Latest Updates
-
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ!
ಮಕರ ಸಂಕ್ರಾಂತಿ 2022, ಮಕರ ರಾಶಿಗೆ ತ್ರಿಗ್ರಹ ಯೋಗ: ಈ 5 ರಾಶಿಗಳಿಗೆ ಸಂಕಷ್ಟ
ಒಂದು ರಾಶಿಯಲ್ಲಿ 3 ಗ್ರಹಗಳು ಒಟ್ಟಿಗೆ ಬಂದ್ರೆ ಅದನ್ನು ತ್ರಿಗ್ರಹ ಯೋಗ ಎಂದು ಕರೆಯಲಾಗುವುದು. ಈ ವರ್ಷ ಅಂಥದ್ದೊಂದು ಯೋಗ ಮಕರ ರಾಶಿಯಲ್ಲಿ ಆಗುತ್ತಿದೆ. ಶನಿಯು ಈಗಾಗಲೇ ಮಕರ ರಾಶಿಯಲ್ಲಿ ಇದ್ದಾನೆ, ಬುಧನು ಈ ಗ್ರಹದಲ್ಲಿ ಇದ್ದಾನೆ, ಜನವರಿ 14ಕ್ಕೆ ಸೂರ್ಯನು ಈ ರಾಶಿಗೆ ಪ್ರವೇಶಿಸಲಿದ್ದಾನೆ. ಹೀಗೆ ಒಂದು ರಾಶಿಯಲ್ಲಿ 3 ಗ್ರಹಗಳು ಸೇರಿದರೆ ಅದು ರಾಶಿಗಳ ಮೇಲೆ ಪರಿಣಾಮ ಬೀರುವುದು. ಮಕರದಲ್ಲಿ ತ್ರಿಗ್ರಹ ಯೋಗದಿಂದಾಗಿ ಈ 5 ರಾಶಿಗಳಿಗೆ ಸಮಸ್ಯೆಗಳು ಎದುರಾಗಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಈ ತ್ರಿಗ್ರಹ ಯೋಗ ಯಾವ ರಾಶಿಗಳಿಗೆ ಅಷ್ಟು ಒಳಿತಲ್ಲ ಎಂದು ನೋಡುವುದಾರೆ:

ಕರ್ಕ ರಾಶಿ
ಕರ್ಕ ರಾಶಿಯವರು ಈ ಸಮಯದಲ್ಲಿ ಸವಾಲುಗಳನ್ನು ಎದುರಿಸಬೇಕಾಗುವುದು. ನಿಮ್ಮ ವಿರೋಧಿಗಳು ನಿಮ್ಮ ಇಮೇಜ್‌ಗೆ ಧಕ್ಕೆ ತರುವ ಪ್ರಯತ್ನ ಮಾಡಬಹುದು. ಮೇಲಾಧಿಕಾರಿ ಜೊತೆಯು ಸಮಸ್ಯೆ ಉಂಟಾಗಬಹುದು, ಇವುಗಳಿಂದಾಗಿ ಮಾನಸಿಕ ಒತ್ತಡ ಹೆಚ್ಚಾಗುವುದು.

ಕನ್ಯಾ ರಾಶಿ
ಈ ರಾಶಿಯವರು ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕು. ಹೊಟ್ಟೆ ಸಂಬಂಧಿತ ಸಮಸ್ಯೆ ಕಾಡಬಹುದು, ಆದ್ದರಿಂದ ಆಹಾರಕ್ರಮದ ಕಡೆ ಹೆಚ್ಚು ಗಮನ ನೀಡಿ, ಹೊರಗಡೆಯ ಆಹಾರ ತಿನ್ನದಿದ್ದರೆ ಒಳ್ಳೆಯದು.

ತುಲಾ ರಾಶಿ
ನಿಮ್ಮ ಆರೋಗ್ಯದ ವಿಷಯದಲ್ಲಿ ಕೆಲ ಸಮಸ್ಯೆಗಳು ಉಂಟಾಗಬಹುದು, ಗಂಟಲು, ಕುತ್ತಿಗೆ, ಸೊಂಟಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಬಹುದು.

ಧನು ರಾಶಿ
ಜನವರಿ ತಿಂಗಳಿನಲ್ಲಿ ಧನು ರಾಶಿಯವರ ವೈಯಕ್ತಿಕ ಬದುಕಿನಲ್ಲಿ ಕೆಲ ಸಮಸ್ಯೆಗಳು ಎದುರಾಗಬಹುದು, ವೈವಾಹಿಕ ಜೀವನದಲ್ಲಿ ಸಮಸ್ಯೆ ಹೆಚ್ಚಾಗಬಹುದು, ನಿಮ್ಮ ಆರೋಗ್ಯದ ಕಡೆಯೂ ಗಮನ ನೀಡಬೇಕು.

ಮಕರ ರಾಶಿ
ಮಕರ ರಾಶಿಯಲ್ಲಿ ತ್ರಿಗ್ರಹ ಯೋಗ ಉಂಟಾಗುತ್ತಿದೆ, ಖರ್ಚು ಹೆಚ್ಚಾಗಬಹುದು, ಈ ಸಮಯದಲ್ಲಿ ಹಣಕಾಸಿನ ತೊಂದರೆ ಕೂಡ ಉಂಟಾಗಬಹುದು, ಆರೋಗ್ಯ ಸಮಸ್ಯೆಯೂ ಇರುವುದು.



Click it and Unblock the Notifications
