Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ರಾಶಿಯವರು ಕೆಲಸದಲ್ಲಿ ತುಂಬಾ ಸ್ಪರ್ಧಾತ್ಮಕರಂತೆ
ಇದು ಸ್ಪರ್ಧಾತ್ಮಕ ಜಗತ್ತು. ಇಲ್ಲಿ ಗೆಲ್ಲಲು ಪ್ರತಿ ಹಂತದಲ್ಲೂ, ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧಿಸಲೇಬೇಕು. ನಾವು, ನೀವು ಸೇರಿದಂತೆ ಎಲ್ಲರೂ ಪ್ರತಿದಿನ ಒಂದಿಲ್ಲೊಂದು ಕಾರಣದಿಂದ ಸ್ಪರ್ಧಿಸುತ್ತಲೇ ಜೀವನ ನಡೆಸುತ್ತಿದ್ದೇವೆ.

ಇನ್ನು ಕೆಲಸ, ಉದ್ಯೋಗದಲ್ಲಿ ಕೇಳಬೇಕೆ, ಸಾಕಷ್ಟು ಕಾರಣಗಳಿಂದ ಪ್ರತಿ ದಿನ ಸವಾಲಿನ ದಿನವೇ ಆಗಿರುತ್ತದೆ. ಕೆಲಸ ಮತ್ತು ಸ್ಪರ್ಧೆ ಎರಡೂ ಸಹ ಒಂದೇ ನಾಣ್ಯದ ಎರಡು ಬದಿಗಳಿದ್ದಂತೆ. ಆದರೆ ನಿಮಗೆ ಗೊತ್ತೆ ಜ್ಯೋತಿಶಾಸ್ತ್ರದ ಪ್ರಕಾರ ಈ ರಾಶಿಯವರು ಸ್ಪರ್ಧೆಗಿಳಿದರೆ ಎದುರಾಳಿಗಳಿಗೆ ಪ್ರಬಲ ಸ್ಪರ್ಧೆ ನೀಡುತ್ತಾರಂತೆ.
ಇವರು ಕೆಲಸ ಗೆಲ್ಲಲು ಅಥವಾ ಉತ್ತಮ ಸ್ಥಾನಕ್ಕಾಗಿ ಜಾಣ್ಮೆಯೊಂದಿಗೆ ಕೆಲಸವನ್ನು ಮಾಡುತ್ತಾರೆ. ಅದು ಸಣ್ಣ ಅಥವಾ ದೊಡ್ಡ ಯೋಜನೆಯಾಗಿರಲಿ, ಈ ರಾಶಿಯ ಸಹೋದ್ಯೋಗಿಗಲು ಯಾವಾಗಲೂ ತಮ್ಮ ಗುರಿಯನ್ನು ತಲುಪಲು ಅಸಾಧಾರಣ ಸ್ಪರ್ಧೆ ನೀಡುತ್ತಾರೆ. ಯಾವೆಲ್ಲಾ ರಾಶಿಕ್ರಗಳು ಮುಂದೆ ತಿಳಿಯೋಣ:

ಮೇಷ ರಾಶಿ
ಮೇಷ ರಾಶಿಯು ಹೆಚ್ಚು ಶಕ್ತಿಯುತ ಮತ್ತು ಅವರ ಗುರಿ, ಮಹತ್ವಾಕಾಂಕ್ಷೆಗಳಿಗೆ ಸಮರ್ಪಿತರಾಗಿರುತ್ತಾರೆ. ಬಹಳ ವಿನೋದ-ಪ್ರೀತಿಯ ಮನಸ್ಸುಳ್ಳ ಇವರು ಸಮಯ ಉತ್ತಮವಾಗಿ ಅನುಭವಿಸಲು ಇಷ್ಟಪಡುತ್ತಾರೆ. ಅದರೆ ಅವರು ವ್ಯವಹಾರದ ವಿಷಯಕ್ಕೆ ಬಂದರೆ ಅಂಥಾ ಸಂದರ್ಭಗಳಲ್ಲಿ ಮೋಜಿನ ರೀತಿ ಸಮಯ ಕಳೆಯಲು, ಆಟವಾಡಲು ಇಷ್ಟಪಡುವುದಿಲ್ಲ. ಅವರು ಸ್ಪರ್ಧೆಯ ವಿಚಾರಕ್ಕೆ ಬಂದರೆ ತಮ್ಮ ಗುರಿಗಳನ್ನು ತಲುಪಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಏನಾನ್ನಾದರೂ ಕಳೆದುಕೊಳ್ಳಬಹುದು ಎನ್ನುವ ಯೋಚನೆ ಮಾಡದ ಇವರು, ಜನರನ್ನು ನಿರಾಸೆಗೊಳಿಸದಿರುವ ಬಗ್ಗೆ ತುಂಬಾ ಸ್ಪಷ್ಟವಾಗಿರುತ್ತಾರೆ. ಬಹುಶಃ ಅದಕ್ಕಾಗಿಯೇ ಅವರು ಹೆಚ್ಚು ಸ್ಪರ್ಧಾತ್ಮಕ ಸಹೋದ್ಯೋಗಿಗಳಾಗುತ್ತಾರೆ.

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಎಲ್ಲರ ಗಮನ ಆಕರ್ಷಿಸುವುದಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಅವರು ಗೆಲುವು ಮತ್ತು ಆಚರಣೆಗಳನ್ನು ಇಷ್ಟಪಡುತ್ತಾರೆ. ಸಿಂಹ ರಾಶಿಯವರು ತಾವು ಅಂದುಕೊಂಡ ಗುರಿ ತಲುಪಲು ತಮ್ಮ ಶಕ್ತಿಮೀರಿದ ಪ್ರಯತ್ನವನ್ನು ಮಾಡುತ್ತಾರೆ ಮತ್ತು ಈ ಪ್ರಕ್ರಿಯೆಯಲ್ಲಿ ಅವರು ಬಹಳ ಸ್ಪರ್ಧಾತ್ಮಕವಾಗಿರುತ್ತಾರೆ. ತಾವು ಕೆಲಸದಲ್ಲಿ ಉತ್ತಮ ಮತ್ತು ಸಕಾರಾತ್ಮಕ ಫಲಿತಾಂಶ ತೋರಿಸಬೇಕು ಎಂಬ ಉದ್ದೇಶ ಉಟ್ಟುಕೊಂಡಿರುವ ಇವರಿಗೆ ಈ ಸ್ಪರ್ಧಾತ್ಮಕ ಮನೋಭಾವವು ತುಸು ಹೆಚ್ಚೇ ಇರುತ್ತದೆ.

ಕನ್ಯಾ ರಾಶಿ
ಕನ್ಯಾ ರಾಶಿಯಲ್ಲಿ ಜನಿಸಿದವರು ಪರಿಪೂರ್ಣತಾವಾದಿಗಳು ಎಂದೇ ಖ್ಯಾತಿ. ಅವರು ಯಾವುದೇ ಕೆಲಸಕ್ಕೆ ಗುರಿ ಇಟ್ಟರೆ, ಅದು ಇತರ ಎಲ್ಲರಿಗಿಂತ ಉತ್ತಮವಾಗಿದೆ ಎಂದೇ ಅರ್ಥ. ಆದ್ದರಿಂದಲೇ ತಮ್ಮ ಕಾರ್ಯಕ್ಷೇತ್ರದಲ್ಲಿ ಎಲ್ಲಾ ಕೆಲಸಗಳಲ್ಲೂ ಗುರಿಯನ್ನು ಸಾಧಿಸುತ್ತಾರೆ, ಅವರು ತಮ್ಮ ಪ್ರಯತ್ನಗಳಲ್ಲ ಉತ್ತಮ ಫಲಿತಾಂಶಗಳನ್ನು ಪಡೆಯಲು ಯಾವುದೇ ಹಂತಕ್ಕೆ ಸಹ ಹೋಗುತ್ತಾರೆ. ಮತ್ತೊಂದು ವಿಶೇಷ ಎಂದರೆ, ಸೋಲನ್ನು ಸ್ವೀಕರಿಸುವ ಶಕ್ತಿ ಸಹ ಅವರು ಹೊಂದಿದ್ದಾರೆ, ಆದರೆ ಆ ಸೋಲಿನಿಂದ ತನ್ನನ್ನು ತಾನು ಹೇಗೆ ತಿದ್ದಿಕೊಳ್ಳಬಹುದು, ಹೇಗೆ ಇನ್ನಷ್ಟು ಉತ್ತಮವಾಗಿಸಿಕೊಳ್ಳಬಹುದು ಸಹ ಎಂದು ಅವರಿಗೆ ತಿಳಿದಿದೆ. ಇದೇ ಅವರನ್ನು ಕೆಲಸದಲ್ಲಿ ಕಠಿಣ ಸ್ಪರ್ಧಿಗಳನ್ನಾಗಿ ಮಾಡುತ್ತದೆ.

ಮಕರ ರಾಶಿ
ಮಕರ ರಾಶಿಯವರು ಕೆಲಸದ ಮೇಲಿನ ಪ್ರೀತಿಗೆ ಹೆಸರುವಾಸಿ. ಅವರ ವೃತ್ತಿಪರತೆಯಲ್ಲಿ ಅತ್ಯಂತ ಪ್ರಾಯೋಗಿಕವಾಗಿರುವುದರ ಜೊತೆಗೆ, ಅವರು ಗಂಭೀರ ಸ್ಪರ್ಧಿಗಳು ಹೌದು. ಕೆಲಸವು ಅವರಿಗೆ ಅತ್ಯಂತ ಪ್ರಮುಖ ಆದ್ಯತೆಯಾಗಿರುತ್ತದೆ. ಅತ್ಯುತ್ತಮ ಹಂತ ತಲುಪಲು ಅವರು ಸ್ಪರ್ಧಿಸಲೇಬೇಕು ಎಂದು ಅವರಿಗೆ ಚೆನ್ನಾಗಿ ತಿಳಿದಿದೆ.



Click it and Unblock the Notifications