾಡಬಹುಉದು.
ಪರಿಹಾರ: ಶುಕ್ರವಾರ ವೈಭವ ಲಕ್ಷ್ಮಿಯನ್ನು ಆರಾಧಿಸಿ.

ಧನು ರಾಶಿ
ಈ ಸಂಚಾರ ಅವಧಿಯಲ್ಲಿ ಶುಕ್ರನು ಧನು ರಾಶಿಯವರ 9ನೇ ಮನೆಯಲ್ಲಿ ಇರಲಿದೆ. ಈ ಮನೆಯನ್ನು ತಂದೆ, ಧಾರ್ಮಿಕ ಸ್ಥಳ, ಅದೃಷ್ಟದ ಮನೆಯೆಂದು ಪರಿಗಣಿಸಲಾಗಿದೆ. ಉನ್ನತ ಓದಿಗಾಗಿ ಶ್ರಮಿಸುತ್ತಿರುವವರಿಗೆ ಬಯಸಿದ ಕಾಲೇಜಿನಲ್ಲಿ ಸೀಟ್ ಸಿಗಲಿದೆ. ದಾನ-ಧರ್ಮಗಳನ್ನು ಮಾಡುವುದರಿಂದ ನಿಮ್ಮ ಒಳ್ಳೆಯ ಕರ್ಮ ಹೆಚ್ಚಲಿದೆ
ಪರಿಹಾರ: ಶುಕ್ರವಾರ ದೇವಾಲಯದಲ್ಲಿ ಬಿಳಿ ಸಿಹಿಯನ್ನು ಪ್ರಸಾದವಾಗಿ ಹಂಚಿ.

ಮಕರ ರಾಶಿ: ಮಿಶ್ರಫಲ
ಶುಕ್ರನು ಈ ಅವಧಿಯಲ್ಲಿ ಮಕರ ರಾಶಿಯ 8ನೇ ಮನೆಯಲ್ಲಿ ಇರಲಿದೆ. ಈ ಮನೆಯನ್ನು ಇದ್ದಕ್ಕಿದ್ದಂತೆ ಸಂಭವಿಸುವುದು, ರಹಸ್ಯದ ಮನೆಯೆಂದು ಪರಿಗಣಿಸಲಾಗಿದೆ. ಈ ಸಂಚಾರ ಮಕರ ರಾಶಿಯವರಿಗೆ ಮಿಶ್ರ ಫಲ ನೀಡಲಿದೆ.
ಈ ಅವಧಿಯಲ್ಲಿ ಆರೋಗ್ಯದ ಕಡೆ ತುಂಬಾ ಗಮನ ನೀಡಬೆಕು. ಸೋಂಕು ಅಥವಾ ಮತ್ತಿತರ ಆರೋಗ್ಯ ಸಮಸ್ಯೆ ಉಂಟಾಗಬಹುದು. ಅಲ್ಲದೆ ಕೆಲಸದ ಜಾಗದಲ್ಲಿ ನಿಮ್ಮ ವಿರುದ್ಧ ಒಳ ಪಿತೂರಿಗಳು ಉಂಟಾಗಬಹುದು. ಈ ಸಮಯದಲ್ಲಿ ಕೆಲವೊಂದು ಸವಾಲುಗಳು ಎದುರಾಗಬಹುದು.
ಪರಿಹಾರ: ಪ್ರತಿದಿನ ಮಹಿಷಾಸುರ ಮರ್ದಿನಿ ಸ್ತೋತ್ರ ಪಠಿಸಿ.

ಕುಂಭ ರಾಶಿ
ಶುಕ್ರನು ಕುಂಭ ರಾಶಿಯವರ 7ನೇ ಮನೆಯಲ್ಲಿ ಇರಲಿದೆ. ಇದನ್ನು ಮದುವೆ, ಜೀವನ ಸಂಗಾತಿ, ಪಾಲುದಾರಿಕೆ ವ್ಯವಹಾರಗಳ ಮನೆಯೆಂದು ಪರಿಗಣಿಸಲಾಗಿದೆ.
ಈ ಅವಧಿಯಲ್ಲಿ ಮದುವೆಯಾಗಲು ಬಯಸುವವರಿಗೆ ಒಳ್ಳೆಯ ಸಂಬಂಧ ಕೂಡಿ ಬರಲಿದೆ. ಇನ್ನು ಪ್ರೇಮ ಸಂಬಂಧದಲ್ಲಿ ಇರುವವರು ತಮ್ಮ ಸಂಬಂಧವನ್ನು ವಿವಾಹದ ಮೂಲಕ ಗಟ್ಟಿಯಾಗಿಸಲು ಆಲೋಚಿಸಬಹುದು. ಪಾಲುದಾರಿಕೆ ವ್ಯವಹಾರ ಮಾಡುವವರಿಗೆ ಈ ಅವಧಿಯಲ್ಲಿ ಲಾಭ ಉಂಟಾಗಲಿದೆ. ಇನ್ನು ಈ ಅವಧಿಯಲ್ಲಿ ನಿಮ್ಮ ನೀವು ನಿಮ್ಮ ಸೌಂದರ್ಯವರ್ಧನೆ ಕಡೆಗೂ ಗಮನಹರಿಸಬಹುದು.
ಪರಿಹಾರ: ನಿಮ್ಮ ಬೆಡ್‌ರೂಂನಲ್ಲಿ ಸ್ಪಟಿಕವನ್ನು ಇರಿಡಿ.

ಮೀನ ರಾಶಿ: ನಿಮಗೆ ಮಿಶ್ರಫಲ
ಸಂಚಾರದ ಸಮಯದಲ್ಲಿ ಶುಕ್ರನು ಮೀನ ರಾಶಿಯವರ 6ನೇ ಮನೆಯಲ್ಲಿ ಇರಲಿದೆ. 6ನೇ ಮನೆಯನ್ನು ಶತ್ರು, ಆರೋಗ್ಯ, ಸ್ಪರ್ಧೆಯ ಮನೆಯೆಂದು ಪರಿಗಣಿಸಲಾಗಿದೆ. ಈ ಅವಧಿ ಮೀನ ರಾಶಿಯವರಿಗೆ ಮಿಶ್ರಫಲ ನೀಡಲಿದೆ.
ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗಲಿದೆ. ಹಾರ್ಮೋನ್‌ಗಳ ಅಸಮತೋಲನ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಉಂಟಾಗಬಹುದು. ಇನ್ನು ಸಂಗಾತಿಗೆ ಮೋಸ ಮಾಡಲು ಹೋಗಬೇಡಿ, ಮಾಡಿದರೆ ತುಂಬಾನೇ ಕೆಟ್ಟ ಪರಿಣಾಮ ಎದುರಿಸಬೇಕಾಗುವುದು. ಈ ಅವಧಿಯಲ್ಲಿ ಪ್ರಯಾಣದಿಂದ ಸುಸ್ತು ಹೆಚ್ಚುವುದು ಹಾಗ ಖರ್ಚು ಹೆಚ್ಚಲಿದೆ.
ಪರಿಹಾರ: ಪ್ರತಿದಿನ ಬೆಳಗ್ಗೆ ನೀರಿಗೆ ನಿಂಬೆರಸ ಹಾಕಿ ಕುಡಿಯಿರಿ.



Click it and Unblock the Notifications