Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Uttara Paulguni Nakshatra Prediction 2023: ಉತ್ತರ ಫಲ್ಗುಣಿ ನಕ್ಷತ್ರದವರೇ ವೃತ್ತಿ ಜೀವನದ ಬಗ್ಗೆ ಜಾಗ್ರತೆ
ಇಪ್ಪತ್ತೇಳು ನಕ್ಷತ್ರಗಳಲ್ಲಿ ಉತ್ತರ ಫಲ್ಗುಣಿ ನಕ್ಷತ್ರವು ಹನ್ನೆರಡನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಸೂರ್ಯ ಗ್ರಹವಾಗಿದೆ.
ಇವರು ಪ್ರಾಮಾಣಿಕರು ಮತ್ತು ಬುದ್ಧಿವಂತರು. ಈ ನಕ್ಷತ್ರದಲ್ಲಿ ಜನಿಸಿದವರು ತಮ್ಮ ಗುರಿಯನ್ನು ಸಾಧಿಸಲು ಸತತವಾಗಿ ಪ್ರಯತ್ನಿಸುತ್ತಾರೆ. ಇವರು ತುಂಬಾ ಶಾಂತ ಸ್ವಭಾವದರು.

ಉತ್ತರ ಫಲ್ಗುಣಿ ನಕ್ಷತ್ರ 2023ರ ಭವಿಷ್ಯ ನೋಡುವುದಾದರೆ
ಉತ್ತರ ಫಲ್ಗುಣಿ ನಕ್ಷತ್ರ 2023ರ ಪ್ರಕಾರ ಉತ್ತರ ಫಲ್ಗುಣಿ ನಕ್ಷತ್ರ ಪದ 1 ಸಿಂಹ ರಾಶಿಯಲ್ಲಿ ಜನಿಸಿದವರು ತುಂಬಾನೇ ಎಚ್ಚರಿಕೆವಹಿಸಬೇಕಾಗಿದೆ.
ವೃತ್ತಿ, ಆಸ್ತಿ ಎಲ್ಲಾ ವಿಷಯದಲ್ಲೂ ತುಂಬಾನೇ ಎಚ್ಚರಿಕೆವಹಿಸಬೇಕಾಗಿದೆ.ಉತ್ತರ ಫಲ್ಗುಣಿ ನಕ್ಷತ್ರ ಪದ 2ರಲ್ಲಿ ಇರುವ ಕನ್ಯಾ ರಾಶಿಯವರು ಕೆಲಸ ಬಿಡಬಹುದು ಅಥವಾ ಕೆಲಸ ಬದಲಾಯಿಸಬಹುದು. ಉತ್ತರ ಫಲ್ಗುಣಿ ನಕ್ಷತ್ರ ಪದ 3ರಲ್ಲಿ ಇರುವವರು ಇರುವ ಕೆಲಸ ಬಿಟ್ಟು ಸ್ವಂತ ಉದ್ಯೋಗ ಪ್ರಾರಂಭಿಸಲು ಬಯಸಬಹುದು.
ಯಾವ ತಿಂಗಳು ಒಳ್ಳೆಯದು
ಉತ್ತರ ಫಲ್ಗುಣಿ ನಕ್ಷತ್ರದವರಿಗೆ ಮಾರ್ಚ್, ಜುಲೈ, ಆಗಸ್ಟ್, ಅಕಟ್ಓಬರ್, ಡಿಸೆಂಬರ್ 2023 ತುಂಬಾನೇ ಒಳ್ಳೆಯದು. ಕನವರಿ, ಫೆಬ್ರವರಿ, ಏಪ್ರಿಲ್, ನವೆಂಬರ್ ತಿಂಗಳಿನಲ್ಲಿ ಎಚ್ಚರವಹಿಸಬೇಕಾಗಿದೆ. ಮೇ, ಜೂನ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನಲ್ಲಿ ಸರಾಸರಿಯಾಗಿರುತ್ತದೆ.
ಉತ್ತರ ಫಲ್ಗುಣಿ ನಕ್ಷತ್ರದವರ ವೃತ್ತಿ ಜೀವನ
ಉದ್ಯಮಿಗಳು ತಮ್ಮ ಕ್ಷೇತ್ರದಲ್ಲಿ ತುಂಬಾನೇ ಬೆಳವಣಿಗೆ ಕಾಣಬಹುದು. ಎಲ್ಲಾ ಅಡೆತಡೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುವುದು. 2023 ನಿಮಗೆ ಪರೀಕ್ಷೆ ವರ್ಷವಾಗಲಿದೆ. ಹೆಚ್ಚಾದ ಜವಾಬ್ದಾರಿಗಳು ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು. ವರ್ಷದ ಮಧ್ಯ ಭಾಗದಲ್ಲಿ 2024ರ ಕೆಲವೊಂದು ಡೀಲ್‌ಗಳು ಉದ್ಯಮಿಗಳಿಗೆ ಸಿಗಲಿದೆ. ವರ್ಷದ ಮಧ್ಯ ಭಾಗದಿಂದ ಪರಿಸ್ಥಿತಿ ಸ್ವಲ್ಪ ಅನುಕೂಲಕರವಾಗಲಿದೆ.
ಉತ್ತರ ಫಲ್ಗುಣಿ ನಕ್ಷತ್ರದವರ ಆರ್ಥಿಕ ಸ್ಥಿತಿ
ಈ ವರ್ಷ ಹಣಕಾಸಿಗೆ ಸಂಬಂಧಿಸಿದ ಅತ್ಯುತ್ತಮವಾದ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ನಿಮಗೆ ದುಡಿಯಲು ತುಂಬಾನೇ ಅವಕಾಶ ಸಿಗಲಿದೆ. ಹಣದ ತೊಂದರೆಯಿಂದ ಬಾಕಿಯುಳಿದ ಕೆಲಸ ಈ ಅವಧಿಯಲ್ಲಿ ನಡೆಯಲಿದೆ. ವರ್ಷದ ಕೊನೆಯಲ್ಲಿ ಆರ್ಥಿಕ ಒತ್ತಡ ಹೆಚ್ಚಾಗುವುದು. ಮಿತಿ ಮೀರಿ ಖರ್ಚು ಮಾಡುವ ಬದಲಿಗೆ ನಿಮ್ಮ ಬಜೆಟ್ ಅನ್ನು ನೋಡಿಕೊಂಡು ಪ್ಲ್ಯಾನ್ ಮಾಡಿದರೆ ಒಳ್ಳೆಯದು.
ಉತ್ತರ ಫಲ್ಗುಣಿ ನಕ್ಷತ್ರ ಸಂಬಂಧದ ಬಗ್ಗೆ ಭವಿಷ್ಯ
ನಿಮ್ಮ ಪ್ರೀತಿ ಸಂಬಂಧ ಈ ವರ್ಷ ಚೆನ್ನಾಗಿರಲಿದೆ. ಈ ವರ್ಷ ನೀವು ಅತ್ಯುತ್ತಮವಾದ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಪ್ರೇಮಿಗಳು ಮದುವೆ ಬಗ್ಗೆ ಯೋಚಿಸಬಹುದು, ವೈವಾಹಿಕ ಜೀವನ ಚೆನ್ನಾಗಿರಲಿದೆ. ಏಪ್ರಿಲ್ ತಿಂಗಳಿನಲ್ಲಿ ಸಂಗಾತಿಯೊಂದಿಗೆ ತುಂಬಾ ರೊಮ್ಯಾಂಟಿಕ್ ಆಗಿ ಕಳೆಯುವಿರಿ.
ಉತ್ತರ ಫಲ್ಗುಣ ನಕ್ಷತ್ರ ಆರೋಗ್ಯ ಭವಿಷ್ಯ
ಗ್ರಹಗತಿಗಳ ಬಲದಿಂದಾಗಿ ಆರೋಗ್ಯ ಸ್ಥತಿ ಉತ್ತಮವಾಗಿರುತ್ತದೆ. ನೀವು ಮಾನಸಿಕ ಒತ್ತಡ ಕಡಿಮೆ ಮಾಡಿಕೊಂಡರೆ ಆರೋಗ್ಯ ಚೆನ್ನಾಗಿರುತ್ತದೆ. ಈ ವರ್ಷದಲ್ಲಿ ಯಾವುದೇ ದೊಡ್ಡ ಆರ್ಥಿಕ ತೊಂದರೆಗಳು ಇರುವುದು.



Click it and Unblock the Notifications


