Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಡಿಸೆಂಬರ್‌ನಲ್ಲಿ ಸೂರ್ಯ-ಶುಕ್ರ-ಬುಧ ಯುತಿ: ಈ 3 ರಾಶಿಯವರಿಗೆ ಡಿ. 28ರವರೆಗೆ ಲಕ್ಷ್ಮಿ ಯೋಗ
ವೈದಿಕ ಶಾಸ್ತ್ರದ ಪ್ರಕಾರ ಯಾವುದಾದರೂ ರಾಶಿಗೆ ಒಂದಕ್ಕಿಂತ ಹೆಚ್ಚು ಗ್ರಹಗಳ ಸಂಚಾರವಾದರೆ ಆ ರಾಶಿಯಲ್ಲಿ ಆ ಗ್ರಹಗಳ ಸಂಯೋಗ ಉಂಟಾಗುವುದು, ಇದನ್ನು ಯುತಿ ಎಂದು ಕರೆಯಲಾಗುವುದು. ಇದೀಗ ಧನು ರಾಶಿಯಲ್ಲಿ ಬುಧ-ಶುಕ್ರ-ಸೂರ್ಯ ಯುತಿ ಏರ್ಪಟ್ಟಿದೆ.
ಈ ರೀತಿ ಗ್ರಹಗಳ ಸಂಯೋಗವಾದಗ ಅದರ ಪ್ರಭಾವ ರಾಶಿಗಳ ಮೇಲೂ ಉಂಟಾಗುವುದು. ಕೆಲವೊಂದು ರಾಶಿಗಳು ಈ ಸಮಯದಲ್ಲಿ ತುಂಬಾನೇ ಪ್ರಯೋಜನ ಪಡೆಯುತ್ತವೆ. ಇದೀಗ ಧನು ರಾಶಿಯಲ್ಲಿ 3 ಗ್ರಹಗಳ ಸಂಯೋಜನೆ ಯಾಗಿದೆ. ಇದರ ಅದೃಷ್ಟದ ಫಲ ವರ್ಷದ ಕೊನೆಯ 15 ದಿನಗಳವರೆಗೆ ಇರಲಿದೆ.

ಧನು ರಾಶಿಯಲ್ಲಿ ಈಗಾಗಲೇ ಬುಧ-ಶುಕ್ರ -ಸೂರ್ಯ ಸಂಯೋಗ
ಧನು ರಾಶಿಯಲ್ಲಿ ಈಗಾಗಲೇ ಬುಧ-ಶುಕ್ರ ಸಂಯೋಗವಾಗಿತ್ತು, ಡಿಸೆಂಬರ್ 16ಕ್ಕೆ ಸೂರ್ಯ ಸಂಚಾರ ಮಾಡಿರುವುದರಿಂದ ಬುಧ-ಶುಕ್ರ-ಸೂರ್ಯ ಯುತಿ ಏರ್ಪಟ್ಟಿದೆ. ಈ ಪ್ರಭಾವ ಡಿಸೆಂಬರ್ 28ರವರೆಗೆ ಇರಲಿದೆ.
ಡಿಸೆಂಬರ್ 28ಕ್ಕೆ ಬುಧನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ, ನಂತರ ಮಾರನೇಯ ದಿನ ಅಂದರೆ ಡಿಸೆಂಬರ್ 29ಕ್ಕೆ ಶುಕ್ರ ಕೂಡ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ, ಅಂದರೆ ಡಿಸೆಂಬರ್ 16 ರಿಂದ ಡಿಸೆಂಬರ್ 28 ರವರೆಗೆ ಧನು ರಾಶಿಯಲ್ಲಿ ಸೂರ್ಯ, ಬುಧ ಮತ್ತು ಶುಕ್ರನ ಸಂಯೋಗವಿರುತ್ತದೆ, ಈ ಸಂಯೋಗ ಕೆಲವೊಂದು ರಾಶಿಗಳಿಗೆ ಅದೃಷ್ಟದ ಯೋಗ ಸೃಷ್ಟಿಸಿದೆ.
ಈ 3 ಗ್ರಹಗಳ ಸಂಯೋಗದೊಂದಿಗೆ, ಲಕ್ಷ್ಮಿ ಯೋಗ ಮತ್ತು ಬುದ್ಧ ಆದಿತ್ಯ ಯೋಗವೂ ಸಹ ಸೃಷ್ಟಿಯಾಗಿದೆ. ಆದ್ದರಿಂದ ಈ ಮೂರು ಗ್ರಹಗಳು ಈ ಸಮಯದಲ್ಲಿ ತುಂಬಾನೇ ಒಳ್ಳೆಯ ಸಮಯ ಅನುಭವಿಸಲಿದ್ದಾರೆ.

ಮೇಷ ರಾಶಿ
ಮೇಷ - ಈ ರಾಶಿಯವರಿಗೆ ಈ ಯೋಗವು ಅದೃಷ್ಟದ ಸ್ಥಾನದಲ್ಲಿದೆ. ಈ ಅವಧಿಯಲ್ಲಿ ನೀವು ಷೇರು ಮಾರುಕಟ್ಟೆಯಿಂದ ಉತ್ತಮ ಲಾಭವನ್ನು ಗಳಿಸುವ ಸಾಧ್ಯತೆ ಕಾಣುತ್ತಿದೆ. ಈ ಸಮಯದಲ್ಲಿ, ಕುಟುಂಬದ ಸಹಾಯದಿಂದ, ನೀವು ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಈ ಸಮಯದಲ್ಲಿ, ಪ್ರೇಮ ವಿವಾಹಕ್ಕೆ ಪ್ರಯತ್ನಿಸುತ್ತಿದ್ದರೆ ನಿಮ್ಮಿಬ್ಬರ ಸಂಬಂಧಕ್ಕೆ ಮನೆಯವರ ಒಪ್ಪಿಗೆ ಸಿಕ್ಕಿ ಮದುವೆ ಮತುಕತೆ ನಡೆಯಬಹುದು, ಆದ್ದರಿಂದ ಪ್ರೇಮಿಗಳಿಗೆ ಈ ಸಮಯ ತುಂಬಾನೇ ಅನುಕೂಲಕರ. ನೀವು ಬ್ಯಾಂಕ್‌ನಲ್ಲಿ ಸಾಲಕ್ಕಾಗಿ ಪ್ರಯತ್ನಿಸುತ್ತಿದ್ದರೆ ಈ ಅವಧಿಯಲ್ಲಿ ಸಿಗಲಿದೆ. ಉದ್ಯೋಗಿಗಳು ಈ ಅವಧಿಯಲ್ಲಿ ಕೆಲಸದಲ್ಲಿ ಪ್ರಗತಿ ಕಾಣುತ್ತಾರೆ, ಉದ್ಯಮಿಗಳು, ವ್ಯಾಪಾರಸ್ಥರು ಲಾಭವನ್ನು ಪಡೆಯುತ್ತಾರೆ. ಒಟ್ಟಿನಲ್ಲಿ ಈ ಅವಧಿ ನಿಮಗೆ ತುಂಬಾನೇ ಅನುಕೂಲಕರವಾಗಿದೆ.

ಸಿಂಹ ರಾಶಿ
ಈ ರಾಶಿಯವರರಲ್ಲಿ ಐದನೇ ಸ್ಥಾನದಲ್ಲಿಈ ಯೋಗ ಏರ್ಪಟ್ಟಿರುವುದರಿಂದ ಈ ಅವಧಿ ಒಳ್ಳೆಯ ಪರಿಣಾಮ ಬೀರಲಿದೆ. ಈ ಸಮಯದಲ್ಲಿ ನಿಮಗೆ ಕೆಲಸದ ಸ್ಥಳದಲ್ಲಿ ಕೆಲವು ದೊಡ್ಡ ಜವಾಬ್ದಾರಿಯನ್ನು ನೀಡಬಹುದು. ನೀವು ಎಲ್ಲಾ ಕಡೆಯಿಂದ ಹಣವನ್ನು ಪಡೆಯುವ ಸಾಧ್ಯತೆಗಳಿವೆ. ಆದ್ದರಿಂದ ಚಿಂತಿಸಬೇಕಾಗಿಲ್ಲ, ಸರ್ಕಾರದೊಂದಿಗೆ ಸಂಬಂಧ ಹೊಂದಿರುವವರು ಉನ್ನತ ಸ್ಥಾನವನ್ನು ಪಡೆಯಬಹುದು. ಈ ಸಮಯದಲ್ಲಿ ನೀವು ಹೊಸ ಕೆಲಸವನ್ನು ಪ್ರಾರಂಭಿಸಲು ಹಣವನ್ನು ಪಡೆಯಬಹುದು. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವವರಿಗೆ ಯಶಸ್ಸು ಸಿಗುವ ಸಾಧ್ಯತೆ ಇದೆ. ಮಾಧ್ಯಮ, ಬರವಣಿಗೆ ಮತ್ತು ಸಿನಿಮಾಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿರುವವರು ಈ ಸಮಯದಲ್ಲಿ ಖ್ಯಾತಿಯನ್ನು ಗಳಿಸುತ್ತಾರೆ. ವ್ಯಾಪಾರ ವರ್ಗದವರು ಉತ್ತಮ ಲಾಭವನ್ನು ಪಡೆಯುತ್ತಾರೆ. ನಿಮಗೂ ಕೂಡ ಈ ಅವಧಿ ಅನುಕೂಲಕರವಾಗಿದೆ.

ಧನು ರಾಶಿ
ಈ ರಾಶಿಯವರಿಗೆ ಬುಧ-ಶುಕ್ರ-ಸೂರ್ಯ ತ್ರಿಗ್ರಾಹಿ ಯೋಗವು ಮೊದಲ ಮನೆಯಲ್ಲಿ ಅಂದರೆ ನಿಮ್ಮ ಲಗ್ನ ಮನೆಯಲ್ಲಿ ರೂಪುಗೊಂಡಿದೆ. ಇದರಿಂದಾಗಿ ಇದು ನಿಮಗೆ ತುಂಬಾನೇ ಅದೃಷ್ಟದ ಸಮಯ. ಲಗ್ನದಲ್ಲಿ ಅದೃಷ್ಟದ ಅಧಿಪತಿ, ದಶಮ ಮತ್ತು ಲಾಭದ ಮನೆಯ ಸಂಯೋಗವು ನಿಮಗೆ ಎಲ್ಲಾ ಕಡೆಯಿಂದಲೂ ಅದೃಷ್ಟವನ್ನು ಬೆಂಬಲಿಸುತ್ತದೆ. ಈ ಸಮಯವನ್ನು ನೀವು ತುಂಬಾ ಖುಷಿಯಾಗಿ ಕಳೆಯುತ್ತೀರಿ. ಈ ಸಮಯದಲ್ಲಿ ನೀವು ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ, ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಅವಿವಾಹಿತರ ವಿ ಮದುವೆ ಮಾತುಕತೆ ನಡೆದರೆ ಆ ಸಂಬಂಧ ಕೂಡಿ ಬರಲಿದೆ. ಸೌಂದರ್ಯವರ್ಧಕಗಳ ವ್ಯಾಪಾರದೊಂದಿಗೆ ಸಂಬಂಧ ಹೊಂದಿರುವವರು ಈ ಅವಧಿಯಲ್ಲಿ ಉತ್ತಮ ಲಾಭವನ್ನು ಗಳಿಸುತ್ತಾರೆ.
ಡಿಸೆಂಬರ್ 28ರವರೆಗೆ ಈ 3 ರಾಶಿಯವರಿಗೆ ಮುಟ್ಟಿದ್ದೆಲ್ಲವೂ ಚಿನ್ನ ಎಂದು ಹೇಳಬಹುದು.



Click it and Unblock the Notifications











