Latest Updates
-
ಬಿಸಿಗಾಳಿಯ ಅಬ್ಬರ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಉಪಾಯಗಳು -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮ ಪಾಲಿಸಿ -
ಫ್ಯಾಶನ್ ರೆವಲ್ಯೂಷನ್ ಡೇ: ಬಟ್ಟೆಯನ್ನು ಉಲ್ಟಾ ಧರಿಸಿ ಫೋಟೋ ಹಾಕುತ್ತಿರುವುದೇಕೆ? ಈ ಟ್ರೆಂಡ್ ಹಿಂದಿದೆ ದೊಡ್ಡ ಕಥೆ! -
ಬಿಸಿಲ ಅಲೆ: ಸುಡುವ ಬಿಸಿಲಿನಲ್ಲಿ ವ್ಯಾಯಾಮ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಉತ್ತರ ಭಾರತದ ಬಿಸಿಲ ಬೇಗೆ: ಮದುವೆ ಶಾಸ್ತ್ರಗಳೆಲ್ಲಾ ಈಗ ಸೂರ್ಯ ಮುಳುಗಿದ ಮೇಲೆ! -
ಬಿಸಿಗಾಳಿಯ ಆರ್ಭಟ: ನಿಮ್ಮ ಮನೆಯನ್ನು ಫ್ರಿಡ್ಜ್ನಂತೆ ತಂಪಾಗಿಡಲು ಇಲ್ಲಿವೆ ಅದ್ಭುತ ದೇಸಿ ಟಿಪ್ಸ್! -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ಹೊಡೆತದಿಂದ ಪಾರಾಗಲು ಮನೆಯಲ್ಲೇ ತಯಾರಿಸಿ ಈ ಜೀವ ರಕ್ಷಕ ಪಾನೀಯ! -
ಬಿಸಿಗಾಳಿಯ ಆರ್ಭಟ: ಸುಡುವ ಬಿಸಿಲಿನಿಂದ ಪಾರಾಗಲು ನೀವು ಮಾಡಲೇಬೇಕಾದ ಬದಲಾವಣೆಗಳೇನು? -
ಬಿಸಿಗಾಳಿಯ ಆರ್ಭಟ: ನಿಮ್ಮ ಬೆಳಗಿನ ವ್ಯಾಯಾಮದ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ!
ಮಕರದಲ್ಲಿ ಶುಕ್ರ: ಈ 4 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನವಾಗುವುದು
ಶುಕ್ರ ಗ್ರಹವನ್ನು ಶಾರೀರಿಕ ಸೌಕರ್ಯ, ಐಷಾರಾಮಿ ಮತ್ತು ಐಶ್ವರ್ಯದ ಅಂಶ ಎಂದು ಪರಿಗಣಿಸಲಾಗಿದೆ. ಶುಕ್ರದೆಸೆಯಿದ್ದರೆ ಮುಟ್ಟಿದ್ದೆಲ್ಲಾ ಚಿನ್ನವಾಗುವುದು.

ಶುಕ್ರಗ್ರಹ ಪ್ರತಿ ತಿಂಗಳು ರಾಶಿ ಬದಲಾವಣೆ ಮಾಡುತ್ತದೆ. ಈ ತಿಂಗಳಿನಲ್ಲಿ ಡಿಸೆಂಬರ್ 29ಕ್ಕೆ ರಾಶಿ ಬದಲಾವಣೆ ಮಾಡಿತ್ತು. ಒಂದು ತಿಂಗಳು ಅದೇ ರಾಶಿಯಲ್ಲಿ ಇರಲಿದೆ. ಶುಕ್ರನು ಇದೀಗ ಮಕರ ರಾಶಿಯಲ್ಲಿದೆ. ಶನಿದೇವ ಕೂಡ ಮಕರ ರಾಶಿಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಶನಿದೇವನೊಂದಿಗೆ ಶುಕ್ರನ ಮೈತ್ರಿ ಏರ್ಪಟ್ಟಿದೆ.
ಮಕರ ಸಂಕ್ರಾಂತಿಯಲ್ಲಿ ಶುಕ್ರ ಮತ್ತು ಶನಿಯ ಸಂಯೋಗವು 4 ರಾಶಿಗಳಿಗೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಈ ಅವಧಿಯಲ್ಲಿ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನವಾಗುವುದು, ಆ ಅದೃಷ್ಟದ ರಾಶಿಗಳಾವುವು ಎಂದು ನೋಡೋಣ:

ಮೇಷ ರಾಶಿ
ಮೇಷ ರಾಶಿಯವರಲ್ಲಿ ಶುಕ್ರ ಹತ್ತನೇ ಮನೆಯಲ್ಲಿ ಸಂಚಾರ ಮಾಡಿರುವುದರಿಂದ ಈ ಸಮಯದಲ್ಲಿ ನಿಮಗೆ ಶುಕ್ರದೆಸೆ ಇದೆ. ನೀವು ಮಾಡಿದ ಕಾರ್ಯಗಳಲ್ಲಿ ಪ್ರಗತಿ ಸಾಧಿಸುತ್ತೀರಿ. ಆರ್ಥಿಕವಾಗಿ ಕೂಡ ಈ ಸಮಯ ತುಂಬಾ ಒಳ್ಳೆಯದಿದೆ, ನಿಮ್ಮ ಕಾರ್ಯಗಳಿಗೆ ಲಕ್ಷ್ಮಿ ಕೃಪೆ ಇರುತ್ತದೆ. ನಿಮ್ಮ ಪ್ರಯತ್ನದಲ್ಲಿ ಲಾಭ ಗಳಿಸುತ್ತೀರಿ.
ಈ ದಿನ ಆಸ್ತಿಯ ವಿಷಯದಲ್ಲಿ ನಿಮಗೆ ಲಾಭವನ್ನು ನೀಡುತ್ತಾನೆ, ನಿಮ್ಮಲ್ಲಿ ಕೆಲವರು ಈ ತಿಂಗಳಿನಲ್ಲಿ ವಾಹನ ಖರೀದಿಸಲು ಬಯಸಿದರೆ ನಿಮ್ಮ ಆಸೆ ನೆರವೇರುವುದು.
ನಿಮ್ಮ ಸಾಮಾಜಿಕ ಗೌರವ ಹೆಚ್ಚಾಗುತ್ತದೆ. ಶುಕ್ರಗ್ರಹದ ಪ್ರಭಾವದಿಂದ ಪ್ರೇಮಿಗಳ ಹಾಗೂ ವಿವಾಹಿತರ ಪ್ರೀತಿ ಸಂಬಂಧ ತುಂಬಾ ಚೆನ್ನಾಗಿರುತ್ತದೆ. ಈ ಅವಧಿಯಲ್ಲಿ ಪ್ರಯಾಣದ ಸಾಧ್ಯತೆಗಳಿವೆ. ವ್ಯಾಪಾರಸ್ಥರು ಬಲವಾದ ಲಾಭವನ್ನು ಪಡೆಯುತ್ತಾರೆ. ಕಚೇರಿಯಲ್ಲಿ ಮೇಲಾಧಿಕಾರಿಗಳ ಸಹಕಾರದಿಂದ ಉನ್ನತ ಸ್ಥಾನಮಾನ ಪಡೆಯಬಹುದು.

ಕನ್ಯಾ ರಾಶಿ
ಕನ್ಯಾ ರಾಶಿಯವರಲ್ಲಿ, ಶುಕ್ರ ಐದನೇ ಮನೆಯಲ್ಲಿ ಇದ್ದಾನೆ. ಈ ಅವಧಿಯಲ್ಲಿ ವೃತ್ತಿ ಜೀವನದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ. ಅಲ್ಲದೆ, ನೀವು ಬಡ್ತಿ ಅಥವಾ ಹೊಸ ಉದ್ಯೋಗಾವಕಾಶಗಳಂತಹ ಹೊಸ ಅವಕಾಶಗಳನ್ನು ಪಡೆಯುವ ಸಾಧ್ಯತೆಯಿದೆ. ಈ ಸಮಯದಲ್ಲಿ ನಿಮ್ಮ ಪ್ರೀತಿ ಮತ್ತು ವೈವಾಹಿಕ ಜೀವನವು ತುಂಬಾ ಚೆನ್ನಾಗಿರುತ್ತದೆ. ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಧನಾತ್ಮಕ ಬೆಳವಣಿಗೆಯು ನಿಮಗೆ ಮಾನಸಿಕ ತೃಪ್ತಿಯನ್ನು ನೀಡುತ್ತದೆ. ಆರ್ಥಿಕವಾಗಿ ಈ ಸಮಯ ಚೆನ್ನಾಗಿದೆ. ವ್ಯಾಪಾರಸ್ಥರು ಈ ಅವಧಿಯಲ್ಲಿ ಆರ್ಥಿಕ ಲಾಭ ಗಳಿಸುತ್ತಾರೆ.

ಮಕರ ರಾಶಿ
ಮಕರ ರಾಶಿಯವರ ಲಗ್ನ ಮನೆಯಲ್ಲಿ ಶುಕ್ರ ನೆಲೆಸಿದ್ದಾನೆ. ಈ ಶುಕ್ರ ಸಂಕ್ರಮಣವು ಮಕರ ರಾಶಿಯವರಿಗೆ ತುಂಬಾ ಶುಭಕರವಾಗಿರುತ್ತದೆ. ಈ ಸಮಯದಲ್ಲಿ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವುದು, ನಿಮ್ಮ ವ್ಯವಹಾರದಲ್ಲಿ ಲಾಭ ಗಳಿಸುವಿರಿ. ವಿವಾಹಿತರ ವೈವಾಹಿಕ ಜೀವನ ತುಂಬಾ ಚೆನ್ನಾಗಿರುತ್ತದೆ. ಪ್ರೇಮ ಸಂಬಂಧದಲ್ಲಿ ನಿಕಟತೆ ಇರುತ್ತದೆ. ಈ ರಾಶಿಯ ಅವಿವಾಹಿತರಿಗೆ ವಿವಾಹ ಸಂಬಂಧ ಬರಬಹುದು.
ಏನಾದರೂ ಆರೋಗ್ಯ ಸಮಸ್ಯೆಯಾದರೆ ಉತ್ತಮ ಪರಿಹಾರ ಕಂಡುಕೊಳ್ಳುವಿರಿ, ಏಕೆಂದರೆ ಆರೋಗ್ಯ ಸ್ಥಿತಿಯಲ್ಲಿ ತುಂಬಾ ಸುಧಾರಣೆ ಕಂಡು ಬರುವುದು.
ವ್ಯಾಪಾರದಲ್ಲಿ ಅಪೇಕ್ಷಿತ ಲಾಭ ದೊರೆಯಲಿದೆ ಉದ್ಯೋಗಿಗಳಿಗೆ ಈ ಸಮಯ ತುಂಬಾ ಒಳ್ಳೆಯದಿದೆ.
ಮಕರ ರಾಶಿಯವರು ಶನಿ ದೇವ ಮತ್ತು ಶುಕ್ರನ ಸಂಯೋಜನೆಯಿಂದ ಬಲವಾದ ಪ್ರಯೋಜನಗಳನ್ನು ಪಡೆಯುತ್ತಾರೆ. ಆದ್ದರಿಂದ ವೃತ್ತಿ ಜೀವನ, ವ್ಯಾಪಾರ, ಪ್ರೇಮ, ವೈವಾಹಿಕ ಸಂಬಂಧ ಉತ್ತಮವಾಗಿರುತ್ತದೆ.

ಮೀನ ರಾಶಿ
ಮೀನ ರಾಶಿಯವರಲ್ಲಿ ಶುಕ್ರನು11 ನೇ ಮನೆಯಲ್ಲಿ ಇದ್ದಾನೆ. ಶುಕ್ರನ ಈ ಸಂಕ್ರಮಣವು ಮೀನ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ತರಲಿದೆ, ನೀವು ವೃತ್ತಿ ಜೀವನದಲ್ಲಿ ಅಪಾರ ಯಶಸ್ಸು ಪಡೆಯುವಿರಿ. ನೀವು ನಿಮ್ಮ ಶ್ರಮಕ್ಕೆ ಶುಭ ಫಲ ಅಥವಾ ಪ್ರತಿಫಲವನ್ನು ಪಡೆಯಬಹುದು.
ಈ ಅವಧಿಯಲ್ಲಿ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ವೃತ್ತಿ ಬದುಕಿನಲ್ಲಿ ಪ್ರಗತಿ ಕಾಣುತ್ತೀರಿ. ಪ್ರೇಮಿಗಳಿಗೂ ಈ ಸಮಯ ಅನುಕೂಲಕರವಾಗಿದೆ. ವಿವಾಹಿತರ ಜೀವನದ ತುಂಬಾನೇ ಚೆನ್ನಾಗಿರುತ್ತದೆ. ಈ ಸಾರಿಗೆ ಕೂಡ ಉತ್ತಮವಾಗಿರುತ್ತದೆ.
ಈ ಅವಧಿ ಮೀನ ರಾಶಿಯವರಿಗೆ ಭಾಗ್ಯದ ಸಮಯ. ಸಾಮಾಜಿಕ ಸ್ಥಾನಮಾನದಲ್ಲಿ ಹೆಚ್ಚಳವಾಗಲಿದೆ. ಕೆಲಸದ ಸ್ಥಳದಲ್ಲಿ ಯಶಸ್ಸು ಇರುತ್ತದೆ. ವ್ಯಾಪಾರ ವೃದ್ಧಿಯಾಗಲಿದೆ. ಎಲ್ಲರ ಸಹಕಾರ ಮತ್ತು ಸಂತೋಷದಿಂದ ಈ ಸಮಯವು ಅದ್ಭುತವಾಗಿರುತ್ತದೆ.



Click it and Unblock the Notifications