Latest Updates
-
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ!
Kumbha Rashi Ugadi Bhavishya 2022: ಯುಗಾದಿ ಪಂಚಾಂಗ 2022-23: ಹೇಗಿದೆ ಕುಂಭ ರಾಶಿಯ ಭವಿಷ್ಯ?
ಯುಗಾದಿ ಎಂದರೆ ಹೊಸ ಸಂವತ್ಸರ, ಯುಗಾದಿ ಪಂಚಾಂಗ ಪ್ರಕಾರ ದ್ವಾದಶಗಳ ರಾಶಿಫಲ ಹೇಳಲಾಗುವುದು. ನಾವು ಪ್ರತೀ ರಾಶಿಯ ವಾರ್ಷಿಕ ರಾಶಿಫಲ ವಿವರವಾಗಿ ನೀಡಿದ್ದೇವೆ. ಇಲ್ಲಿ ಕುಂಭ ರಾಶಿಯವರ ಉದ್ಯೋಗ, ವ್ಯಾಪಾರ, ಕುಟುಂಬ, ಶಿಕ್ಷಣ, ಆರೋಗ್ಯ ಯುಗಾದಿ ಪಂಚಾಂಗ ಪ್ರಕಾರ ಹೇಗಿರಲಿದೆ ಎಂದು ಹೇಳಲಾಗಿದೆ ನೋಡಿ:
ಕುಂಭ ರಾಶಿಯ ಅಧಿಪತಿ ಶನಿ ಅಲ್ಲದೆ ಕುಂಭ ರಾಶಿಗೆ ಈ ವರ್ಷ ಶನಿ ಪ್ರವೇಶವಾಗುತ್ತಿದ್ದಾನೆ. 2ರ ಗುರು, 1ರ ಶನಿ, 3ರ ರಾಹು, 9ರ ಕೇತು, ಧನಿಷ್ಠ, ಶತಭಿಷ, ಪೂರ್ವಾಭಾದ್ರ ನಕ್ಷತ್ರದವರು ಈ ರಾಶಿಯವರಾಗಿರುತ್ತಾರೆ. ಈ ವರ್ಷ ನಿಮಗೆ ಮಿಶ್ರ ಫಲಿತಾಂಶಗಳು ನಿಮಗೆ ಸಿಗಲಿದೆ. ಶುಭಕೃತ್ ನಾಮ ಸಂವತ್ಸರವು ಕುಂಭ ರಾಶಿಯವರಿಗೆ ಆದಾಯ 5 ಇದ್ದರೆ ವ್ಯಯ 2 ಇದೆ. ರಾಜಯೋಗ 5 ಇದ್ದರೆ ಅವಮಾನ 4 ಇದೆ.

ವೃತ್ತಿ ಜೀವನ
ವರ್ಷದ ಆರಂಭದಲ್ಲಿ ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳು ಸಂಪೂರ್ಣ ಬೆಂಬಲ ಸೂಚಿಸುತ್ತಾರೆ, ಇದರಿಂದ ನಿಮ್ಮ ಕೆಲಸ ಯಶಸ್ವಿಯಾಗಿ ಪೂರ್ಣಗೊಳಿಸುವ ಸಾಧ್ಯತೆ ಇದೆ. ಉದ್ಯೋಗ ಬದಲಾಯಿಸುವ ಬಗ್ಗೆ ಯೋಚಿಸುತ್ತಿರುವವರಿಗೆ ಜನವರಿ, ಏಪ್ರಿಲ್ ಮತ್ತು ಮೇ ತಿಂಗಳು ಉತ್ತಮವಾಗಿದೆ. ನಿಮ್ಮ ಅಪೇಕ್ಷಿತ ಉದ್ಯೋಗ ಪಡೆಯುವ ಅದ್ಯತೆ ಇದೆ. ಮಂಗಳ ಗ್ರಹದ ದೃಷ್ಟಿ ನಿಮ್ಮ 6ನೇ ಮನೆಯಲ್ಲಿರುತ್ತದೆ, ಈ ಸಮಯದಲ್ಲಿ ವಿರೋಧಿಗಳು ಹೆಚ್ಚಾಗಬಹುದು ಹಾಗೆಯೇ ಕೆಲಸದ ಸ್ಥಳದಲ್ಲಿ ತೊಂದರೆಗೊಳಿಸುವ ಸಂಪೂರ್ಣ ಪ್ರಯತ್ನ ಮಾಡುತ್ತಾರೆ, ಆದ್ದರಿಂದ ಜನವರಿಯಿಂದ ಜುಲೈವರೆಗೆ ಸ್ವಲ್ಪ ಜಾಗರೂಕರಾಗಿರಿ. ಜುಲೈ ಕೊನೆ ವಾರದಿಂದ ಸೆಪ್ಟೆಂಬರ್ ವರೆಗೆ ನಿಮಗೆ ಉತ್ತಮವಾಗಿದೆ. ಅಕ್ಟೋಬರ್ ತಿಂಗಳಲ್ಲಿ ವರ್ಗಾವಣೆ ಪಡೆಯಬಹುದಾಗಿದೆ.
ವ್ಯಾಪಾರಸ್ಥರಿಗೆ ಜುಲೈ, ಆಗಸ್ಟ್, ಸೆಪ್ಟೆಂಬರ್ ಮಾಸ ಹೆಚ್ಚು ಪ್ರಯೋಜನಕಾರಿಯಾಗಲಿದೆ. ವರ್ಷದ ಆರಂಭದಿಂದ ಅಂತ್ಯದವರೆಗೆ ಶನಿದೇವ ನಿಮ್ಮ ರಾಶಿಚಕ್ರದ 12ನೇ ಮನೆಯಲ್ಲಿ ಕುಳಿತಿರುತ್ತಾನೆ, ಈ ಸಮಯದಲ್ಲಿ ಆರ್ಥಿಕ ಪರಿಸ್ಥಿತಿ ದುರ್ಬಲವಾಗಿರುತ್ತದೆ. ಉದ್ಯೋಗದಲ್ಲಿರುವವರು ಸಹೋದ್ಯೋಗಿಗಳ ಜತೆ ಉತ್ತಮ ಸಂಬಂಧ ಹೊಂದಿರಿ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ದೊರೆಯುವ ಸಂಭವ ಇದೆ.

ಶಿಕ್ಷಣ ಜೀವನ
ಉನ್ನತ ಶಿಕ್ಷಣಕ್ಕೆ ಹೋಗಲು ಬಯಸುವ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಇದೆ, ಅದ್ಭುತ ಯಶಸ್ಸನ್ನು ಪಡೆಯುತ್ತಾರೆ. ವಿದ್ಯಾರ್ಥಿಗಳ ಗಮನ ಹೆಚ್ಚಾಗಿ ತಮ್ಮ ಬುದ್ಧಿಯ ಮೇಲೆ ಇರಬೇಕು. ಅಧ್ಯಯನದಲ್ಲಿ ಕಠಿಣ ಪರಿಶ್ರಮ ಹಾಕಿದರೆ ಅದಕ್ಕೆ ತಕ್ಕ ಪ್ರತಿಫಲ ಪಡೆಯುತ್ತಾರೆ.

ಮಕ್ಕಳ ಭವಿಷ್ಯ
ವರ್ಷದ ಆರಂಭ ಅನುಕೂಲಕರವಾಗಿದೆ. 5ನೇ ಮನೆಯಲ್ಲಿ ಗುರುಗ್ರಹ ಪರಿಣಾಮ ಇರುವುದರಿಂದ ಮಕ್ಕಳೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತೀರಿ. ಅವರ ಅಧ್ಯಯನ ಮೇಲೆ ಅವರ ಗಮನ ಉತ್ತಮವಾಗಿರುತ್ತದೆ. ಮದುವೆಯಾಗುವ ಮಕ್ಕಳಿಗೆ ವಿವಾಹವಾಗುವ ಸಂಭವ ಇದೆ.
ಏಪ್ರಿಲ್ ನಂತರ ನವ ವಿವಾಹಿತರಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ. ಮಕ್ಕಳ ಆರೋಗ್ಯ ಬಗ್ಗೆ ಜಾಗರೂಕರಾಗಿರಿ. 2022ರಲ್ಲಿ ಕೆಲವು ವಿಷಯಗಳಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಜೀವನಲ್ಲಿ ಯಶಸ್ವಿಯಾಗಲು ಪ್ರೀತಿ ಮತ್ತು ಸಮಯ ಬೇಕಾಗುತ್ತದೆ, ಇದು ಅದೃಷ್ಟ ತರುತ್ತದೆ.

ಹಣಕಾಸಿನ ಜೀವನ
ಉತ್ತಮ ಆರ್ಥಿಕ ಸ್ಥಿತಿ ಹೊಂದಿರುತ್ತಾರೆ, ಆದಾಯ ಉತ್ತಮವಾಗಿದೆ ಅದೇ ರೀತಿ ವೆಚ್ಚವೂ ಸಹ ಇರುತ್ತದೆ. ಈ ವರ್ಷ ನಿಮ್ಮ ಇಚ್ಛೆಯಂತೆ ಉಳಿಸಲು ಸಾಧ್ಯವಿಲ್ಲ, ಆಸ್ತಿ ಖರೀದಿಸುವ ಸಾಧ್ಯತೆ ಇದೆ. ಸಾಮಾಜಿಕ ಮತ್ತು ಕೌಟುಂಬಿಕ ಘಟನೆಗಳಿಗಾಗಿ ನಿಮ್ಮಿಂದ ದೊಡ್ಡ ಮೊತ್ತದ ಹಣ ಖರ್ಚಾಗುವ ಸಾಧ್ಯತೆ ಇದೆ.

ಕುಟುಂಬ ಜೀವನ
ಸ್ವಲ್ಪ ಅಡೆತಡೆ ಉಂಟಾಗಬಹುದು, ಮಾನಸಿಕ ಒತ್ತಡ ಹೆಚ್ಚಿಸುವಂಥ ವಿವಾದಗಳು ಎದುರಾಗಬಹುದು. ಆದ್ದರಿಂದ ವರ್ಷದ ಮೊದಲಾರ್ಧದಲ್ಲಿ ಸ್ವಲ್ಪ ತಾಳ್ಮೆಯಿಂದಿರಿ, ಕೆಲವು ವಿಷಯಗಳನ್ನು ನಿರ್ಲಕ್ಷಿಸಬೇಕಾಗುತ್ತದೆ. ವರ್ಷದ ದ್ವಿತಿಯಾರ್ಧದಲ್ಲಿ ಉತ್ತಮವಾದ ಅವಕಾಶಗಳು ಒದಗಿ ಬರುತ್ತದೆ. ಕುಟುಂಬದ ಬೆಂಬಲ ನಿಮಗೆ ಸಿಗಲಿದೆ.

ವ್ಯಾಪಾರ ಜೀವನ
ವ್ಯವಹಾರದಿಂದ ಉತ್ತಮ ಲಾಭ ನಿರೀಕ್ಷಿಬಹುದು, ಸಮಯಕ್ಕೆ ಸರಿಯಾಗಿ ವ್ಯಾಪಾರ ವಿಸ್ತರಿಸಬಹುದು. ದ್ವಿತಿಯಾರ್ಧದದಲ್ಲಿ ಕೆಲವು ಸಮಸ್ಯೆ ಕಾಣಿಸಿಕೊಳ್ಳಬಹುದು, ಅನುಭವಿಗಳ ಸಲಹೆ ಪಡೆದರೆ ಉತ್ತಮ. ಸಿಬ್ಬಂದಿ ಮತ್ತು ಉದ್ಯೋಗಿಗಳ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಿ. ಯಾವುದೇ ಸಾಲ ತೆಗೆದುಕೊಳ್ಳುವಾಗ ಎಲ್ಲಾ ನಿಯಮ, ಷರತ್ತುಗಳನ್ನು ತಿಳಿದು ಸಾಲ ಪಡೆಯಿರಿ.

ಆಸ್ತಿ ಗಳಿಕೆ
ಕೆಲವು ಸಮಸ್ಯೆಗಳ ಹೊರತಾಗಿಯೂ ಹಣದ ಹರಿವು ಇರುತ್ತದೆ. ಏಪ್ರಿಲ್ ನಂತರ 2ನೇ ಮನೆಯಲ್ಲಿ ಗುರುವಿನ ಸಂಚಾರವೂ ಸ್ವಲ್ಪ ಸಮಾಧಾನ ತರುತ್ತದೆ. ಬಂಗಾರದ ಆಭರಣ ಮರಳಿ ಪಡೆಯಬಹುದು. ಆಸ್ತಿ ಖರೀದಿಸುವುದಾದರೆ ಗಡಿಬಿಡಿಮಾಡಿ ಕೊಳ್ಳಬೇಡಿ, ಖರೀದಿಸುವ ಮುನ್ನ ಕೆಲವು ಅಡೆತಡೆ ಎದುರಿಸಬೇಕಾಗುತ್ತದೆ. ಆಸ್ತಿ ಖರೀದಿ ಅಥವಾ ಮಾರಾಟಕ್ಕೆ ಏಪ್ರಿಲ್ ನಂತರ ಸೆಪ್ಟೆಂಬರ್ ವರೆಗೆ ಅನುಕೂಲಕರವಾಗಿದೆ.

ಸಂಪತ್ತು ಲಾಭ
ಆದಾಯದ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ಕಷ್ಟಪಟ್ಟು ಗಳಿಸಿದ ಆದಾಯವನ್ನು ಹೂಡಿಕೆ ಮಾಡುವ ಮೊದಲು ಹಲವು ಬಾರಿ ಯೋಚಿಸಿ. ರಿಯಲ್ ಎಸ್ಟೇಟ್ ನಲ್ಲಿ ಹಣ ಹೂಡಿಕೆ ಮಾಡಬೇಡಿ, ನಷ್ಟವಾಗುವ ಸಾಧ್ಯತೆ ಇದೆ.

ಆರೋಗ್ಯ
ಕುಂಭ ರಾಶಿಯಯವರ ಆರೋಗ್ಯ ಜೀವನ ಉತ್ತಮವಾಗಿರುತ್ತದೆ. ಆದರೆ ಜೀರ್ಣ ಕ್ರಿಯೆಯ ಸಮಸ್ಯೆಯಿಂದ ಅನಾರೋಗ್ಯ ಉಂಟಾಗಬಹುದು, ಆದ್ದರಿಂದ ಆಹಾರದ ಬಗ್ಗೆ ಕಾಳಜಿವಹಿಸಿ. ಹೆಚ್ಚು ಮಾನಸಿಕ ಒತ್ತಡ ತೆಗೆದುಕೊಳ್ಳಬೇಡಿ.
ಕುಂಭ ರಾಶಿಯ ಅದೃಷ್ಟ ಸಂಖ್ಯೆ
11 ಮತ್ತು 8



Click it and Unblock the Notifications











