Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Meena Rashi Ugadi Bhavishya 2022: ಯುಗಾದಿ ಪಂಚಾಂಗ 2022-23: ಹೇಗಿದೆ ಮೀನ ರಾಶಿಯ ಭವಿಷ್ಯ?
ಯುಗಸ್ಯದ ಆದಿ ಯುಗಾದಿ. ಯುಗಾದಿ ಎಂದರೆ ಹೊಸ ಸಂವತ್ಸರ, ಯುಗಾದಿ ಪಂಚಾಂಗ ಪ್ರಕಾರ ದ್ವಾದಶಗಳ ರಾಶಿಫಲ ಹೇಳಲಾಗುವುದು. ನಾವು ಪ್ರತೀ ರಾಶಿಯ ವಾರ್ಷಿಕ ರಾಶಿಫಲ ವಿವರವಾಗಿ ನೀಡಿದ್ದೇವೆ. ಇಲ್ಲಿ ಮೀನ ರಾಶಿಯವರ ಉದ್ಯೋಗ, ವ್ಯಾಪಾರ, ಕುಟುಂಬ, ಶಿಕ್ಷಣ, ಆರೋಗ್ಯ ಯುಗಾದಿ ಪಂಚಾಂಗ ಪ್ರಕಾರ ಹೇಗಿರಲಿದೆ ಎಂದು ಹೇಳಲಾಗಿದೆ ನೋಡಿ:
ಮೀನ ರಾಶಿಯ ಅಧಿಪತಿ ಶನಿ ಅಲ್ಲದೆ ಮೀನ ರಾಶಿಗೆ ಈಗಾಗಲೇ ಗುರು ಪ್ರವೇಶವಾಗುತ್ತಿದ್ದಾನೆ. ಕೆಲವು ಕಂಟಕ ಹಾಗೂ ಸಮಸ್ಯೆಗಳನ್ನು ಈಗಾಗಲೇ ಅನುಭವಿಸದ್ದೀರಾ. 1ರ ಗುರು, 12ರ ಶನಿ, 2ರ ರಾಹು, 8ರ ಕೇತು, ಪೂರ್ವಾಭಾದ್ರ, ಉತ್ತರಾಭಾದ್ರ ಮತ್ತು ರೇವತಿ ನಕ್ಷತ್ರದವರು ಈ ರಾಶಿಯವರಾಗಿರುತ್ತಾರೆ. ಈ ವರ್ಷ ನಿಮಗೆ ಮಿಶ್ರ ಫಲಿತಾಂಶಗಳು ನಿಮಗೆ ಸಿಗಲಿದೆ, ಹಾದಿ ಸ್ವಲ್ಪ ಕಷ್ಟವೇ ಇದೆ. 2022ರ ಶುಭಕೃತ್ ನಾಮ ಸಂವತ್ಸರವು ಮೀನ ರಾಶಿಯವರಿಗೆ ಆದಾಯ 2 ಇದ್ದರೆ ವ್ಯಯ 8 ಇದೆ. ರಾಜಯೋಗ 1 ಇದ್ದರೆ ಅವಮಾನ 7 ಇದೆ.

ವೃತ್ತಿ ಜೀವನ
ಮೀನ ರಾಶಿಯ ಪದವೀಧರರು, ಉದ್ಯೋಗ ಹುಡುಕುತ್ತಿರುವವರು ಅಥವಾ ನಿರುದ್ಯೋಗಿಗಳಿಗೆ ಖಂಡಿತ ಈ ವರ್ಷ ಉತ್ತಮ ಫಲಿತಾಂಶ ಸಿಗಲಿದೆ. ಉದ್ಯೋಗಿಗಳಿಗೆ ಎದುರಾಗುತ್ತಿರುವ ಅನೇಕ ಸವಾಲುಗಳು, ಕಠಿಣ ಪರಿಸ್ಥಿತಿಗಳಿಂದ ತಪ್ಪಿಸಿಕೊಳ್ಳಿ, ಸಂದರ್ಭಗಳನ್ನು ಶಾಂತ ರೀತಿಯಲ್ಲಿ ಎದುರಿಸಲು ಪ್ರಯತ್ನಿಸಿ. ಇಲ್ಲವಾದರೆ ನಿಮ್ಮ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ.

ಹಣಕಾಸಿನ ಜೀವನ
ಮೀನ ರಾಶಿಯವರಿಗೆ ಆರ್ಥಿಕ ಕ್ಷೇತ್ರರಲ್ಲಿ ಉತ್ತಮವಾಗಿದೆ, ವರ್ಷದ ಮಧ್ಯಭಾಗದಲ್ಲಿ ಹಣಕಾಸಿನ ಲಾಭದ ಸಾಧ್ಯತೆ ಇದೆ. ತೆರಿಗೆ ಬಗ್ಗೆ ಗಮನಹರಿಸಿ. ಹೂಡಿಕೆಗೆ ಸಂಬಂಧಿಸಿದಂತೆ ನಿಮ್ಮ ಯೋಜನೆಗಳು ಫಲ ನೀಡಲಿದೆ. ಕೋರ್ಟ್ ವ್ಯಾಜ್ಯಗಳಿದ್ದರೆ ಅದರ ತೀರ್ಪು ನಿಮ್ಮ ಪರವಾಗುವ ಸಾಧ್ಯತೆ ಇದೆ. ವರ್ಷದ ದ್ವಿತಿಯಾರ್ಧದಲ್ಲಿ ಯಶಸ್ಸು ಪಡೆಯುವ ಸಾಧ್ಯತೆ ಇದೆ.

ಕುಟುಂಬ ಜೀವನ
ಮೀನ ರಾಶಿಯವರ ವೈವಾಹಿಕ ಜೀವನದಲ್ಲಿ ನಿಮಗೆ ಕುಟುಂಬದೊಂದಿಗೆ ಸಮಯ ಕಳೆಯಲು ಆಗುವುದಿಲ್ಲ, ಇದರಿಂದ ಕುಟುಂಬದ ಕೆಲವು ಸದಸ್ಯರೊಂದಿಗೆ ಹೊಂದಿಕೊಳ್ಳಲು ಕಷ್ಟವಾಗಬಹುದು. ಮಕ್ಕಳನ್ನು ನಿರ್ಲಕ್ಷಿಬಹುದು, ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಶಾಲೆಗೆ ಕಳುಹಿಸಿಕೊಡಿ.

ವ್ಯಾಪಾರ ಜೀವನ
ಮೀನ ರಾಶಿಯ ವ್ಯಾಪಾರಿಗಳಿಗೆ ಲಾಭದಾಯಕ ವರ್ಷ, ಏಪ್ರಿಲ್ ತಿಂಗಳಲ್ಲಿ ಹೊಸ ಉದ್ಯಮಗಳನ್ನು ಸಹ ನೀವು ಆರಂಭಿಸಬಹುದು, ಈ ಸಮಯ ತುಂಬಾ ಚೆನ್ನಾಗಿದೆ. ವರ್ಷದ ಆರಂಭಲ್ಲಿ ಜನರಿಯಿಂದ ಮಾರ್ಚ್‌ವರೆಗೆ ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡಬೇಡಿ. ವ್ಯಾಪಾರಕ್ಕೆ ಸಂಬಂಧಿಸಿದ ಕಾನೂನು ವಿಷಯಗಳ ಬಗ್ಗೆ ಸರಿಯಾದ ಕಾಳಜಿ ತೆಗೆದುಕೊಳ್ಳಬೇಕಿದೆ. ವ್ಯಾಪಾರದಲ್ಲಿ ಲಾಭಕ್ಕಾಗಿ ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ಸಿಲುಕಿಕೊಂಡರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಪಾಲುದಾರರಿಂದ ಉತ್ತಮ ಬೆಂಬಲ ಸಿಗಲಿದೆ. ಅಂತಾರಾಷ್ಟ್ರೀಯ ವ್ಯವಹಾರ ಸಹ ನಿಮ್ಮದಾಗಬಹುದು.

ಶಿಕ್ಷಣ ಜೀವನ
ಮೀನ ರಾಶಿಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅತ್ಯುತ್ತಮ ಸಮಯ. ವಿದೇಶಕ್ಕೆ ಹೋಗಲು ಬಯಸುವ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಅತ್ಯುನ್ನತ ಯಶಸ್ಸು ಸಿಗಲಿದೆ. ವಿದ್ಯಾರ್ಥಿಗಳು ಹಿರಿಯ ಮಾರ್ಗದರ್ಶನ ಹಾಗೂ ಶಿಕ್ಷಕರ ಸಲಹೆ ಸಹಕಾರ ಪಡೆದರೆ ಉನ್ನು ಅತ್ಯುತ್ತಮ ಫಲಿತಾಂಶ/ಯಶಸ್ಸು ಪಡೆಯಬಹುದು.

ಮಕ್ಕಳ ಭವಿಷ್ಯ
ಮೀನ ರಾಶಿಯವರಿಗೆ ಏಪ್ರಿಲ್ 13ರಂದು ಗುರುವು ಲಗ್ನದಲ್ಲಿ ಸಂಚರಿಸುವುದರಿಂದ ಈ ವರ್ಷ ಮಕ್ಕಳಿಗೆ ತುಂಬ ಅನುಕೂಲಕರವಾಗಿದೆ. ಹಾಗೆಯೇ ಮಕ್ಕಳು ತಮ್ಮ ಕಠಿಣ ಪರಿಶ್ರಮದಿಂದ ಯಶಸ್ಸನ್ನು ಪಡೆಯುತ್ತಾರೆ. ಮದುವೆ ವಯಸ್ಸಿಗೆ ಬಂದ ಮಕ್ಕಳಿಗೆ ಕಂಕಣ ಭಾಗ್ಯ ಕೂಡಿಬರಲಿದೆ. 5ನೇ ಮನೆಯಲ್ಲಿ ಗುರು ಇರುವುದರಿಂದ ಮಕ್ಕಳು ಪ್ರಗತಿ ಸಾಧಿಸುವ ಸಾಧ್ಯತೆ ಇದೆ. ಸೆಪ್ಟೆಂಬರ್ ನಂತರ ಮಕ್ಕಳಿಗೆ ಅನುಕೂಲಕರ ಮತ್ತು ಸಂತೋಷದಾಯಕವಾಗಿರುತ್ತದೆ.

ಆಸ್ತಿ ಗಳಿಕೆ
ಮೀನ ರಾಶಿಯವರಿಗೆ ವಾಹನ ಖರೀದಿ, ಆಸ್ತಿ ಖರೀದಿ ಮತ್ತು ಮಾರಾಟದಲ್ಲಿ ಲಾಭ ಇದೆ. ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಆಸ್ತಿ ಖರೀದಿಸುವಾಗ ಜಾಗರೂಕರಾಗಿರಿ. ಕುಟುಂಬ ಸದಸ್ಯರಿಗೆ ಹಣ ಅಥವಾ ಸಾಲ ನೀಡುವಾಗ ಜಾಗರೂಕರಾಗಿರಿ. ಸಾಲ ತೆಗೆದುಕೊಂಡರೆ ಆ ವರ್ಷವೇ ಅದನ್ನು ತೀರಿಸಿದರೆ ಒಳ್ಳೆಯದು.

ಸಂಪತ್ತು ಲಾಭ
ಮೀನ ರಾಶಿಯ 12ನೇ ಮನೆಯಲ್ಲಿ ಗುರು ಇರುವುರಿಂದ ಹೆಚ್ಚು ಖರ್ಚು ಮಾಡುತ್ತೀರಿ, ಹಾಗೆಯೇ 11ನೇ ಮನೆಯಲ್ಲಿ ಶನಿಯು ಇರುವುರಿಂದ ಉತ್ತಮ ಹಣ ಹರಿವು ಸಹ ಇರುತ್ತೆ. ದೀರ್ಘಕಾಲದ ಸಾಲದಿಂದ ಮುಕ್ತಿ ಪಡೆಯುತ್ತೀರಿ, ನಿಮ್ಮ ಹಿರಿಯ ಸಹೋದರ ಅಥವಾ ಸ್ನೇಹಿತರಿಂದ ಲಾಭ ಪಡೆಯುತ್ತೀರಿ. ವಿಶೇಷವಾಗಿ ಹೊಸದಾಗಿ ಹೂಡಿಕೆ ಮಾಡಲು ಈ ಸಮಯ ಶುಭವಾಗಿದೆ. ಹಣ ಸಹ ಉಳಿಸಲು ಸಾಧ್ಯವಾಗುತ್ತದೆ.

ಆರೋಗ್ಯ ಜೀವನ
ಮೀನ ರಾಶಿಯವರಿಗೆ ಕೆಲವು ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಇರಲಿದೆ. ಜೀರ್ಣಕ್ರಿಯೆ, ಯಕೃತ್, ವೈರಲ್, ಸೋಂಕು ಎದುರಿಸಬಹುದು. ಉತ್ತಮ ಆಹಾರ ಪದ್ಧತಿಯಿಂದ ಸಮಸ್ಯೆಯಿಂದ ದೂರ ಇರಬಹುದು. ಮಾನಸಿಕ ಒತ್ತಡ ಎದುರಿಸಬಹುದು, ಆದ್ದರಿಂದ ಹೆಚ್ಚು ತಾಳ್ಮೆ ಮತ್ತು ಸಹನೆಯಿಂದಿದ್ದರೆ ಒಳಿತು.
ಮೀನ ರಾಶಿಯ ಅದೃಷ್ಟ ಸಂಖ್ಯೆ
12, 4 ಮತ್ತು 3.



Click it and Unblock the Notifications