For Quick Alerts
ALLOW NOTIFICATIONS  
For Daily Alerts

ಸೆ. 16ಕ್ಕೆ ಕನ್ಯಾ ರಾಶಿಗೆ ಸೂರ್ಯ ಸಂಚಾರ 2020: ಇದರಿಂದ ಯಾವ ರಾಶಿಗಳಿಗೆ ತುಂಬಾ ಅದೃಷ್ಟ?

|

ಜ್ಯೋತಿಷ್ಯದಲ್ಲಿ ಸೂರ್ಯನು ರಾಶಿಯಿಂದ-ರಾಶಿಯಿಂದ ಸಂಚರಿಸುವುದಕ್ಕೆ ತುಂಬಾ ಮಹತ್ವವನ್ನು ನೀಡಲಾಗಿದೆ. ಜ್ಯೋತಿಷ್ಯದಲ್ಲಿ ಸೂರ್ಯನಿಗೆ ರಾಜನ ಸ್ಥಾನವನ್ನು ನೀಡಲಾಗಿದೆ. ಆದ್ದರಿಂದ ಸೂರ್ಯನ ಈ ಸಂಚಾರವು ರಾಶಿಗಳ ಮೇಲೆ ಪ್ರಭಾವ ಬೀರುವುದು ಎಂದು ಹೇಳಲಾಗುತ್ತದೆ. ಸೂರ್ಯನ ಈ ರೀತಿಯ ಸಂಚಾರವನ್ನು ಸೂರ್ಯ ಸಂಕ್ರಾಂತಿ ಎಂದು ಕೂಡ ಕರೆಯುತ್ತಾರೆ. ಸೂರ್ಯನು ಕನ್ಯಾರಾಶಿಗೆ ಸಂಚರಿಸಿದಾಗ ಜ್ಯೋತಿಷ್ಯ ಪ್ರಕಾರ ರಾಶಿಗಳ ಮೇಲಾಗುವ ಪರಿಣಾಮಗಳೇನು ಎಂದು ತಿಳಿಯೋಣ:

Sun Transit in Virgo on 16 September 2020 Effects on Zodiac Signs in Kannada

ಮೇಷರಾಶಿಯವರಲ್ಲಿ ಆರನೇ ಮನೆಗೆ ಸೂರ್ಯನು ಸಂಚರಿಸಲಿದ್ದಾನೆ. ಆರನೇಯ ಮನೆಯ ಮೂಲಕ ರೋಗ, ಋಣ, ಶತ್ರುಗಳು ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಮೇಷರಾಶಿಯ ಜನರು ಈ ಸಮಯದಲ್ಲಿ ತಮ್ಮ ಶತ್ರುಗಳನ್ನು ಮಣಿಸುವುದರಲ್ಲಿ ಯಶಸ್ವಿಯಾಗುತ್ತಾರೆ.

1. ಮೇಷ ರಾಶಿ

1. ಮೇಷ ರಾಶಿ

ಮೇಷರಾಶಿಯವರಲ್ಲಿ ಆರನೇ ಮನೆಗೆ ಸೂರ್ಯನು ಸಂಚರಿಸಲಿದ್ದಾನೆ. ಆರನೇಯ ಮನೆಯ ಮೂಲಕ ರೋಗ, ಋಣ, ಶತ್ರುಗಳು ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಮೇಷರಾಶಿಯ ಜನರು ಈ ಸಮಯದಲ್ಲಿ ತಮ್ಮ ಶತ್ರುಗಳನ್ನು ಮಣಿಸುವುದರಲ್ಲಿ ಯಶಸ್ವಿಯಾಗುತ್ತಾರೆ. ಇನ್ನು ಹೊಸ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರೆ ಶುಭ ಫಲ ದೊರೆಯುವುದು. ಉದ್ಯೋಗದಲ್ಲಿಯೂ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಇನ್ನು ವ್ಯಾಪಾರಸ್ಥರು ಇರುವ ಪರಿಸ್ಥಿತಿಯನ್ನೇ ಉತ್ತಮಗೊಳಿಸಲು ಪ್ರಯತ್ನಿಸಬೇಕು, ವ್ಯಾಪಾರ ವಿಸ್ತರಣೆಗೆ ಮುಂದಾಗಬೇಡಿ.

ಇನ್ನು ಪ್ರೀತಿ ವಿಷಯದಲ್ಲಿ ಹೇಳುವುದಾದರೆ ನೀವು ತೋರುವ ನಿರ್ಲಕ್ಷ್ಯದಿಂದಾಗಿ ಸಂಗಾತಿಗೆ ಅಸಮಧಾನ ಉಂಟಾಗಬಹುದು. ಇನ್ನು ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಮಕ್ಕಳ ಆರೋಗ್ಯದ ಕಡೆ ಗಮನ ನೀಡಬೇಕು, ನಿಮ್ಮ ಆರೋಗ್ಯ ಉತ್ತಮವಾಗಿರುವುದು.

ಪರಿಹಾರ - ಪ್ರತಿದಿನ ಸೂರ್ಯೋದಯದ ಸಮಯದಲ್ಲಿ ಸೂರ್ಯನಿಗೆ ನಮಸ್ಕರಿಸಿ, ನೀರು ಅರ್ಪಿಸಿ.

2. ವೃಷಭ ರಾಶಿ

2. ವೃಷಭ ರಾಶಿ

ವೃಷಭ ರಾಶಿಯವರಲ್ಲಿ ಸೂರ್ಯನು 5ನೇ ಮನೆಗೆ ಪ್ರವೇಶಿಸಲಿದ್ದಾನೆ. ಈ ಮನೆಯನ್ನು ಪ್ರೀತಿ, ಶಿಕ್ಷಣದ ಮನೆಯೆಂದು ಪರಿಗಣಿಸಲಾಗಿದೆ. ಆದ್ದರಿಂದ ಈ ರಾಶಿಯವರಿಗೆ ಈ ಕ್ಷೇತ್ರಗಳಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.

ಇನ್ನು ಪ್ರೀತಿಯ ವಿಷಯ ನೋಡುವುದಾದರೆ ಸಂಗಾತಿಯ ಮನಸ್ಸನ್ನು ಅರಿತುಕೊಳ್ಳದೆ ಮನಸ್ತಾಪ ಉಂಟಾಗಬಹುದು, ಅಲ್ಲದೆ ವೈವಾಹಿಕ ಜೀವನದಲ್ಲಿ ಅನಗ್ಯತ ವಾದ-ಚರ್ಚೆಗಳಿಗೆ ಆಸ್ಪದ ನೀಡದಿರುವುದು ಒಳ್ಳೆಯದು. ಇನ್ನು ಮಕ್ಕಳಿದ್ದರೆ ಅವರ ನಡುವಳಿಕೆ ಸ್ವಲ್ಪ ಕಿರಿಕಿರಿ ಉಂಟು ಮಾಡಬಹುದು, ಅವರನ್ನು ಸಮಧಾನದಿಂದ ತಿದ್ದಲು ಪ್ರಯತ್ನಿಸಿ.

ಅಲ್ಲದೆ ನಿಮ್ಮ ಅಹಂನ ಮೇಲೆ ನಿಯಂತ್ರಣ ಸಾಧಿಸಿ, ಇಲ್ಲದಿದ್ದರೆ ತೊಂದರೆಗೆ ಒಳಗಾಗುವಿರಿ.

ಪರಿಹಾರ - ಪ್ರತಿದಿನ ಸೂರ್ಯಾಷ್ಟಕಂ ಪಠಿಸುವುದು ಒಳ್ಳೆಯದು.

3. ಮಿಥುನ ರಾಶಿ

3. ಮಿಥುನ ರಾಶಿ

ಮಿಥುನ ರಾಶಿಯವರಲ್ಲಿ ಸೂರ್ಯನು ನಾಲ್ಕನೇ ಮನೆಗೆ ಸಂಚಾರ ಮಾಡಲಿದ್ದಾನೆ. ನಾಲ್ಕನೇ ಮನೆಯನ್ನು ಕುಟುಂಬದ ಮನೆಯೆಂದು ಹೇಳಲಾಗುವುದು. ಆದ್ದರಿಮದ ಮನೆಯಲ್ಲಿ ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿ. ಯಾವುದೇ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆ ಕೂಡ ನಿರ್ಲಕ್ಷ್ಯ ಮಾಡದಿರುವುದು ಒಳ್ಳೆಯದು.

ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ, ಆದರೆ ಹೂಡಿಕೆ ಮಾಡುವುದು ಯಾವುದೇ ಆಸ್ತಿ ಖರೀದಿ ಈ ಸಮಯದಲ್ಲಿ ಮಾಡದಿರುವುದು ಒಳ್ಳೆಯದು.

ಪರಿಹಾರ - ಉತ್ತಮ ಫಲಿತಾಂಶಕ್ಕಾಗಿಸೂರ್ಯ ಬೀಜ ಮಂತ್ರ ಜಪಿಸಿ.

4. ಕರ್ಕ ರಾಶಿ

4. ಕರ್ಕ ರಾಶಿ

ಕರ್ಕರಾಶಿಯವರಲ್ಲಿ ಮೂರನೇ ಮನೆಗೆ ಸೂರ್ಯನು ಸಂಚರಿಸಲಿದ್ದಾನೆ. ಈ ಮನೆಯನ್ನು ಧೈರ್ಯ ಹಾಗೂ ಶಕ್ತಿಯ ಮನೆಯೆಂದು ಹೇಳಲಾಗುವುದು. ಆದ್ದರಿಂದ ಬದುಕಿನಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಆಗಲಿದೆ. ಈ ಸಂಚಾರವು ಕರ್ಕ ರಾಶಿಚಕ್ರದ ಸ್ಥಳೀಯರ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಕುಟುಂಬದ ಸದಸ್ಯರ ಬೆಂಬಲ ನಿಮಗೆ ಇರುವುದು.

ಇನ್ನು ಆರ್ಥಿಕ ಪರಿಸ್ಥಿತಿ ಕೂಡ ಸುಧಾರಿಸುವುದು. ವ್ಯಾಪಾರಸ್ಥರು ನಿಮ್ಮ ಮಾತಿನ ಕೌಶಲ್ಯದಿಂದಲೇ ಮತ್ತಷ್ಟು ವ್ಯಾಪಾರ ಕುದುರಿಸುವಿರಿ. ಇನ್ನು ಉದ್ಯೋಗದಲ್ಲಿ ಇರುವವರು ನೀಡಿರುವ ಕೆಲಸವನ್ನು ಪೂರ್ಣಗೊಳಿಸಿ, ನಂತರ ಹೊಸ ಕೆಲಸ ಪ್ರಾರಂಭಿಸಿ.

ಪರಿಹಾರ - ಸೂರ್ಯ ದೇವನನ್ನು ಪೂಜಿಸಿ, ಬಡವರಿಗೆ ದಾನ ಮಾಡಿ.

5. ಸಿಂಹ ರಾಶಿ

5. ಸಿಂಹ ರಾಶಿ

ಸಿಂಹ ರಾಶಿಯವರಲ್ಲಿ ಎರಡನೇ ಮನೆಗೆ ಸೂರ್ಯನು ಸಂಚರಿಸುವುದರಿಂದ ತುಂಬಾ ಶುಭ ಎಂದು ಪರಿಗಣಿಸಲಾಗಿದೆ. ಸಿಂಹರಾಶಿಯವರಲ್ಲಿ ನಾಯಕತ್ವದ ಗುಣವಿರುತ್ತದೆ, ನಿಮ್ಮ ಈ ಸಾಮಾರ್ಥ್ಯ ಮತ್ತಷ್ಟು ಅಧಿಕವಾಗುವುದು, ನಿಮ್ಮ ಮಾತುಗಳಿಂದ ನಿಮ್ಮ ಕೆಳಗೆ ಕೆಲಸ ಮಾಡುವವರನ್ನು ಕೆಲಸ ಮತ್ತಷ್ಟು ಚಾಕಚಕ್ಯತೆಯಿಂದ ಮಾಡುವಂತೆ ಪ್ರಭಾವಿಸಬಹುದು. ಅಲ್ಲದೆ ಈ ದಿನಗಳಲ್ಲಿ ನಿಮ್ಮ ಅಹಂಕಾರದ ವರ್ತನೆಗೆ ಕಡಿವಾಣ ಹಾಕಿದರೆ ಒಳ್ಳೆಯದು.

ಪರಿಹಾರ: ತಂದೆಯವರಿಗೆ ಏನಾದರು ಉಡುಗೊರೆ ನೀಡಿ.

6. ಕನ್ಯಾ ರಾಶಿ

6. ಕನ್ಯಾ ರಾಶಿ

ಕನ್ಯಾ ರಾಶಿಯವರ ಅಧಿಪತಿ ಸೂರ್ಯನು ಆಗಲಿದ್ದಾನೆ. ಲಗ್ನದ ಮನೆಯ ಮೂಲಕ ನಿಮ್ಮ ಚಿತ್ರ, ವ್ಯಕ್ತಿತ್ವ, ಅರೋಗ್ಯ, ಸ್ವಭಾವ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಕನ್ಯಾ ರಾಶಿಯವರಿಗೆ ಸೂರ್ಯ ಸಂಚಾರದಿಂದಾಗಿ ಅಧಿಕ ಸವಾಲುಗಳು ಎದುರಾಗಬಹುದು, ಇನ್ನು ಆರೋಗ್ಯದ ಕಡೆಯೂ ಹೆಚ್ಚು ಜಗ್ರತೆವಹಿಸುವುದು ಒಳ್ಳೆಯದು. ಅಲ್ಲದೆ ಈ ರಾಶಿಯವರು ಕೆಲಸದಲ್ಲಿ ಪರಿಪೂರ್ಣತೆ ಬಯಸುವುದರಿಂದ ಸಹದ್ಯೋಗಿಗಳ ಜೊತೆ ಕಠೋರವಾದ ಮಾತು ಪ್ರಯೋಗ ಮಾಡಬಹುದು. ಹಾಗಾದಂತೆ ಎಚ್ಚರವಹಿಸಿ. ಇನ್ನು ಕೌಟಂಬಿಕ ಜೀವನದಲ್ಲಿಯೂ ಏರಳಿತ ಉಂಟಾಗುವುದು, ಎಲ್ಲವನ್ನು ತಾಳ್ಮೆಯಿಂದ ನಿಭಾಯಿಸಿ, ನಿಮ್ಮ ನಿಲುವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ಹಿಂಜರಿಕೆ ಬೇಡ.

ಪರಿಹಾರ - ರವಿವಾರ ಬೆಲ್ಲದ ದಾನ ಮಾಡಿ.

7. ತುಲಾ ರಾಶಿ

7. ತುಲಾ ರಾಶಿ

ತುಲಾ ರಾಶಿಗೆ ಹನ್ನೆರಡನೇ ಮನೆಗೆ ಸೂರ್ಯ ಸಾಗಲಿದ್ದಾನೆ. ವಿದೇಶಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವವರು ಅಥವಾ ವಿದೇಶಕ್ಕೆ ಸಂಬಂಧಿಸಿದ ಯಾವುದೇ ವ್ಯಾಪಾರದಲ್ಲಿ ತೊಡಗಿರುವವರಿಗೆ ಇದರಿಂದ ಒಳಿತಾಗಲಿದೆ.

ಇನ್ನು ಕುಟುಂಬ ಜೀವನದ ಬಗ್ಗೆ ನೋಡುವುದಾದರೆ ನಿಮ್ಮ ಕೆಲಸಗಳಿಗೆ ಮನೆಯವರ ಬೆಂಬಲವಿರುತ್ತದೆ. ನಿಮ್ಮ ಕೆಲಸದಲ್ಲಿ ಲಾಭ ಕಾಣುವಿರಿ. ಆದರೂ ತಮ್ಮ ಖರ್ಚುಗಳಿಗೆ ಸ್ವಲ್ಪ ಕಡಿವಾಣ ಹಾಕುವ ಅಗ್ಯತವಿದೆ. ಇನ್ನು ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಎದುರಾಗಬಹುದು, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಣಿಸಬಹುಉದ. ಆದ್ದರಿಂದ ಹೊರಗಡೆಯಿಂದ ಆಹಾರ ತಿನ್ನಲು ಹೋಗಬೇಡಿ.

ಪರಿಹಾರ - ಬಡವರಿಗೆ ದಾನ ಮಾಡಿ.

 8. ವೃಶ್ಚಿಕ ರಾಶಿ

8. ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಲ್ಲಿ ಸೂರ್ಯನು ಹನ್ನೊಂದನೇ ಮನೆಗೆ ಪ್ರವೇಶಿಸಲಿದ್ದಾನೆ. ಈ ಮನೆಯನ್ನು ಲಾಭದ ಮನೆಯೆಂದು ಪರಿಗಣಿಸಿರುವುದರಿಂದ ಉದ್ಯೋಗ ಹಾಗೂ ಪ್ಯಾಪಾರ ಕ್ಷೇತ್ರದಲ್ಲಿ ಲಾಭ ಉಂಟಾಗಲಿದೆ. ಹೊಸ ಉದ್ಯೋಗ ಪ್ರಾರಂಭಿಸಿಲು, ವ್ಯಾಪಾರವನ್ನು ವಿಸ್ತರಿಸಲು ಇದು ಸಕಾಲವಾಗಿದೆ. ಇನ್ನು ಕುಟುಂಬ ಜೀವನವು ಸುಖಕರವಾಗಿರಲಿದೆ, ಆರೋಗ್ಯ ಕೂಡ ಉತ್ತಮವಾಗಿರಲಿದೆ.

ಪರಿಹಾರ - ಭಾನುವಾರ ಬಡವರಿಗೆ ದಾನ ಮಾಡಿ.

9. ಧನು ರಾಶಿ

9. ಧನು ರಾಶಿ

ಧನುರಾಶಿಯಲ್ಲಿ ಸೂರ್ಯನು ಹತ್ತನೇ ಮನೆಗೆ ಪ್ರವೇಶಿಸಲಿದ್ದಾನೆ. ಈ ಮನೆಯಲ್ಲಿ ಸೂರ್ಯನು ಬಲವಾದ ಸ್ಥಿತಿಯಲ್ಲಿ ಇರುವುದರಿಂದ ಈ ರಾಶಿಯವರಿಗೆ ಶುಭವಾಗಲಿದೆ. ಉದ್ಯೋಗದಲ್ಇ, ವ್ಯಾಪಾರದಲ್ಲಿ ಪ್ರಗತಿ ಕಾಣಲಿದೆ. ಇನ್ನು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವುದರಿಂದ ಗೌರವ ಮತ್ತಷ್ಟು ಹೆಚ್ಚುವುದು. ಇನ್ನು ಅಪೂರ್ಣವಾಗಿ ಉಳಿದಿರುವ ಕೆಲಸ ಪೂರ್ಣವಾಗಲಿದೆ.

ಈ ಸಮಯದಲ್ಲಿ ಬೇರೆಯವರ ತಪ್ಪುಗಳನ್ನು ಹುಡುಕುವುದು,ಅವರನ್ನು ಟೀಕಿಸುವುದು ಮಾಡಲು ಹೋಗಬೇಡಿ.

ಪರಿಹಾರ - ಭಾನುವಾರದಂದು ಉಂಗುರದ ಬೆರಳಿನಲ್ಲಿ ಮಾಣಿಕ್ಯ ರತ್ನ ಧರಿಸಿದರೆ ಒಳ್ಳೆಯದು.

10. ಮಕರ ರಾಶಿ

10. ಮಕರ ರಾಶಿ

ಮಕರ ರಾಶಿಯನ್ನು ಸೂರ್ಯನು ಒಂಭತ್ತನೇ ಮನೆಗೆ ಪ್ರವೇಶಿಸಲಿದ್ದಾನೆ. ಈ ಮನೆಯ ಮೂಲಕ ಅದೃಷ್ಟ, ಧಾರ್ಮ, ಚಿತ್ರ, ಪ್ರವಾಸ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಕ್ಷೇತ್ರದಲ್ಲಿ ಜಾಗೂರೂಕತೆಯಿಂದ ಇರಿ. ಉದ್ಯೋಗ ಬದಲಾಯಿಸುವ ಆಲೋಚನೆಯಿದ್ದರೆ ಸ್ವಲ್ಪ ತಡೆಯಿರಿ, ಆತುರದಿಂದ ಆವುದೇ ನಿರ್ಧಾರ ತೆಗೆದುಕೊಳ್ಳಬೇಡಿ.

ಇನ್ನು ನಿಮ್ಮ ವ್ಯಾಪಾರ ಕ್ಷೇತ್ರದಲ್ಲಿ ಲಾಭಕ್ಕಾಗಿ ಅನುಭವಸ್ಥರ ಅಭಿಪ್ರಾಯ ಪಡೆಯಿರಿ. ಹಿರಿಯರೊಂದಿಗೆ ಗೌರವದೊಂದಿಗೆ ನಡೆದುಕೊಳ್ಳಿ. ಆರೋಗ್ಯದ ಕಡೆ ವಿಸೇಷ ಕಾಳಜಿ ವಹಿಸಿ.

ಪರಿಹಾರ - ಸೂರ್ಯನಮಸ್ಕಾರ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದು.

11. ಕುಂಭ ರಾಶಿ

11. ಕುಂಭ ರಾಶಿ

ಸೂರ್ಯ ದೇವ ಕುಂಭ ರಾಶಿಚಕ್ರದ ಸ್ಥಳೀಯರ ಎಂಟನೇ ಮನೆಗೆ ಸಾಗುತ್ತಾರೆ. ಈ ಮನೆಯ ಮೂಲಕ ಜೀವನದಲ್ಲಿ ಬರುತ್ತಿರುವ ಅಡೆತಡೆಗಳು ಮತ್ತು ಅಡಚಣೆಗಳ ಬಗ್ಗೆ ಪರಿಗಣಿಸಲಾಗುತ್ತದೆ. ಇದರಿಂದಾಗಿ ಕುಂಬರಾಶಿಯವರು ಈ ಸಮಯದಲ್ಲಿ ಸ್ವಲ್ಪ ಎಚ್ಚರದಿಂದ ಇರುವುದು ಒಳ್ಳೆಯದು. ನಿಮ್ಮ ಕುಟುಂಬದ ಸದಸ್ಯರ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು, ನಿಮ್ಮ ಚಿಂತೆ ಹೆಚ್ಚುವುದು, ಆದರೂ ಆಶಾವಾದಿ ಮನೋಭಾವ ಬಿಡಬೇಡಿ, ತಾಳ್ಮೆಯಿಂದ ಇರಿ.

ಇನ್ನು ಸಂಬಂಧದಲ್ಲೂ ತೊಂದರೆ ಕಾಣಿಸಿಕೊಳ್ಳಬಹುದು. ವ್ಯಾಪಾರದಲ್ಲೂ ಅನಾನೂಕೂಲಕರ ಪರಿಸ್ಥಿತಿ ಎದುರಾಗಬಹುದು. ಅಲ್ಲದೆ ಖರ್ಚುಗಳು ಸ್ವಲ್ಪ ಅಧಿಕ ಬರಲಿದೆ. ಯಾವುದಾದರು ಹೂಡಿಕೆ ಮಾಡುವುದಾದರೆ ಎಚ್ಚರವಹಿಸುವುದು ಒಳ್ಳೆಯದು. ಆರೋಗ್ಯಕ್ಕಾಗಿ ಯೋಗ, ಧ್ಯಾನ ಮಾಡಿ.

ಪರಿಹಾರ: ಭಾನುವಾರ ದೇವಾಲಯಕ್ಕೆ ಭೇಟಿ ನೀಡಿ.

12. ಮೀನಾ ರಾಶಿ

12. ಮೀನಾ ರಾಶಿ

ಮೀನಾ ರಾಶಿಯವರಲ್ಲಿ ಏಳನೇ ಮನೆಗೆ ಸೂರ್ನು ಸಾಗಲಿದ್ದಾನೆ. ಇದರಿಂದಾಗಿ ದಾಂಪತ್ಯ ಜೀವನದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗಲಿದೆ. ಸಂಗಾತಿ ಜತೆ ವೈಮನಸ್ಸು ಉಂಟಾಗಬಹುದು. ಆದರೆ ಮಾತನಾಡಿ ಸಮಸ್ಯೆಗೆ ಪರಿ ಹಾರ ಕಂಡುಕೊಳ್ಳಿ. ಸಂಗಾತಿಯ ಭಾವನೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.

ಕೋಪವನ್ನು ನಿಯಂತ್ರಿಸದಿದ್ದರೆ ಆಪ್ತರು ದೂರವಾಗಬಹುದು. ಇನ್ನು ವೃತ್ತಿ ಕ್ಷೇತ್ರದಲ್ಲೂ ಸವಾಲುಗಳು ಎದುರಾಗಬಹುದು. ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿ.

ಪರಿಹಾರ: ಭಾನುವಾರ ತಾಮ್ರದ ಪಾತ್ರೆ ದಾನ ಮಾಡಿ.

English summary

Sun Transit in Virgo on 16 September 2020 Effects on Zodiac Signs in Kannada

Sun Transit in Virgo effects on zodiac signs in kannada: Sun will make its transit in the zodiac sign Virgo on 16 September 2020
X
Desktop Bottom Promotion