For Quick Alerts
ALLOW NOTIFICATIONS  
For Daily Alerts

ಈ ರಾಶಿಯವರು ಧ್ಯಾನದಲ್ಲಿ ಹೆಚ್ಚು ಆಸಕ್ತಿ ತೋರುವವರು

|

ಪ್ರತಿಯೋರ್ವ ವ್ಯಕ್ತಿಯ ವಿಶಿಷ್ಟ ಗುಣ, ಸ್ವಭಾವಗಳು ಆತನು/ಆಕೆಯು ಯಾವ ರಾಶಿಯಲ್ಲಿ ಜನಿಸಿರುವವನು/ಜನಿಸಿರುವವಳು ಎಂಬುದನ್ನು ಬಹುಮಟ್ಟಿಗೆ ಅವಲಂಬಿಸಿರುತ್ತವೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ವ್ಯಕ್ತಿಯೋರ್ವರು ಜನಿಸಿದ ರಾಶಿಚಕ್ರವು ಅವರ ಗುಣ, ಸ್ವಭಾವಗಳ ಮೇಲೆ ಗಾಢವಾದ ಪ್ರಭಾವವನ್ನುಂಟು ಮಾಡುತ್ತದೆ.

ಅವರವರ ರಾಶಿಗನುಗುಣವಾಗಿ ಕೆಲವರದ್ದು ತೀರಾ ಹಠಮಾರಿ ಸ್ವಭಾವ, ಇನ್ನು ಕೆಲವರದ್ದು ಮಾತ್ಸರ್ಯದ ಗುಣ, ಮತ್ತೆ ಕೆಲವರದ್ದು ದೂರದರ್ಶಿತ್ವದ ಗುಣ ಇತ್ಯಾದಿ. ಇದೇ ರೀತಿಯಾಗಿ ಕೆಲ ನಿರ್ಧಿಷ್ಟ ರಾಶಿಗಳಲ್ಲಿ ಜನಿಸಿದವರ ಪಾಲಿಗೆ ಧ್ಯಾನಾಚರಣೆಯೆಂಬ ಕಬ್ಬಿಣದ ಕಡಲೆಯಂತಹ ಕ್ರಿಯೆಯೂ ಸಹ ನೀರು ಕುಡಿದಷ್ಟೇ ಸಲೀಸಾಗಿರುತ್ತದೆ. ಧ್ಯಾನವೆಂಬ ಗುಣವಿಶೇಷವನ್ನು ರಕ್ತಗತವಾಗಿಸುವ ಆ ರಾಶಿಗಳು ಯಾವುವೆಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ....

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಧ್ಯಾನವನ್ನ ಮಾಡುವುದಕ್ಕೆಂದೇ ಹುಟ್ಟಿರುವ ಜನರೂ ಇರುತ್ತಾರೆ! ಏಕೆಂದರೆ, ಧ್ಯಾನಸ್ಥಿತಿಯನ್ನು ತಲುಪುವುದಕ್ಕೆ ಅಂತಹವರು ಕೇವಲ ಬಯಸುವುದಷ್ಟೇ ಅಲ್ಲ, ಬದಲಿಗೆ ಸ್ವಾಭಾವಿಕವಾಗಿ ಅವರು ಅಂತಹ ಧ್ಯಾನಕ್ಕೆಂದೇ ಹೇಳಿಮಾಡಿಸಿದಂತಿರುತ್ತಾರೆ. ನಮ್ಮಲ್ಲಿ ಕೆಲವರಿಗಾದರೂ ಹಾಗೆ ಸ್ವಾಭಾವಿಕವಾಗಿಯೇ ಧ್ಯಾನಮಗ್ನರಾಗುವ ಪ್ರವೃತ್ತಿ ಇದ್ದಲ್ಲಿ, ಬಹುಮಟ್ಟಿಗೆ ಅದಕ್ಕೆ ಕಾರಣವಾಗಿರುವುದು ಅಂತಹ ವ್ಯಕ್ತಿಗಳು ಯಾವ ರಾಶಿಯಲ್ಲಿ ಜನಿಸಿದವರು ಎನ್ನುವುದರ ಮೇಲೆ.

ಸರಿ, ಹಾಗಿದ್ದರೆ ಯಾವ ರಾಶಿಗಳಲ್ಲಿ ಜನಿಸಿರುವವರು ಅತೀ ಹೆಚ್ಚು ಧ್ಯಾನ ಪ್ರವೃತ್ತಿಯುಳ್ಳವರು ಎಂಬುದನ್ನು ಈಗ ತಿಳಿದುಕೊಳ್ಳೋಣವೇ ?

1. ಧನು

1. ಧನು

ತಮ್ಮನ್ನು ತಮ್ಮ ಪಾಡಿಗೆ ಶಾಂತಿಯುತರನ್ನಾಗಿ ಇರಗೊಡುವುದಕ್ಕೆ ಅವಕಾಶ ಮಾಡಿಕೊಡಬಲ್ಲ ಯಾವುದೇ ಸಂಗತಿಯೇ ಆಗಿರಲೀ, ಅದು ಧನು ರಾಶಿಯವರ ಪಾಲಿಗೆ ಉಸಿರಾಟದಷ್ಟೇ ಸಹಜವಾದದ್ದು. ಧನು ರಾಶಿಯವರು ಶಾಂತಿಯನ್ನೂ ಹಾಗೂ ಸದ್ದುಗದ್ದಲಗಳಿಲ್ಲದ ನೀರವ ಮೌನವನ್ನು ಹೆಚ್ಚಾಗಿ ಇಷ್ಟಪಡುವವರು. ತಮ್ಮ ಪಾಡಿಗೆ ತಾವಿರುವುದೆಂದರೆ ಅದು ಅವರಿಗೆ ಬಲು ಇಷ್ಟ.

ಧನು ರಾಶಿಯವರ ಪಾಲಿಗೆ ಧ್ಯಾನವೆಂಬುದು ಕೇವಲ ಒಂದು ಕ್ಷಣದ ಕ್ರಿಯೆಯಲ್ಲ, ಬದಲಿಗೆ ಅವರು ಅದನ್ನು ರೂಢಿಯಾಗಿಸಿಕೊಂಡಿರುತ್ತಾರೆ. ಕಠೋರ ಶಿಸ್ತು, ಸಂಯಮ, ಮತ್ತು ನಿರ್ಬಂಧಗಳೊಂದಿಗೆ ತಮ್ಮ ದಿನಚರಿಯನ್ನ ಭವ್ಯ ಪರ್ವತ ಪ್ರದೇಶಗಳಲ್ಲಿ ಕಳೆಯುವುದಕ್ಕಾಗಿಯೇ ಭಾರತಕ್ಕೆ ಪ್ರವಾಸ ಯೋಜನೆಯನ್ನು ಕಾಯ್ದಿರಿಸುವವರು ಯಾರಾದರೂ ಇದ್ದರೆ ಅದು ಧನು ರಾಶಿಯವರು. ಧನು ರಾಶಿಯವರು ಕೇವಲ ಧ್ಯಾನವನ್ನು ಮಾಡಲಷ್ಟೇ ಬಯಸುವವರಲ್ಲ, ಬದಲಿಗೆ ಅವರು ಅಮೂರ್ತ ಸತ್ಯದೊಂದಿಗೆ ಲೀನರಾಗಬಯಸುವವರು.

2. ವೃಷಭ

2. ವೃಷಭ

ಸ್ವಾಭಾವಿಕವಾಗಿಯೇ ತುಸು ಗಲಿಬಿಲಿ, ಗೊಂದಲಗಳ ಗೂಡಾಗಿರುವ ಇವರು, ಏನಾದರೊಂದು ಮಾರ್ಗೋಪಾಯದ ಮೂಲಕ ಮಾನಸಿಕ ಸಮತೋಲನವನ್ನು ಬಯಸುವವರು. ತಮ್ಮ ಮಾನಸಿಕ ತುಮುಲಗಳನ್ನು ಮರೆಮಾಚುವುದಕ್ಕಾಗಿ, ತಮ್ಮ ದೇಹಾರೋಗ್ಯವು ಕುಲಗೆಟ್ಟು ಹೋಗುವವರೆಗೂ ಅಮಲು ಪದಾರ್ಥಗಳ, ಮಾದಕ ಪೇಯಗಳ ಮೊರೆಹೋದ ಬಳಿಕ, ವೃಷಭ ರಾಶಿಯವರು ಇವೆಲ್ಲಕ್ಕೂ ಮಂಗಳ ಹಾಡಲು ಗಂಭೀರವಾಗಿ ಯೋಚಿಸುವವರು.

ಒಮ್ಮೆ ಈ ರಾಶಿಯವರು ಧ್ಯಾನದ ಅಭ್ಯಾಸವನ್ನು ರೂಢಿಸಿಕೊಂಡರೆಂದಾದರೆ, ಅವರ ಜೀವನವು ತತ್-ಕ್ಷಣವೇ ಚಮತ್ಕಾರದಂತೆ ಬದಲಾವಣೆಗೊಳ್ಳಲಾರಂಭಿಸುತ್ತದೆ. ವೃಷಭ ರಾಶಿಯವರು ಸೋಲಲು ಬಯಸುವವರಲ್ಲ, ಆದರೆ ಧ್ಯಾನದ ವಿಚಾರಕ್ಕೆ ಬಂದಾಗ ಇವರ ಮನಸ್ಸು ಬಲು ಸುಲಭವಾಗಿ ಸೋಲುತ್ತದೆ. ಮನಸ್ಸಿಗೆ ಶಾಂತಿ, ನೆಮ್ಮದಿಯ ಮಾರ್ಗವನ್ನು ಕಂಡುಕೊಳ್ಳುವುದಕ್ಕಾಗಿ ವೃಷಭ ರಾಶಿಯವರು ಕಾರ್ಯತತ್ಪರರಾಗುವ ರೀತಿ, ಅನುಸರಿಸುವ ಕ್ರಮಗಳಂತೂ ನಿಜಕ್ಕೂ ಅದ್ಭುತ!

ಧ್ಯಾನದ ಕುರಿತು ಸ್ವಭಾವತ: ಗಾಢಾನುರಕ್ತಿಯುಳ್ಳವರು ಈ ವೃಷಭ ರಾಶಿಯವರು. ಧ್ಯಾನಕ್ಕೆ ಮೊರೆಹೋಗಲು ಯಾವ ಸಮಯ, ಸಂದರ್ಭ ಸೂಕ್ತ ಎಂಬುದು ಈ ರಾಶಿಯವರಿಗೆ ಚೆನ್ನಾಗಿ ತಿಳಿದಿರುತ್ತದೆ ಹಾಗೂ ಧ್ಯಾನದ ಕ್ರಿಯೆಯು ಅವರ ಪಾಲಿಗೆ ಬಲು ಅರ್ಥಪೂರ್ಣವಾದ ಚಟುವಟಿಕೆಯೂ ಆಗಿರುತ್ತದೆ.

3. ಕಟಕ

3. ಕಟಕ

ಮಾನಸಿಕ ಶಾಂತಿ, ನೆಮ್ಮದಿಗಳನ್ನು ಕಂಡುಕೊಳ್ಳುವ ಉದ್ದೇಶಕ್ಕಾಗಿ ಕಟಕ ರಾಶಿಯವರು ಮೌನ ಪ್ರಾರ್ಥನೆ ಮತ್ತು ಸಾಮೂಹಿಕ ಧ್ಯಾನಗಳನ್ನೂ ಒಳಗೊಂಡಂತೆ ಎಲ್ಲಾ ಬಗೆಯ ಧ್ಯಾನಾಚರಣೆಗಳಲ್ಲಿ ಪಾಲ್ಗೊಳ್ಳಲು ಬಲು ಉತ್ಸುಕರಾಗಿರುತ್ತಾರೆ. ಒಂಟಿಯಾಗಿರಬಯಸುವ ಅವರ ಸ್ವಭಾವವೇ ಧ್ಯಾನದಂತಹ ಚಟುವಟಿಕೆಗೆ ಬುನಾದಿಯಾಗಿರುತ್ತದೆ.

ಆರೋಗ್ಯ ಶಿಬಿರಗಳಲ್ಲಿ, ಆಶ್ರಮಗಳಲ್ಲಿ, ಹಾಗೂ ದೇವಾಲಯಗಳ ಪ್ರಾಂಗಣಗಳಲ್ಲಿ ಸಮಯ ಕಳೆಯುವ ಸ್ವಭಾವದವರು ಈ ಕಟಕ ರಾಶಿಯವರು. ಇವೆಲ್ಲವನ್ನೂ ಅವರು ಮಾಡುವುದು ಪ್ರಶಾಂತವಾದ ಸ್ಥಳವೊಂದನ್ನು ಕಂಡುಕೊಂಡು ಅಲ್ಲೇ ಉಳಿದುಕೊಳ್ಳುವುದಕ್ಕಾಗಿ.

ಈ ರಾಶಿಯವರು ಸ್ನೇಹಪರರೂ, ಸುಲಭವಾಗಿ ಬೆರೆಯುವವರೂ, ಮತ್ತು ಹೊಂದಾಣಿಕೆಯ ಮನೋಭಾವದವರೂ ಹೌದು. ಅನೇಕ ಬಾರಿ ಈ ರಾಶಿಯವರು ಮಾನಸಿಕ ಸಮತೋಲನವನ್ನು ಅರಸುತ್ತಿರುವ ಜನರಿಗಾಗಿ ಧ್ಯಾನವನ್ನು ಕಲಿಸಿಕೊಡುವ ತರಬೇತುದಾರರೂ ಆಗಿರುತ್ತಾರೆ.

ತಮ್ಮ ಪಾಲಿನ ಧ್ಯಾನಕ್ರಿಯೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಇವರಿಗೆ, ಆ ಧ್ಯಾನದ ಸಮಯವು ಇವರ ಪಾಲಿನ ಖಾಸಗೀ ಕ್ಷಣಗಳಾಗಿರುತ್ತವೆ ಹಾಗೂ ಈ ಅವಧಿಯಲ್ಲೇ ಅವರು ಭೌತಿಕ ಜಗತ್ತಿನ ಕಲ್ಮಶಗಳಿಂದ ತಮ್ಮನ್ನು ತಾವು ಮುಕ್ತಗೊಳಿಸಿಕೊಳ್ಳುತ್ತಾರೆ.

4.ಮಕರ

4.ಮಕರ

ಸಮತೋಲನಯುಕ್ತವಾದ ಮತ್ತು ವ್ಯವಸ್ಥಿತವಾದ ರೀತಿಯಲ್ಲಿ ಜೀವನವೊಂದನ್ನು ನಡೆಸದೇ ನೀವು ಮಕರ ರಾಶಿಯವರಷ್ಟು ಯಶಸ್ವಿಯಾದ ಜೀವನವನ್ನು ಖಂಡಿತಾ ಸಾಧಿಸಲಾರಿರಿ. ಏಕೆಂದರೆ, ಮಕರ ರಾಶಿಯವರ ಜೀವನವೇ ಹಾಗಿರುತ್ತದೆ.

ಮಹತ್ಕಾರ್ಯಗಳನ್ನು ಯಶಸ್ವಿಯಾಗಿ ಮುನ್ನಡೆಸಿ ಗುರಿ ಸಾಧಿಸುವ ಮಕರ ರಾಶಿಯವರು, ಅಂತಹಾ ಮಹತ್ಸಾಧನೆಯನ್ನು ಸಾಧಿಸುವ ಸಾಮರ್ಥ್ಯದ ಗಳಿಕೆಗಾಗಿ ಯಾವುದರ ಅವಶ್ಯಕತೆ ಇದೆಯೆಂಬುದನ್ನು ಸಂಪೂರ್ಣವಾಗಿ ಅರಿತವರು ಅವರಾಗಿರುತ್ತಾರೆ ಹಾಗೂ ಅವರ ದೃಷ್ಟಿಯಲ್ಲಿ ಆ "ಯಾವುದು" ಎಂದರೆ ಅದು ಏಕಾಂಗಿತನ ಮತ್ತು ಧ್ಯಾನ ಆಗಿರುತ್ತದೆ.

ಮಕರ ರಾಶಿಗರ ಬತ್ತಳಿಕೆಯಲ್ಲಿ ಹಲವಾರು ಉತ್ತಮ ಅಂಶಗಳಿರುತ್ತವೆ. ಮನಸ್ಸನ್ನು ಇನ್ನಷ್ಟು ನೆನೆಗುದಿಗೆ ತಳ್ಳುವ ಪ್ರಾಪಂಚಿಕ ಹವ್ಯಾಸಗಳಿಗೆ ವಿಭಿನ್ನವಾದ ಪ್ರಜ್ಞಾಪೂರ್ವಕ ಮಾರ್ಗೋಪಾಯಗಳಿಂದಷ್ಟೇ ಕಾರ್ಯಸಾಧನೆ ಸಾಧ್ಯ ಎಂಬುದನ್ನು ಚೆನ್ನಾಗಿ ಅರಿತವರು ಈ ರಾಶಿಯವರು.

ಧ್ಯಾನ ಮತ್ತು ವ್ಯಾಯಾಮಕ್ಕಾಗಿ ಮಕರ ರಾಶಿಯವರು ಸಮಯವನ್ನು ಉತ್ಸಾಹದಿಂದ ಕಾಯ್ದಿರಿಸಿಕೊಳ್ಳುತ್ತಾರೆ; ಅಷ್ಟಕ್ಕೂ ಆರೋಗ್ಯದಾಯಕ ಸಂಗತಿಯು ಯಾವುದೇ ಆಗಿದ್ದರೂ ಕೂಡಾ, ಅದರಲ್ಲಿ ಸೇರ್ಪಡೆಗೊಳ್ಳಲು ಇವರು ಮೀನಮೇಷ ಎಣಿಸುವವರಲ್ಲ. ಸ್ವಾನುರಕ್ತಿ ಮತ್ತು ಆತ್ಮಗೌರವಗಳೆರಡೂ ಇರುವ ವ್ಯಕ್ತಿಗಳು ಮಕರ ರಾಶಿಯವರಾಗಿರುವುದರಿಂದ ಇವರು ಸ್ವಭಾವತ: ಧ್ಯಾನಶೀಲರು.

5. ಸಿಂಹ

5. ಸಿಂಹ

ಸಿಂಹ ರಾಶಿಯವರು ಯಾವಾಗಲೂ ಗುರಿಸಾಧನೆಯತ್ತ ಕೇಂದ್ರಿತರಾಗಿರುವವರು. ಸಿಂಹ ರಾಶಿಗರ ವಿಚಾರದಲ್ಲಿ ಅಂತರ್ಮುಖತ್ವ (ಬಾಹ್ಯಾಡಂಬರಗಳಿಗೆ, ಬಹಿರ್ಮುಖತ್ವಕ್ಕೆ ತದ್ವಿರುದ್ಧವಾಗಿ) ದ ಪರಿಕಲ್ಪನೆಯನ್ನು ಯೋಚಿಸುವುದೇ ಕಷ್ಟವಾಗಿರುವುದಾದರೂ ಕೂಡಾ, ಧ್ಯಾನದಿಂದ ದೊರೆಯುವ ಮನಶ್ಯಾಂತಿಗಾಗಿ ಸಿಂಹ ರಾಶಿಯವರೂ ಮನಸಾರೆ ಹಾತೊರೆಯುವವರೇ ಆಗಿರುತ್ತಾರೆ.

ಅಂತಹ ಧ್ಯಾನವನ್ನವರು ಸಮರ್ಪಕವಾಗಿಯೇ ಮಾಡಬಯಸುವವರಾದರೂ ಸಹ ಧ್ಯಾನವನ್ನು ಸಮರ್ಪಕವಾಗಿ ಮಾಡುವುದೂ ಕಷ್ಟಕರವೆಂಬುದು ಇಲ್ಲಿ ಉಲ್ಲೇಖನೀಯ. ಧ್ಯಾನದ ವಿಚಾರದಲ್ಲಿ, ತಮ್ಮ ಅಹಂ ("ನಾನು ಅತ್ಯಂತ ಸಮರ್ಪಕವಾಗಿ ಧ್ಯಾನಮಾಡಬಲ್ಲವನು") ಅನ್ನು ಬದಿಗಿರಿಸಲು ಅವರಿಂದ ಸಾಧ್ಯವಾಗಲಿಕ್ಕಿಲ್ಲ. ಆದರೆ, ಕುತೂಹಲಕರ ಸಂಗತಿಯೇನೆಂದರೆ, ಅವರ ಆ ನಾನು ಎಂಬ ಭಾವವೇ ಅವರು ಧ್ಯಾನವನ್ನು ಸಮರ್ಪಕವಾಗಿ ನಿಭಾಯಿಸಲು ಅವರನ್ನು ಪ್ರೇರೇಪಿಸುವುದು!

ಅದು ಎಷ್ಟರಮಟ್ಟಿಗೆ ಅಂದರೆ ಇವರು ಧ್ಯಾನಮಾಡುವುದಕ್ಕೆ ಇವರಿಗೆ ಇಂತಿಹದ್ದೇ ಪರಿಕರಗಳ ಅವಶ್ಯಕತೆಯೂ ಬೀಳುತ್ತದೆ! ಧ್ಯಾನವನ್ನು ಪ್ರೇರೇಪಿಸುವ ಅಗರಬತ್ತಿ, ಬಂಗಾರದ ಅಂಚಿನ ಆಸನ, ಅತ್ಯಂತ ದುಬಾರಿ ಪ್ರಾರ್ಥನಾ ಹೊದಿಕೆ - ಇವೆಲ್ಲವೂ..... ಪರಿಪೂರ್ಣವಾದ, ವಿಧಿಬದ್ಧವಾದ ಶೈಲಿಯಲ್ಲಿಯೇ ಮನಶ್ಯಾಂತಿಯನ್ನು ಏಕೆ ಪಡೆದುಕೊಳ್ಳಬಾರದು ಎಂಬುದು ಇವರ ಅನಿಸಿಕೆ. ಅದೂ ಕೂಡಾ ನಿಜವೇ ಅನ್ನಿ......

6. ಮೇಷ

6. ಮೇಷ

ಮಾನವನ ಅಂತರಂಗದಲ್ಲಿಯೇ ನೆಲೆಯೂರಿರುವ ಆ ದಿವ್ಯಶಾಂತಿಯ ಬಗ್ಗೆ ನಂಬಿಕೆ ಇರುವವರು ಮೇಷ ರಾಶಿಗರು. ಅದನ್ನು ಅನುಭವಕ್ಕೆ ತಂದುಕೊಳ್ಳಲು ಅಗತ್ಯ ಪ್ರಯತ್ನದಲ್ಲಿ ತೊಡಗಿಸಿಕೊಳ್ಳುವ ದಿಶೆಯಲ್ಲಿ ಮೇಷ ರಾಶಿಯವರು ಪ್ರಬಲ ಮನಶ್ಯಕ್ತಿಯುಳ್ಳವರಾಗಿರುತ್ತಾರೆ.

ಮೇಷ ರಾಶಿಯವರು ಪಂಥಾಹ್ವಾನವನ್ನು, ಸವಾಲನ್ನು ಇಷ್ಟಪಡುವವರಾಗಿದ್ದು, ಧ್ಯಾನಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸುವುದು ನಿಜಕ್ಕೂ ಒಂದು ಸವಾಲೇ ಆಗಿರುತ್ತದೆ.

ಜೊತೆಗೆ, ಮೇಷ ರಾಶಿಗರಿಗೆ ಸಂಪೂರ್ಣವಾಗಿ ಅರಿವಿರುವ ಮತ್ತೊಂದು ಸಂಗತಿಯೇನೆಂದರೆ, ತಮ್ಮ ದೈನಂದಿನ ಜೀವನದಲ್ಲಿನ ಗಾಢ ಜೀವನಾರುರಕ್ತಿ ಹಾಗೂ ಬಾಳ್ವೆಯ ತೀವ್ರತೆಯ ಮಟ್ಟಗಳನ್ನು ಹಾಗೆಯೇ ಕಾಪಿಟ್ಟುಕೊಳ್ಳಬೇಕೆಂದರೆ, ಧ್ಯಾನಾಚರಣೆಯ ಮೂಲಕ ತಮ್ಮ ಭಾವನಾತ್ಮಕ ಅಭಿವ್ಯಕ್ತಿಯನ್ನು ತಾವು ಸಮತೋಲನದಲ್ಲಿಟ್ಟುಕೊಳ್ಳಲೇಬೇಕೆಂಬ ಅರಿವೇ ಆಗಿದೆ.

ಮೇಷ ರಾಶಿಯೆಂಬುದು ಒಂದು ಗುರಿ ಕೇಂದ್ರಿತ ರಾಶಿಯಾಗಿದೆ ಹಾಗೂ ಅವರು ಆಂತರಿಕ ಶಾಂತಿಯನ್ನೇ ಬೆನ್ನಟ್ಟಿ ಹೋಗುವವರಾಗಿರುತ್ತಾರೆ. ಏಕೆಂದರೆ, ಅವರ ಪಾಲಿಗೆ ಮನಶ್ಯಾಂತಿಯೇ ಎಲ್ಲವೂ ಆಗಿರುತ್ತದೆ ಹಾಗೂ ಮನಶ್ಯಾಂತಿಯೊಂದಿಲ್ಲದಿದ್ದಲ್ಲಿ ಬೇರೆಲ್ಲವೂ ಅವರ ಪಾಲಿಗೆ ಶೂನ್ಯವೇ ಆಗಿರುತ್ತದೆ.

English summary

This Zodiac Signs Are More Interested In Meditation

As per astrology these sign basically will be more interested in mediation.
Story first published: Wednesday, February 5, 2020, 13:35 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X