ನವೆಂಬರ್ 16ಕ್ಕೆ ವೃಶ್ಚಿಕ ರಾಶಿಗೆ ಸೂರ್ಯ ಸಂಚಾರ: 12 ರಾಶಿಗಳ ಮೇಲಾಗಲಿದೆ ಪರಿಣಾಮ

ಜ್ಯೋತಿಷ್ಯದಲ್ಲಿ ಸೂರ್ಯನು ರಾಶಿಯಿಂದ-ರಾಶಿಯಿಂದ ಸಂಚರಿಸುವುದಕ್ಕೆ ತುಂಬಾ ಮಹತ್ವವನ್ನು ನೀಡಲಾಗಿದೆ. ಜ್ಯೋತಿಷ್ಯದಲ್ಲಿ ಸೂರ್ಯನಿಗೆ ರಾಜನ ಸ್ಥಾನವನ್ನು ನೀಡಲಾಗಿದೆ. ಆದ್ದರಿಂದ ಸೂರ್ಯನ ಈ ಸಂಚಾರವು ರಾಶಿಗಳ ಮೇಲೆ ಪ್ರಭಾವ ಬೀರುವುದು ಎಂದು ಹೇಳಲಾಗುತ್ತದೆ. ಸೂರ್ಯನ ಈ ರೀತಿಯ ಸಂಚಾರವನ್ನು ಸೂರ್ಯ ಸಂಕ್ರಾಂತಿ ಎಂದು ಕೂಡ ಕರೆಯುತ್ತಾರೆ.

C:\Anguraj\Boldsky Kannada\11_November\11-11\03

ಸೂರ್ಯನನ್ನು ಗ್ರಹಗಳ ರಾಜ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಈತನ ಸಂಚಾರ ಜ್ಯೋತಿಷ್ಯ ದೃಷ್ಟಿಯಿಂದ ತುಂಬಾ ಮಹತ್ವದಾಗಿದೆ. ಸೂರ್ಯನು ದುರ್ಬಲ ರಾಶಿ ತುಲಾದಿಮದ ಹೊರಬಂದು ನವೆಂಬರ್ 16ಕ್ಕೆ ತನ್ನ ಸ್ನೇಹ ರಾಶಿ ವೃಶ್ಚಿಕಕ್ಕೆ ಬೆಳಗ್ಗೆ 6:40ಕ್ಕೆ ಪ್ರವೇಶಿಸಲಿದ್ದಾನೆ. ಡಿಸೆಂಬರ್ 15ರವರೆಗೆ ಸೂರ್ಯನು ಇದೇ ರಾಶಿಯಲ್ಲಿ ಇರಲಿದ್ದಾನೆ. ವೃಶ್ಚಿಕ ರಾಶಿಗೆ ಸೂರ್ಯನ ಸಂಚಾರದಿಂದ 12 ರಾಶಿಗಳ ಮೇಲಾಗುವ ಪರಿಣಾಮ ಏನು ಎಂದು ನೋಡೋಣ:

ಮೇಷ ರಾಶಿ

ಮೇಷ ರಾಶಿ

ಸೂರ್ಯನ ಈ ಸಂಚಾರವು ಮೇಷ ರಾಶಿಯ ಎಂಟನೇ ಮನೆಯಲ್ಲಿ ಉಂಟಾಗಲಿದೆ. ಎಂಟನೇ ಮನೆಯನ್ನು ಬದಲಾವಣೆ ಮತ್ತು ಸಂಶೋಧನೆಯ ಮನೆಯೆಂದು ಪರಿಗಣಿಸಲಾಗಿದೆ. ಸೂರ್ಯನ ಈ ಸಂಚಾರದಿಂದ ಮೇಷರಾಶಿಯವರ ಮೇಲೆ ಯಾವುದೇ ವಿಶೇಷ ಫಲಿತಾಂಶಗಳನ್ನು ಉಂಟು ಮಾಡುವುದಿಲ್ಲ. ಸೂರ್ಯನ ಈ ಸಂಚಾರದಿಂದ ಮೇಷ ರಾಶಿಯವರು ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ವಿಶೇಷವಾಗಿ ಈ ಸಂಚಾರದ ಸಮಯದಲ್ಲಿ ನೀವು ಆದಾಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಹಣವನ್ನು ಖರ್ಚು ಮಾಡುವಾಗ ತುಂಬಾ ಎಚ್ಚರಿಕೆಯಿಂದ ಖರ್ಚು ಮಾಡಿ.

ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಮಾತಿನಲ್ಲಿ ಕಠಿಣತೆ ಇರುತ್ತದೆ. ನಿಮ್ಮ ಕಟುವಾದ ಮಾತು ಸಂಬಂಧಗಳ ಮೇಲೆ ಪರಿಣಾಮ ಬೀರುವುದು, ಅಲ್ಲದೆ ಪಿತೃ ಜೊತೆ ವೈಮನಸ್ಸು ಕೂಡ ಉಂಟಾಗುವುದು, ಈ ಕಾರಣದಿಂದಾಗಿ ಮಾತುಗಳನ್ನು ಪ್ರಯೋಗಿಸುವಾಗ ನಿಯಂತ್ರಣ ಇದ್ದರೆ ಒಳ್ಳೆಯದು.

ಅಲ್ಲದೆ ನೀವು ತುಂಬಾ ಎಚ್ಚರಿಕೆಯಿಂದ ಇರಬೇಕು, ಈ ಸಮಯದಲ್ಲಿ ಯಾವುದೇ ವಿವಾದಕ್ಕೆ ಸಿಲುಕಿಕೊಳ್ಳದಂತೆ ಚ್ಚರವಹಿಸಿ, ಇಲ್ಲದಿದ್ದರೆ ನಿಮ್ಮ ಮಾನಸಿಕ ಒತ್ತಡವು ಹೆಚ್ಚಾಗಬಹುದು. ಈ ಸಮಯದಲ್ಲಿ ತಾಳ್ಮೆ ಮುಖ್ಯ ಅಲ್ಲದೆ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿ.

ನಿಮಗೆ ಮಕ್ಕಳಿದ್ದರೆ ಮಕ್ಕಳ ಆರೋಗ್ಯದ ಬಗ್ಗೆ ಸ್ವಲ್ಪ ಚಿಂತೆಯನ್ನು ಅನುಭವಿಸಬಹುದು, ಶಿಕ್ಷಣದ ಕ್ಷೇತ್ರಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳು ಈ ಸಮಯದಲ್ಲಿ ಅಧ್ಯಯನದಲ್ಲಿ ಏಕಾಗ್ರತೆಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆರೋಗ್ಯಕ್ಕಾಗಿ ಆರೋಗ್ಯಕರ ಆಹಾರಕ್ರಮ ಪಾಲಿಸಿ.

ಪರಿಹಾರ -ಬೆಳಗ್ಗೆ ಸೂರ್ಯ ನಮಸ್ಕಾರ ಮಾಡಿ.

ವೃಷಭ ರಾಶಿ

ವೃಷಭ ರಾಶಿ

ಸೂರ್ಯ ಸಂಚಾರವು ವೃಷಭ ರಾಶಿಚಕ್ರದ ಏಳನೇ ಮನೆಯಲ್ಲಿ ಉಂಟಾಗಲಿದೆ. ಏಳನೇ ಮನೆಯನ್ನು ಜೀವನ ಸಂಗಾತಿ, ವ್ಯಾಪಾರ ಮತ್ತು ಪಾಲುದಾರಿಕೆ ವ್ಯಾಪಾರದ ಮನೆಯೆಂದು ಪರಿಗಣಿಲಾಗಿದೆ. ಈ ಸಮಯದಲ್ಲಿ ನೀವು ನಿಮ್ಮ ನಡವಳಿಕೆಯಲ್ಲಿ ಅಹಂ ಸ್ವಲ್ಪ ಅಧಿಕವಿರುತ್ತದೆ. ನಿಮ್ಮ ಈ ವರ್ತನೆಯ ಕಾರಣದಿಂದಾಗಿ ನಿಮ್ಮ ಆಪ್ತರ ಮನಸ್ಸಿಗೆ ನೋವುಂಟಾಗುವುದು. ಸಂಗಾತಿಯ ಭಾವನೆಯನ್ನು ಗೌರವಿಸಿ ಇದರಿಂದಾಗಿ ನಿಮ್ಮಿಬ್ಬರ ಸಂಬಂಧವು ಸುಧಾರಿಸುತ್ತದೆ.

ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ವೃಷಭ ರಾಶಿಚಕ್ರದವರು ಈ ಸಮಯದಲ್ಲಿ ಕೆಲವು ತಪ್ಪುಗ್ರಹಿಕೆಗಳು ಮತ್ತು ವಿರೋಧವನ್ನು ಎದುರಿಸಬೇಕಾಗಬಹುದು. ನಿಮ್ಮ ಪಾಲುದಾರರೊಂದಿಗೆ ಮಾತನಾಡಿ ಸಮಸ್ಯೆ ಬಗೆ ಹರಿಸಲು ಪ್ರಯತ್ನಿಸಿ. ಕೆಲಸದ ಜಾವದಲ್ಲಿ ಅವಮಾನವನ್ನು ಎದುರಿಸಬೇಕಾಗಬಹುದು. ಆದಾಗ್ಯೂ ಅವರೊಂದಿಗೆ ಯಾವುದೇ ರೀತಿಯ ವಿವಾದದಲ್ಲಿ ಸಿಲುಕಿಕೊಳ್ಳಬೇಡಿ. ಅಂತಹ ಪರಿಸ್ಥಿತಿಯಲ್ಲಿ ನೀವು ತಾಳ್ಮೆಯಿಂದಿರುವುದು ನಿಮಗೆ ಉತ್ತಮ.

ಈ ಸಮಯದಲ್ಲಿ ಯಾವುದೇ ರೀತಿಯ ಪ್ರಯಾಣಗಳನ್ನು ತಪ್ಪಿಸಿ. ಏಕೆಂದರೆ ಇದರಲ್ಲಿ ಹಣಕಾಸು ಮತ್ತು ಸಮಯ ಮಾತ್ರ ವ್ಯರ್ಥವಾಗುವುದಲ್ಲದೆ ಮತ್ತೇನು ಪ್ರಯೋಜನವಿಲ್ಲ. ಆರೋಗ್ಯದ ಬಗ್ಗೆ ಹೇಳುವುದಾದರೆ ಈ ಸಂಚಾರದ ಸಮಯದಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಆದ್ದರಿಂದ ಈ ಸಮಯದಲ್ಲಿಸಾಕಷ್ಟು ನೀರು ಕುಡಿಯಿರಿ. ಅಲ್ಲದೆ ಮಸಾಲೆ ಪದಾರ್ಥಗಳಿಂದ ದೂರವಿರಿ.

ಪರಿಹಾರ - ಸೂರ್ಯ ನಮಸ್ಕಾರ ಮಾಡಿ.

ಮಿಥುನ ರಾಶಿ

ಮಿಥುನ ರಾಶಿ

ಸೂರ್ಯ ಸಂಚಾರವು ಮಿಥುನ ರಾಶಿಚಕ್ರದ ಆರನೇ ಮನೆಯಲ್ಲಿ ಉಂಟಾಗಲಿದೆ. ಆರನೇ ಮನೆಯನ್ನು ಸ್ಪರ್ಧೆಗಳು, ಸವಾಲುಗಳು ಮತ್ತು ಶತ್ರುಗಳ ಮನೆಯೆಂದು ಪರಿಗಣಿಸಲಾಗಿದೆ. ಸೂರ್ಯನ ಈ ಸಂಚಾರವು ನಿಮಗೆ ಶುಭ ತರುವುದು, ಆರೋಗ್ಯದ ದೃಷ್ಟಿಯಿಂದ ಈ ಸೂರ್ಯ ಸಂಚಾರವು ನಿಮಗೆ ಉತ್ತಮವಾಗಿದೆ. ಈ ಸಮಯದಲ್ಲಿ ನೀವು ನಿಮ್ಮ ದೀರ್ಘಕಾಲದ ರೋಗದಿಂದ ಮುಕ್ತರಾಗುವ ಸಂಪೂರ್ಣ ಸಾಧ್ಯತೆ ಇದೆ.

ಸೂರ್ಯ ಸಂಚಾರದ ಈ ಸಮಯ ನಿಮಗೆ ಸಾಕಷ್ಟು ಉತ್ತಮವಾಗಿದೆ, ನಿಮ್ಮ ಆಸೆಗಳು ನೆರವೇರುವುದು. ಈ ಸಮಯದಲ್ಲಿ ನೀವು ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವಿರಿ. ನಿಮ್ಮ ಶತ್ರುಗಳ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಾಗುತ್ತದೆ. ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ ಉತ್ತಮ ಅವಕಾಶಗಳು ಸಿಗುವುದು.

ನಿಮ್ಮ ಕೆಲಸವನ್ನು ಉನ್ನತ ಅಧಿಕಾರಿಗಳು ಪ್ರಶಂಸಿಸುತ್ತಾರೆ. ಈ ಸಮಯದಲ್ಲಿ ನೀವು ಯಾವುದೇ ರೀತಿಯ ವಹಿವಾಟುಗಳನ್ನು ತಪ್ಪಿಸಿ ಹಾಗೂ ಯಾವುದೇ ರೀತಿಯ ವಿವಾದಗಳಲ್ಲಿ ಬೀಳಬೇಡಿ. ಆದರೆ ನೀವು ಯಾವುದೇ ಉದ್ಯಮದಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ ಅಥವಾ ಉಳಿತಾಯ ಮಾಡಲು ಬಯಸುತ್ತಿದ್ದರೆ, ಅದಕ್ಕಾಗಿ ಈ ಸಮಯ ಉತ್ತಮವಾಗಿದೆ. ಈ ಸಮಯದಲ್ಲಿ ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲಕರವಾಗಿದೆ.

ಪರಿಹಾರ - ಮುಂಜಾನೆ ಪ್ರತಿದಿನ ಆದಿತ್ಯ ಸ್ತ್ರೋತವನ್ನು ಜಪಿಸಿ.

ಕರ್ಕ ರಾಶಿ

ಕರ್ಕ ರಾಶಿ

ಸೂರ್ಯ ಸಂಚಾರವು ಕರ್ಕ ರಾಶಿಯವರಲ್ಲಿ ಐದನೇ ಮನೆಯಲ್ಲಿ ಸಂಭವಿಸಲಿದೆ. ಐದನೇ ಮನೆಯನ್ನು ಮಕ್ಕಳು, ಬುದ್ಧಿ, ಪ್ರೀತಿ ಮತ್ತು ಪ್ರಣಯದ ಮನೆಯೆಂದು ಪರಿಗಣಿಸಲಾಗಿದೆ. ಸೂರ್ಯ ಸಂಚಾರವು ಕರ್ಕ ರಾಶಿಯವರಿಗೆ ಮಿಶ್ರ ಫಲಿತಾಂಶಗಳನ್ನು ತರಲಿದೆ. ನಿಮ್ಮ ಐದನೇ ಮನೆಯಲ್ಲಿ ಸೂರ್ಯನ ಸ್ಥಾನದಿಂದಾಗಿ ನೀವು ಬೇಗನೆ ಕೋಪಗೊಳ್ಳುವಿರಿ, ನಿಮ್ಮ ಸ್ವಭಾವದಲ್ಲಿ ಕಿರಿಕಿರಿ ಮತ್ತು ಸಣ್ಣ ಪುಟ್ಟ ವಿಷಯಕ್ಕೆ ಕೋಪಗೊಳ್ಳುವುದು ಎಲ್ಲಾ ಕಾಣಬಹುದು, ಈ ಸ್ವಭಾವ ಕುಟುಂಬದಲ್ಲಿ ಕಲಹಕ್ಕೆ ಕಾರಣವಾಗುತ್ತದೆ.

ಸೂರ್ಯನ ಈ ಸ್ಥಾನವು ನಿಮ್ಮನ್ನು ಚಿಕ್ಕ ವಿಷಯಕ್ಕೂ ಭಾವುಕರನ್ನಾಗಿಸಬಹುದು ಹಾಗೂ ಸಣ್ಣ ವಿಷಯಗಳನ್ನು ದೊಡ್ಡದು ಮಾಡಿ ಮನಸ್ಸಿಗೆ ನೋವು ತಂದುಕೊಳ್ಳುವಿರಿ. ಈ ಸ್ವಭಾವದಿಂದ ನಿಮಗೂ- ನಿಮ್ಮ ಆಪ್ತರ ಮಧ್ಯ ಸಮಸ್ಯೆ ಉದ್ಭವವಾಗುವುದು, ಅಂತಹ ಪರಿಸ್ಥಿತಿಯಲ್ಲಿ ನೀವು ತಾಳ್ಮೆಯಿಂದಿರಿ. ಸಂಗಾತಿಯೊಂದಿಗೆ ಖುಷಿಯಾಗಿರಿ. ಈ ಸಮಯದಲ್ಲಿ ನೀವು ನಿಮ್ಮ ಮಕ್ಕಳೊಂದಿಗೆ ಹೆಚ್ಚು ಸಮಯವನ್ನು ಕಳೆಯಿರಿ.

ಕೆಲಸದಲ್ಲಿ ಅನಗತ್ಯ ವಿಳಂಬವನ್ನು ಎದುರಿಸಬೇಕಾಗಬಹುದು. ಹೊಸ ಕೆಲಸಕ್ಕೆ ಕೈ ಹಾಕುವ ಮುನ್ನ ಮಾಡುತ್ತಿರುವ ಕೆಲಸವನ್ನು ಪೂರ್ಣಗೊಳಿಸುವುದು ಉತ್ತಮ. ಇದರಿಂದಾಗಿ ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲಿತಾಂಶಗಳನ್ನು ಪಡೆಯಲು ಖಂಡಿತವಾಗಿಯೂ ಸಹಾಯ ಸಿಗುತ್ತದೆ. ಒತ್ತಡ ಮತ್ತು ಕೋಪದಿಂದಾಗಿ ಆರೋಗ್ಯವು ಸಹ ದುರ್ಬಲಗೊಳ್ಳಬಹುದು.

ಪರಿಹಾರ - ಭಾನುವಾರದಂದು ತಾಮ್ರದ ವಸ್ತುಗಳನ್ನು ದಾನ ಮಾಡಿ.

ಸಿಂಹ ರಾಶಿ

ಸಿಂಹ ರಾಶಿ

ಸೂರ್ಯ ಗ್ರಹವು ಸಿಂಹ ರಾಶಿಯವರಲ್ಲಿ ನಾಲ್ಕನೇ ಮನೆಗೆ ಸಂಚರಿಸುತ್ತದೆ. ನಾಲ್ಕನೇ ಮನೆಯನ್ನು ತಾಯಿ, ವಿಶ್ರಾಂತಿ, ಸಂತೋಷ - ಸಂಪನ್ಮೂಲಗಳ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಂಚಾರದ ಪರಿಣಾಮದಿಂದಾಗಿ ಸಿಂಹ ರಾಶಿಯವರು ತಮ್ಮ ಗಮನವನ್ನು ಮನೆ ಮತ್ತು ಕುಟುಂಬದ ಮೇಲೆ ಕೇಂದ್ರೀಕರಿಸುತ್ತಾರೆ. ಮನೆಯ ಪುನಃನಿರ್ಮಾಣ ಅಥವಾ ಅದರ ಅಲಂಕಾರದಲ್ಲಿ ಆಸಕ್ತಿ ತೋರಬಹುದು. ಇದಲ್ಲದೆ ರಿಯಲ್ ಎಸ್ಟೇಟ್ ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದ ವಿಷಯಗಳಿಗೆ ಈ ಸಮಯವು ಸೂಕ್ತವಾಗಿದೆ.

ಕುಟುಂಬದೊಂದಿಗೆ ಸಮಯವನ್ನು ಕಳೆಯಲು ಈ ಸಮಯವೂ ಸಾಕಷ್ಟು ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಕುಟುಂಬದೊಂದಿಗೆ ಎಲ್ಲಾದರೂ ಸುತ್ತಾಡಲು ಹೋಗಬಹುದು. ಅಥವಾ ಮನೆಯಲ್ಲೇ ತಮ್ಮ ಕುಟುಂಬದೊಂದಿಗೆ ಕೆಲವು ಸಮಯವನ್ನು ಕಳೆಯಬಹುದು. ಇದರಿಂದ ನಿಮ್ಮ ಕುಟುಂಬದೊಂದಿಗಿನ ನಿಮ್ಮ ಸಂಬಂಧವು ಬಲಗೊಳ್ಳುತ್ತದೆ.

ಸಿಂಹ ರಾಶಿಚಕ್ರದ ಸ್ಥಳೀಯರು ಹೊಸ ವಾಹನವನ್ನು ಸಹ ಖರೀದಿಸಬಹುದು. ಆದಾಗ್ಯೂ ನಿಮ್ಮ ತಾಯಿಯ ಆರೋಗ್ಯದ ದೃಷ್ಟಿಯಿಂದ ಈ ಸಮಯವು ಹೆಚ್ಚು ಅನುಕೂಲಕರವಾಗಿರುವುದಿಲ್ಲ. ವೃತ್ತಿಪರರಿಗೆ ಈ ಸಮಯವೂ ಸಕಾರಾತ್ಮಕ ಫಲಿತಾಂಶಗಳನ್ನು ತರಲಿದೆ. ಉದ್ಯೋಗದಲ್ಲಿರುವ ಈ ರಾಶಿಚಕ್ರದ ಸ್ಥಳೀಯರು ಸಂಬಳವೂ ಈ ಸಮಯದಲ್ಲಿ ಹೆಚ್ಚಾಗಬಹುದು . ಕೆಲಸದಲ್ಲಿ ಉತ್ತಮ ಫಲಿತಾಂಶ ಸಿಗುವುದು

ಪರಿಹಾರ - ರತ್ನದ ಹರಳಿನ ಉಂಗುರವನ್ನು ಧರಿಸಿ.

ಕನ್ಯಾ ರಾಶಿ

ಕನ್ಯಾ ರಾಶಿ

ಸೂರ್ಯ ಸಂಚಾರವು ಕನ್ಯಾ ರಾಶಿಯ ಮೂರನೇ ಮನೆಯಲ್ಲಿ ಸಂಭವಿಸಲಿದೆ. ಮೂರನೇ ಮನೆಯು ಪರಾಕ್ರಮ, ಧೈರ್ಯ ಮತ್ತು ಸಹೋದರ ಸಹೋದರಿಯರನ್ನು ಪ್ರತಿನಿಧಿಸುತ್ತದೆ. ಸೂರ್ಯನ ಈ ಸಂಚಾರವು ನಿಮ್ಮ ಧೈರ್ಯವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ನೀವು ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸ್ವಲ್ಪ ಕೂಡ ಹಿಂಜರಿಯುವುದಿಲ್ಲ. ಇದರ ಪರಿಣಾಮದಿಂದಾಗಿ ನೀವು ಉತ್ತಮ ಪ್ರಯೋಜನವನ್ನು ಪಡೆಯುವಿರಿ. ಇದಲ್ಲದೆ ಕೆಲವು ಕನ್ಯಾ ರಾಶಿಯವರು ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ಯಶಸ್ಸು ಪಡೆಯುವಲ್ಲಿ ಸಹ ಯಶಸ್ವಿಯಾಗುತ್ತಾರೆ.

ಈ ಸಮಯದಲ್ಲಿ ನೀವು ನಿಮ್ಮನ್ನು ಆರ್ಥಿಕವಾಗಿ ಬಲಪಡಿಸುವಲ್ಲಿ ಮತ್ತು ಹಣಕಾಸು ಸಂಗ್ರಹಿಸುವಲ್ಲಿ ಯಶಸ್ವಿಯಾಗುತ್ತೀರಿ. ಈ ಸಮಯದಲ್ಲಿ ನೀವು ನಿಮ್ಮ ಸಹೋದರ ಸಹೋದರಿಯರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ಮಾಡಲಾಗುವ ಪ್ರಯಾಣಗಳು ಲಾಭಕರವಾಗಿರುತ್ತದೆ. ನೀವು ನಿಮ್ಮ ಆಸೆಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುವಿರಿ. ವ್ಯಾಪಾರದ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯವೂ ಉತ್ತಮವಾಗಿರಲಿದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಕೆಲಸವು ಸರಾಗವಾಗಿ ನಡೆಯಲು ಸಾಧ್ಯವಾಗುತ್ತದೆ. ವ್ಯಾಪಾರವನ್ನು ವಿಸ್ತರಿಸುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಶ್ರಮಪ್ಟು ಕಲಿತರೆ ಶಿಕ್ಷಣದ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ಮಾಡಲು ಸಹಾಯವಾಗುತ್ತದೆ.

ಪರಿಹಾರ - ಮುಂಜಾನೆ ಪ್ರತಿದಿನ ವಿಷ್ಣು ಸಹಸ್ತ್ರನಾಮವನ್ನು ಪಠಿಸಿ.

ತುಲಾ ರಾಶಿ

ತುಲಾ ರಾಶಿ

ಸೂರ್ಯ ಗ್ರಹವು ತುಲಾ ರಾಶಿಯವರ ಎರಡನೇ ಮನೆಗೆ ಸಂಚರಿಸಲಿದೆ. ಎರಡನೇ ಮನೆ ಸಂಗ್ರಹಿಸಿದ ಹಣಕಾಸು, ಉಳಿತಾಯ, ಕುಟುಂಬ ಮತ್ತು ಸಂಭಾಷಣೆಯನ್ನು ಪ್ರತಿನಿಸಧಿಸುತ್ತದೆ. ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯ ಗ್ರಹವನ್ನು ಶುಷ್ಕ ಗ್ರಹ ಅಥವಾ ದುರ್ಬಲ ಗ್ರಹವೆಂದು ಪರಿಗಣಿಸಲಾಗಿದೆ. ಸೂರ್ಯನ ಈ ಸ್ಥಾನವು ನಿಮ್ಮ ಭಾವನೆಗಳನ್ನು ಪ್ರೀತಿಪಾತ್ರರ ಮುಂದೆ ವ್ಯಕ್ತಪಡಿಸುವಂತೆ ಮಾಡುವುದು, ಇದರಿಂದಾಗಿ ಕುಟುಂಬದ ಕೆಲವು ಸದಸ್ಯರಿಗೆ ಅದನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಕಷ್ಟವಾಗಬಹುದು.

ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಆಪ್ತರೊಂದಿಗೆ ಸ್ಪಷ್ಟವಾಗಿ ಮಾತನಾಡಿ ಮತ್ತು ನಿಮ್ಮ ಭಾವನೆಗಳನ್ನು ಅವರಿಗೆ ಸ್ಪಷ್ಟಪಡಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಇದಲ್ಲದೆ ಸೂರ್ಯ ದೇವ ಯಶಸ್ಸಿನ ಹನ್ನೊಂದನೇ ಮನೆಯನ್ನು ಪ್ರತಿನಿಧಿಸುತ್ತದೆ ಮತ್ತು ಅದು ಎರಡನೇ ಮನೆಯಲ್ಲಿ ಸಾಗುತ್ತಿದೆ , ಆದ್ದರಿಂದಾಗಿ ಈ ಸಮಯದಲ್ಲಿ ನಿಮ್ಮ ಆದಾಯದ ಹರಿವು ಉತ್ತಮಾಗಿರುತ್ತದೆ.

ಆದರೆ ಈ ಸಮಯದಲ್ಲಿ ನೀವು ಬರುವ ಹಣ ಮತ್ತು ಖರ್ಚಿಸುವ ಹಣದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮತ್ತೊಂದೆಡೆ, ನಿಮ್ಮ ಆರೋಗ್ಯದ ಬಗ್ಗೆ ಹೇಳುವುದಾರೆ ಕಣ್ಣು ಮತ್ತು ಹಲ್ಲುಗಳ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ನಿಮ್ಮ ಬಾಯಿ ಶುಚಿತ್ವದ ಕಡೆ ಗಮನ ನೀಡಿ, ಕಣ್ಣಿನ ಮೇಲೆ ಹೆಚ್ಚು ಒತ್ತಡ ಹಾಕಬೇಡಿ.

ಪರಿಹಾರ - ಭಾನುವಾರದಂದು ಬೆಲ್ಲದ ದಾನ ಮಾಡಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಸೂರ್ಯನು ವೃಶ್ಚಿಕ ರಾಶಿಗೆ ಪ್ರವೇಶಿಸಲಿದ್ದಾನೆ.

ಸೂರ್ಯ ಸಂಚಾರದ ಈ ಸಮಯದಲ್ಲಿ ವೃಶ್ಚಿಕ ರಾಶಿಯವರು ತಮ್ಮ ವೃತ್ತಿ ಜೀವನದತ್ತ ಗಮನ ಹರಿಸುವಿರಿ. ಈ ಸಮಯದಲ್ಲಿಬಾಕಿ ಇರುವ ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ ಹೆಚ್ಚು ಗಮನ ಹರಿಸುವಿರಿ. ಈ ಕಾರಣದಿಂದಾಗಿ ಮೇಲಾಧಿಕಾರಿಯಿಂದ ಪ್ರಶಂಸೆಯನ್ನು ಪಡೆಯಬಹುದು. ನೀವು ಯಾವುದೇ ಹೊಸ ಕೆಲಸವನ್ನು ಆರಂಭಿಸಲು ಬಯಸುತ್ತಿದ್ದರೆ, ಅದಕ್ಕೂ ಸಹ ಈ ಸಮಯ ಅತ್ಯಂತ ಶುಭವೆಂದು ಸಾಬೀತುಪಡಿಸಬಹುದು. ಏಕೆಂದರೆ ಸೂರ್ಯನ ಈ ಸ್ಥಾನವು ನಿಮ್ಮ ಗಮನ, ಏಕಾಗ್ರತೆ ಮತ್ತು ದೃಷ್ಟಿಯನ್ನು ಹೆಚ್ಚಿಸುತ್ತದೆ.

ಈ ಸಮಯದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ಹೆಚ್ಚು ಆತ್ಮವಿಶ್ವಾಸ ತೋರುವಿರಿ. ಇದಲ್ಲದೆ ಸೂರ್ಯನ ಈ ಸ್ಥಾನವು ನಿಮ್ಮ ನಡವಳಿಕೆಯಲ್ಲಿ ನಿಮ್ಮ ಹೆಚ್ಚು ಕೋಪಿಷ್ಠರಾಗಿ ಮಾಡಬಹುದು. ಇದರಿಂದಾಗಿ ತೊಂದರೆಗೆ ಒಳಗಾಗುತ್ತೀರಿ. ಈ ಕಾರಣದಿಂದಾಗಿ ನಿಮ್ಮ ಸಂಬಂಧಗಳಲ್ಲಿ ಏರಿಳಿತಗಳು ಉಂಟಾಗಬಹುದು.

ಈ ಸಮಯದಲ್ಲಿ ನೀವು ಸಾಧ್ಯವಾದಷ್ಟು ಶಾಂತರಾಗಿರುವುದು ನಿಮಗೆ ಉತ್ತಮ ನಿಮ್ಮ ದಿನಚರಿಯಲ್ಲಿ ನೀವು ಯೋಗ, ಧ್ಯಾನ ಮಾಡುವುದರಿಂದ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಪಡೆಯಬಹುದು.

ಪರಿಹಾರ - ಪ್ರಮುಖ ಕೆಲಸ ಮಾಡುವ ಮುನ್ನ ಪಿತೃರ ಆಶೀರ್ವಾದ ಪಡೆಯಿರಿ.

ಧನು ರಾಶಿ

ಧನು ರಾಶಿ

ಸೂರ್ಯ ಸಂಚಾರವು ಧನು ರಾಶಿಯ ಹನ್ನೆರಡನೇ ಮನೆಯಲ್ಲಿ ಸಂಭವಿಸಲಿದೆ. ಹನ್ನೆರಡನೇ ಮನೆಯನ್ನು ವಿದೇಶಿ ಪ್ರಯಾಣ ಮತ್ತು ವಿದೇಶದಿಂದ ಲಾಭದ ಮನೆಯೆಂದು ಪರಿಗಣಿಸಲಾಗಿದೆ. ಈ ಸಂಚಾರದ ಸಮಯದಲ್ಲಿ ನೀವು ವ್ಯವಹಾರದಲ್ಲಿ ಕೆಲವು ಸಮಸ್ಯೆಗಳು ಬರಬಹುದು. ಈ ಸಮಯದಲ್ಲಿ ನಿಮ್ಮ ಜೀವನದಲ್ಲಿ ಒತ್ತಡದ ಪರಿಸ್ಥಿತಿ ಉಂಟಾಗಬಹುದು.

ಇದಲ್ಲದೆ ಆರ್ಥಿಕ ರಂಗದಲ್ಲಿ ಕೂಡ ಸ್ವಲ್ಪ ಬಿಕ್ಕಟ್ಟುಗಳನ್ನು ಎದುರಿಸಬೇಕಾಗಬಹುದು. ದೀರ್ಘಕಾಲದಿಂದ ನೀವು ಕಾಯುತ್ತಿದ್ದ ಫಲಿತಾಂಶ ಪಡೆಯಲು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಬಹುದು. ಆದ್ದರಿಂದ ಈ ಸಮಯದಲ್ಲಿ ತಾಳ್ಮೆಯಿಂದಿರಿ ಎಂದು ನಿಮಗೆ ಸಲಹೆ ನೀಡಲಾಗಿದೆ.

ಅದೇ ಸಮಯದಲ್ಲಿ ಮತ್ತೊಂದೆಡೆ, ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ. ಈ ಸಮಯದಲ್ಲಿ ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಅದರ ಬಗ್ಗೆ ಚೆನ್ನಾಗಿ ವಿಚಾರಿಸಿ ಇಲ್ಲದಿದ್ದರೆ ನಿಮಗೆ ಹಾನಿಯಾಗುವ ಸಾಧ್ಯತೆ ಇದೆ.

ಪ್ರೀತಿ ಮತ್ತು ಪ್ರಣಯಕ್ಕೆ ಸಹ ಈ ಸಮಯ ಹೆಚ್ಚು ಉತ್ತಮವಲ್ಲ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಸಂಬಂಧದಲ್ಲಿ ಅನೇಕ ತಪ್ಪುಗ್ರಹಿಕೆಗಳು ಉಂಟಾಗಬಹುದು. ಆದ್ದರಿಂದ ಸಾಧ್ಯವಾದಷ್ಟು ನಿಮ್ಮ ಆಪ್ತರು ಅಥವಾ ಸಂಗಾತಿಯೊಂದಿಗೆ ಸ್ಪಷ್ಟವಾಗಿ ಮಾತನಾಡಲು ಪ್ರಯತ್ನಿಸಿ.

ಪರಿಹಾರ: ಪ್ರತಿದಿನ ನಿಯಮಿತವಾಗಿ ಸೂರ್ಯ ನಮಸ್ಕಾರ ಮಾಡಿ.

ಮಕರ ರಾಶಿ

ಮಕರ ರಾಶಿ

ಸೂರ್ಯನು ಮಕರ ರಾಶಿಯ ಹನ್ನೊಂದನೇ ಮನೆಗೆ ಸಾಗಲಿದ್ದಾನೆ. ಹನ್ನೊಂದನೇ ಮನೆ ಯಶಸ್ಸು, ಲಾಭ ಮತ್ತು ಸಮಾಜದಲ್ಲಿ ಪ್ರತಿಷ್ಠೆಯನ್ನು ಪ್ರತಿನಿಧಿಸುತ್ತದೆ. ಸೂರ್ಯ ನ ಈ ಸಂಚಾರವು ಮಕರ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ತರಲಿದೆ. ಈ ಸಂಚಾರದ ಸಮಯದಲ್ಲಿ ನೀವು ದೀರ್ಘಕಾಲದಿಂದ ಕಾಯುತ್ತಿದ್ದಂತಹ ಕೆಲವು ಪ್ರಯೋಜನಗಳು ಅಥವಾ ಯಶಸ್ಸು ಪಡೆಯಬಹುದು.

ಕೆಲಸದ ಸ್ಥಳದಲ್ಲಿ ನೀವು ನಿಮ್ಮ ಕೆಲಸದ ಬಗೆಗಿನ ಪ್ರಯತ್ನಗಳಿಗೆ ಪ್ರಶಂಸೆಯನ್ನು ಪಡೆಯುತ್ತೀರಿ. ವ್ಯಾಪಾರಕ್ಕೆ ಸಂಬಂಧಿಸಿರುವ ಜನರು ಕೂಡ ಸಂಚಾರದ ಈ ಸಮಯದಲ್ಲಿ ಅನಿರೀಕ್ಷಿತ ಲಾಭವನ್ನು ಪಡೆಯಬಹುದು ಮತ್ತು ಅವರ ವ್ಯಾಪಾರದಲ್ಲಿ ಹೆಚ್ಚಳವನ್ನು ಸಹ ಕಾಣಬಹುದು.ನೀವು ರಿಯಲ್ ಎಸ್ಟೇಟ್ಅಥವಾ ಯಾವುದೇ ಭೂಮಿಯ ಮೇಲೆ ಹೂಡಿಕೆ ಮಾಡಲು ಬಯಸುತ್ತಿದ್ದರೆ, ಅದಕ್ಕೂ ಈ ಸಮಯವು ಅತ್ಯಂತ ಶುಭವಾಗಿದೆ.

ವೈಯಕ್ತಿಕವಾಗಿ ಈ ಸಮಯವೂ ಸಾಕಷ್ಟು ಉತ್ತಮವಾಗಿರಲಿದೆ.

ಈ ಸಮಯದಲ್ಲಿ ನಿಮ್ಮ ತಂದೆ ಜೊತೆಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ಇದರಿಂದ ನಿಮಗೆ ಲಾಭವಾಗಬಹುದು. ಆದಾಗ್ಯೂ, ಸಹೋದರ ಸಹೋದರಿಯರೊಂದಿಗೆ ಈ ಸಮಯದಲ್ಲಿ ಸಣ್ಣ ಪುಟ್ಟ ವಿವಾದಗಳಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಮತ್ತೊಂದೆಡೆ, ನಿಮ್ಮ ಆರೋಗ್ಯದ ಬಗ್ಗೆ ಹೇಳುವುದಾರೆ ಉತ್ತಮವಾಗಿರಲಿದೆ. ಒಟ್ಟಾರೆಯಾಗಿ, ಮಕರ ರಾಶಿಹಾಕ್ರದ ಜನರಿಗೆ ಈ ಸಂಚಾರವು ಹೆಚ್ಚು ಶುಭವಾಗಿರಲಿದೆ.

ಪರಿಹಾರ - ಪ್ರಮುಖ ಕೆಲಸ ಮಾಡುವಾಗ ಹೆತ್ತವರ ಆಶೀರ್ವಾದ ಪಡೆಯಿರಿ.

ಕುಂಭ ರಾಶಿ

ಕುಂಭ ರಾಶಿ

ಸೂರ್ಯನು ಕುಂಭ ರಾಶಿಯವರ ಹತ್ತನೇ ಮನೆಗೆ ಸಾಗುತ್ತದೆ. ಈ ಸಂಚಾರವು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ನೀವು ಉದ್ಯೋಗ ಬದಲಾವಣೆ ಬಯಸಿದ್ದರೆ ಹೊಸ ಉದ್ಯೋಗವನ್ನು ಪಡೆಯಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಪ್ರಸ್ತುತ ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಅವಕಾಶವನ್ನು ಸಹ ಈ ರಾಶಿಚಕ್ರದವರು ಪಡೆಯಬಹುದು. ಈ ಸಮಯದಲ್ಲಿ ನಿಮ್ಮ ಅಧಿಕಾರಿಗಳು ನಿಮ್ಮ ಕೆಲಸ ಮತ್ತು ಪ್ರಯತ್ನಗಳನ್ನು ಸಂಪೂರ್ಣವಾಗಿ ಪ್ರಶಂಸಿಸುತ್ತಾರೆ. ಇದರಿಂದಾಗಿ ಕೆಲಸದ ಸ್ಥಳದಲ್ಲಿ ನಿಮ್ಮ ಉತ್ಪಾದಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ಪ್ರಬಲ ಸಾಧ್ಯತೆ ಕಂಡುಬರುತ್ತಿದೆ.

ಈ ಸಮಯದಲ್ಲಿ ನಿಮ್ಮ ಪರಿಸ್ಥಿತಿ ಸುಧಾರಿಸುತ್ತದೆ. ಇದಲ್ಲದೆ, ನೀವು ಕೆಲವು ದೊಡ್ಡ ಮತ್ತು ಪ್ರಭಾಶಾಲಿ ಜನರೊಂದಿಗೆ ಸಂಪರ್ಕಕ್ಕೆ ಬರಬಹುದು. ಇದರಿಂದ ಭವಿಷ್ಯದಲ್ಲಿ ನಿಮಗೆ ಪ್ರಯೋಜನವಾಗಬಹುದು. ಈ ಸಮಯದಲ್ಲಿ ನೀವು ಅವಶ್ಯಕ ಕೌಶಲ್ಯ ಮತ್ತು ಅನುಭವಗಳನ್ನು ಪಡೆಯುವಿರಿ. ಇದರಿಂದ ವೃತ್ತಿ ಜೀವನದಲ್ಲಿ ನೀವು ಲಾಭವನ್ನು ಪಡೆಯುತ್ತೀರಿ.

ನಿಮ್ಮ ಕೋಪದ ಗುಣ ಕೆಲಸದಲ್ಲಿ ಸಂಘರ್ಷ ತರಬಹುದು, ಆದರೆ ತಾಳ್ಮೆ ಮುಖ್ಯ. ವ್ಯಾಪಾರಿಗಳ ಅಪೂರ್ಣವಾದ ಕೆಲಸ ಪೂರ್ಣವಾಗಲಿದೆ.

ಇದಲ್ಲದೆ, ಈ ಸಮಯದಲ್ಲಿ ಮಾಡಲಾಗುವ ಪ್ರಯಾಣಗಳು ನಿಮಗೆ ಶುಭ ಫಲಿತಾಂಶಗಳನ್ನು ನೀಡಬಹುದು. ವೈಯಕ್ತಿಕವಾಗಿ ಕೂಡ ಕುಟುಂಬ ಜೀವನಉತ್ತಮಾಗಿರುತ್ತದೆ. ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ತಂದೆಯೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ.

ಆರೋಗ್ಯದ ದೃಷ್ಟಿಯಿಂದ ಹೇಳುವುದಾದರೆ ಚಿಂತಿಸಬೇಕಾಗಿಲ್ಲ, ಆದಾಗ್ಯೂ ಯಾವುದೇ ರೀತಿಯ ದೈಹಿಕ ಚಟುವಟಿಕೆಯಲ್ಲಿ ತೊಡಗಿದ್ದರೆ ಸಮಸ್ಯೆ ಕಾಡಬಹುದು, ಆದ್ದರಿಂದ ಆರೋಗ್ಯದ ಕಡೆ ಗಮನ ನೀಡಿ.

ಪರಿಹಾರ - ಬೆಳಗ್ಗೆ ದೀಪ ಹಚ್ಚಿ ಪ್ರತಿದಿನ ರಾಮ ರಕ್ಷಾ ಸ್ತ್ರೋತವನ್ನು ಪಠಿಸಿ.

ಮೀನಾ ರಾಶಿ

ಮೀನಾ ರಾಶಿ

ಸೂರ್ಯ ಸಂಚಾರವು ಮೀನಾ ರಾಶಿಚಕ್ರದ ಸ್ಥಳೀಯರ ಒಂಬತ್ತನೇ ಮನೆಯಲ್ಲಿ ಉಂಟಾಗಲಿದೆ. ಒಂಬತ್ತನೇ ಮನೆಯನ್ನು ಅಧ್ಯಾತ್ಮ, ದೂರಸ್ಥ ಪ್ರಯಾಣ, ಉನ್ನತ ಶಿಕ್ಷಣ ಮತ್ತು ಅದೃಷ್ಟದ ಬಗ್ಗೆ ಪರಿಗಣಿಸಲಾಗುತ್ತದೆ. ಸೂರ್ಯ ದೇವ ಈ ಸ್ಥಿತಿಯಲ್ಲಿರುವುದರಿಂದ ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಎರಡರಲ್ಲಿಯೂ ಲಾಭವನ್ನು ಪಡೆಯಬಹುದು ಕ್ಷಣದ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಈ ಸಮಯದಲ್ಲಿ ತಮ್ಮ ಪರಿಶ್ರಮಕ್ಕೆ ತಕ್ಕಂತೆ ಫಲಿತಾಂಶಗಳನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ನಿಮ್ಮ ರಾಶಿಯ ಐದನೇ ಮನೆಯಲ್ಲಿ ಸೂರ್ಯ ಸಂಚಾರದಿಂದಾಗಿ ನಿಮ್ಮ ತಂದೆ ಅವರ ವೃತ್ತಿಪರ ಜೀವನದಲ್ಲಿ ಯಶಸ್ಸು ಮತ್ತು ಪ್ರಗತಿಯನ್ನು ಪಡೆಯುತ್ತಾರೆ.

ಸೂರ್ಯ ಸಂಚಾರದ ಈ ಸಮಯದಲ್ಲಿ ನೀವು ನಿಮ್ಮ ವಿರೋಧಿಗಳು ಮತ್ತು ಸ್ಪರ್ಧಿಗಳ ಮೇಲೆ ಪ್ರಾಬಲ್ಯ ಸಾಧಿಸುವಿರಿ. ಇದಲ್ಲದೆ ಕಾನೂನು ಪ್ರಕರಣದಲ್ಲಿ ನಿಮ್ಮ ಯಾವುದೇ ವಿಷಯ ನಡೆಯುತ್ತಿದ್ದರೆ, ಈ ಸಮಯದಲ್ಲಿ ಆದರ ನಿರ್ಧಾರವು ನಿಮ್ಮ ಪರವಾಗಿ ಬರುವ ಪ್ರಬಲ ಸಾಧ್ಯತೆ ಇದೆ. ಇದಲ್ಲದೆ ಆರನೇ ಮನೆ ವೃತ್ತಿಪರ ಯಶಸ್ಸನ್ನು ಸಹ ತೋರಿಸುತ್ತದೆ, ನಿಮ್ಮ ವೃತ್ತಿಪರ ಜೀವನದಲ್ಲಿ ಲಾಭವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.

ಈ ಸಮಯದಲ್ಲಿ ನೀವು ನಿಮ್ಮ ಗುರಿಗಳನ್ನು ಸಾಧಿಸಲು ಕಠಿಣ ಪರಿಶ್ರಮ ಮತ್ತು ಯಾವುದೇ ತ್ಯಾಗ ಮಾಡಲು ಸಹ ಹಿಂಜರಿಯುವುದಿಲ್ಲ. ಕೆಲಸದ ಸ್ಥಳದಲ್ಲಿನಿಮ್ಮ ಕೆಲಸ ದಿಂದಾಗಿ ಗುರುತಿಸಿಕೊಳ್ಳುವಿರಿ . ವ್ಯಾಪಾರಸ್ಥರಿಗೂ ಇದು ಉತ್ತಮ ಸಮಯವಾಗಿದೆ. ಕೌಟಂಬಿಕ ಜೀವನದ ಬಗ್ಗೆ ಹೇಳುವುದಾದರೆ ಈ ಸಂಚಾರದ ಪರಿಣಾಮದಿಂದಾಗಿ ನೀವು ನಿಮ್ಮ ಸಂಗಾತಿಯೊಂದಿಗಿನ ಸಂಬಂಧ ಮತ್ತಷ್ಟು ಬಲವಾಗುವುದು. ಆಧ್ಯಾತ್ಮಿಕ ಯಾತ್ರೆಗಳಿಗೆ ಈ ಸಮಯ ಬಹಳಷ್ಟು ಉತ್ತಮವಾಗಿರಲಿದೆ. ಒಟ್ಟಾರೆಯಾಗಿ ಈ ಸಮಯವು ನಿಮಗೆ ತುಂಬಾ ಶುಭವಾಗಿರಲಿದೆ.

ಪರಿಹಾರ - ಸೂರ್ಯೋದಯದ ಸಮಯದಲ್ಲಿ ಪ್ರತಿದಿನ ಸೂರ್ಯ ಮಂತ್ರ ಪಠಿಸಿ.

English summary

Sun Transit In Scorpio On 16th November Know the Effects on All Zodiac Signs in Kannada

Sun Transit In Scorpio On 16th November 2020. Check out the effects on all zodiac signs, and learn about remedies to perform in Kannada,
Story first published: Wednesday, November 11, 2020, 17:30 [IST]
X
Desktop Bottom Promotion