Latest Updates
-
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ
Shani Sade Sati 2022ರಲ್ಲಿ ಈ 4 ರಾಶಿಗಳು ಶನಿದೋಷ, ಶನಿ ಧೆಯ್ಯದಿಂದ ಮುಕ್ತರಾಗಿದ್ದಾರೆ
ಶನಿಗ್ರಹ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಇದೀಗ ಶನಿದೇವ ಮಕರ ರಾಶಿಯಲ್ಲಿದೆ. ಶನಿ ಧೆಯ್ಯ ಮಿಥುನ ಹಾಗೂ ತುಲಾ ರಾಶಿಯಲ್ಲಿದೆ. ಈಗ ಧನು, ಮಕರ, ಕುಂಭದಲ್ಲಿ ಶನಿ ಸಾಡೇಸಾತಿಯಿದೆ. ಒಟ್ಟು 5 ರಾಶಿಗಳ ಮೇಲೆ ಶನಿದೇವನ ಕೆಟ್ಟ ದೃಷ್ಟಿರುತ್ತದೆ.

ಆದರೆ ಇದೇ ಏಪ್ರಿಲ್ 29ರಂದು ಶನಿ ತನ್ನ ರಾಶಿ ಬದಲಾಯಿಸಲಿದೆ, ಆಗ ಇನ್ನೂ 3 ರಾಶಿಗಳ ಮೇಲೆ ಶನಿದೋಷವಿರುತ್ತದೆ. ಅದೇ ಸಮಯದಲ್ಲಿ4 ರಾಶಿಗಳು ಶನಿ ಕೋಪದಿಂದ ಅಂದರೆ ಶನಿಯ ಹಿಡಿತದಿಂದ ಮುಕ್ತರಾಗಲಿದ್ದಾರೆ.
ಆ ಅದೃಷ್ಟದ ರಾಶಿಗಳು ಯಾವುವು? ಯಾವ ರಾಶಿಗಳಲ್ಲಿ ಶನಿ ಸಾಡೇ ಸಾತಿಯಿಂದ ಮುಕ್ತರಾಗಿ ಇನ್ನು ನೆಮ್ಮದಿಯ ಜೀವನ ಕಾಣಬಹುದು ಎಂದು ನೋಡೋಣ ಬನ್ನಿ:

ಏಪ್ರಿಲ್ 29ರವರೆಗೆ ಮಕರದಲ್ಲಿ ಶನಿ ಸಂಚಾರ
ಈ ಸಂಕ್ರಮಣ ಸಮಯದಲ್ಲಿ ಮಿಥುನ ರಾಶಿ, ತುಲಾ ರಾಶಯವರಿಗೆ ಶನಿ ಧೆಯ್ಯದಿಂದ ಮುಕ್ತಿ ಸಿಗಲಿದೆ. ಆದ್ದರಿಂದ ಈ ಸಮಯದಲ್ಲಿ ಧನು ರಾಶಿ, ಮಕರ ರಾಶಿ ಹಾಗೂ ಕುಂಭ ರಾಶಿಯಲ್ಲಿ ಶನಿದೋಷವಿರುತ್ತದೆ.

ಏಪ್ರಿಲ್ 29ರಿಂದ ಜುಲೈ 12ರವರೆಗೆ ಕುಂಭದಲ್ಲಿ ಇರುವ ಶನಿ
ಈ ಸಮಯದಲ್ಲಿ ಮಿಥುನ ಹಾಗೂ ತುಲಾ ರಾಶಿಯವರು ಶನಿದೋಷದಿಂದ ಮುಕ್ತರಾಗಲಿದ್ದಾರೆ, ಆದರೆ ಕರ್ಕ ಮತ್ತು ವೃಶ್ಚಿಕ ಈ ಸಮಯದಲ್ಲಿ ಶನಿಯ ಹಿಡಿತದಲ್ಲಿರುತ್ತದೆ. ಈ ಸಮಯದಲ್ಲಿ ಧನು ರಾಶಿಯವರಿಗೆ ಶನಿ ಸಾಡೇಸಾತಿಯಿಂದ ಮುಕ್ತಿ ಸಿಗುವುದು, ಆದರೆ ಶನಿಯ ಕೆಟ್ಟ ದಷ್ಟಿ ಮೀನದಲ್ಲಿರುತ್ತದೆ. ಈ ಸಮಯದಲ್ಲಿ ಮಕರ ಹಾಗೂ ಕುಂಭ ರಾಶಿಯವರಿಗೆ ಶನಿ ಸಾಡೇಸಾತಿ ಪ್ರಭಾವವಿರುತ್ತದೆ.

ಜುಲೈ 12ರಿಂದ ಈವರ್ಷ ಕೊನೆಯವರೆಗೆ ಮಕರದಲ್ಲಿರುವ ಶನಿ
ಈ ಸಮಯದಲ್ಲಿ ಮಿಥುನ ಹಗೂ ತುಲಾ ರಾಶಿಯವರ ಮೇಲೆ ಶನಿ ಧೆಯ್ಯವಿರುತ್ತದೆ. ಧನು ರಾಶಿ, ಮಕರ ರಾಶಿ, ಕುಂಭ ರಾಶಿಯವರಿಗೆ ಶನಿ ಸಾಡೇಸಾತಿವಿರುತ್ತದೆ.

ಯಾವ ರಾಶಿಗಳಿಗೆ 2022ರಲ್ಲಿ ಶನಿದೋಷವಿಲ್ಲ
ಒಟ್ಟಿನಲ್ಲಿ ಈ ವರ್ಷ ಮೇಷ, ವೃಷಭ, ಸಿಂಹ ಹಾಗೂ ಕನ್ಯಾ ರಾಶಿಯವರ ಮೇಲೆ ಶನಿ ದೋಷವಿರುವುದಿಲ್ಲ. ಮೀನ, ಕರ್ಕ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಹಾಗೂ ಮೀನ ರಾಶಿಯಲ್ಲಿ ಶನಿಯ ಹಿಡಿತವಿರುತ್ತದೆ.



Click it and Unblock the Notifications
