Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಜ್ಯೋತಿಷ್ಯ: ವೃತ್ತಿ ಹಾಗೂ ಕೌಟುಂಬಿಕ ಜೀವನ ಎರಡನ್ನು ಸಮವಾಗಿ ನಿಭಾಯಿಸುವ ರಾಶಿಗಳಿವು
ಇಂದಿನ ಒತ್ತಡದ ಬದುಕು ಹೇಗಿದೆ ಎಂದರೆ ಕೆಲಸದಲ್ಲಿ ಹೆಚ್ಚು ಗಮನಹರಿಸಿದರೆ ವೈಯಕ್ತಿಕ ಬದುಕಿನಲ್ಲಿ ಸಮಸ್ಯೆಗಳು ಹೆಚ್ಚಾಗುತ್ತದೆ, ಆದರೆ ವೈಯಕ್ತಿಕ ಬದುಕಿಗೆ ಆದ್ಯತೆ ನೀಡಿದರೆ ಕೆಲಸದಲ್ಲಿ ಹೆಚ್ಚು ಗಮನಹರಿಸಲು ಸಾಧ್ಯವಾಗುವುದಿಲ್ಲ. ಒಟ್ಟಾರೆ ಎರಡನ್ನೂ ಸಮವಾಗಿ ನಿಭಾಯಿಸುವುದು ಕಷ್ಟಸಾಧ್ಯವೇ ಹೌದು.

ಆದರೆ, ಜ್ಯೋತಿಶಾಸ್ತ್ರದ ಪ್ರಕಾರ ಕೆಲಸ, ಉದ್ಯೋಗ ಹಾಗೂ ವೈಯಕ್ತಿಕ ಬದುಕನ್ನು ಉತ್ತಮವಾಗಿ ಸಮಾನವಾಗಿ ನಿಭಾಯಿಸಬಲ್ಲ ರಾಶಿಚಕ್ರಗಳು ಇದೆ. ಈ ಐದು ರಾಶಿಯವರು ಕೆಲಸಕ್ಕೂ ಸಮಸ್ಯೆ ಆಗದಂತೆ ಸಂಬಂದವೂ ಹಾಳಾಗದಂತೆ ಎರಡನ್ನೂ ನಾಜೂಕಾಗಿ, ಜಾಗರೂಕತೆಯಿಂದ ನಿಭಾಯಿಸುತ್ತಾರಂತೆ. ಯಾವುದು ಈ ಬುದ್ದಿವಂತ ರಾಶಿಚಕ್ರ ಮುಂದೆ ನೋಡೋಣ:

ವೃಷಭ ರಾಶಿ
ವೃಷಭ ರಾಶಿಯವರು ಎಷ್ಟೇ ಕಾರ್ಯನಿರತರಾಗಿದ್ದರೂ, ಅವರು ಯಾವಾಗಲೂ ತಮ್ಮ ಪ್ರೀತಿಪಾತ್ರರಿಗಾಗಿ ಸಮಯವನ್ನು ಮೀಸಲಿಡುತ್ತಾರೆ. ಅವರ ವಿಶೇಷತೆ ಎಂದರೆ ನಿಮ್ಮ ಎಷ್ಟೇ ಕಾರ್ಯನಿರತರಾಗಿದ್ದರೂ ತಮ್ಮ ಪ್ರೀತಿಪಾತ್ರರಿಗೆ ಪ್ರೇಮದಲ್ಲಿ ಕೊರತೆ ಮಾಡುವುದಿಲ್ಲ. ವೃಷಭ ರಾಶಿಯವರು ಯಾವಾಗಲೂ ಕೆಲಸದಲ್ಲಿರುತ್ತಾರೆ ಅದರೆ ಅವರು ತಮ್ಮ ಸಂಗಾತಿ ದುಃಖ ಮತ್ತು ಒಂಟಿತನ ಅನುಭವಿಸಲು ಅವಕಾಶ ಮಾಡಿಕೊಡುವುದಿಲ್ಲ, ಹಾಗಾದರೆ ವೃಷಬ ರಾಶಿಯವರು ತುಂಬಾ ನಿರಾಶೆಗೊಳ್ಳುತ್ತಾರೆ.

ಕರ್ಕ ರಾಶಿ
ಕರ್ಕ ರಾಶಿಯವರು ತಮ್ಮ ವೃತ್ತಿ ಬದುಕಿನ ಬಗ್ಗೆ ಬಹಳ ಮಹತ್ವಾಕಾಂಕ್ಷೆಯುಳ್ಳ ಜನರು. ಆದರೆ ಅವರು ತಮ್ಮ ವೈಯಕ್ತಿಕ ಜೀವನಕ್ಕೂ ಹೆಚ್ಚು ಆದ್ಯತೆ ನೀಡುತ್ತಾರೆ ಹಾಗೆಯೇ ವೃತ್ತಿ ಬದುಕನ್ನು ಸಮವಾಗಿ ನಿಭಾಯಿಸುತ್ತಾರೆ. ನಿಜ ಹೇಳಬೇಕೆಂದರೆ ವೃತ್ತಿ ಜೀವನವೇ ಅಥವಾ ಪ್ರೀತಿಯ ಜೀವನವೇ ಎಂಬ ಆಯ್ಕೆ ನೀಡಿದರೆ ಅವರು ಪ್ರೀತಿಯ ಬದುಕನ್ನು ಆರಿಸಿಕೊಳ್ಳುತ್ತಾರೆ, ಏಕೆಂದರೆ ಅವರು ಪ್ರೀತಿಯನ್ನು ಮಾತ್ರ ಹೆಚ್ಚು ಅನುಭವಿಸುತ್ತಾರೆ.

ತುಲಾ ರಾಶಿ
ವೃತ್ತಿಪರ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಇಟ್ಟುಕೊಳ್ಳಲು ತುಲಾ ರಾಶಿಯರಿಗೆ ಯಾವುದೇ ತೊಂದರೆಗಳೇ ಇಲ್ಲ. ಅವರು ತಮ್ಮ ವೃತ್ತಿ ಬದುಕು ಮತ್ತು ಪ್ರೀತಿಪಾತ್ರರ ನಡುವೆ ಸುಲಭವಾಗಿ ಸಮತೋಲನ ಸಾಧಿಸುತ್ತಾರೆ. ತಮ್ಮ ಕುಟುಂಬದೊಂದಿಗೆ ಸಂಬಂಧವನ್ನು ಉಳಿಸಿಕೊಳ್ಳುವಾಗ ಅಥವಾ ಅವರಿಗೆ ಸಮಯವನ್ನು ಮೀಸಲಿಡುವಾಗ ತಮ್ಮ ವೃತ್ತಿಜೀವನವನ್ನು ಪಕ್ಕಕ್ಕೆ ಬಿಡದಂತೆ ಬಹಳ ಜಾಗರೂಕರತೆಯಿಂದ ನಿಭಾಯಿಸುತ್ತಾರೆ.

ಧನು ರಾಶಿ
ಧನು ರಾಶಿಯವರು ಯಾವಾಗಲು ಸ್ವತಂತ್ರ ಆತ್ಮದವರು ಮತ್ತು ಅವರು ಸ್ವಂತವಾಗಿರಲು ಇಷ್ಟಪಡುತ್ತಾರೆ. ಆದರೆ ಇದು ತಮ್ಮ ವೈಯಕ್ತಿಕ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರದಂತೆ ಸಹ ಎಚ್ಚರಿಕೆ ವಹಿಸುತ್ತಾರೆ. ಅವರು ತಮ್ಮ ವೃತ್ತಿಜೀವನಕ್ಕೆ ಸದಾ ಬದ್ಧರಾಗಿರುತ್ತಾರೆ, ಆದರೆ ಕುಟುಂಬ ಮತ್ತು ಸಂಬಂಧಕ್ಕೆ ಹೆಚ್ಚು ಆದ್ಯತೆ ನೀಡುವುದು ಅವರಿಗೆ ನಿಖರವಾಗಿ ತಿಳಿದಿದೆ.

ಮೀನ ರಾಶಿ
ಮೀನ ರಾಶಿಯವರು ಕೆಲಸದಲ್ಲಿ ಯಾವತ್ತೂ ನಿರ್ಲಕ್ಷ್ಯ ತೋರುವುದಿಲ್ಲ, ನೋಡುಗರ ಕಣ್ಣಿಗೆ ತಲೆಕೆಡಿಸಿಕೊಳ್ಳದವರಂತೆ ಕಾಣಬಹುದು ಅದರೆ ತಾವಾಗಿಯೇ ಉತ್ತಮವಾಗಿ ಕಾರ್ಯನಿರ್ವಹಿಸುವ ಉತ್ತಮ ಕೆಲಸಗಾರರು. ಆದರೆ ಸಂಬಂಧದ ವಿಚಾರದಲ್ಲಿ ಅವರು ಭಾವನಾತ್ಮಕ ಬಂಧವನ್ನು ಬಯಸುತ್ತಾರೆ ಅಲ್ಲದೆ ತಾವೂ ಹಾಗೆಯೇ ವರ್ತಿಸುತ್ತಾರೆ. ಅವರು ತಮ್ಮ ಸಂಬಂಧಗಳನ್ನು ಹೇಗೆ ಚೆನ್ನಾಗಿ ನಿರ್ವಹಿಸಬೇಕೆಂದು ಚೆನ್ನಾಗಿ ತಿಳಿದಿದ್ದಾರೆ ಮತ್ತು ಅವರ ಜೀವನದ ಯಾವ ಅಂಶಕ್ಕೆ ಗಮನ ಕೊಡಬೇಕು ಎಂದು ತಿಳಿದಿರುತ್ತಾರೆ.



Click it and Unblock the Notifications











