For Quick Alerts
ALLOW NOTIFICATIONS  
For Daily Alerts

ಸೆ. 28ಕ್ಕೆ ಸಿಂಹರಾಶಿಗೆ ಶುಕ್ರನ ಸಂಚಾರ: ಯಾವ ರಾಶಿಗಳಿಗೆ ಶುಕ್ರದೆಸೆ

|

ನವಗ್ರಹಗಳಲ್ಲಿ ಒಂದಾದ ಶುಕ್ರನನ್ನು ಅದೃಷ್ಟದ ಗ್ರಹ ಕರೆಯಲಾಗುತ್ತದೆ. ಜನ್ಮ ಕುಂಟಲಿಯಲ್ಲಿನ ಪ್ರೇಮ ಸಂಬಂಧಗಳ ಲೆಕ್ಕಾಚಶರ ಮಾಡುವಾಗ ಈ ಗ್ರಹವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಆದ್ದರಿಂದ ಶುಕ್ರ ಸಂಚಾರ ಜ್ಯೋತಿಷ್ಯದಲ್ಲಿ ಪ್ರಾಮುಖ್ಯತೆ ಪಡೆದಿದೆ.

Venus Transit in Leo: 28 September 2020 : Effects on Your Zodiac Signs in Kannada

ಶುಕ್ರನು ಸಿಂಹರಾಶಿಗೆ ಸೆಪ್ಟೆಂಬರ್‌ 28ಕ್ಕೆ ಪ್ರವೇಶಿಸಲಿದ್ದಾನೆ. ಇದರ ಪ್ರಭಾವ 12 ರಾಶಿಗಳ ಮೇಲೆ ಉಂಟಾಗುವುದು. ಶುಕ್ರನ ಈ ಸಂಚಾರ ನಿಮ್ಮ ರಾಶಿಗಳ ಮೇಲೆ ಬೀರಿರುವ ಪರಿಣಾಮದ ಬಗ್ಗೆ ಹೇಳಲಾಗಿದೆ ನೋಡಿ:

1. ಮೇಷ ರಾಶಿ:

1. ಮೇಷ ರಾಶಿ:

ಶುಕ್ರ ಸೌಂದರ್ಯದ ದೇವತೆ. ಮೇಷರಾಶಿಯರವಲ್ಲಿ ಶುಕ್ರನು 5ನೇ ಮನೆಗೆ ಪ್ರವೇಶಿಸಲಿದ್ದಾನೆ. ಇದು ಶಿಕ್ಷಣ, ಪ್ರೀತಿಯ ಸಂಕೇತ. ಮೇಷರಾಶಿಯವರ ಪ್ರಣಯ ಜೀವನ ಹಾಗೂ ಸಂಬಂಧದಲ್ಲಿ ಬಾಂಧವ್ಯ ಹೆಚ್ಚಲಿದೆ. ನಿಮ್ಮ ಪ್ರೇಮಿ ನಿಮ್ಮೆಡೆಗೆ ತುಂಬಾ ಆಕರ್ಷಿತರಾಗಲಿದ್ದಾರೆ.

ಇನ್ನು ಮದುವೆಯಾದವರು ತಮ್ಮ ಸಂಗಾತಿಯ ಜೊತೆಗೆ ಮಾತನಾಡುವಾಗ ಎಚ್ಚರ ವಹಿಸುವುದು ಒಳ್ಳೆಯದು. ಇಲ್ಲದಿದ್ದರೆ ಸಂಗಾತಿ ನಡುವೆ ಮಾತಿನ ತರ್ಕ ಏರ್ಪಡುವುದು. ಇನ್ನು ವೃತ್ತಿ ಜೀವನದಲ್ಲಿ ಒಳಿತಾಗಲಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಆಟ ಹಾಗೂ ಸಾಮಾಜಿಕ ತಾಣದಲ್ಲಿ ಹೆಚ್ಚು ಗಮನ ಹರಿಸುವಿರಿ.

ಇನ್ನು ಕುಟುಂಬದಲ್ಲಿ ಶುಭ ಉಂಟಾಗಲಿದೆ. ಕುಟುಂಬದವರು ನಿಮ್ಮ ಬೆಂಬಲಕ್ಕೆ ನಿಲ್ಲುವರು. ಇನ್ನು ಹೊರಗಡೆಯಿಂದ ತಿನ್ನಲು ಹೋಗಬೇಡಿ.

ಪರಿಹಾರ: ಶಿವನಿಗೆ ಬಿಳಿಯ ಹೂಗಳನ್ನು ಅರ್ಪಿಸಿ.

2. ವೃಷಭ ರಾಶಿ:

2. ವೃಷಭ ರಾಶಿ:

ವೃಷಭ ರಾಶಿಯಲ್ಲಿ ಶುಕ್ರನು ನಾಲ್ನೇ ಮನೆಗೆ ಪ್ರವೇಶಿಸಲಿದ್ದಾನೆ. ನಿಮ್ಮ ಆರೋಗ್ಯ ಸ್ಥಿತಿಯೂ ಚೆನ್ನಾಗಿರಲಿದೆ. ಇನ್ನು ಹೊಸ ನಿವೇಶನ ಕೊಳ್ಳ ಬಯಸುವ ಆಸೆ, ಮನೆ ರಿಪೇರಿ ಮಾಡಬಯಸಿದರೆ ಎಲ್ಲಾ ಕಾರ್ಯ ಪೂರ್ಣವಾಗುವುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ.

ವೃತ್ತಿ ಜೀವನದಲ್ಲೂ ಪ್ರಗತಿ ಕಾಣುವಿರಿ. ಇನ್ನು ರಿಸ್ಕ್‌ ತೆಗೆದುಕೊಳ್ಳುವಾಗ ಹಿಂಜರಿಕೆ ಬೇಡ. ಹಲವು ಬಾರಿ ಕೆಲಸವನ್ನು ಪೂರ್ಣಗೊಳಿಸುವ ಮುನ್ನ ನೀವು ಸುಸ್ತಾಗಿ ಆ ಕೆಲಸ ಸಂಪೂರ್ಣ ಮಾಡುವುದಿಲ್ಲ, ಹೀಗೆ ಮಾಡಲು ಹೋಗಬೇಡಿ, ಒಳ್ಳೆಯ ಅವಕಾಶ ಕಳೆದುಕೊಳ್ಳುವಿರಿ.

ಪರಿಹಾರ: ಅವಶ್ಯಕತೆ ಇರುವವರಿಗೆ ಶುಕ್ರವಾರ ಆಹಾರ ದಾನ ಮಾಡಿ.

 3 . ಮಿಥುನ ರಾಶಿ

3 . ಮಿಥುನ ರಾಶಿ

ಮಿಥುನ ರಾಶಿಯವರಲ್ಲಿ ಶುಕ್ರ ಮೂರನೇ ಮನೆಗೆ ಪ್ರವೇಶಿಸಲಿದ್ದಾನೆ. ಇದು ಧೈರ್ಯ, ಶಕ್ತಿ ಹಾಗೂ ಸಹೋದರತ್ವದ ಸಂಕೇತವಾಗಿದೆ. ಈ ಸಂಚಾರದಿಮದ ಮಿಥುನ ರಾಶಿಯವರಿಗೆ ಒಳ್ಳೆಯದೇ ಆಗಲಿದೆ.

ವೃತ್ತಿ ಬದುಕು, ವ್ಯಾಪಾರ ಹೀಗೆ ಎಲ್ಲಾ ಕ್ಷೇತ್ರದಲ್ಲಿ ಇರುವವರು ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು. ನಿಮಗೂ-ನಿಮ್ಮ ಸಂಗಾತಿ ನಡುವೆ ಏನಾದರೂ ವೈಮನಸ್ಸು ಇದ್ದರೆ ಅದು ಸರಿ ಹೀಗಲಿದೆ. ಬರೆಯುವುದು, ಹಾಡುಗಾರಿಕೆ, ನೃತ್ಯ ಈ ಕ್ಷೇತ್ರದಲ್ಲಿ ಇರುವವರು ಪ್ರಸಿದ್ಧಿ ಹೊಂದುವಿರಿ.

ಪರಿಹಾರ: ಶುಕ್ರ ಬೀಜ ಮಂತ್ರ ಪಠಿಸಿ

 4. ಕರ್ಕ ರಾಶಿ

4. ಕರ್ಕ ರಾಶಿ

ಈ ರಾಶಿಯವರಲ್ಲಿ ಶುಕ್ರ ಎರಡನೇ ಮನೆಗೆ ಪ್ರವೇಶಿಸಲಿದ್ದಾನೆ. ಇದು ಭಾಷಣ, ಕುಟುಂಬ , ಐಶ್ವರ್ಯದ ಸಂಕೇತವಾಗಿದೆ.

ಕುಟುಂಬದವರಿಂದ ನಿಮಗೆ ಸಂಪೂರ್ಣ ಸಹಕಾರ ಸಿಗಲಿದೆ. ಇನ್ನು ವ್ಯವಹಾರ ವಿಸ್ತರಣೆ ಮಾಡ ಬಯಸುವವರಿಗೆ ಇದು ಸಕಾಲವಾಗಿದೆ. ವೃತ್ತಿ ಬದುಕಿನಲ್ಲೂ ಏಳಿಗೆ ಕಾಣುವಿರಿ. ಇನ್ನು ಪ್ರಣಯ ಜೀವನ ಕೂಡ ರೊಮ್ಯಾಂಟಿಕ್ ಆಗಿರಲಿದೆ. ನೀವು ನಿಮ್ಮ ಮಾತುಗಳಿಂದ ಇತರರನ್ನು ಆಕರ್ಷಿಸುತ್ತೀರಿ.

ಪರಿಹಾರ: ಶುಕ್ರವಾರ ದೇವಿ ಕ್ಷೇತ್ರಕ್ಕೆ ಭೇಟಿ ಕೊಡಿ.

5. ಸಿಂಹ ರಾಶಿ:

5. ಸಿಂಹ ರಾಶಿ:

ಸಿಂಹ ರಾಶಿಯಲ್ಲಿ ಶುಕ್ರನು ಸಂಚಾರ ಮಾಡುತ್ತಿದ್ದಾನೆ. ಮೊದಲನೇ ಮನೆ ಸ್ವಭಾವ, ಗುಣ, ಆರೋಗ್ಯ, ಬುದ್ಧಿವಂತಿಕೆಯ ಮನೆಯಾಗಿದೆ. ಆದ್ದರಿಂದ ಈ ಸಂಚಾರ ಒಳಿತನ್ನು ಉಂಟು ಮಾಡಲಿದೆ. ನೀವು ಸಮಸ್ಯೆಗಳಿಂದ ಹೊರ ಬರುವಿರಿ. ಇನ್ನು ವೃತ್ತಿ ಬದುಕಿನಲ್ಲಿ ಕೌಶಲ್ಯ ಹೆಚ್ಚಿಸಿಕೊಂಡರೆ ಮತ್ತಷ್ಟು ಅವಕಾಶಗಳು ದೊರೆಯಲಿವೆ. ನೀವು ತುಂಬಾ ಬಯಕೆಗಳನ್ನು ಇಟ್ಟುಕೊಳ್ಳಬೇಡಿ, ಏಕೆಂದರೆ ಯಾವುದರ ಕಡೆಯೂ ಗಮನ ಕೊಡಲು ಸಾಧ್ಯವಾಗದೇ ಹೋಗಬಹುದು. ಒಳ್ಳೆಯ ಗುಣಗಳಿಂದ ಮತ್ತಷ್ಟು ಕೀರ್ತಿ ಪಡೆಯುವಿರಿ. ಇನ್ನು ಆರೋಗ್ಯ ಕೂಡ ಉತ್ತಮವಾಗಿರಲಿದೆ.

ಪರಿಹಾರ: ಮನೆಯಲ್ಲಿ ಅಥವಾ ಆಫೀಸ್‌ನಲ್ಲಿ ಶುಕ್ರ ಯಂತ್ರ ಸ್ಥಾಪಿಸಿ.

 6. ಕನ್ಯಾ ರಾಶಿ:

6. ಕನ್ಯಾ ರಾಶಿ:

ಕನ್ಯಾ ರಾಶಿಯವರಲ್ಲಿ ಶುಕ್ರ 12ನೇ ಮನೆಗೆ ಪ್ರವೇಶಿಸಲಿದ್ದಾನೆ. ಇದು ಮುಂಬರುವ ಸಮಸ್ಯೆ, ಖರ್ಚು, ವಿದೇಶ ಪ್ರಯಾಣವನ್ನು ಸೂಚಿಸುತ್ತದೆ. ಈ ರಾಶಿಯವರ ಸ್ವಲ್ಪ ಎಚ್ಚರದಿಂದ ಇರುವುದು ಒಳ್ಳೆಯದು. ಇನ್ನು ಆರೋಗ್ಯವನ್ನು ಯಾವುದೇ ಕಾರಣಕ್ಕೆ ಕಡೆಗಣಿಸಬೇಡಿ. ಅಲ್ಲದೆ ಪ್ರಯಾಣದ ವೇಳೆ ಟ್ರಾಫಿಕ್ ನಿಯಮಗಳನ್ನು ತಪ್ಪದೆ ಪಾಲಿಸಿ.

ಅಲ್ಲದೆ ಆರ್ಥಿಕ ದೃಷ್ಟಿಯಿಂದ ನೋಡುವುದಾದರೂ ಕೆಲವೊಂದು ಸಮಸ್ಯೆಗಳು ಬರಬಹುದು. ನಿಮ್ಮಲ್ಲಿರುವ ಎಲ್ಲಾ ಅವಕಾಶ ಬಲಸಿಕೊಂಡು ಕೆಲಸದ ಕಡೆ ಗಮನ ನೀಡುವುದು ಒಳ್ಳೆಯದು. ಬ್ಯುಸ್‌ನೆಸ್ ಉದ್ದೇಶಕ್ಕೆ ವಿದೇಶ ಪ್ರಯಾಣಕ್ಕೆ ಹೋಗುವವರೆಗೆ ಲಾಭ ಉಂಟಾಗಲಿದೆ.

ಪರಿಹಾರ: ಹಸುಗಳಿಗೆ ಆಹಾರ ದಾನ ಮಾಡಿ.

7. ತುಲಾ ರಾಶಿ

7. ತುಲಾ ರಾಶಿ

ತುಲಾ ರಾಶಿಯವರಲ್ಲಿನ ಶುಕ್ರ ಹನ್ನೊಂದನೇ ಮನೆಗೆ ಪ್ರವೇಶಿಸಲಿದ್ದಾನೆ. ತುಲಾ ರಾಶಿಯವರಲ್ಲಿ ಅನೇಕ ಧನಾತ್ಮಕ ಬದಲಾವಣೆಗಳು ಆಗಲಿವೆ. ವೃತ್ತಿಯಲ್ಲಿರುವವರಿಗೆ ಸೀನಿಯರ್ ಬೆಂಬಲ ಸಿಗುತ್ತದೆ. ನಿಮ್ಮ ಕೆಲಸಕ್ಕೆ ಉತ್ತಮ ಫಲಿತಾಂಶ ದೊರೆಯುವುದು. ಹಲವು ಕೆಲಸ ಒಟ್ಟಿಗೆ ಮಾಡುವುದಕ್ಕಿಂತ ಒಂದು ಕೆಲಸದಲ್ಲಿ ಗಮನ ಹರಿಸುವುದು ಒಳ್ಳೆಯದು.

ನಿಮ್ಮ ಪ್ರಣಯ ಬದುಕು ಮತ್ತಷ್ಟು ರೊಮ್ಯಾಂಟಿಕ್ ಆಗಿರಲಿದೆ. ಅಲ್ಲದೆ ವೈವಾಹಿಕ ಬದುಕು ಕೂಡ ಚೆನ್ನಾಗಿರುತ್ತದೆ, ವಿದ್ಯಾರ್ಥಿಗಳಿಗೆ ಒಳ್ಳೆಯ ಸಮಯವಾಗಿದೆ. ಯೋಗ, ಧ್ಯಾನ ಮಾಡುವುದು ಒಳ್ಳೆಯದು.

ಪರಿಹಾರ: ಹಸುವಿಗೆ ಬೆಲ್ಲವನ್ನು ತಿನ್ನಿಸಿ.

8. ವೃಶ್ಚಿಕ ರಾಶಿ

8. ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯರವಲ್ಲಿ ಶುಕ್ರನು 10ನೇ ಮನೆಗೆ ಪ್ರವೇಶಿಸಲಿದ್ದಾನೆ. ಇದು ಕರ್ಮ, ನಾಯಕತ್ವ, ಕೌಶಲ್ಯ, ವ್ಯವಹಾರ ಇದನ್ನು ಸೂಚಿಸುತ್ತದೆ. ವೃತ್ತಿ ಬದುಕಿನಲ್ಲಿ ಅನುಭವಿಗಳಿಂದ ಉತ್ತಮ ಮಾರ್ಗ ದರ್ಶನ ದೊರೆಯುವುದು. ಕೆಲವೊಂದು ವಿಷಯಗಳನ್ನು ನಿಮ್ಮ ಸಹೋದ್ಯೋಗಿಗಳಿಗೆ ವಿವರಿಸಲು ಪ್ರಯತ್ನಿಸಿದರೂ ನೀವು ವಿಫಲರಾಗುತ್ತೀರಿ. ನಿಮ್ಮ ಮಾತುಗಳನ್ನು ಅವರು ತಪ್ಪಾಗಿ ಅರ್ಥ ಮಾಡಿಕೊಳ್ಳುವ ಸಾಧ್ಯತೆ ಇದೆ.

ಇನ್ನು ಆಮದು-ರಪ್ತು ವ್ಯವಹಾರ ಮಾಡುತ್ತಿರುವವರಿಗೆ ಲಾಭ ಉಂಟಾಗಲಿದೆ. ಇನ್ನು ಮೀಡಿಯಾ, ಸಿನಿಮಾ ಕ್ಷೇತ್ರದಲ್ಲಿ ಇರುವವರಿಗೆ ಒಳಿತಾಗಲಿದೆ. ನಿಮ್ಮ ಕೆಲಸಕ್ಕೆ ಸಾರ್ವಜನಿಕ ಮನ್ನಣೆ ಸಿಗಲಿದೆ.

ಇನ್ನು ಕೌಟಂಬಿಕ ಬದುಕು ಕೂಡ ಸುಂದರವಾಗಿರುತ್ತದೆ. ಖರ್ಚು ಸ್ವಲ್ಪ ಅಧಿಕವಾಗುವ ಸಾಧ್ಯತೆ ಇದೆ. ಆದರೆ ಸರಿಯಾದ ರೀತಿಯಲ್ಲಿ ಯೋಜನೆ ರೂಪಿಸಿದರೆ ಖರ್ಚು ಕಡಿತಗೊಳಿಸಬಹುದು. ಜೀವನಶೈಲಿಯಲ್ಲಿ ಬದಲಾವಣೆ ಮಾಡಿದರೆ ಆರೋಗ್ಯ ಕೂಡ ಉತ್ತಮವಾಗಿರಲಿದೆ.

ಪರಿಹಾರ: ಒಪಲ್ ಹರಳು ಧರಿಸಿದರೆ ಒಳ್ಳೆಯದು.

9. ಧನು ರಾಶಿ

9. ಧನು ರಾಶಿ

ಧನು ರಾಶಿಯವರಲ್ಲಿ ಶುಕ್ರನು ಒಂಭತ್ತನೇ ಮನೆಗೆ ಪ್ರವೇಶಿಸಲಿದ್ದಾನೆ. ಇದು ಅದೃಷ್ಟ, ಪಿತೃ, ಪ್ರಯಾಣದ ಮನೆಯಾಗಿದೆ. ಈ ರಾಶಿಯವರು ಈ ಸಂಚಾರದ ಸಮಯದಲ್ಲಿ ಎಚ್ಚರದಿಂದ ಇರುವುದು ಒಳ್ಳೆಯದು. ಹೆಚ್ಚು ಮಾತನಾಡದಿರುವುದು ಒಳ್ಳೆಯದು, ಇಲ್ಲದಿದ್ದರೆ ತೊಂದರೆಗೆ ಸಿಲುಕಿಕೊಳ್ಳುವಿರಿ. ತಂದೆ ಜೊತೆ ಮಾತಿನ ತರ್ಕ ಬರಬಹುದು, ಇದರಿಂದ ಮನೆಯ ಪರಿಸ್ಥಿತಿ ಹಾಳಾಗಬಹುದು. ವಿದ್ಯಾರ್ಥಿಗಳು ಈ ಸಮಯದಲ್ಲಿ ಕಲಿಕೆ ಕಡೆಗೆ ಹೆಚ್ಚಿನ ಗಮನ ನೀಡುವುದು ಒಳ್ಳೆಯದು. ಹಿರಿಯರೊಂದಿಗೆ ಮಾತನಾಡುವಾಗ ಮಾತಿನಲ್ಲಿ ಹಿಡಿತವಿರಲಿ.

ಇನ್ನು ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಆರೋಗ್ಯದಲ್ಲೂ ಯಾವುದೇ ತೊಂದರೆ ಕಾಣಿಸುವುದಿಲ್ಲ. ಆದರೆ ಆಹಾರದ ಕಡೆ ಗಮನ ನೀಡದಿದ್ದರೆ ಹೊಟ್ಟೆ ಸಂಬಂಧಿ ಸಮಸ್ಯೆ ಕಾಣಿಸಬಹುದು.

ಪರಿಹಾರ: ಸಂಗಾತಿಯೊಂದಿಗೆ ಚೆನ್ನಾಗಿರಿ.

 10. ಮಕರ ರಾಶಿ

10. ಮಕರ ರಾಶಿ

ಮಕರ ರಾಶಿಯಲ್ಲಿ ಶುಕ್ರನು ಎಂಟನೇ ಮನೆಗೆ ಪ್ರವೇಶಿಸಲಿದ್ದಾನೆ. ಇದು ಸಮಸ್ಯೆ,ಅಡಚನೆಯ ಮನೆಯೆಂದು ಗುರುತಿಸಲಾಗಿದೆ. ಈ ರಾಶಿಯವರಿಗೆ ಶುಕ್ರನ ಈ ಸಂಚಾರ ಅಷ್ಟೊಂದು ಚೆನ್ನಾಗಿಲ್ಲ. ಮಕ್ಕಳ ಬಗ್ಗೆ ತುಂಬಾ ಚಿಂತೆ ಮಾಡುವಿರಿ. ಜೊತೆಯಲ್ಲಿ ಇರುವವರ ಬಗ್ಗೆ ಗಮನ ನೀಡಬೇಕಾಗುತ್ತದೆ, ಮಕ್ಕಳ ಆರೋಗ್ಯದ ಚಿಂತೆಯೂ ಕಾಡುವುದು. ಇನ್ನು ವೃತ್ತಿ ಬದುಕಿನಲ್ಲೂ ಕೆಲವೊಂದು ಸವಾಲುಗಳು ಎದುರಾಗುವುದು. ಇದರಿಂದ ಮಾನಸಿಕ ಒತ್ತಡ ಹೆಚ್ಚುವುದು, ಅನಗ್ಯತ ಚಿಂತೆಗಳು ಕಾಡುವುದು, ಅನುಭವಿಗಳ ಸಲಹೆ ಪಡೆಯುವುದು ಒಳ್ಳೆಯದು.

ಇನ್ನು ಊಹಿಸದೇ ಕಡೆಯಿಂದ ಹಣ ಬರುವುದು. ಅಲ್ಲದೆ ಪ್ರಯಾಣ ಮಾಡುವಾಗ ನಿಮ್ಮ ಲೌಲ್ಯವಾದ ವಸ್ತುಗಳ ಬಗ್ಗೆ ಜೋಪಾನ. ಇನ್ನು ಆಹಾರಕ್ರಮದ ಕಡೆ ಗಮನ ನೀಡಿ.

ಪರಿಹಾರ: ಶುಕ್ರವಾರ ಬಿಳಿ ಬಣ್ಣದ ಬಟ್ಟೆ ಧರಿಸಿ.

 11. ಕುಂಭ ರಾಶಿ

11. ಕುಂಭ ರಾಶಿ

ಕುಂಭ ರಾಶಿಯಲ್ಲಿ ಶುಕ್ರನು 7ನೇ ಮನೆಗೆ ಪ್ರವೇಶಿಸಲಿದ್ದಾನೆ. ಇದು ಪ್ರಭಾವಿ ಮನೆಯಾಗೊದೆ. ನಿಮಗೆ ಸಂಗಾತಿಯ ಬೆಂಬಲ ದೊರೆಯಲಿದೆ. ಆದರೆ ಸಣ್ಣ ತರ್ಕಗಳು ಬಂದರೆ ನಿಮ್ಮ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರಬಹುದು, ಜೋಪಾನ.

ಇನ್ನು ಉದ್ಯಮಿಗಳಿಗೂ ಒಳಿತಾಗಲಿದೆ, ಪಾಲುದಾರರ ಜೊತೆ ವ್ಯವಹಾರ ಲಾಭದಾಯಕವಾಗಿರುತ್ತದೆ. ನಿಮ್ಮ ಹಲವು ಪ್ರಾಜೆಕ್ಟ್‌ಗಳು ಯಶಸ್ವಿಯಾಗಲಿದೆ. ನಿಮ್ಮ ಕೌಶಲ್ಯ ಮತ್ತಷ್ಟು ಅಭಿವೃದ್ಧಿ ಪಡಿಸಿಕೊಳ್ಳಿ.

ಈ ರಾಶಿಯವರು ಸೌಂದರ್ಯವರ್ಧಕಗಳಿಗೆ ಹಣ ಖರ್ಚು ಮಾಡಲು ಯೋಚಿಸುವುದೇ ಇಲ್ಲ. ವಿದ್ಯಾರ್ಥಿಗಳಿಗೆ ಕ್ಲಿಷ್ಟಕರ ವಿಷಯವೂ ಸುಲಭವಾಗಿ ಅರ್ಥವಾಗುವುದು. ಇನ್ನು ಆರೋಗ್ಯ ದೃಷ್ಟಿಯಿಂದ ನೋಡುವುದಾದರೆ ತುಂಬಾ ಸಮಯದಿಂದ ಕಾಡುತ್ತಿರುವ ಆರೋಗ್ಯ ಸಮಸ್ಯೆಯಿಂದ ಮುಕ್ತಿ ಸಿಗುವುದು.

ಪರಿಹಾರ: ದೇವಿಯನ್ನು ಪೂಜಿಸಿ.

 12. ಮೀನ ರಾಶಿ

12. ಮೀನ ರಾಶಿ

ಮೀನ ರಾಶಿಯವರಲ್ಲಿ ಶುಕ್ರ ಆರನೇ ಮನೆಗೆ ಪ್ರವೇಶಿಸಲಿದ್ದಾನೆ. ಇದು ಶತ್ರು, ಸಾಲ, ವಿರೋಧಿಗಳ ಮನೆಯೆಮದು ಪರಿಗಣಿಸಲಾಗಿದೆ. ವೃತ್ತಿಯಲ್ಲಿರುವ ಜಾಗ್ರತೆಯಾಗಿರಿ, ವಿರೋಧಿಗಳು ನಿಮ್ಮ ಮೇಲೆ ಹಗರಣದ ಆರೋಪ ಹೊರೆಸಬಹುದು.

ನಿಮ್ಮ ಆರೋಗ್ಯದಲ್ಲೂ ಏರಳಿತ ಕಂಡು ಬಂದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ, ಚಿಕ್ಕ ಕಾಯಿಲೆಯಂದು ನಿರ್ಲಕ್ಷ್ಯ ಬೇಡ್ವೆ ಬೇಡ. ಭಾರದ ವಸ್ತುಗಳನ್ನು ಎತ್ತಬೇಡಿ. ಆರೋಗ್ಯಕ ಆಹಾರ ಸೇವಿಸಿ. ಇನ್ನು ಬೇರೆಯವರ ಜೊತೆ ಮಾತನಾಡುವಾಗ ಮಾತಿನ ಮೇಲೆ ನಿಗಾ ಇರಲಿ. ಇನ್ನು ಆರ್ಥಿಕ ದೃಷ್ಟಿಯಿಂದಲೂ ಸವಾಲು ಬರಬಹುದು.

ಪರಿಹಾರ: ಶುಕ್ರನ ಬೀಜ ಮಂತ್ರ ಪಠಿಸಿ.

English summary

Venus Transit in Leo: 28 September 2020 : Effects on Your Zodiac Signs in Kannada

The Venus transit in Leo will take place on 28 September 2020 at 00:50 hours. Check out the effects on zodiac signs, Read on....
Story first published: Monday, September 28, 2020, 17:31 [IST]
X
Desktop Bottom Promotion