Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಜೂ. 14ಕ್ಕೆ ಸ್ಟ್ರಾಬೆರ್ರಿ ಮೂನ್: ಈ 3 ರಾಶಿಯವರು ಹುಷಾರಾಗಿರಬೇಕು
ಜೂನ್ 14ಕ್ಕೆ ಹುಣ್ಣಿಮೆ, ಈ ಹುಣ್ಣಿಮೆ ತುಂಬಾ ವಿಶೇಷವಾಗಿದೆ, ಈ ಹುಣ್ಣಿಮೆಯನ್ನು ಸ್ಟ್ರಾಬೆರ್ರಿ ಹುಣ್ಣಿಮೆಯೆಂದು ಕರೆಯಲಾಗುವುದು. ಸ್ಟ್ರಾಬೆರ್ರಿ ಮೂನ್ ಎಂದರೆ ಆ ದಿನ ಚಂದ್ರ ಸ್ಟ್ರಾಬೆರ್ರಿ ರೀತಿಯೇನೂ ಕಾಣುವುದಿಲ್ಲ. ಹಳದಿ ಬಣ್ಣದಲ್ಲಿ ಚಂದ್ರ ತುಂಬಾ ಪ್ರಕಾಶಮಾನವಾಗಿ ದೊಡ್ಡದಾಗಿ ಕಾಣಲಿದೆ. ಪ್ರತಿ ಹುಣ್ಣಿಮೆಗೂ ಜ್ಯೋತಿಷ್ಯ ಪ್ರಕಾರ ತುಂಬಾನೇ ಮಹತ್ವವಿದೆ. ಅದರಂತೆ ಈ ಸ್ಟ್ರಾಬೆರ್ರಿ ಹುಣ್ಣಿಮೆ ಕೂಡ ರಾಶಿಗಳ ಮೇಲೆ ಪರಿಣಾಮ ಬೀರುವುದು.
ಜ್ಯೋತಿಷ್ಯ ಪ್ರಕಾರ ಈ ಸ್ಟ್ರಾಬೆರ್ರಿ ಮೂನ್ ಕೆಲವೊಂದು ರಾಶಿಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ, ಆ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ:

ವೃಷಭ ರಾಶಿ:
ಈ ಸಮಯದಲ್ಲಿ ನೀವು ಹಣದ ಬಗ್ಗೆ ತುಂಬಾ ಹುಷಾರಾಗಿರಬೇಕು. ಆನ್‌ಲೈನ್ ಜೂಜು ಆಡುವುದು ಅಪಾಯಕಾರಿಯಾಗಿದೆ. ಇನ್ನುಸರಿಯಾದ ಬಜೆಟ್ ಪ್ಲ್ಯಾನ್ ಇಲ್ಲದಿದ್ದರೆ ತುಂಬಾನೇ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಸಾಲ ತೆಗೆದುಕೊಳ್ಳಬೇಡಿ, ಸಾಲ ಕೊಡಬೇಡಿ.
ಬಜೆಟ್ ಪ್ಲ್ಯಾನ್ ಮೂಲಕ ಮುಂದುವರೆಯುವುದು ಒಳ್ಳೆಯದು.

ಕರ್ಕ ರಾಶಿ:
ಬದುಕಿನಲ್ಲಿ ಹೊಸ ಅಧ್ಯಯನ ಶುರುವಾಗಲಿದೆ, ಭವಿಷ್ಯದ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ, ಏಕೆಂದರೆ ಭವಿಷ್ಯದಲ್ಲಿ ಅದರ ಪ್ರಮಾಣ ನಿಮ್ಮ ಮೇಲೆ ಇರಲಿದೆ. ಆದ್ದರಿಂದ ಹಳೆಯ ವಿಷಯಕ್ಕೆ ಫುಲ್ ಸ್ಟಾಪ್ ಹಾಕಿ ಮುಂದುವರೆಯುವುದು ಒಳ್ಳೆಯದು.

ವೃಶ್ಚಿಕ ರಾಶಿ:
ಈ ಸಮಯದಲ್ಲಿ ನಿಮಗೆ ನಿಮ್ಮ ಶಕ್ತಿಯೆಲ್ಲಾ ಬತ್ತಿ ಹೋದಂತೆ ಅನಿಸಿದರೆ ಚಿಂತಿಸಬೇಡಿ, ಎಲ್ಲಾ ಸರಿ ಹೋಗುವುದು. ಆದರೆ ಈ ಸಮಯದಲ್ಲಿ ಏನೂ ಮಾಡೋಕೆ ಸಾಧ್ಯವಾಗುತ್ತಿಲ್ಲ ಎಂದು ಅನಿಸಬಹುದು, ಸ್ವಲ್ಪ ಸಮಯವಷ್ಟೇ, ಎಲ್ಲವೂ ಸರಿ ಹೋಗುವುದು, ನೀವಯ ಬಯಸಿದಂತೆ ಆಗುವುದು.



Click it and Unblock the Notifications
