Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ನೀರಿನ ಮೇಲೆ ಈತ ಜಿಗಿಯುತ್ತಾ ಸಾಗುವುದು ನೋಡಿದರೆ ಮೈ ಜುಂ ಅನ್ನುತ್ತೆ
ಚೀನಾ ದೇಶದವರು ಎಂದಿಗೂ ಭಿನ್ನರು, ಯಾವುದೇ ಕೆಲಸವನ್ನೇ ಆಗಲಿ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಮಾಡಿ ಗೆದ್ದು ಬೀಗುತ್ತಾರೆ. ಅಂತಹ ವಿಶಿಷ್ಟರಲ್ಲಿ ವಿಶಿಷ್ಟವಾದ ಚೀನಾದ ವ್ಯಕ್ತಿಯೊಬ್ಬನ ಸಾಹಸ ಕಲೆಯ ಬಗ್ಗೆ ಇಲ್ಲಿ ಹೇಳಹೊರಟಿದ್ದೇನೆ.
ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಸಾಧಿಸುವವರು ಹಲವರಾದರೆ, ತಾನು ಈವರೆಗೂ ಯಾರೂ ಸಾಧಿಸದ್ದನ್ನು ಮಾಡಿ ಭೇಷ್ ಎನಿಸಿಕೊಳ್ಳಬೇಕು ಎಂಬ ಮನಸ್ಥತಿಯವರು ಕೆಲವರು ಮಾತ್ರ. ಅಂಥವರ ಸಾಲಿಗೆ ಸೇರುತ್ತಾನೆ ಚೀನಾದ 28 ವರ್ಷದ ಯುವಸಾಧಕ ಜಂಗ್ ಕ್ವಿಯಾಂಗ್. ಈತನ ಕುಂಫು ಸಾಧನೆಯ ವಿಡಿಯೋ ಎಲ್ಲಾ ಸಾಮಾಜಿಕ ಜಾಲತಾಣಗದಲ್ಲೂ ಸಾಕಷ್ಟು ವೈರಲ್ ಆಗಿದ್ದು, ಕೋಟ್ಯಂತರ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ನೀರಿಗೂ ನೋವಾಗದಂತೆ ನೀರನ್ನು ಕಾಲಿನಲ್ಲಿ ಸ್ಪರ್ಶಿಸಿ ಜಂಪ್ ಮಾಡುವುದು, ಭಿನ್ನ ಭಿನ್ನವಾಗಿ ಮೈಗಳಲ್ಲಿ ಮೂಳೆಯೇ ಇಲ್ಲದಂತೆ ಜಂಪ್ ಮಾಡುವುದು, ಕೈಗಳನ್ನು ರೆಪ್ಪೆಗಳಿಗಿಂತ ವೇಗವಾಗಿ ಚಲಿಸುವುದು, ವಿಶಿಷ್ಟವಾದ ಮೈಜುಮ್ಮೆನಿಸುವಂಥ ದೈಹಿಕ ಕಸರತ್ತುಗಳನ್ನು ಮಾಡುವುದನ್ನು ನೋಡಿದರೆ ಎಂಥವರೂ ಸಹ ಅರೆ ಕ್ಷಣ ಕಣ್ಣು ಮುಚ್ಚದಂತೆ ನೋಡುತ್ತಾರೆ.
ಜಂಗ್ ಮೂಲತಃ ಕುಂಫು (ಕರಾಟೆ) ಶಿಕ್ಷಕನಾಗಿದ್ದು ಕಳೆದ 18 ವರ್ಷಗಳಿಂದ ಭಿನ್ನ ಭಿನ್ನವಾಗಿ ಜಂಪ್ ಮಾಡುವ ಕಸರತ್ತುಗಳನ್ನು ಅಭ್ಯಸಿಸಿ ಕರಗತ ಮಾಡಿಕೊಂಡು ಸಾಕಷ್ಟು ಪರಿಣತಿಯನ್ನೂ ಸಾಧಿಸಿದ್ದಾರೆ. ಕೈಗಳು ಸ್ಪರ್ಶಿಸದಂತೆ ಸಂಪೂರ್ಣ ದೇಹವನ್ನು ಕೈಯೊಳಗೆ ಸೇರಿಸಿ ಜಂಪ್ ಮಾಡುವುದು, ತನ್ನ ಎತ್ತರಕ್ಕಿಂತಲೂ ದುಪ್ಪಟ್ಟು ಎತ್ತರಕ್ಕೆ ಕ್ಷಣಮಾತ್ರದಲ್ಲಿ ಹಾರುವುದು, ಕೈಯಲ್ಲಿ ಕೋಲನ್ನು ಹಿಡಿದು ಅತ್ಯಂತ ವೇಗವಾಗಿ ತಿರುಗಿಸುವುದು ನಿಮಗೆ ಅಚ್ಚರಿ ಮೂಡಿಸುತ್ತೆ ಎಂಬುದರಲ್ಲಿ ಸಂಶಯವಿಲ್ಲ.
ಆದರೆ, ಜಂಗ್ ಇದನ್ನೂ ಮೀರಿ ನೀವು ನಂಬಲಾರದಂತೆ ಎತ್ತರದಲ್ಲಿ ಇಟ್ಟಿರುವ ಅಂದರೆ ಸ್ಟೂಲ್, ಅದರ ಮೇಲೆ ಬಕೆಟ್ ಅದರ ಮೇಲೊಂದು ಎತ್ತರದ ಪಾಟ್ ಅದರ ಮೇಲೆ ನೀರಿನ ದೊಡ್ಡ ಬೌಲ್‌ಗೆ ಎತ್ತರದಿಂದ ಹಾರಿ ನೀರನ್ನು ಕಾಲಿನಿಂದ ಸ್ಪರ್ಶಿಸಿ ಚಿಮ್ಮುವಂತೆ ಮಾಡಿ ಮುಂದೆ ಹಾರುವುದಿದೆಯಲ್ಲ ಇದನ್ನು ನೋಡಿದರೆ ಮೈರೋಮಗಳು ನಿಮಿರುವುದರಲ್ಲಿ ಸಂಶಯವಿಲ್ಲ.
ಸಾಧನೆಯ ಸಿಕ್ರೇಟ್ ಹಂಚಿಕೊಂಡ ಜಂಗ್
ತಾನು ಇಂಥ ಕ್ಲಿಷ್ಟಕರ ಕೆಲಸಗಳನ್ನು ಇಷ್ಟೊಂದು ಸುಲಭವಾಗಿ ಮಾಡಲು ಕೆಲವು ಸೀಕ್ರೆಟ್ ಗಳು ತುಂಬಾ ಸಹಕಾರಿಯಾಗಿದೆ ಎಂದು ಜಂಗ್ ಪ್ರೇಕ್ಷಕರ ಮುಂದೆ ಹೇಳಿಕೊಂಡಿದ್ದಾರೆ. ಅವುಗಳೆಂದರೆ, ದೃಢ ನಿರ್ಧಾರ, ಅಭ್ಯಾಸ, ಅಭ್ಯಾಸ ಮತ್ತೂ ಅಭ್ಯಾಸ. ಜಂಪ್ ಮಾಡುವ ಮೂಲಕ ಕಾಲಿನಲ್ಲಿ ನೀರನ್ನು ಸ್ಪರ್ಶಿಸುವ ತಾಲೀಮನ್ನು ಮಾಡಲು ಸಾಕಷ್ಟು ಶ್ರಮಿಸಿದ್ದೇನೆ, ಹಿಂದೆ ಸಾಕಷ್ಟು ಭಾರಿ ವಿಫಲನಾಗಿದ್ದೇನೆ ಆದರೆ ಈಗ ಇದರಲ್ಲಿ ನಾನು ಮಾಸ್ಟರ್ ಎಂದು ಹೇಳಿರುವ ಜಂಗ್ ನಿಮ್ಮ ಸಂಪೂರ್ಣ ಶಕ್ತಿ-ಸಾಮರ್ಥ್ಯ ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಸಲಹೆ ನೀಡಿದ್ದಾರೆ.
ಪ್ರೇಕ್ಷಕರೇ ಎಚ್ಚರ!
ಈ ವಿಡಿಯೋವನ್ನು ವೀಕ್ಷಿಸಿದವರು ಇದನ್ನು ತಾವು ಮಾಡುವ ಪ್ರಯತ್ನಕ್ಕೆ ಮುಂದಾಗದಿರಿ. ನೀವೂ ಇಂತಹ ಸಾಹಸಗಳನ್ನು ಮಾಡಲು ಸಾಕಷ್ಟು ತಾಲೀಮು, ಸಾಮರ್ಥ್ಯ, ಚತುರತೆ ಹಾಗೂ ಪರಿಣಿತರ ಮಾರ್ಗದರ್ಶನ ಆಗತ್ಯವಿದೆ. ನೀವಿನ್ನೂ ಇಂಥಹ ಸಾಹಸ ಮಾಡಲು ಹೋಗಿ ಆರೋಗ್ಯ ಹಾಳುಮಾಡಿಕೊಳ್ಳದಿರಿ ಎಂಬುದು ನಮ್ಮ ಸಲಹೆ.



Click it and Unblock the Notifications
