Latest Updates
-
ಡೇಟಿಂಗ್ ಆ್ಯಪ್ ಬಳಕೆದಾರರೇ ಎಚ್ಚರ: ಈ ಕೆಫೆಗಳೇ ನಿಮ್ಮ ಜೇಬಿಗೆ ಕತ್ತರಿ! -
ದೆಹಲಿ-ಎನ್ಸಿಆರ್ ಬಿರುಗಾಳಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಹೀಗೆ ಮಾಡಿ -
AJIO ಮಿಡ್ನೈಟ್ ಮೇನಿಯಾ: ಸ್ನೀಕರ್ಸ್ ಮೇಲೆ ಭರ್ಜರಿ ಆಫರ್ ಪಡೆಯೋದು ಹೇಗೆ? -
ಹವಾಮಾನ ಇಲಾಖೆ ಎಚ್ಚರಿಕೆ: ಬಿರುಗಾಳಿ ಮಳೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ಸಂಬಂಧಗಳ ಆತಂಕ ಕಾಡ್ತಿದೆಯಾ? ನೆಮ್ಮದಿ ನೀಡುವ ಉಚಿತ ಸಹಾಯವಾಣಿಗಳು -
IMD ಮಳೆ ಮುನ್ಸೂಚನೆ: ಬಾಲ್ಕನಿ ಸುರಕ್ಷತೆಗೆ ಈ ಕ್ರಮಗಳನ್ನು ಪಾಲಿಸಿ -
ಆರೋಗ್ಯಕರ ಆಹಾರ ಪದ್ಧತಿ: ಬೇಸಿಗೆಯಲ್ಲಿ ಲವಲವಿಕೆಯಿಂದ ಇರಲು ಹೀಗೆ ಮಾಡಿ -
ಅನುಷ್ಕಾ ಶರ್ಮಾ ಸ್ಟೇಡಿಯಂ-ಕೋರ್ ಲುಕ್: ಕ್ರಿಕೆಟ್ ಸೀಸನ್ನ ಹೊಸ ಕ್ರೇಜ್ -
ಇಂದಿನ ರಾಶಿ ಭವಿಷ್ಯ: ನಿಮ್ಮ ಜೀವನದಲ್ಲಿ ಕಾದಿದೆ ಅಚ್ಚರಿಯ ಬದಲಾವಣೆ! -
ಅಹಮದಾಬಾದ್ ದೋಸೆ ಹಿಟ್ಟಿನ ಆತಂಕ: ನಿಮ್ಮ ಮಕ್ಕಳ ಆರೋಗ್ಯಕ್ಕೆ ಈ ಎಚ್ಚರಿಕೆ ಅಗತ್ಯ!
ಈ 4 ರಾಶಿಯವರಿಗೆ 2023ರಲ್ಲಿ ಗಾಡಿ ಯೋಗ ಬಲವಾಗಿದೆ
ಒಂದೊಳ್ಳೆ ಗಾಡಿ ಖರೀದಿಸಬೇಕೆಂಬುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ನಮ್ಮಲ್ಲಿ ಈಗಾಗಲೇ ಗಾಡಿಯಿದ್ದರೆ ಅದಕ್ಕಿಂತ ಬೆಟರ್ ಆಗಿರುವ ಗಾಡಿ ಬೇಕೆಂದು ಬಯಸುತ್ತೇವೆ. ಇನ್ನು ಕೆಲವರಿಗೆ ತುಂಬಾ ಸಮಯದಿಂದ ಒಂದು ಗಾಡಿ ಖರೀದಿಸಬೇಕೆಂಬ ಆಸೆ ಇರುತ್ತದೆ. ಆದರೆ ನಾನಾ ಕಾರಣಗಳಿಂದ ಖರೀದಿಸಲು ಸಾಧ್ಯವಾಗಲ್ಲ.
ಜ್ಯೋತಿಷ್ಯ ಪ್ರಕಾರ ಗಾಡಿಯಾಗಲಿ, ಮನೆಯಾಗಲಿ ನಮ್ಮದಾಗಬೇಕೆಂದರೆ ಯೋಗ ಬೇಕೆಂದು ಹೇಳಲಾಗುವುದು. ನೀವು ಕೂಡ ಹೊಸ ವರ್ಷದಲ್ಲಿ ಗಾಡಿ ಖರೀದಿಸಬೇಕೆಂದು ಯೋಚಿಸುತ್ತಿದ್ದೀರಾ? ನಿಮ್ಮ ಆಸೆ ನೆರವೇರಲಿ. ಜ್ಯೋತಿಷ್ಯದ ಪ್ರಕಾರ ಕೆಲವೊಂದು ರಾಶಿಗಳಿಗೆ ಈ ವರ್ಷ ಗಾಡಿ ಯೋಗ ಬಲವಾಗಿದೆ.
2023ರಲ್ಲಿ ನೀವು ಹೊಸ ಗಾಡಿ ಖರೀದಿಸಬೇಕೆಂದು ಬಯಸುವುದಾದರೆ ಈ ರಾಶಿಯವರಿಗೆ ಗಾಡಿ ಯೋಗ ಬಲವಾಗಿದೆ:

ವೃಷಭ ರಾಶಿ
ತುಂಬಾ ಸಮಯದಿಂದ ವಾಹನ ಖರೀದಿ ಮಾಡಬೇಕೆಂದು ಬಯಸುತ್ತಿರುವ ವೃಷಭ ರಾಶಿಯವರ ಕನಸು ಈ ವರ್ಷ ನೆರವೇರಲಿದೆ. ಈ ವರ್ಷ ನಿಮಗೆ ಒಳ್ಳೆಯ ಲಾಭವಿರುತ್ತದೆ. ಚರ ಹಾಗೂ ಸ್ಥಿರ ಆಸ್ತಿಯಿಂದ ಲಾಭ ಗಳಿಸುವಿರಿ. ಇದರಿಂದಾಗಿ ನೀವು ವಾಹನ ಖರೀದಿಯತ್ತ ಗಮನ ಹರಿಸುವಿರಿ. ನಿಮ್ಮ ರಾಶಿಯ ಅಧಿಪತಿಯಾಗಿರುವ ಶುಕ್ರನು ವಾಹನಗಳ ಅಂಶವೂ ಆಗಿದ್ದಾನೆ, ಆದ್ದರಿಂದ ಶುಕ್ರನ ಶುಭ ಸ್ಥಾನವು ನಿಮಗೆ ತುಂಬಾ ಲಾಭದಾಯಕವೆಂದು ಸಾಬೀತುಪಡಿಸುತ್ತದೆ. ನಿಮಗೆ ಚಾಹನ ಖರೀದಿಸಲು ಮೇ ಮತ್ತು ಜುಲೈ ನಡುವಿನ ಅವಧಿಯು ಅತ್ಯುತ್ತಮವಾಗಿರುತ್ತದೆ. ಆದರೆ ವೃಷಭ ರಾಶಿಯವರಿಗೆ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ವಹಿಸಲು ಸಲಹೆ ನೀಡಲಾಗುತ್ತದೆ.

ಸಿಂಹ ರಾಶಿ
2023ರಲ್ಲಿ ವಾಹನ ಖರೀದಿಸುವುದು ಸೂಕ್ತವೇ ಅಥವಾ ಬೇಡವೇ ಎಂದು ಯೋಚಿಸುತ್ತಿರುವ ಸಿಂಹ ರಾಶಿಯವರು ಯೋಚಿಸುತ್ತಿದ್ದರೆ ನಿಮಗೆ ಈ ವರ್ಷವು ವಾಹನವನ್ನು ಖರೀದಿಸುವ ದೃಷ್ಟಿಕೋನದಿಂದ ಅನುಕೂಲಕರವಾಗಿರುತ್ತದೆ. ಈ ವರ್ಷದ ಆರಂಭದಲ್ಲಿ ಅಂದರೆ ಜನವರಿಯಲ್ಲಿ ವಾಹನವನ್ನು ಖರೀದಿಸಲು ಯೋಜಿಸುತ್ತಿದ್ದರೆ, ಮಂಗಳವು ತನ್ನದೇ ಆದ ರಾಶಿಯಾದ ವೃಶ್ಚಿಕ ರಾಶಿಯ ಮೇಲೆ ಸಂಪೂರ್ಣ ಅಂಶವನ್ನು ಹೊಂದಿರುತ್ತದೆ ಈ ಸಮಯದಲ್ಲಿ ವಾಹನ ಖರೀದಿಸಲು ಬಯಸುವುದಾದರೆ ನೀವು ಯಶಸ್ಸನ್ನು ಪಡೆಯುತ್ತೀರಿ.
ಏಪ್ರಿಲ್-ಮೇ ತಿಂಗಳುಗಳು ಹಾಗೂ ವರ್ಷದ ಕೊನೆಯ ತಿಂಗಳು ಅಂದರೆ ನವೆಂಬರ್ ನಿಂದ ಡಿಸೆಂಬರ್ ತಿಂಗಳುಗಳು ವಾಹನ ಖರೋದಿಸಲು ಆರೋಗ್ಯಕರವಾಗಿದೆ. ಏಕೆಂದರೆ ಈ ಸಮಯದಲ್ಲಿ ನೀವು ದೊಡ್ಡ ವಾಹನವನ್ನು ಖರೀದಿಸಬಹುದು.

ಮಕರ ರಾಶಿ
ಮಕರ ರಾಶಿಯವರಿಗೆ 2023 ವರ್ಷವು ವಾಹನವನ್ನು ಖರೀದಿಸುವ ವಿಷಯದಲ್ಲಿ ಪ್ರಯೋಜನಕಾರಿಯಾಗಿದೆ. ಈ ವರ್ಷ ಮಕರ ರಾಶಿಯವರು ಮನಸ್ಸು ಮಾಡಿದರೆ ವಾಹನವನ್ನು ಖರೀದಿಸಲು ಸಾಧ್ಯವಾಗುತ್ತದೆ. ವಾಹನವನ್ನು ಖರೀದಿಸಲು ಫೆಬ್ರವರಿಯಿಂದ ಮಾರ್ಚ್ ಸೂಕ್ತವಾಗಿರುತ್ತದೆ. ಏಪ್ರಿಲ್ ನಿಂದ ಮೇ ಅವಧಿಯಲ್ಲಿ ದ್ವಿಚಕ್ರ ವಾಹನ ಅಥವಾ ನಾಲ್ಕು ಚಕ್ರದ ವಾಹನಗಳನ್ನು ಖರೀದಿಸಲು ಯೋಚಿಸುತ್ತಿರುವವರು ಯಶಸ್ವಿಯಾಗಬಹುದು. ಈ ಸಮಯದಲ್ಲಿ ನೀವು ವಾಹನವನ್ನು ಖರೀದಿಸಲು ಸಾಧ್ಯವಾಗದಿದ್ದರೆ, ಸ್ವಲ್ಪ ಸಮಯ ಕಾಯಿರಿ. ನಿಮಗೆ 2023 ರ ಕೊನೆಯ ತಿಂಗಳುಗಳಲ್ಲಿ ವಾಹನವನ್ನು ಖರೀದಿಸಲು ಸಾಧ್ಯವಾಗುವುದು. ವರ್ಷದ ಪ್ರಾರಂಭದಲ್ಲಿ ವಾಹನ ಖರೀದಿಸಲು ಸಾಧ್ಯವಾಗದಿದ್ದರೆ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಖರೀದಿಸಲು ಸಾಧ್ಯವಾಗುವುದು.ಇಡೀ ವರ್ಷಕ್ಕೆ ಹೋಲಿಸಿದರೆ, ಕೊನೆಯ 2 ತಿಂಗಳುಗಳು ವಾಹನವನ್ನು ಖರೀದಿಸಲು ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನೀವು ಬಯಸಿದ ವಾಹನ ಖರೀದಿಸಲು ಸಾಧ್ಯವಾಗುವುದು.

ಕುಂಭ ರಾಶಿ
ಕುಂಭ ರಾಶಿಯವರಿಗೆ 2023 ರ ಹೊಸ ವರ್ಷವು ಜೀವನದ ವಿವಿಧ ಅಂಶಗಳಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ತರಬಹುದು ಹೀಗಾಗಿ ವಾಹನವನ್ನು ಖರೀದಿಸಲು ನಿಮಗೆ ಸಾಧ್ಯವಾಗುವುದು. ವಾಹನವನ್ನು ಖರೀದಿಸಲು ಇಚ್ಛಿಸುವವರಿಗೆ ಏಪ್ರಿಲ್ 06 ರಿಂದ ಮೇ 02 ರ ನಡುವಿನ ಸಮಯವು ತುಂಬಾ ಮಂಗಳಕರವಾಗಿರುತ್ತದೆ ಮತ್ತು ಈ ಸಮಯದಲ್ಲಿ ವಾಹನವನ್ನು ಖರೀದಿಸುವುದು ನಿಮಗೆ ಸಮೃದ್ಧವಾಗಿದೆ. ಈ ಸಮಯದಲ್ಲಿ ನೀವು ವಾಹನವನ್ನು ಖರೀದಿಸಲು ಸಾಧ್ಯವಾಗುತ್ತದೆ. ನಿನಗೆ ಜೂನ್ ತಿಂಗಳು ಎಲ್ಲಾ ತಿಂಗಳುಗಳಿಗಿಂತ ಹೆಚ್ಚು ಸೂಕ್ತವಾಗಿದೆ. ನೀವು ವರ್ಷದ ಕೊನೆಯಲ್ಲಿ ವಾಹನವನ್ನು ಖರೀದಿಸಲು ಬಯಸಿದರೆ, ನವೆಂಬರ್ ಮತ್ತು ಡಿಸೆಂಬರ್ ನಡುವೆ ವಾಹನವನ್ನು ಖರೀದಿಸುವುದು ನಿಮಗೆ ಲಾಭದಾಯಕವಾಗಿರುತ್ತದೆ.



Click it and Unblock the Notifications







