Latest Updates
-
ಡೇಟಿಂಗ್ ಆ್ಯಪ್ ಬಳಕೆದಾರರೇ ಎಚ್ಚರ: ಈ ಕೆಫೆಗಳೇ ನಿಮ್ಮ ಜೇಬಿಗೆ ಕತ್ತರಿ! -
ದೆಹಲಿ-ಎನ್ಸಿಆರ್ ಬಿರುಗಾಳಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಹೀಗೆ ಮಾಡಿ -
AJIO ಮಿಡ್ನೈಟ್ ಮೇನಿಯಾ: ಸ್ನೀಕರ್ಸ್ ಮೇಲೆ ಭರ್ಜರಿ ಆಫರ್ ಪಡೆಯೋದು ಹೇಗೆ? -
ಹವಾಮಾನ ಇಲಾಖೆ ಎಚ್ಚರಿಕೆ: ಬಿರುಗಾಳಿ ಮಳೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ಸಂಬಂಧಗಳ ಆತಂಕ ಕಾಡ್ತಿದೆಯಾ? ನೆಮ್ಮದಿ ನೀಡುವ ಉಚಿತ ಸಹಾಯವಾಣಿಗಳು -
IMD ಮಳೆ ಮುನ್ಸೂಚನೆ: ಬಾಲ್ಕನಿ ಸುರಕ್ಷತೆಗೆ ಈ ಕ್ರಮಗಳನ್ನು ಪಾಲಿಸಿ -
ಆರೋಗ್ಯಕರ ಆಹಾರ ಪದ್ಧತಿ: ಬೇಸಿಗೆಯಲ್ಲಿ ಲವಲವಿಕೆಯಿಂದ ಇರಲು ಹೀಗೆ ಮಾಡಿ -
ಅನುಷ್ಕಾ ಶರ್ಮಾ ಸ್ಟೇಡಿಯಂ-ಕೋರ್ ಲುಕ್: ಕ್ರಿಕೆಟ್ ಸೀಸನ್ನ ಹೊಸ ಕ್ರೇಜ್ -
ಇಂದಿನ ರಾಶಿ ಭವಿಷ್ಯ: ನಿಮ್ಮ ಜೀವನದಲ್ಲಿ ಕಾದಿದೆ ಅಚ್ಚರಿಯ ಬದಲಾವಣೆ! -
ಅಹಮದಾಬಾದ್ ದೋಸೆ ಹಿಟ್ಟಿನ ಆತಂಕ: ನಿಮ್ಮ ಮಕ್ಕಳ ಆರೋಗ್ಯಕ್ಕೆ ಈ ಎಚ್ಚರಿಕೆ ಅಗತ್ಯ!
Valentine Day 2023: ಈ ರಾಶಿಗಳಿಗೆ ಪ್ರೇಮಿಗಳ ದಿನದಂದು ನಿಜವಾದ ಪ್ರೀತಿ ದಕ್ಕುತ್ತದೆ; ಇತರ ರಾಶಿಗಳ ಪ್ರೇಮ ಭವಿಷ್ಯ ತಿಳಿಯಿರಿ
ತಾನು ಇಷ್ಟಪಡುತ್ತಿರುವ ವ್ಯಕ್ತಿಗೆ ಪ್ರೇಮ ನಿವೇದನೆ ಮಾಡಲು, ಪ್ರೀತಿ ಮಾಡುತ್ತಿರುವವರು ಪ್ರಣಯ ಪಕ್ಷಿಗಳಂತೆ ವಿಹರಿಸಲು ಇರುವ ದಿನವೇ ಪ್ರೇಮಿಗಳ ದಿನ. ನಾನು ಪ್ರೀತಿಸಿದ ವ್ಯಕ್ತಿಗೆ ಹೇಳಿದರೆ ಆ ಕಡೆ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಕಳವಳ ಕೆಲವರಲ್ಲಿದ್ದರೆ, ಈಗಾಗಲೇ ಪ್ರೀತಿಯಲ್ಲಿರುವವರಿಗೆ ಈ ದಿನವನ್ನು ಮತ್ತಷ್ಟು ಸುಂದರವಾಗಿಸಲು ಹಲವು ಪ್ಲ್ಯಾನ್‌ಗಳ ತಲೆಯಲ್ಲಿ ಓಡುತ್ತಿರುತ್ತದೆ.
ಜ್ಯೋತಿಷ್ಯದ ಪ್ರಕಾರ ಪ್ರೇಮಿಗಳ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ, ಯಾವ ರಾಶಿಯವರು ಪ್ರಪೋಸ್ ಮಾಡಲು ಹಿಂಜರಿಯಬಾರದು ಎಂದು ಹೇಳಲಾಗಿದೆ ನೋಡಿ:

ಮೇಷ ರಾಶಿ
ಮೇಷ ರಾಶಿಯವರೇ ವ್ಯಾಲೆಂಟೈನ್ಸ್ ಡೇಯಂದು ಪ್ರಪೋಸ್ ಮಾಡಬೇಕೆಂದು ಯೋಚಿಸುತ್ತಿದ್ದರೆ ಅವರನ್ನು ಮೆಚ್ಚಿಸಲು ನಿಮ್ಮ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಏನೋ ಪವಾಡ ನಡೆಯುತ್ತೆ ಎಂದು ಕಾದು ಕೂತರೆ ನಿರಾಸೆ ಉಂಟಾಗುವುದು. ನಿಮ್ಮ ಮನಸ್ಸಿನಲ್ಲಿರುವ ವ್ಯಕ್ತಿ ಬಳಿ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ, ನೀವೇ ಹೇಳದೆ ಅವರಿಗೆ ನಿಮ್ಮ ಭಾವನೆ ಖಂಡಿತ ಅರ್ಥವಾಗಲ್ಲ, ಆದ್ದರಿಂದ ನೀವೇ ಪ್ರಪೋಸ್ ಮಾಡಿ.

ವೃಷಭ ರಾಶಿ
ವೃಷಭ ರಾಶಿಯವರು ಪ್ರೀತಿಯಲ್ಲಿ ಬೀಳಬೇಕೆಂದಿದ್ದರೆ ನಿಮಗೆ ಖಂಡಿತ ನಿರಾಸೆಯಾಗಲ್ಲ. ಇನ್ನು ಈಗಾಗಲೇ ಪ್ರೀತಿಯಲ್ಲಿದ್ದರೆ ಈ ವ್ಯಾಲೆಂಟೈನ್ಸ್ ಡೇ ತುಂಬಾನೇ ಸುಂದರವಾಗಿರುತ್ತೆ, ನಿಮ್ಮ ಪ್ರೀತಿ ಮತ್ತಷ್ಟು ಹೆಚ್ಚಾಗುವುದು.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಒಂದು ಸಲಹೆ ಏನೆಂದರೆ ಹೊಸ ಸಂಬಂಧ ಹುಡುಕುವ ಬದಲಿಗೆ ಹಿಂದೆ ನಿಮಗೆ ಇಷ್ಟವಿರುವ ವ್ಯಕ್ತಿಯ ಜೊತೆ ಪ್ರೇಮ ಸಂಬಂಧದಲ್ಲಿ ಬೀಳುವುದು ಒಳ್ಳೆಯದು. ಈ ಹಿಂದೆ ಅನೇಕ ಕಾರಣಗಳಿಂದ ನಿಮ್ಮ ಹಾಗೂ ಅವರ ಪ್ರೀತಿ ಮುಂದುವರೆಯದಿದ್ದರೆ, ಈ ವ್ಯಾಲೆಂಟೈನ್ಸ್ ಡೇಯಂದು ಪ್ರಯತ್ನಿಸಿ, ನಿಮ್ಮಿಬ್ಬರ ಸಂಬಂಧ ತುಂಬಾ ಚೆನ್ನಾಗಿರುತ್ತದೆ.

ಕರ್ಕ ರಾಶಿ
ನೀವು ಯಾರನ್ನಾದರೂ ಇಷ್ಟಪಡುತ್ತಿದ್ದರೆ, ಅವರಿಗೆ ಈ ಕುರಿತು ಹೇಳಲು ಹಿಂಜರಿಯುತ್ತದ್ದರೆ ಧೈರ್ಯವಾಗಿ ಹೇಳಿ. ಅವರು ಎಲ್ಲಿ ನಾನು ಹೇಳಿದ್ದಕ್ಕೆ ಕೋಪಗೊಳ್ಳುತ್ತಾರೆ ಎಂಬ ಭಯವಿದ್ದರೆ ಮೊದಲು ಅದನ್ನು ತೆಗೆದು ಹಾಕಿ. ಈ ದಿನವನ್ನು ಆಚರಿಸಲು ನೀವು ಕ್ಯಾಂಡಲ್ ಲೈಟ್ ಡಿನ್ನರ್, ಲಾಂಗ್ ಡ್ರೈವ್ ಹೀಗೆ ರೊಮ್ಯಾಂಟಿಕ್ ಆಗಿ ಪ್ಲ್ಯಾನ್ ಮಾಡಬಹುದು.

ಸಿಂಹ ರಾಶಿ
ನೀವು ನಿಮ್ಮ ಜೀವನದಲ್ಲಿ ವಿಶೇಷ ವ್ಯಕ್ತಿಗಾಗಿ ಕಾಯುತ್ತಿದ್ದರೆ ಭರವಸೆ ಕಳೆದುಕೊಳ್ಳಬೇಡಿ. ನೀವು ಬಯಸಿದಂಥ ವ್ಯಕ್ತಿ ನಿಮ್ಮ ಬದುಕಿನಲ್ಲಿ ಬರಲಿದ್ದಾರೆ. ನೀವು ಈಗಾಗಲೇ ಪ್ರೀತಿ ಸಂಬಂಧದಲ್ಲಿದ್ದರೆ ವೃತ್ತಿ ಹಾಗೂ ಪ್ರೇಮ ಜೀವನದ ನಡುವೆ ಬ್ಯಾಲೆನ್ಸ್ ಮಾಡಬೇಕು, ಇಲ್ಲದಿದ್ದರೆ ನೀವು ಪ್ರೇಮ ಜೀವನದಲ್ಲಿ ಸಮಸ್ಯೆಗಳು ಬರಬಹುದು.

ಕನ್ಯಾ ರಾಶಿ
ಕನ್ಯಾ ರಾಶಿಯವರು ಪ್ರತಿಯೊಂದು ವಿಷಯದಲ್ಲೂ ಸ್ವಲ್ಪ ಭಿನ್ನವಾಗಿರುತ್ತಾರೆ, ಆದ್ದರಿಂದ ಪ್ರೇಮಿಗಳ ದಿನವನ್ನು ಕೂಡ ಭಿನ್ನವಾಗಿ ಆಚರಿಸಲು ಬಯಸುತ್ತಾರೆ. ಪ್ರೇಮ ಸಂಬಂಧದಲ್ಲಿರುವವರು ಈ ದಿನ ತಮ್ಮ ಪ್ರೇಮಿಯ ಭಾವನೆಗಳಿಗಿಂತ ತಮ್ಮ ಭಾವನೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.

ತುಲಾ ರಾಶಿ
ತುಲಾ ರಾಶಿಯವರು ಪ್ರೇಮಿಗಳ ದಿನ ತುಂಬಾನೇ ಸುಂದರವಾಗಿಸಲು ಬಯಸುತ್ತಾರೆ. ಈಗಾಗಲೇ ಹಲವು ಪ್ಲ್ಯಾನ್ ಕೂಡ ಮಾಡಿರಬಹುದು, ಸಂಗಾತಿಗಾಗಿ ಸ್ಪೆಷಲ್ ಗಿಫ್ಟ್ಸ್ ಖರೀದಿಸುತ್ತಾರೆ, ಸಂಗಾತಿಗೆ ಸರ್‌ಫ್ರೈಸ್ ಕೊಡಲು ತಮ್ಮಿಂದ ಆದ ಪ್ರಯತ್ನ ಮಾಡುತ್ತಾರೆ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಪ್ರೇಮಿಗಳ ದಿನವನ್ನು ವಿಶೇಷ ದಿನವೆಂದು ಪರಿಗಣಿಸುವುದಿಲ್ಲ, ಪ್ರತಿದಿನವೂ ಪ್ರೇಮಿಗಳ ದಿನವೇ ಎಂದು ಭಾವಿಸುವವರು. ಪ್ರೇಮಿಗಳ ದಿನದಂದು ತುಂಬಾ ರೊಮ್ಯಾಂಟಿಕ್ ಪ್ಲ್ಯಾನ್ ಏನೂ ಮಾಡುವುದಿಲ್ಲ, ಆದರೆ ಸಂಗಾತಿಯ ಇಷ್ಟದಂತೆ ನಡೆದುಕೊಳ್ಳುತ್ತಾರೆ.

ಧನು ರಾಶಿ
ಧನು ರಾಶಿಯವರಿಗೆ ದುಬಾರಿ ಉಡುಗೊರೆಗಿಂತ ತಮಗೆ ತೋರುವ ಪ್ರೀತಿ ಹಾಗೂ ಸಮಯ ಮುಖ್ಯವಾಗಿರುತ್ತದೆ. ಈ ಪ್ರೇಮಿಗಳ ದಿನಕ್ಕೆ ಇವರು ದುಬಾರಿ ಗಿಫ್ಟ್ ಬದಲಿಗೆ ಲಾಗ್ ಡ್ರೈವ್ ಅಥವಾ ಜೊತೆಯಾಗಿ ರೆಸ್ಟೋರೆಂಟ್‌ಗೆ ಹೋಗುವುದು ಈ ರೀತಿಯ ಪ್ಲ್ಯಾನ್ ಮಾಡುತ್ತಾರೆ.

ಮಕರ ರಾಶಿ
ಮಕರ ರಾಶಿಯವರು ತುಂಬಾ ಪ್ರ್ಯಾಕ್ಟಿಕಲ್ ಸ್ವಭಾವದವರು ಅದು ಅವರ ನಡವಳಿಕೆಯಲ್ಲಿ ಗೋಚರಿಸುವುದು. ಇವರು ಪ್ರೀತಿಯಲ್ಲಿ ನಂಬಿಕೆ ಇಡುತ್ತಾರೆ ಆದರೆ ಇಂಥ ಆಚರಣೆಗಳನ್ನು ಅಷ್ಟು ಇಷ್ಟಪಡುವುದಿಲ್ಲ. ಆದ್ದರಿಂದ ನಿಮ್ಮ ಸಂಗಾತಿ ಮಕರ ರಾಶಿಯವರಾಗಿದ್ದರೆ ನೀವು ಈ ದಿನ ತುಂಬಾ ಫ್ಯಾಂಟಸಿ ಲವ್ ಅವರಿಂದ ನಿರೀಕ್ಷೆ ಮಾಡದಿದ್ದರೆ ಒಳ್ಳೆಯದು.

ಕುಂಭ ರಾಶಿ
ಕುಂಭ ರಾಶಿಯವರು ತಮ್ಮ ಪ್ರೀತಿಯನ್ನು ರಹಸ್ಯವಾಗಿಡಲು ಇಷ್ಟಪಡುತ್ತಾರೆ, ತಮ್ಮ ಪ್ರೇಮಿಯನ್ನು ಮೆಚ್ಚಿಸುವ ಎಲ್ಲಾ ಪ್ರಯತ್ನ ಪಡುತ್ತಾರೆ, ಆದರೆ ತಮ್ಮ ಪ್ರೇಮದ ಬಗ್ಗೆ ಹೊರಗಡೆ ತೋರಿಸಿಕೊಳ್ಳಲು ಇಷ್ಟಪಡುವುದಿಲ್ಲ, ಸಮಯ ಬಂದಾಗ ಮಾತ್ರ ಹೇಳುವ ಎನ್ನುವ ಮನಸ್ಥಿತಿ ಇವರದ್ದು.

ಮೀನ ರಾಶಿ
ಮೀನ ರಾಶಿಯವರು ತುಂಬಾ ರೊಮ್ಯಾಂಟಿಕ್ ಆಗಿರುತ್ತಾರೆ. ನೀವು ಯಾರನ್ನಾದರೂ ಪ್ರೀತಿಸಿ ಹೇಳಿದರೆ ಎಲ್ಲಿ ತಪ್ಪು ತಿಳಿದುಕೊಳ್ಳುತ್ತಾರೋ ಎಂಬ ಅಂಜಿಕೆ ಇದ್ದರೆ ಅಂಜಿಕೆ ಬಿಟ್ಟು ಲವ್ ಪ್ರಪೋಸ್ ಮಾಡಿ. ನಿಮ್ಮ ಪ್ರೇಮ ಸಕ್ಸಸ್ ಆಗುವುದು.



Click it and Unblock the Notifications








