Latest Updates
-
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ!
Swati Nakshatra 2023 Predictions : ಸ್ವಾತಿ ನಕ್ಷತ್ರದವರೇ, ವೃತ್ತಿ ಜೀವನದಲ್ಲಿ ಬೆಳವಣಿಗೆಯಿದೆ
27 ನಕ್ಷತ್ರಗಳಲ್ಲಿ ಸ್ವಾತಿ ನಕ್ಷತ್ರ 15ನೇ ನಕ್ಷತ್ರವಾಗಿದೆ. ಸ್ವಾತಿ ನಕ್ಷತ್ರದವರು ತುಂಬಾ ನಿರ್ಮಲ ಮನಸ್ಸಿನವರು. ಅವರು ತಮ್ಮ ಸುತ್ತಲಿರುವವರನ್ನು ಖುಷಿಯಿಂದ ಇಡಲು ಬಯಸುತ್ತಾರೆ. ಸ್ವಾತಿ ನಕ್ಷತ್ರದವರು ತುಂಬಾ ಪ್ರತಿಭಾವಂತರು. ಸುಲಭದಲ್ಲಿ ಎಲ್ಲರ ಜೊತೆ ಬೆರೆಯುವ ಗುಣವನ್ನು ಹೊಂದಿರುತ್ತಾರೆ.

ಸ್ವಾತಿ ನಕ್ಷತ್ರದವರ ಗುಣಗಳು
ಸ್ವಾತಿ ನಕ್ಷತ್ರದವರು ಶಾಂತ ಸ್ವಭಾವದವರು, ತಮ್ಮ ಕೆಲಸಗಳಿಗೆ ಇತರರನ್ನು ನಂಬಿಕೊಂಡು ಕೂರುವವರಲ್ಲ. ಇವರು ಯಾರಿಗೆ ಮೋಸ ಮಾಡಲ್ಲ, ಆದರೆ ಯಾರಾದರೂ ಮೋಸ ಮಾಡಿದರೆ ಸಹಿಸಲ್ಲ. ಇವರು ತುಂಬಾ ಕಷ್ಟಪಟ್ಟು ದುಡಿಯುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದ ಸ್ತ್ರೀಯರು ಒಳ್ಳೆಯ ಸಾಮಾಜಿಕ ಸ್ಥಾನಮಾನ ಗಳಿಸುತ್ತಾರೆ. ಇವರಿಗೆ ಧಾರ್ಮಿಕ ವಿಷಯಗಳಲ್ಲಿ ತುಂಬಾನೇ ನಂಬಿಕೆ. ತುಂಬಾ ನಿಯತ್ತು. ಇವರ ಸ್ವಭಾವದಿಂದಾಗಿ ತುಂಬಾ ಸ್ನೇಹಿತರನ್ನು ಗಳಿಸುತ್ತಾರೆ.
ಸ್ವಾತಿ ನಕ್ಷತ್ರ 2023ರ ಭವಿಷ್ಯ ನೋಡುವುದಾದರೆ
ಸ್ವಾತಿ ನಕ್ಷತ್ರದವರ ವೃತ್ತಿ ಜೀವನ
ವೃತ್ತಿ ಜೀವನದ ಬಗ್ಗೆ ನೋಡುವುದಾದರೆ ಉದ್ಯೋಗವಾಗಿರಲಿ ಅಥವಾ ಸ್ವಂತ ಉದ್ಯೋಗವಾಗಿರಲಿ ಜನಪ್ರಿಯತೆ ಗಳಿಸುವಿರಿ. ನಿಮ್ಮ ಕೆಲಸವನ್ನು ಎಲ್ಲರೂ ಗುರುತಿಸುತ್ತಾರೆ. ಜುಲೈ ತಿಂಗಳಿನಲ್ಲಿ ವೃತ್ತಿ ಜೀವನದಲ್ಲಿ ಬೆಳೆಯಲು ಒಳ್ಳೆಯ ಅವಕಾಶಗಳು ದೊರೆಯುತ್ತದೆ. ಆದರೆ ಅದಾದ ಬಳಿಕ ವೃತ್ತಿ ಜೀವನದಲ್ಲಿ ಕೆಲ ಅಡೆತಡೆಗಳು ಎದುರಾಗಬಹುದು. 2023ರಲ್ಲಿ ಬ್ಯುಸ್‌ನೆಸ್‌ನಲ್ಲಿ ಒಳ್ಳೆಯ ಬೆಳವಣಿಗೆ ಕಾಣುತ್ತೀರಿ.
ಸ್ವಾತಿ ನಕ್ಷತ್ರದವರ ಆರ್ಥಿಕ ಜೀವನ
ಹಣಕಾಸಿನ ವಿಷಯದಲ್ಲಿ 2023 ಮಿಶ್ರಫಲ. ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುವುದು. ಆರ್ಥಿಕ ಸವಾಲುಗಳನ್ನು ಸುಲಭವಾಗಿ ನಿಭಾಯಿಸಲು ಸಾಧ್ಯವಾಗುವುದು. ಆದರೆ ಅತಿಯಾದ ಆತ್ಮವಿಶ್ವಾಸ ಬೇಡ, ಹಾಗೆ ಮಾಡಿದರೆ ಸಮಸ್ಯೆ ಸುತ್ತಿಕೊಳ್ಳುವುದು. ಕೆಲವೊಂದು ಆರ್ಥಿಕ ತೊಂದರೆಗಳಿದ್ದರೂ ಅವೆಲ್ಲಾ ಸಮರ್ಥವಾಗಿ ಎದುರಿಸಲು ಸಾಧ್ಯವಾಗುವುದು. ಏನಾದರೂ ಸಾಲವಿದ್ದರೆ ಈ ವರ್ಷದಲ್ಲಿ ಮರುಪಾವತಿ ಮಾಡುವಿರಿ.
ಸ್ವಾತಿ ನಕ್ಷತ್ರದವರ ಕೌಟುಂಬಿಕ ಜೀವನ
2023ರಲ್ಲಿ ನಿಮ್ಮ ವೈಯಕ್ತಿಕ ಬದುಕಿನಲ್ಲಿ ಕೆಲವೊಂದು ಬದಲಾವಣೆ ಕಾಣುವಿರಿ. ಏಪ್ರಿಲ್‌ನಿಂದ ಮೇ ತಿಂಗಳವರೆಗೆ ನಿಮ್ಮ ಬದುಕಿನಲ್ಲಿ ಋಣಾತ್ಮಕ ಪ್ರಭಾವವಿರುತ್ತದೆ, ಈ ಸಮಯದಲ್ಲಿ ಎಚ್ಚರಿಕೆಯಿಂದ ಪರಿಸ್ಥಿತಿ ನಿಭಾಯಿಸಿ. ಕೋಪಕ್ಕಿಂತ ತಾಳ್ಮೆ ಪ್ರಯೋಜನಕಾರಿಯಾಗಿದೆ. ವರ್ಷದ ಎರಡನೇ ಭಾಗದಲ್ಲಿ ಎಲ್ಲಾ ಸಮಸ್ಯೆಗಳು ಬಗೆಹರಿದು ನೆಮ್ಮದಿಯ ಬದುಕು ನಡೆಸುತ್ತೀರಿ.
ಸ್ವಾತಿ ನಕ್ಷತ್ರದವರ ಆರೋಗ್ಯ ಜೀವನ
ಸ್ವಾತಿ ನಕ್ಷತ್ರದವರ ಆರೋಗ್ಯ 2023ರಲ್ಲಿ ಚೆನ್ನಾಗಿರಲಿದೆ. ಆದರೆ ಹೊಟ್ಟೆ ಸಂಬಂಧಿಸಿದ ಆರೋಗ್ಯದ ಕಡೆ ಗಮನ ಹರಿಸಿ, ಆರೋಗ್ಯಕರ ಜೀವನಶೈಲಿ ಪಾಲಿಸಿ.



Click it and Unblock the Notifications











