Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
12 ರಾಶಿಗಳಲ್ಲಿ ಈ ರೀತಿಯ ವಿಶೇಷ ಟ್ಯಾಲೆಂಟ್‌ಗಳಿವೆ, ನಿಮ್ಮ ರಾಶಿಗೆ ತಕ್ಕಂತೆ ನಿಮ್ಮಲ್ಲಿರುವ ಪ್ರತಿಭೆ ಏನು ಗೊತ್ತೆ?
ಒಬ್ಬರಂತೆ ಮತ್ತೊಬ್ಬರ ಗುಣವಿರುವುದಿಲ್ಲ, ಆದರೆ ವೈದಿಕ ಶಾಸ್ತ್ರದ ಪ್ರಕಾರ ನಮ್ಮ ರಾಶಿಗೆ ತಕ್ಕಂತೆ ಕೆಲವೊಂದು ವಿಶೇಷ ಗುಣಗಳಿರುತ್ತವೆಯಂತೆ, ನಾವಿಲ್ಲಿ ನಿಮ್ಮ ರಾಶಿಗೆ ನಿಮ್ಮಲ್ಲಿರುವ ಸುಪ್ತ ಪ್ರತಿಭೆ ಬಗ್ಗೆ ಹೇಳಿದ್ದೇವೆ.
ನಿಮ್ಮಲ್ಲಿ ಈ ಪ್ರತಿಭೆಯಿದೆ ಇನ್ನೂ ತಿಳಿದಿರದಿದ್ದರೆ ನಿಮ್ಮ ರಾಶಿಗೆ ತಕ್ಕಂತೆ ಈ ಪ್ರತಿಭೆ ಇದೆಯೇ ಅಂತ ಪರೀಕ್ಷಿಸಿ ನೋಡಿ, ಬನ್ನಿ ನಿಮ್ಮ ರಾಶಿಯ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳಿದೆ ಎಂದು ನೋಡೋಣ ಬನ್ನಿ:

ಮೇಷ ರಾಶಿ
ಮೇಷ ರಾಶಿಯವರಲ್ಲಿ ನಾಯಕತ್ವದ ಗುಣಗಳಿರುತ್ತದೆ, ಅಲ್ಲದೆ ಮೇಷ ರಾಶಿಯವರ ಅಧಿಪತಿ ಮಂಗಳ. ಆದ್ದರಿಂದ ಇವರಲ್ಲಿ ಶಕ್ತಿ, ಸ್ಟೆಮಿನಾ ಕೂಡ ಚೆನ್ನಾಗಿರುತ್ತದೆ. ಸ್ಪೋರ್ಟ್ಸ್‌ನಲ್ಲಿ ಇವರು ಉತ್ತಮರಾಗಿರುತ್ತಾರಂತೆ.

ವೃಷಭ ರಾಶಿ
ವೃಷಭ ರಾಶಿಯವರು ಯಾವುದೇ ಗೊಂದಲಕ್ಕೆ ಒಳಗಾಗದೆ ನಿರ್ಧಾರ ತೆಗೆದುಕೊಳ್ಳುವವರು. ಇವರು ಅಡುಗೆಯಲ್ಲಿ ನಿಪುಣರು. ಇವರ ಕೈ ರುಚಿ ತುಂಬಾನೇ ಅದ್ಭುತವಾಗಿರುತ್ತದೆ.

ಮಿಥುನ ರಾಶಿಯವರು
ಮಿಥುನ ರಾಶಿಯವರು ಸಂಶೋಧನೆಯಲ್ಲಿ ಎತ್ತಿದ ಕೈ. ಇವರು ಯಾವಾಗಲೂ ತುಂಬಾ ಪ್ರಶ್ನೆಗಳನ್ನು ಕೇಳುತ್ತಾರೆ ಹಾಗೂ ತಮ್ಮ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳುವ ಪ್ರಯತ್ನ ಮಾಡುತ್ತಾರೆ. ಸಂಶೋಧಕರಾದರೆ ಒಳ್ಳೆಯ ಸಾಧನೆ ಮಾಡುತ್ತರೆ.

ಕರ್ಕ ರಾಶಿ
ಕರ್ಕ ರಾಶಿಯವರು ಸೂಕ್ಷ್ಮ ಸ್ವಭಾವದವರು. ಇವರು ಸ್ವಭಾವಿತ ನಾಯಕತ್ವದ ಗುಣವಿರುವವರು ಅಲ್ಲದೆ ತುಂಬಾ ಕಂಫರ್ಟ್ ಹಾಗೂ ಲಕ್ಷುರಿ ಬಯಸುವವರು. ತಮ್ಮ ಜೀವನ ಕಂಫರ್ಟ್ ಆಗಿರಲು ಏನು ಮಾಡಬೇಕೆಂಬುವುದು ಗೊತ್ತಿರುತ್ತದೆ.

ಸಿಂಹ ರಾಶಿ
ಈ ರಾಶಿಯವರು ಜೊತೆಗಿದ್ದರೆ ತಮ್ಮ ಜೊತೆಗಿರುವವರು ಖುಷಿಯಿಂದ ಇರುವಂತೆ ಮಾಡುತ್ತಾರೆ. ಯಾರಿಗಾದರೂ ಗಿಫ್ಟ್ ಕೊಡುವುದರಲ್ಲಿ ಎತ್ತಿದ ಕೈ. ಯಾವುದಾದರೂ ಪಾರ್ಟಿ, ಫಂಕ್ಷನ್‌ಗಳಲ್ಲಿ ಇವರು ತಮ್ಮ ಮಾತಿನ ಮೂಲಕ ನೆರೆದಿರುವವರ ಗಮನ ಸೆಳೆಯುತ್ತಾರೆ.

ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಸವಾಲುಗಳೆಂದರೆ ತುಂಬಾ ಇಷ್ಟ, ಸವಾಲುಗಳನ್ನು ಬಿಗಿದಪ್ಪಿ ಕೊಳ್ಳುತ್ತಾರೆ. ಬದಲಾವಣೆಗೆ ಬೇಗನೆ ಒಗ್ಗಿಕೊಳ್ಳುವ ಗುಣ ಇವರಲ್ಲಿ ಇರುತ್ತದೆ.

ತುಲಾ ರಾಶಿ
ತುಲಾ ರಾಶಿಯವರು ಶಾಂತಿ ಪ್ರಿಯರು. ಇವರಿಗೆ ಎಲ್ಲಾವನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುವ ಗುಣವಿರುತ್ತದೆ. ಇವರು ತುಂಬಾ ಮೃದುಭಾಷಿಯವರಾಗಿರುತ್ತಾರೆ.

ವೃಶ್ಚಿಕ ರಾಶಿ
ಇವರನ್ನು ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ, ನೀವು ಏನು ಮಾಡುತ್ತೀರಿ ಎಂದು ಅವರು ಮೊದಲೇ ಊಹಿಸಿರುತ್ತಾರೆ, ಬೇರೆಯವರ ಸೀಕ್ರೆಟ್ ಕಂಡು ಹಿಡಿಯುವುದರಲ್ಲಿ ಎತ್ತಿದ ಕೈ.

ಧನು ರಾಶಿ
ಎಂಥ ಕಠಿಣ ಪರಿಸ್ಥಿತಿಯಲ್ಲಿ ತಮ್ಮ ನಿರ್ಧಾರಕ್ಕೆ ಬದ್ಧರಾಗಿರುವ ಗುಣ ಇವರಲ್ಲಿದೆ. ಇವರಿಗೆ ರಿಸ್ಕ್ ತೆಗೆದುಕೊಳ್ಳುವುದೆಂದರೆ ಇಷ್ಟ. ಅಡ್ವೆಂಚರ್ ಗುಣ ಇವರಲ್ಲಿದೆ.

ಮಕರ ರಾಶಿ
ಮಕರ ರಾಶಿಯವರು ಬ್ಯುಸ್‌ನೆಸ್‌ನಲ್ಲಿ ಎತ್ತಿದ ಕೈ ಇನ್ನು ಇವರು ನೀವು ಊಹಿಸಿರುವುದಕ್ಕಿಂತಲೂ ಹೆಚ್ಚಿನ ಕುಶಾಗ್ರ ಬುದ್ಧಿಯವರು. ಅಲ್ಲದೆ ಒಳ್ಳೆಯ ಹಾಸ್ಯಗಾರರೂ ಆಗಿರುತ್ತಾರೆ.

ಕುಂಭ ರಾಶಿ
ಕುಂಭರಾಶಿಯವರು ತುಂಬಾ ಇನ್ನೋವೇಟಿವ್ ಅಂದರೆ ಏನಾದರೂ ಹೊಸತನ ಹುಡುಕುವ ಸ್ವಭಾದವರು. ಇವರು ತುಂಬಾ ಫಾರ್ವರ್ಡ್ ಥಿಂಕಿಂಗ್ ಸ್ವಭಾವದರು, ಯಾವುದಾದರೂ ಟ್ರೆಂಡ್ ಬರುವ ಮುಂಚೆಯೇ ಇವರು ಯೋಚನೆ ಮಾಡಿರುತ್ತಾರೆ.

ಮೀನ ರಾಶಿಯವರು
ಮೀನ ರಾಶಿಯವರು ತುಂಬಾ ಭಾವನಾತ್ಮಕ ಜೀವಿಗಳು. ಹಾಗಂತ ಅವರು ದುಃಖ ಪಟ್ಟುಕೊಂಡು ಕೂರುವವರಲ್ಲ, ತುಂಬಾ ಆದರ್ಶಪ್ರಾಯರಾಗಿರುತ್ತಾರೆ. ಅರ್ಧ ಲೋಟ ನೀರು ತುಂಬಿದ್ದರೂ ಅದು ತುಂಬಿದೆ ಎಂದು ಭಾವಿಸಿ ಕಾರ್ಯಪ್ರವೃತ್ತಿ ಮಾಡುವ ಗುಣ ಇವರಲ್ಲಿದೆ.



Click it and Unblock the Notifications