Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dhanu Rashi Ugadi Bhavishya 2022 : ಯುಗಾದಿ ಪಂಚಾಂಗ 2022-23: ಹೇಗಿದೆ ಧನು ರಾಶಿಯ ಭವಿಷ್ಯ?
ಯುಗಾದಿ ಎಂದರೆ ಹೊಸ ಸಂವತ್ಸರ, ಯುಗಾದಿ ಪಂಚಾಂಗ ಪ್ರಕಾರ ದ್ವಾದಶಗಳ ರಾಶಿಫಲ ಹೇಳಲಾಗುವುದು. ನಾವು ಪ್ರತೀ ರಾಶಿಯ ವಾರ್ಷಿಕ ರಾಶಿಫಲ ವಿವರವಾಗಿ ನೀಡಿದ್ದೇವೆ. ಇಲ್ಲಿ ಧನು ರಾಶಿಯವರ ಉದ್ಯೋಗ, ವ್ಯಾಪಾರ, ಕುಟುಂಬ, ಶಿಕ್ಷಣ, ಆರೋಗ್ಯ ಯುಗಾದಿ ಪಂಚಾಂಗ ಪ್ರಕಾರ ಹೇಗಿರಲಿದೆ ಎಂದು ಹೇಳಲಾಗಿದೆ ನೋಡಿ:

ಧನು ರಾಶಿಗೆ ಗುರು ಗ್ರಹ ಅಧಿಪತಿ. 4ರ ಗುರು, 3ರ ಶನಿ, 5ರ ರಾಹು, 11ರ ಕೇತು, ಮೂಲ, ಪೂರ್ವ ಆಷಾಢ ಹಾಗೂ ಉತ್ತರ ಆಷಾಢ ನಕ್ಷತ್ರದವರು ಈ ರಾಶಿಯವರಾಗಿರುತ್ತಾರೆ. ಧನು ರಾಶಿಯವರು ಸಾಡೆ ಸಾತಿಯಿಂದ ಬಿಡುಗಡೆ ಆಗುತ್ತಿರುವ ಸಮಯ. ಈ ವರ್ಷ ನಿಮಗೆ ಬಹಳಷ್ಟು ಶುಭ ಸುದ್ದಿ ಸಿಗಲಿದೆ.
ಧನು ರಾಶಿಯವರಿಗೆ ಆದಾಯ 2 ಇದ್ದರೆ, ವ್ಯಯ 8 ಇರುತ್ತದೆ, ರಾಜಯೋಗ 8 ಇದೆ, ಅವಮಾನ 1 ಇದೆ. ಆದಾಯ ಹಾಗೂ ವ್ಯಯದಲ್ಲಿ ತುಂಬಾ ವ್ಯತ್ಯಾಸ ಇರುವ ಕಾರಣ ಹೆಚ್ಚಿನಮಟ್ಟದಲ್ಲಿ ವೆಚ್ಚದ ಕಡೆ ಗಮನಹರಿಸ ಬೇಕಾಗುತ್ತದೆ. ಆರ್ಥಿಕವಾಗಿ ಯಾವುದೇ ಸಮಸ್ಯೆ ಇಲ್ಲ, ಹಣ ಕಾಸು ಬರುತ್ತಾ ಇರುತ್ತದೆ, ಆದರೆ ಅವರ ಖರ್ಚಿನ ದಾರಿ ಕಡಿಮೆ ಮಾಡಬೇಕಾಗುತ್ತದೆ, ಹಾಗಾಗಿ ನಿಯಂತ್ರಣದಲ್ಲಿರಿ.

ವೃತ್ತಿ ಜೀವನ
ಈ ವರ್ಷದಲ್ಲಿ ವೃತ್ತಿ ಜೀವನದಲ್ಲಿ ಸಾಧಾರಣವಾಗಿರುತ್ತೆ, ಯಾವುದೇ ರೀತಿಯಲ್ಲಿ ಹೊಸದಾಗಿ ಹೂಡಿಕೆ ಮಾಡದಿರುವುದು ಉತ್ತಮ. ವ್ಯವಹಾರದಲ್ಲಿ ಧನು ರಾಶಿಯವರಿಗೆ ಸ್ವಲ್ಪ ಹಿರಿಯರ ಸಹಾಯ ಪಡೆಯುವ ಸಂದರ್ಭ ಬರುತ್ತದೆ, ಹಿರಿಯರ ಸಲಹೆ ಪಡೆದರೆ ಉತ್ತಮ. ಏಪ್ರಿಲ್ ನಂತರ ನಿಮ್ಮ ಪರಿಸ್ಥಿರಿ ಸುಧಾರಿಸುತ್ತದೆ, ಉದ್ಯಮ ಪ್ರಾರಂಭಿಸಬಹುದು. ಹಾಗೆಯೇ, ವಿಶೇಷವಾಗಿ ಪಾಲುದಾರಿಕೆ ವ್ಯವಹಾರ ಉತ್ತಮವಾಗಿರುತ್ತದೆ.

ವಿದ್ಯಾರ್ಥಿ ಜೀವನ
ಇನ್ನು ಶಿಕ್ಷಣ ಜೀವನದಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮವಾಗಿದೆ ಹಾಗೆಯೇ ಯಶಸ್ಸನ್ನು ಗಳಿಸುತ್ತಾರೆ. ಏಪ್ರಿಲ್ ನಂತರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಿದರೆ ಖಂಡಿತವಾಗಿಯೂ ನಿಮಗೆ ಯಶಸ್ಸು ಸಿಗಲಿದೆ.

ಧನು ರಾಶಿಯ ಆರ್ಥಿಕ ಭವಿಷ್ಯ
ಹಣಕಾಸಿನ ಜೀವನದಲ್ಲಿ ಧನು ರಾಶಿಯವರಿಗೆ ಮಿಶ್ರ ಫಲಿತಾಂಶ ಸಿಗಲಿದೆ. ಎರಡನೇ ಮನೆಯಲ್ಲಿ ಶನಿ ಇರುವ ಕಾರಣ ಹಣ ಗಳಿಸುವುದನ್ನು ಮುಂದುವರೆಸುತ್ತೀರಿ,
ಇದರಿಂದ ನಿಮ್ಮ ಹಣ ಕಾಸಿನ ಸ್ಥಿತಿ ಸುಧಾರಿಸುತ್ತದೆ. ನೀವು ಹಣವನ್ನು ಉಳಿಸುವುದರಿಂದ ಆಭರಣದಲ್ಲಿ ಹೂಡಿಕೆ ಮಾಡಬಹುದು, ಹಾಗೆಯೇ ಪೂರ್ವಜರ ಆಸ್ತಿ ಗಳಿಸುವ ಸುಧಾರಿಸುವ ಸಾಧ್ಯತೆ ಇದೆ. ಧನು ರಾಶಿಯವರು ಹೊಸದಾಗಿ ಹೂಡಿಕೆ ಮಾಡುವುದಾದರೆ ಬಹಳ ಎಚ್ಚರದಿಂದಿರಿ. ಹಣದ ಸಮಸ್ಯೆ ಇರುವುದಿಲ್ಲ, ಆದರೂ ಜಾಗರೂಕರಾಗಿರಿ.

ಕೌಟುಂಬಿಕ ಜೀವನ
ಕೌಟುಂಬಿಕ ಜೀವನದಲ್ಲಿ ನೆಮ್ಮದಿಯಾಗಿರುತ್ತದೆ. ಕುಟುಂಬ ಜೀವನದಲ್ಲಿ ಒಡನಾಟ, ಸಹಬಾಳ್ವೆಯ ಮೂಲಕ ಇರುತ್ತದೆ. ಈ ರಾಶಿಯವರಿಗೆ ಈ ವರ್ಷ ಅಸಾಮಾನ್ಯ ಅನುಭವ ಮತ್ತು ಮೊದಲು ತಿಳಿದಿರದ ಅನೇಕ ವಿಷಯಗಳ ಬಗ್ಗೆ ತಿಳಿಯುತ್ತಾರೆ, ಹೊಸತುಗಳನ್ನು ಕಲಿಯುವ ಅವಕಾಶ ಸಿಗುತ್ತದೆ.
ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗೆ ಹೊಂದಿಕೊಳ್ಳುವ ಸಲುವಾಗಿ ಧನು ರಾಶಿಯವರು ತಮ್ಮ ಕಾಲ ಮೇಲೆ ನಿಂತುಕೊಂಡರೆ ಒಳ್ಳೆಯದು. ಕಾರಣ ಇವರು ಸ್ಪೂರ್ತಿ ದಾಯಕ ವಿಷಯಗಳನ್ನು ಎದುರಿಸುವ ಸಾಧ್ಯತೆ ಇದೆ.
ಮಕ್ಕಳ ವಿಚಾರದಲ್ಲಿ ಏಪ್ರಿಲ್ ನಂತರ ರಾಹು 5ನೇ ಮನೆಗೆ ಸಂಚರಿಸುವುದರಿಂದ ಮಕ್ಕಳ ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಜಾಗರೂಕರಾಗಿರಿ. 2ನೇ ಮನೆಯಲ್ಲಿ ಶನಿ ಸಂಚಾರದಿಂದ ಕುಟುಂಬಕ್ಕೆ ಸದಸ್ಯರ ಸೇರ್ಪಡೆಯಾಗುತ್ತದೆ. ಹೊಸಬರ ಸೇರ್ಪಡೆ ಎಂದರೆ ಮದುವೆ ಆಗುವುದು, ಸೊಸೆ, ಅಳಿಯ ಅಥವಾ ಮಗುವಿನ ಜನನ ಅಗುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಶಾಂತಿ ಇರುತ್ತದೆ ಅಲ್ಲದೆ ನಿಮ್ಮ ದಾಂಪತ್ಯ ಸಂಬಂಧ ಬಲವಾಗಿರುತ್ತದೆ.

ವ್ಯಾಪಾರ ಜೀವನ
ಶುಭಕೃತ್ ಸಂವತ್ಸರಲ್ಲಿ ಧನು ರಾಶಿಯವರ ವ್ಯಾಪಾರ ಜೀವನವು ಉತ್ತಮವಾಗಿರುತ್ತದೆ. ಶುಕ್ರ ಗ್ರಹವು ಉತ್ತಮ ಸ್ಥಾನದಲ್ಲಿದೆ. ವರ್ಷದ ಆರಂಭದಲ್ಲಿ ವ್ಯಾಪಾರವು ಉತ್ತಮವಾಗಿರುತ್ತದೆ. ವ್ಯವಹಾರದಲ್ಲಿ ನಿಮ್ಮ ಪಾಲುದಾರರು ನಿಮಗೆ ಉತ್ತಮವಾದ ಪ್ರಾಮುಖ್ಯತೆ ನೀಡುತ್ತಾರೆ, ಹಾಗೆಯೇ ಕೆಲವು ಸಮಸ್ಯೆಗಳು ಸಹ ಉಂಟಾಗುತ್ತದೆ, ಈ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಸೂಕ್ತ ತನಿಖೆ ನಡೆಸಿ, ಇಲ್ಲವಾದರೆ ನಿಮಗೆ ನಷ್ಟವಾಗುವ ಸಾಧ್ಯತೆ ಇದೆ. ವ್ಯವಹಾರಕ್ಕೆ ತಕ್ಕಂತೆ ಪ್ರವಾಸ ಮಾಡುವ ಸಾಧ್ಯತೆ ಇದೆ.
ಆಸ್ತಿ ಮತ್ತು ವಾಹನಕ್ಕೆ ಸಂಬಂಧಪಟ್ಟಂತೆ, ಆರ್ಥಿಕ ದೃಷ್ಟಿಕೋನ ಮಧ್ಯಮವಾಗಿರುತ್ತದೆ, 11ನೇ ಮನೆಯಲ್ಲಿ ಗುರು ಇರುವುದರಿಂದ ನಿಮ್ಮ ಕೈಯಲ್ಲಿ ಹಣದ ಹರಿವು ಇರುತ್ತದೆ. ಹಣದ ಸಮಸ್ಯೆ ಇರುವುದಿಲ್ಲ. ಬಂದಿರುವ ಹಣದಿಂದ ಹಳೆಯ ಬಾಕಿ ಸಾಲ ತೀರಿಸುತ್ತೀರಾ. ಗುರು ಮತ್ತು ಶನಿಯ ಸ್ಥಾನವು ನಿರಂತರ ಸಂಪತ್ತು ಗಳಿಸಲು ಅವಕಾಶ ಮಾಡಿಕೊಡುತ್ತದೆ.

ಆರೋಗ್ಯ ಭವಿಷ್ಯ
ಧನು ರಾಶಿಯವರು ನಿಮ್ಮ ಆರೋಗ್ಯಕ್ಕಾಗಿ ದೈನಂದಿನ ದಿನಚರಿ ಹಾಗೂ ಆಹಾರ ಕ್ರಮಕ್ಕೆ ಸಂಬಂಧಿಸಿದಂತೆ ಸಮಯಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. 5ನೇ ಮನೆಯಲ್ಲಿ ರಾಹು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ಇದೆ, ಹಾಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಅದೃಷ್ಟ ಸಂಖ್ಯೆ: 3 ಮತ್ತು 9



Click it and Unblock the Notifications