Latest Updates
-
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ! -
ಬಿಸಿಲ ಧಗೆಯಿಂದ ಪಾರಾಗಲು ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸಿ
ಈ ರಾಶಿಯವರು ಸ್ವಂತ ಬ್ಯುಸ್‌ನೆಸ್ ಮಾಡಿದರೆ ತುಂಬಾ ಸಕ್ಸಸ್ ಆಗುತ್ತಾರಂತೆ!
ಬ್ಯುಸ್‌ನೆಸ್ ಎಲ್ಲರಿಗೆ ಕೈಗೂಡಿ ಬರಲ್ಲ ಎಂದು ಹೇಳುವುದನ್ನು ಕೇಳಿರಬಹುದು. ಹೌದು ಬ್ಯುಸ್‌ನೆಸ್ ಎಂಬುವುದು ಎಲ್ಲರಿಗೆ ಆಗಿ ಬರಲ್ಲ. ಅದರಲ್ಲಿ ಸಕ್ಸಸ್ ಕಾಣಲು ಶ್ರಮ ಮಾತ್ರ ಸಾಕಾಗಲ್ಲ ಅದರ ಜೊತೆಗೆ ಅದೃಷ್ಟವೂ ಕೈಗೂಡಬೇಕು. ಎಷ್ಟೋ ಜನ ಬ್ಯುಸ್‌ನೆಸ್‌ಗೆ ಇಳಿಯುತ್ತಾರೆ, ಅದರಲ್ಲಿ ಸಕ್ಸಸ್ ಆಗುವುದು ಕೆಲವೇ ಕೆಲವರಷ್ಟೇ ಅಲ್ವಾ? ಜ್ಯೋತಿಷ್ಯ ಪ್ರಕಾರ ಕೆಲವೊಂದು ರಾಶಿಗಳಿಗೆ ಜಾಬ್‌ಗಿಂತ ಬ್ಯುಸ್‌ನೆಸ್ ತುಂಬಾ ಕೈಗೂಡಿ ಬರುವುದಂತೆ. ಆ ರಾಶಿಯವರು ಬ್ಯುಸ್‌ನೆಸ್ ಮಾಡಿದರೆ ಅವರು ಅದರಲ್ಲಿ ಯಶಸ್ವಿಯಾಗುತ್ತಾರೆ ಎಂದು ವೈದಿಕ ಶಾಸ್ತ್ರ ಹೇಳುತ್ತದೆ.

ಜ್ಯೋತಿಷ್ಯ ಪ್ರಕಾರ ಯಾವ ಈ ರಾಶಿಗಳು ಬ್ಯುಸ್‌ನೆಸ್‌ನಲ್ಲಿ ಎಕ್ಸ್‌ಪರ್ಟ್‌ಗಳಾಗುತ್ತಾರಂತೆ, ನೀವು ಈ ರಾಶಿಯವರಾದರೆ, ಬ್ಯುಸ್‌ನೆಸ್‌ನಲ್ಲಿ ಸಕ್ಸಸ್ ಆಗುವಿರಿ ನೋಡಿ:

ಸಿಂಹ ರಾಶಿ
ಇವರು ಬ್ಯುಸ್‌ನೆಸ್‌ನಲ್ಲಿ ಎಕ್ಸ್‌ಪರ್ಟ್ ಆಗುವುದು ಮಾತ್ರವಲ್ಲ ಗ್ರಾಹಕರಿಗೆ ತುಂಬಾ ನಿಯತ್ತಿನಿಂದಲೂ ಇರುತ್ತಾರೆ. ಅವರು ಸ್ವ ಉದ್ಯೋಗ ಪ್ರಾರಂಭಿಸಲು ಬಯಸುತ್ತಾರೆ, ಗ್ರಾಹಕರ ಜೊತೆ ವ್ಯವಹರಿಸುವುದರಲ್ಲಿ ಎಕ್ಸ್‌ಪರ್ಟ್‌ಗಳು. ಇವರಲ್ಲಿ ನಾಯಕತ್ವದ ಗುಣಗಳು ಉತ್ತಮವಾಗಿರುತ್ತದೆ.

ವೃಷಭ ರಾಶಿ
ವೃಷಭ ರಾಶಿಯವರು ತಾಳ್ಮೆ ಉಳ್ಳವರು ಹಾಗೂ ಸ್ಪಷ್ಟ ನಿರ್ಧಾರವನ್ನು ಹೊಂದಿರುವವರು ಆಗಿರುತ್ತಾರೆ. ಅವರು ತೆಗೆದುಕೊಳ್ಳುವ ನಿರ್ಧಾರಗಳು ಉತ್ತಮವಾಗಿರುತ್ತದೆ. ಅವರು ಎಲ್ಲಾವನ್ನು ಚಾಕಚಕ್ಯತೆಯಿಂದ ನಿಭಾಯಿಸಿಕೊಂಡು ಹೋಗುತ್ತಾರೆ. ಹಣದ ಹೂಡಿಕೆ ಹಾಗೂ ಹಣವನ್ನು ನಿರ್ವಹಿಸುವಲ್ಲಿ ಬುದ್ಧಿವಂತರಾಗಿರುತ್ತಾರೆ.

ತುಲಾ ರಾಶಿ
ತುಲಾ ರಾಶಿಯವರು ಎಲ್ಲಾ ವಿಷಯಗಳನ್ನು ಧನಾತ್ಮಕವಾಗಿ ನೋಡುವವರು ಆಗಿರುತ್ತಾರೆ. ಅವರು ಯಾವುದೇ ಸಮಸ್ಯೆ ಬಂದರೂ ನಿಭಾಯಿಸುವಲ್ಲಿ ಸಮರ್ಥರು. ಪ್ರತಿಯೊಂದು ಸವಾಲುಗಳನ್ನು ಅವಕಾಶವಾಗಿ ಪರಿವರ್ತಿಸುವ ಗುಣದವರು.ಅವರಿಗೆ ಜೀವನ ಹಾಗೂ ಬ್ಯುಸ್‌ನೆಸ್ ನಡೆಸಿಕೊಂಡು ಹೋಗುವ ಕೌಶಲ್ಯ ಇರುತ್ತದೆ. ಅವರು ದೊಡ್ಡ ಗ್ರೂಪ್‌ನಲ್ಲಿರುತ್ತದೆ ಹಾಗೂ ಟೀಂ ಬಿಲ್ಡಿಂಗ್ ಚಟುವಟಿಕೆಯಲ್ಲಿ ಸಕ್ರೀಯರಾಗುತ್ತಾರೆ. ಗ್ರಾಹಕರ ಅವಶ್ಯಕತೆ ಏನು ಎಂಬುವುದು ಅವರಿಗೆ ಗೊತ್ತಿರುತ್ತದೆ.

ಕನ್ಯಾ ರಾಶಿ
ಕನ್ಯಾ ರಾಶಿಯವರು ಪ್ರಾಕ್ಟಿಕಲ್ ಆಗಿ ಚಿಂತಿಸುವವರು ಹಾಗೂ ತಮ್ಮದೇ ಬ್ಯುಸ್‌ನೆಸ್‌ನಲ್ಲಿ ತುಂಬಾ ಪ್ರವೀಣರಾಗಿರುತ್ತಾರೆ, ಯಾರಾದರೂ ಅವರನ್ನು ಟೀಕಿಸಿದರೆ ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲ್ಲ. ತುಂಬಾ ಚಿಕ್ಕ ವಿಷಯಗಳನ್ನು ಟ್ರ್ಯಾಕ್ ಮಾಡುವಲ್ಲಿ ಅವರು ತುಂಬಾ ಎಕ್ಸ್‌ಪರ್ಟ್. ಏನಾದರೂ ಸಮಸ್ಯೆ ಉಂಟಾದರೆ ಅದನ್ನು ಬುದ್ಧಿವಂತಿಕೆಯಿಂದ ನಿಭಾಯಿಸುತ್ತಾರೆ.

ಮಿಥುನ ರಾಶಿ
ಮಿಥುನ ರಾಶಿಯವರು ತುಂಬಾ ಚಿಂತನಾಶೀಲರು ಹಾಗೂ ಬುದ್ಧಿವಂತು. ಎಂಥ ಪರಿಸ್ಥಿತಿಯಲ್ಲೂ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುವ ಸಾಮರ್ಥ್ಯ ಇವರಲ್ಲಿ ಇರುತ್ತದೆ. ಇವರು ಮಾತಿನಲ್ಲಿ ತುಂಬಾ ಪ್ರಾವೀಣರು, ಬ್ಯುಸ್‌ನೆಸ್ ಅನ್ನು ಮತ್ತಷ್ಟು ಎತ್ತರಕ್ಕೆ ತರುವಲ್ಲಿ ಪ್ರಯತ್ನಿಸುತ್ತಿರುತ್ತಾರೆ. ಇವರು ಕೆಲಸದಲ್ಲಿ ತುಂಬಾ ಚುರುಕುತನ ತೋರಿಸುತ್ತಾರೆ, ಎಲ್ಲರ ಜೊತೆ ಬೆರೆಯುವುದರಲ್ಲೂ ಇವರು ನಿಸ್ಸೀಮರು.



Click it and Unblock the Notifications











