Latest Updates
-
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ? -
IND vs NZ 1st ODI: ಈಡನ್ ಪಾರ್ಕ್ನಲ್ಲಿ ಸಿಕ್ಸರ್ಗಳ ಸುರಿಮಳೆ, ಫ್ಯಾಂಟಸಿ ಟೀಮ್ಗೆ ಯಾರನ್ನು ಆರಿಸಬೇಕು? -
ದೆಹಲಿ-ಎನ್ಸಿಆರ್ನಲ್ಲಿ ತೀವ್ರ ವಾಯು ಮಾಲಿನ್ಯ: ನಿಮ್ಮ ಶ್ವಾಸಕೋಶವನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ತ್ವರಿತ ಗೈಡ್ -
ದೆಹಲಿ ಮಾಲಿನ್ಯದ ಹೊಡೆತ: ಶ್ವಾಸಕೋಶದ ಆರೋಗ್ಯ ಕಾಪಾಡಲು ಇಂದೇ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ!
ಫೆ. 29ರ ಹಿಂದಿರುವ ನಂಬಿಕೆ, ಮೂಢನಂಬಿಕೆಗಳಿವು
ಪ್ರತೀ ನಾಲ್ಕು ವರ್ಷಕ್ಕೊಮ್ಮೆ ಅಧಿಕವರ್ಷ ಬರುತ್ತದೆ. ಸಾಮಾನ್ಯವಾಗಿ ಫೆಬ್ರವರಿ ತಿಂಗಳಿನಲ್ಲಿ 28 ದಿನಗಳಿರುತ್ತದೆ, ಆದರೆ ಈ ಅಧಿಕ ವರ್ಷದಲ್ಲಿ ಮಾತ್ರ 29 ದಿನಗಳಿರುತ್ತದೆ. ಈ ಅಧಿಕ ವರ್ಷದ ಬಗ್ಗೆ ವಿಶ್ವದಲ್ಲಿ ಹಲವಾರು ನಂಬಿಕೆಗಳಿವೆ. ಕೆಲವರು ಅಧಿಕ ವರ್ಷವನ್ನು ಒಳ್ಳೆಯದು ಅಂದ್ರೆ, ಇನ್ನು ಕೆಲವರು ಕೆಟ್ಟದ್ದು ಅಂತಾರೆ.

ಈ ಅಧಿಕ ವರ್ಷದ ಬಗ್ಗೆ ಹಲವಾರು ನಂಬಿಕೆ, ಮೂಢನಂಬಿಕೆಗಳಿವೆ, ಇಲ್ಲಿ ನಾವು ಅವುಗಳ ಬಗ್ಗೆ ಹೇಳಿದ್ದೇವೆ ನೋಡಿ:

ಐರಿಷ್ಯವರ ಪ್ರಕಾರ ಒಳಿತು ಉಂಟಾಗುತ್ತದೆ
ಫೆಬ್ರವರಿ 29 ಒಳಿತನ್ನು ಉಂಟು ಮಾಡುತ್ತದೆ ಎನ್ನುವುದು ಐರಿಷ್ರವರ ನಂಬಿಕೆ. ಏಕೆಂದರೆ ಈ ದಿನ ಆ ದೇಶದಲ್ಲಿ ಹೆಣ್ಮಕ್ಕಳು ತಮ್ಮ ಬಾಯ್ಫ್ರೆಂಡ್ಗೆ ಪ್ರಪೋಸ್ ಮಾಡಬಹುದು. 5ನೇ ಶತಮಾನದಲ್ಲಿ ಸಂತೆ ಕಿಲ್ದಾರೆ ಸಮತ ಪ್ಯಾಟ್ರಿಕ್ ಬಳಿ ಹೋಗಿ ಮಹಿಳೆಯರು ಪುರುಷರನ್ನು ಪ್ರಪೋಸ್ ಮಾಡಲು ಅವಕಾಶ ನೀಡುವಂತೆ ಮನವೊಲಿಸಿ, ಆತನನ್ನು ಪ್ರಪೋಸ್ ಮಾಡುತ್ತಾಳೆ. ಆದರೆ ಪ್ಯಾಟ್ರಿಕ್ ಆತನ ಪ್ರಪೋಸಲ್ ಸ್ವೀಕರಿಸುವುದಿಲ್ಲ, ಬದಲಿಗೆ ಆಕೆಗೆ ರೇಷ್ಮೆಯ ಗೌನ್ ನೀಡಿ ಕಳುಹಿಸುತ್ತಾನೆ. ಆತಸಾಯುವಾಗ ಆಕೆಗೆ 9 ವರ್ಷ ಆಗಿತ್ತು ಅಷ್ಟೇ ಎಂಬ ಕತೆಗಳಿವೆ. ಹೀಗೆ ಮಹಿಳೆಯರಿಗೆ ನಾಲ್ಕು ವರ್ಷಕ್ಕೊಮ್ಮೆ ಅವರು ಇಷ್ಟಪಡುವ ಹುಡುಗನಿಗೆ ಪ್ರಪೋಸ್ ಮಾಡುವ ಅವಕಾಶ ನೀಡಲಾಯಿತು. ಈ ಪದ್ಧತಿ ಇಂದಿಗೂ ಚಾಲ್ತಿಯಲ್ಲಿದೆ.

ಯೂರೋಪ್ ಅವರ ಪ್ರಕಾರ ಅಶುಭ ಉಂಟಾಗುವುದು
ಗ್ರೀಸ್, ಇಟಲಿ, ಸ್ಕಾಟ್ಲ್ಯಾಂಡ್ ದೇಶಗಳಲ್ಲಿ ಫೆ. 29ನ್ನು ಅಶುಭ ಎಂದು ಪರಿಗಣಿಸಲಾಗುವುದು. ಸ್ಕಾಟ್ಲ್ಯಾಂಡ್ ಜನರ ಪ್ರಕಾರ 1288ರಲ್ಲಿ ರಾಣಿ ಮಾರ್ಗರೇಟ್ ಫೆ. 29ಕ್ಕೆ ಮಹಿಳೆಯರು ಕೆಂಪು ಲಂಗ ಧರಿಸಿ ಪ್ರಪೋಸ್ ಮಾಡಬಹುದು ಎಂಬ ಕಾನೂನು ತಂದರು, ಆದರೆ ಆ ಕಾನೂನು ಜಾರಿಗೆ ತರುವಾಗ ಆಕೆಯ ವಯಸ್ಸು ಬರೀ ಐದು, ಆದ್ದರಿಂದ ಆ ಕಾನೂನು ಅನ್ನು ಪರಿಗಣಿಸಲಾಗಲಿಲ್ಲ ಎಂಬ ಕತೆಗಳು ಇವೆ, ಆದರೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇತಿಹಾಸಗಾರರಿಗೂ ಸಿಕ್ಕಿಲ್ಲ.
ಇನ್ನು ಗ್ರೀಕ್ರ ಪ್ರಕಾರ ಫೆ. 29 ಹಾಗೂ ಆ ಇಡೀ ವರ್ಷ ಅಶುಭ ಎಂದು ಪರಿಗಣಿಸಲಾಗಿದೆ. ಅಧಿಕ ವರ್ಷದಲ್ಲಿ ಮದುವೆಯಾಗುವುದಿಲ್ಲ. ಮದುವೆ ನಿಶ್ಚಯವಾದ ಜೋಡಿ ಈ ವರ್ಷ ಮದುವೆಯಾಗುವುದಿಲ್ಲ.
ಇನ್ನು ಗ್ರೀಕ್ನಂತೆ ಇಟಲಿಯಲ್ಲಿ ಕೂಡ ಅಧಿಕ ವರ್ಷವನ್ನು ಅಶುಭವೆಂದು ಪರಿಗಣಿಸಲಾಗುವುದು. ಇನ್ನು ಈ ವರ್ಷದಲ್ಲಿ ಯಾವುದೇ ಮನೆ ಕೊಳ್ಳುವುದಾಗಲಿ, ಹೊಸ ಗಾಡಿ ಕೊಳ್ಳುವುದಾಗಲಿ ಮಾಡುವುದಿಲ್ಲ.

ಅಧಿಕ ವರ್ಷದ ಬಗ್ಗೆ ಇರುವ ಧಾರ್ಮಿಕ ನಂಬಿಕೆಗಳು
ಕೆಲವೊಂದು ಸಮುದಾಯದಲ್ಲಿ ಫೆ. 29ರಂದು ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಏನಾದರೂ ಕಲಿಯಲು, ಗುಣಪಡಿಸಲು, ಪ್ರೀತಿಸಲು ಈ ದಿನ ಶುಭ ಎಂದು ಪರಿಗಣಿಸುತ್ತಾರೆ.
ಸಂಖ್ಯಾಶಾಸ್ತ್ರದ ಪ್ರಕಾರ 29ಕ್ಕೆ ವಿಶೇಷ ಅರ್ಥವಿದೆ. ಆ ದಿನ ಪ್ರಾರ್ಥನೆ ಮಾಡುವುದರಿಂದ ನಮ್ಮ ಮನಸ್ಸಿನಲ್ಲಿರುವ ಬಯಕೆಗಳು ನೆರವೇರುವುದು ಎಂದು ನಂಬಲಾಗಿದೆ.

ಅಧಿಕ ವರ್ಷ ಹಾಗೂ ಸಾವು
ಅಧಿಕ ವರ್ಷಕ್ಕೆ ಸಂಬಂಧಿಸಿದ ಸಾಮಾನ್ಯವಾದ ನಂಬಿಕೆಯೆಂದರೆ ಈ ವರ್ಷದಲ್ಲಿ ಅಧಿಕ ಸಾವು ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ. ಇತರ ವರ್ಷಕ್ಕಿಂತ 1 ದಿನ ಈ ವರ್ಷ ಹೆಚ್ಚು ಸಿಗುತ್ತದೆ, ಆದರೆ ಇಂಥ ವರ್ಷದಲ್ಲಿ ಹೆಚ್ಚು ಸಾವು ಸಂಭವಿಸುವುದು ಎಂದು ಹೇಳಲಾಗುವುದು.



Click it and Unblock the Notifications
