Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಜುಲೈ 2022 ಜ್ಯೋತಿಷ್ಯ: ಈ ಮೂರು ರಾಶಿಯವರು ಬಹಳ ಎಚ್ಚರದಿಂದಿರಬೇಕು
ಎಲ್ಲಾ ಮಾಸವು ಎಲ್ಲರಿಗೂ ಶುಭವನ್ನು ತರುವುದಿಲ್ಲ ಅಥವಾ ಅಶುಭವನ್ನೇ ನೀಡುವುದು ಇಲ್ಲ. ಎರಡರ ಮಿಶ್ರಣವಾಗಿರುತ್ತದೆ. ಆದರೆ ಕೆಲವರಿಗೆ ಸ್ವಲ್ಪ ಹೆಚ್ಚೇ ಜಾಗ್ರತೆವಹಿಸಬೇಕು, ತಾವು ಇಡುವ ಪ್ರತಿಯೊಂದು ಹೆಜ್ಜೆಯಲ್ಲೂ ಎಚ್ಚರದಿಂದಿರಬೇಕು. ಜ್ಯೋತಿಶಾಸ್ತ್ರದ ಪ್ರಕಾರ ಜುಲೈ 2022 ಯಾವ ರಾಶಿಗಳಿಗೆ ಅದೃಷ್ಟ ಎಂಬುದನ್ನೂ ಈಗಾಗಲೇ ಹೇಳಿದ್ದೇವೆ. ಈ ಲೇಖನದಲ್ಲಿ ಜುಲೈ ತಿಂಗಳು ಯಾವೆಲ್ಲಾ ರಾಶಿಗಳು ಎಚ್ಚರದಿಂದಿರಬೇಕು, ಗ್ರಹಗಳ ಬದಲಾವಣೆ ಏನೆಲ್ಲಾ ಬದಲಾವಣೆಯನ್ನು ತರಲಿದೆ ಮುಂದೆ ನೋಡೋಣ:


ವೃಷಭ ರಾಶಿ
ಜುಲೈ 22 ರಂದು ನಿಮ್ಮ ಮನೆ ಮತ್ತು ಕುಟುಂಬದ ನಾಲ್ಕನೇ ಮನೆಗೆ ಸೂರ್ಯನು ಬದಲಾಗುವುದರಿಂದ ವೃಷಭ ರಾಶಿಯವರು ತಮ್ಮ ಅಡಿಪಾಯದ ಬಗ್ಗೆ ಹೆಚ್ಚು ಗಮನಹರಿಸುವ ಸಮಯ ಇದಾಗಿದೆ. ಎಲ್ಲಾ ಮುಚ್ಚಿದ ಬಾಗಿಲುಗಳ ಹಿಂದೆಯೂ ನಿಮಗೆ ಯಾವೆಲ್ಲಾ ಅವಕಾಶಗಳನ್ನು ಕಂಡುಕೊಳ್ಳಬಹುದು ಮತ್ತು ನಿಮ್ಮ ಪ್ರಸ್ತುತ ಆರ್ಥಿಕ ಸಮಸ್ಯೆಗಳ ನಡುವೆಯೂ ಕೌಟುಂಬಿಕ ಜೀವನವು ಹೇಗೆ ಯಾವುದೇ ಸಮಸ್ಯೆ ಇಲ್ಲದೆ ನಡೆಯುತ್ತದೆ ಎಂದು ಪರೀಕ್ಷಿಸುವ ಸಮಯ. ಆರ್ಥಿಕವಾಗಿ ನಿಮ್ಮ ಸಮಯ ಮಿಶ್ರವಾಗಿದೆ. ಖರ್ಚಿನ ಬಗ್ಗೆ ಹೆಚ್ಚು ನಿಗಾ ಇರಲಿ.

ಕನ್ಯಾ ರಾಶಿ
ಜುಲೈ 22 ರಂದು ಸೂರ್ಯನು ನಿಮ್ಮ ಮಾನಸಿಕ ಆರೋಗ್ಯ ಮತ್ತು ಏಕಾಂತದ 12ನೇ ಮನೆಗೆ ವರ್ಗಾವಣೆಯಾಗುತ್ತಿದ್ದಂತೆ, ನಿಮ್ಮ ಶಕ್ತಿಯನ್ನು ಒಳಮುಖವಾಗಿ ಸೆಳೆಯಲು ಒಲವು ತೋರುತ್ತೀರಿ. ನೀವು ಇತ್ತೀಚಿಗೆ ನಿಮ್ಮ ಕೆಲಸಕ್ಕೆ ಸಾಕಷ್ಟು ಸಮಯ ಮತ್ತು ಶಕ್ತಿಯನ್ನು ವಿನಿಯೋಗಿಸಿದ್ದೀರಿ ಮತ್ತು ಇದೀಗ ನಿಮಗೆ ವಿಶ್ರಾಂತಿ ಮತ್ತು ರೀಚಾರ್ಜ್ ಮಾಡಿಕೊಳ್ಳುವ ಸಮಯ ಬಂದಿದೆ. ನಿಮಗೆ ಅಗತ್ಯವಿರುವ ಗಮನವನ್ನು ನೀವೇ ನೀಡಬೇಕು ಮತ್ತು ಏಕಾಂಗಿಯಾಗಿ ಕಳೆಯುವ ಸಮಯದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಿ. ನಿಮ್ಮ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಆರೋಗ್ಯ ಹದಗೆಡುವ ಸಾಧ್ಯತೆ ಇದೆ.

ಮಕರ ರಾಶಿ
ಜುಲೈ 22 ರಂದು ಸೂರ್ಯನು ನಿಮ್ಮ ಏಳನೇ ಮನೆಯ ಸಂಬಂಧದಿಂದ ಮತ್ತು ನಿಮ್ಮ ಎಂಟನೇ ಮನೆಯ ಗಡಿಗಳು ಮತ್ತು ಸಂಪನ್ಮೂಲದ ಮನೆಗೆ ಬದಲಾಗುತ್ತಾನೆ. ಈ ಸಮಯದಲ್ಲಿ ನಿಮ್ಮ ಬಂಧಗಳು ಗಾಢವಾಗುತ್ತವೆ, ಕೆಲವು ಆರೋಗ್ಯಕರ ಗಡಿಗಳನ್ನು ಹೊಂದಿಸಲು ಇದು ಪ್ರಮುಖ ಸಮಯವಾಗಿದೆ. ಇತರರಿಗೆ ಅಗತ್ಯವಿರುವಾಗ ಸಹಾಯ ಹಸ್ತವನ್ನು ನೀಡಿದ್ದೀರಿ, ಇದೀಗ ಎಲ್ಲಕ್ಕೂ ಗಡಿ ಇದೆ ಎಂಬುದನ್ನು ತಿಳಿಯುವುದು ಮುಖ್ಯವಾಗಿದೆ. ಇಲ್ಲವಾದರೆ ನೀವು ಮೋಸ ಹೋಗುವ ಅಥವಾ ಮಾನಸಿಕವಾಗಿ ನೋವನ್ನು ಅನುಭವಿಸುವ ಸಾಧ್ಯತೆ ಇದೆ. ನೀವು ನಿಮ್ಮ ಮನಸ್ಸಿನ ಮಾತನ್ನು ಕೇಳಿ, ನಿಮಗೆ ಪ್ರಿಯವಾದವರಿಗೆ ನಿಮ್ಮ ಮನಸ್ಸಿನ ಮಾತನ್ನು ಹೇಳಿ. ಈ ಮಾಸದಲ್ಲಿ ಯಾವುದೇ ವಿಚಾರದಲ್ಲೂ ಎಚ್ಚರಿಕೆಯಿಂದ ಹೆಜ್ಜೆ ಇಡಿ.



Click it and Unblock the Notifications
